ನನ್ನ ಗ್ರಂಥ ರಚನೆಗೆ ಆಶೀರ್ವದಿಸಿದ, ಪ್ರೇರೇಪಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತ ಅನಂತ ವಂದನೆಗಳು....!

                              ಪ್ರೇರಣೆ 
ಐತಿಹಾಸಿಕವಾಗಿ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ,ಧಾಮಿ೯ಕವಾಗಿ, ಹೋರಾಟದ ಭಾಗವಾಗಿ ಕರ್ನಾಟಕ ಇತಿಹಾಸದ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವ ಜಿಲ್ಲೆ ಹಾವೇರಿ. ಇಂತಹ ಮಹತ್ವತೆಯನ್ನು ಪಡೆದಿರುವ ಜಿಲ್ಲೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ,ಕಲೆ, ಹೋರಾಟ ಇತ್ಯಾದಿ ವಿಷಯಗಳನ್ನೊಳಗೊಂಡ ಜಿಲ್ಲೆಯ ಸಂಪೂರ್ಣ ಇತಿಹಾಸ ಹಾಗೂ ಹಾವೇರಿ ಜಿಲ್ಲೆಗೆ ಭೇಟಿ  ನೀಡಿದ ಪ್ರಮುಖ ನಾಯಕರ ಕುರಿತಾದ ಮಾಹಿತಿಯ ಕುರಿತು ಸಂಶೋಧನೆ ಕೈಗೊಂಡು ಜಿಲ್ಲೆಯ ಜನತೆಗೆ ಹಾಗೂ ಜಿಲ್ಲೆಗೆ ಬೇಟಿ ನೀಡುವ ವಿವಿಧ ಭಾಗದ ಜನತೆಗೆ ಹಾವೇರಿ ಜಿಲ್ಲೆಯ ಮಹತ್ವತೆಯನ್ನು ಡಿಜಿಟಲ್ ರೂಪದಲ್ಲಿ ಮಾಹಿತಿ ಪಡೆಯಲು ಕಾಯ೯ನಿವ೯ಹಿಸಿ "ಅಖಿಲ ಭಾರತ ಸಾಹಿತ್ಯ ಸಮ್ಮೇಳನ" ನಡೆಯುವ ಪೂವ೯ದಲ್ಲಿ  ಬಿಡುಗಡೆಗೊಳಿಸುವಂತೆ ಜಿಲ್ಲೆಯ ಇತಿಹಾಸ ಸಂಶೋಧಕರು ಹಾಗೂ ಉಪನ್ಯಾಸಕರಾದ ಶ್ರೀ ಪ್ರಮೋದ ನಲವಾಗಲ ಅವರಿಗೆ ನಾನು ಸೂಚಿಸಿದ್ದೆನು. ಅದರ ಪ್ರಯುಕ್ತ ಸಂಶೋಧಕ ಶ್ರೀ ಪ್ರಮೋದ್ ನಲವಾಗಲ ಹಾಗೂ ಅವರ ಸಂಶೋಧನಾ ತಂಡ ಹಾವೇರಿ ಜಿಲ್ಲೆಯ ಸಾಹಿತ್ಯ,ಕಲೆ, ಇತಿಹಾಸ, ಹೋರಾಟ ಇತ್ಯಾದಿ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ಕಲೆಹಾಕಿ ಡಿಜಿಟಲ್ ರೂಪದಲ್ಲಿ ಬಿಡುಗಡೆ ಗೊಳಿಸುತ್ತಿರುವುದು ಸಂತೋಷದ ವಿಷಯ. ಈ ಮೂಲಕ ಹಾವೇರಿಯ ಶ್ರೇಷ್ಠತೆಯನ್ನು ಕನ್ನಡ ನಾಡಿನ ತುಂಬ ಪಸರಿಸೋಣ.

ಸನ್ಮಾನ್ಯ ಶ್ರೀ ನೆಹರು. ಚ. ಓಲೇಕಾರ
ಜನಪ್ರಿಯ ಶಾಸಕರು ಹಾಗೂ ಅಧ್ಯಕ್ಷರು
ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ  ಆಯೋಗ, ಬೆಂಗಳೂರು.

                       ಶುಭ ಸಂದೇಶ
ಶ್ರೀಯುತ ಪ್ರಮೋದ ನಲವಾಗಲ ಅವರಿಗೆ, 
ಆರಂಭದಲ್ಲಿ ಧನ್ಯವಾದ ಹೇಳಿ, ಬರೆಯಲಿಚ್ಚಿಸುವೆ. ಕಾರಣ ನಮ್ಮ ಇತಿಹಾಸ ತೆರೆದಿಟ್ಟಿದ್ದಕ್ಕಾಗಿ. ಪ್ರತಿಯೊಬ್ಬರಿಗೂ ಇತಿಹಾಸದ ಅರಿವು ಇರಲೇಬೇಕು. ಇತಿಹಾಸ ಬರೆದು ಅಳುಕಿಸಿದ ಕಥೆಯಲ್ಲ, ನೋಡಿ ಮರೆತ ಚಿತ್ರವಲ್ಲ, ಕಪೋಲಕಲ್ಪಿತ ಚರಿತ್ರೆಯಲ್ಲ. ರಂಜನೆಗಿಲ್ಲಿ ಅವಕಾಶವಿಲ್ಲ, ಇದು  ಘಟಿಸಿದ ಘಟನೆಗಳನ್ನು ಶೋಧಿಸಿ, ಸಂಶೋಧಿಸಿ ಪ್ರಾಚೀನ ಆರ್ವಚೀನ ಐತಿಹಾಸಿಕ ಪ್ರಜ್ಞೆ, ಭಾವಿ ಜನಾಂಗಕ್ಕೆ ಇರಲೆಂಬುದೇ ಈ ಗ್ರಂಥದ ಆಶಯ. ಲೇಖಕ ಹಾಗೂ ಸಂಶೋಧಕರ ಸದಾಶಯ.ಯಾರಿಗೆ ಇತಿಹಾಸ ಪ್ರಜ್ಞೆ ಇರುವುದಿಲ್ಲವೋ ಅವರು ಇತಿಹಾಸ ಸೃಷ್ಟಿಸಲಾರರು ಎಂಬಂತೆ ಅತ್ಯವಶ್ಯವಾಗಿ, ಈ ಇತಿಹಾಸ ಪ್ರಸಂಗಗಳ ಅರಿವು, ಹಾವೇರಿಯು ಹಿಂದೆ ‘ನಳಪುರಿ’ ಎಂದು ನಂತರ ಕೃತಯುಗದಲ್ಲಿ ಹರಿವ ನೀರಿಗೆ ಹಾವು ಅಡ್ಡಲಾಗಿ ಮಲಗಲು ನೀರು ಏರಿ ಹರಿದಿದ್ದರಿಂದ ಹಾವೇರಿ ಹೆಸರು ಬಂದಿತ್ತೆಂದು ತಿಳಿಯಲಾಗಿದೆ. ಈ ಗ್ರಂಥದಲ್ಲಿ ಭೌಗೋಳಿಕ, ಧಾರ್ಮಿಕ, ಇತಿಹಾಸಪೂರ್ವ ಕಾಲಗಳ ನೆಲೆ, ರಾಜಾಡಳಿತ, ಸಾಹಿತಿ ಕಲಾವಿದರ ಹಾಗೂ ಸಮಗ್ರಹ ಪರಿಚಯ, ಶಾಸನಗಳು, ಸ್ವತಂತ್ರ ಹೋರಾಟಗಾರರ ಮಾಹಿತಿ ವಿವಿಧ ರಂಗದಲ್ಲಿ ಸೇವೆಗೈದ ಸಾಧಕರ ಪರಿಚಯ, ಮಠಗಳ ಧಾರ್ಮಿಕ ಪರಂಪರೆ, ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳ ದರ್ಶನ, ಕೈಗಾರಿಕೋದ್ಯಮ, ಪತ್ರಿಕೋದ್ಯಮ ಇಂತಹ ಸತ್ವವುಳ್ಳ ಸಂಪದ್ಭರಿತ ಮಾಹಿತಿಗಳನ್ನೊಳಗೊಂಡ ಈ ಕೃತಿ ಜನಮಾನಸಕ್ಕೆ ಪ್ರಾಗಿತಿಹಾಸವನ್ನು ಕಣ್ಮುಂದೆ ತೆರೆದಿಡುವಲ್ಲಿ ಶ್ರೀ ಪ್ರಮೋದ ನಲವಾಗಲ ಸಾರ್ಥಕ ಶ್ರಮ ನಿಜಕ್ಕೂ ಅರ್ಥಪೂರ್ಣ, ಅವಿಸ್ಮರಣೀಯ ಈ ಗ್ರಂಥವನ್ನು ನಾವೆಲ್ಲರೂ ಓದೋಣ, ಪರರಿಗೂ ಒದಿಸೋಣ, ಇತಿಹಾಸ ಪ್ರಜ್ಞೆ ಮೂಡಿಸೋಣ, ಇತಿಹಾಸ ಉಳಿಸೋಣ ಮತ್ತೊಮ್ಮೆ ಇತಿಹಾಸ ನಿರ್ಮಿಸೋಣ ಎಂಬುದು ನನ್ನಾಶಯ. ಲೇಖಕರ ಸಾಹಿತ್ಯ ಸೇವೆ ನಿರಂತರ ಹರಿಯುವ ಗಂಗೋತ್ರಿಯಾಗಲಿ, ಇನ್ನು ಹಲವಾರು ಕೃತಿ ಹೊರಬರಲಿ, ತಮ್ಮಯ ಕೀರ್ತಿ ಹಬ್ಬಲಿ, ಹರಡಲಿ, ಇಮ್ಮಡಿ ನೂರ್ಮಡಿಗೊಳ್ಳಲಿ ಎಂದು ಹಾರೈಸುವೆವು.

ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿಮಠ ಹಾವೇರಿ.

                    ಶುಭ ಸಂದೇಶ
ಶ್ರೀಯುತ ಪ್ರಮೋದ ನಲವಾಗಲ ಅವರು ನನಗೆ ರಚಿಸಿದಂತಹ ಹಾವೇರಿಯ ಸಂಶೋಧನೆಗಳು (ನಳಪುರಿದರ್ಶನ) ಎಂಬ ಗ್ರಂಥವನ್ನು ಓದಿ ಸಂದೇಶದ ನುಡಿ ಬರೆದು ಕೊಡಿ ಎಂದು ಕೇಳಿಕೊಂಡರು. ನನಗೆ ತುಂಬಾ ಸಂತೋಷವಾಯಿತು. ಈ ಗ್ರಂಥವನ್ನು ನಾನು ಆರಂಭದಲ್ಲಿ ಪುಟಗಳನ್ನು ತಿರುವಿ ನೋಡುತ್ತಾ, ಮೆಲಕು ಹಾಕುತ್ತಾ ಬರೆದಿರುವ ಸಾಹಿತ್ಯವನ್ನು ಓದುತ್ತಾ ಹೋದೆ. ಅಲ್ಲಿ ನನಗೆ ಹಾವೇರಿಯ ವಿಶ್ವ ದರ್ಶನವಾಯಿತು. ರಾಷ್ಟ್ರಕ್ಕೆ ಹಾವೇರಿ ಜಿಲ್ಲೆಯು ನೀಡಿದ ಕೊಡುಗೆಗಳ ಬಗ್ಗೆ ಪರಿಚಯವಾಯಿತು. ಭೂವಿಸ್ತೀರ್ಣ, ಜನಸಂಖ್ಯೆ ಮತ್ತು ಇಲ್ಲಿ ಕೃಷಿ ಪದ್ಧತಿ ಹಾಗೂ ಯಾವ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂಬುದರ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಏಷ್ಯಾದಲ್ಲಿಯೇ ವ್ಯಾಪಾರಕ್ಕೆ ಅಗ್ರಗಣ್ಯ ಸ್ಥಾನದಲ್ಲಿರುವುದು ಹಾವೇರಿ ಜಿಲ್ಲೆ. ಯಾಕೆಂದರೆ ಹಾವೇರಿಯ ಯಾಲಕ್ಕಿಯ ಕಂಪು, ಬ್ಯಾಡಗಿಯ ಮೆಣಸಿನಕಾಯಿ ಇಂಪು, ಇವು ವಿಶ್ವಪ್ರಸಿದ್ಧವಾಗಿವೆ. ನಮ್ಮ ಜಿಲ್ಲೆಯ ಈ ಕೊಡುಗೆಗಳು ಅಮೋಘವಾದದ್ದು. ನೆಲ-ಜಲ-ಭಾಷೆ, ಸಾಹಿತ್ಯ, ಸಂಸ್ಕøತಿ, ಉಡುಗೆ-ತೊಡುಗೆಗಳು, ಹಳ್ಳಿಗಳು ಹೇಗೆ ಪ್ರಸಿದ್ಧವಾದವು, ಇಲ್ಲಿ ಕಾರ್ಮಿಕರ ಕಾರ್ಯವೇನು?, ಬದುಕನ್ನು ಸೃಷ್ಟಿಸುವ ಕಥೆ, ಕವನ, ಕಾದಂಬರಿ, ವಚನಗಳು ಅನೇಕ ಮುಂತಾದ ಸಾಹಿತ್ಯ ಸಂಸ್ಕೃತಿಗಳು ಮಾನವನ ಜೀವನಕ್ಕೆ ದಾರಿದೀಪವಾಗಿವೆ. ಜಗವ ಸುತ್ತುವುದರ ಮೂಲಕ ಅನುಭವ ಪಡೆಯುತ್ತಾ, ಅಲ್ಲಿ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಅವುಗಳ ಮೂಲಕ ಸಾಹಿತ್ಯ ಸಂಭಾಷಣೆಯಲ್ಲಿ ತೊಡಗುವುದು ಇಲ್ಲಿ ನಾವು ಕಾಣಬಹುದು. ಉತ್ತರ ಕರ್ನಾಟಕದ ಹೆಬ್ಬಾಗಿಲು, ಸಾಂಸ್ಕೃತಿಕ ವೈಭವದ ತವರೂರು, ಸ್ವಾತಂತ್ರ್ಯ ಹೋರಾಟಗಾರರ ನೆಲೆಬೀಡು, ಶರಣ, ಸಂತರ, ದಾಸರ ಮಧ್ಯನಾಡು ಹಾವೇರಿ. ಈ ಜಿಲ್ಲೆಯ ಬಗ್ಗೆ ತಿಳಿಯಬೇಕಾದರೆ ಸುಮಾರು ವರ್ಷಗಳು ಬೇಕು. ಆದರೆ ಕ್ರಿಯಾಶೀಲರು ವಿಚಾರವಂತರು, ಪ್ರಬುದ್ಧರ ಆದ ಶ್ರೀ ಪ್ರಮೋದ ನಲವಾಗಲ ಅವರು ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದುಕೊಂಡೇ ಸಾಹಿತ್ಯ ಅಭಿರುಚಿಯನ್ನು ಮೈಗೂಡಿಸಕೊಂಡು ಇವರು (ನಳಪುರಿ ದರ್ಶನ) ಹಾವೇರಿಯ ಸಂಶೋಧನೆಗಳು ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥವನ್ನು ಅಧ್ಯಯನ ಮಾಡಿದರೆ ಹಾವೇರಿಯ ದರ್ಶನವಾಗುತ್ತದೆ. ಅದ್ವಿತೀಯ, ಅಮೋಘ ಕೃತಿ ಪುಷ್ಪೋಧ್ಯಾನದಲ್ಲಿರುವ ನಾನಾ ಬಗೆಯ ಉತ್ತಮೋತ್ತಮ ಪರಿಮಳ ಪುಷ್ಪಗಳ ಮಕರಂದವು ಮಧುಕರನಿಂದ ಅಮೃತಸದೃಶ್ಯವಾದ ಜೇನಾಗುವಂತೆ, ವಿವಿಧ ದಾರ್ಶನಿಕರ, ಸಮಾಜ ಸುಧಾರಕರ, ಹೋರಾಟಗಾರರ, ಸಂತರ ದೀಪ್ತಿಗಳಿಂದ ಜಾಗತಿಕ ಚಿಂತಕರ ಉದಾತ್ತ ರಸಧಾರೆ ಈ ಪುಸ್ತಕದಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
ಇತಿಹಾಸ ತಿಳಿಯಲು ಓದಬೇಕು. ಯಾರು ಇತಿಹಾಸಾವನ್ನು ತಿಳಿದಿರುತ್ತಾರೋ ಅವರು ಇತಿಹಾಸವನ್ನು ಸೃಷ್ಟಿಸುತ್ತಾರೆ ಎಂದು ಮಾತು ಸತ್ಯ. ಪುಸ್ತಕಗಳು ಮಾನವನ ಮಸ್ತಕವನ್ನು ಅರಳಿಸುವಂತಿರಬೇಕು. ಏಕಾಂತವಾಸದಲ್ಲಿ (ಬೇಸರ ಸಂದರ್ಭದಲ್ಲಿ) ಪ್ರತಿದಿನ ಹೊಸದನ್ನು ರೂಪಿಸುವುದು(ನನ್ನ ದೃಷ್ಟಿಯಲ್ಲಿ ಒಳ್ಳೆಯ ಪುಸ್ತಕಗಳು ಒಳ್ಳೆಯ ಸ್ನೇಹಿತನಾಗಿರುತ್ತವೆ) ನಮ್ಮ ಜಿಲ್ಲೆಯ ಅನೇಕ ದಾರ್ಶನಿಕರು, ಚಿಂತಕರು, ಹೋರಾಟಗಾರರ ಬಗ್ಗೆ ಹಿನ್ನಲೆಯನ್ನಿಟ್ಟುಕೊಂಡು ವೃತ್ತಿಯ ಜೊತೆಯಲ್ಲಿ ಚಿಂತನ ಪ್ರವೃತ್ತರಾಗಿ, ಹಾವೇರಿ ನಾಡನ್ನು ಸುತ್ತಿ, ಸಂಶೋಧಿಸಿ, ತಮ್ಮ ಹರಿತವಾದ ಶಬ್ಧ ಭಂಡಾರದಿಂದ ಪ್ರೊ. ಪ್ರಮೋದ ನಲವಾಗಲ ಅವರು ತಾವು ಸಾಹಿತ್ಯ ಕೃಷಿಯನ್ನು ಮಾಡಿ ತಮ್ಮ ಆಳ ಅಧ್ಯಯನದಿಂದ ಮಾರ್ಮಿಕವಾದ ಉದಾಹರಣೆಯೊಂದಿಗೆ “ನಳಪುರಿ ದರ್ಶನ” (ಹಾವೇರಿಯ ಸಂಶೋಧನೆಗಳು)ವೆಂಬ ಗ್ರಂಥವನ್ನು ರಚಿಸಿದ್ದಾರೆ. ಸಮಾಜಮುಖಿ ಗ್ರಂಥವಾಗಿ, ಇವರ ಲೇಖನಗಳು ಬೆಳವಣಿಗೆಗೆ ಸದಾ ಸ್ಪೂರ್ತಿಯಾಗಿರಲೆಂದು ಆಶಿಸುತ್ತಾ ಸರ್ವರಿಗೂ ಸಕಲ ಶ್ರೇಯಸ್ಸನ್ನು ಹಾರೈಸುತ್ತೇನೆ.

ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ಮರುಘರಾಜೇಂದ್ರಮಠ, ಶ್ರೀಹೊಸಮಠ, ಹಾವೇರಿ.
ಶ್ರೀಯುತ ಪ್ರಮೋದ ನಲವಾಗಲ ವೃತ್ತಿಯಲ್ಲಿ ವಿಜ್ಞಾನ ಉಪನ್ಯಾಸಕರಾದರು ಅವರಲ್ಲಿರುವ ಇತಿಹಾಸದ ಮೇಲಿನ ಪ್ರೀತಿಯ ಕಾರಣವಾಗಿ ಅದ್ಬುತವಾದ "ಹಾವೇರಿಯ ಸಂಶೋಧನೆಗಳು(ನಳಪುರಿ ದರ್ಶನ)" ಗ್ರಂಥ ಹೊರಹೊಮ್ಮಿದೆ. ಸದಾ ಹೊಸತನದ ಹುಡುಕಾಟದಲ್ಲಿರುವ ಶ್ರೀಯತರಿಗೆ ಪ್ರಥಮವಾಗಿ ಧನ್ಯವಾದಗಳನ್ನು ತಿಳಿಸುತ್ತೆನೆ. ಈ ಗ್ರಂಥದಲ್ಲಿ ಇತಿಹಾಸ ಪ್ರಸಂಗಗಳ ಅರಿವು, ಹಾವೇರಿಯು ಹಿಂದೆ ‘ನಳಪುರಿ’ ಎಂದು ನಂತರ ಕೃತಯುಗದಲ್ಲಿ ಹರಿವ ನೀರಿಗೆ ಹಾವು ಅಡ್ಡಲಾಗಿ ಮಲಗಲು ನೀರು ಏರಿ ಹರಿದಿದ್ದರಿಂದ ಹಾವೇರಿ ಹೆಸರು ಬಂದಿತ್ತೆಂದು ತಿಳಿಯಲಾಗಿದೆ. ಈ ಗ್ರಂಥದಲ್ಲಿ ಭೌಗೋಳಿಕ, ಧಾರ್ಮಿಕ, ಇತಿಹಾಸಪೂರ್ವ ಕಾಲಗಳ ನೆಲೆ, ರಾಜಾಡಳಿತ, ಸಾಹಿತಿ ಕಲಾವಿದರ ಹಾಗೂ ಸಮಗ್ರಹ ಪರಿಚಯ, ಶಾಸನಗಳು, ಸ್ವತಂತ್ರ ಹೋರಾಟಗಾರರ ಮಾಹಿತಿ ವಿವಿಧ ರಂಗದಲ್ಲಿ ಸೇವೆಗೈದ ಸಾಧಕರ ಪರಿಚಯ, ಮಠಗಳ ಧಾರ್ಮಿಕ ಪರಂಪರೆ, ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳ ದರ್ಶನ, ಕೈಗಾರಿಕೋದ್ಯಮ, ಪತ್ರಿಕೋದ್ಯಮ ಇಂತಹ ಸತ್ವವುಳ್ಳ ಸಂಪದ್ಭರಿತ ಮಾಹಿತಿಗಳನ್ನೊಳಗೊಂಡ ಅದ್ಬುತ ಗ್ರಂಥವಾಗಿದೆ. ತಮ್ಮಿಂದ ಇಂತಹ ಹತ್ತು ಹಲವು ಗ್ರಂಥಗಳು ರಚಿಸಲ್ಪಡಲಿ ಎಂದು ಹಾರೈಸುವೆ.

ಶ್ರೀ ಗುರುಲಿಂಗ ಮಹಾ ಸ್ವಾಮಿಗಳು
ಅಕ್ಕಿಮಠ, ಅಗಡಿ. 
ಹಾವೇರಿ.
                         ಕೃತಘ್ನತೆಗಳು
                   ಸಹಕಾರಕ್ಕೆ ಧನ್ಯವಾದಗಳು
      ಶ್ರೀ ಪವನಕುಮಾರ ಬಹದ್ದೂರ ದೇಸಾಯಿ
      ಯುವ ಉದ್ಯಮಿಗಳು, ಹಾವೇರಿ.

                     ಶ್ರೀ ಕೆ.ಮಂಜಪ್ಪ.
               ಉದ್ಯಮಿಗಳು ಹಾವೇರಿ.
ಡಾ.ರಮೇಶ. ತೆವರಿ
ಪ್ರಾಚಾರ್ಯರು
ಸರಕಾರಿ ಪ.ಜಾ ಮತ್ತು ಪ.ಪಂ. ಪದವಿ ಕಾಲೇಜು, ಜಾವೇರಿ.

ಶ್ರೀ. ಎಸ್.ಸಿ. ಹಿರೇಮಠ





Comments

Post a Comment

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು