ರಾಮಾನುಜಾಚಾರ್ಯರ ಶರೀರವನ್ನು 881 ವಷ೯ಗಳಿಂದ ಸಂರಕ್ಷಿಸಿಸಲಾಗಿದೆ__________
ತಮಿಳನಾಡಿನ ಪೆರಂಬದೂರಿನಲ್ಲಿ ಕೇಶವ ಸೋಮಯಾಜಿ ಹಾಗೂ ಕಾಂತಿಮತಿ ದಂಪತಿಗಳ ಮಗನಾಗಿ ಕ್ರಿ.ಶ 1017 ರಂದು ಜನಿಸಿದರು. ಕಂಚಿಯಲ್ಲಿ 'ಯಾದವ ಪ್ರಕಾಶರಲ್ಲಿ' ಶಿಷ್ಯತ್ವವನ್ನು ಗಳಿಸಿಕೊಂಡರಾದರು,ಅದು ಬಹಳ ದಿವಸದವರೆಗೆ ಉಳಿಯಲಿಲ್ಲ. ಯಾದವ ಪ್ರಕಾಶರ ಅದ್ವೈತ ಸಂಪ್ರದಾಯ ಅವರಿಗೆ ಹಿಡಿಸಲಿಲ್ಲ, ಹೀಗಾಗಿ ಅವರುಗಳಲ್ಲಿ ವೈಮನಸ್ಸುಂಟಾಯಿತು. ಜ್ಞಾನದ ಹಸಿವು ಹೆಚ್ಚಾಗಿ ಮೋಹದ ಹೆಂಡತಿಯಾದ 'ರಕ್ಷಾಂಬಾಳನ್ನು' ತೊರೆದು ವೈರಾಗ್ಯ ಮೂರ್ತಿಗಳಾದರು. ಹೀಗಾಗಿ ಜನಸಾಮಾನ್ಯರ ಮಾತಿನಲ್ಲಿ ಅವರು 'ಯತಿರಾಜ'ರಾದರು. ಶೈವ ಅನುಯಾಯಿಯಾದ ಚೋಳ ಅರಸರ 'ಕುಲೋತುಂಗನ' ಅಸಹಿಷ್ಣುತೆಯನ್ನು ತಾಳಲಾರದೆ ಶ್ವೇತವಸ್ತ್ರ ಧರಿಸಿ, ಅಶ್ವಾರೂಡರಾಗಿ ಶಿಷ್ಯರೊಡನೆ ಆ ಕ್ಷೇತ್ರವನ್ನು ತೊರೆದರು. ಹೊಯ್ಸಳರ ದೊರೆ, ಜೈನ ಮತದ ಅನುಯಾಯಿ ಹಾಗೂ ಸಹಿಷ್ಣುತಾವಾದಿ 'ಬಿಟ್ಟಿದೇವ' ಅವರನ್ನು ಆಥಿತ್ಯ-ಸತ್ಕಾರಗಳೊಂದಿಗೆ ಕನಾ೯ಟಕದ 'ಮೇಲುಕೋಟೆಯಲ್ಲಿ ಬರಮಾಡಿಕೊಂಡನು. ಬಿಟ್ಟಿದೇವನ ಮಗಳ ಭೂತಚೇಷ್ಟೆಯನ್ನು ಬಿಡಿಸಿದನ್ನು ಕಂಡು ತನಗರಿಯದೆ ಗುರುಗಳಲ್ಲಿ ತನ್ಮಯನಾದನೆಂದರೆ ನಮಗೆ ರಾಮಾನುಜರಲ್ಲಿರುವ ಅಗಾದ ಶಕ್ತಿಯ ಅರಿವಾಗದೆ ಇರದು. ಹೀಗಾಗಿಯೆ 'ಬಿಟ್ಟಿದೇವಾ' ತನ್ನ ಜೈನ ಧಮ೯ವನ್ನು ತೊರೆದು ರಾಮಾನುಜರ ಶಿಷ್ಯನಾಗಿ 'ವಿಷ್ಣುವರ್ಧನ' ಎಂಬ ಹೆಸರನ್ನು ಪಡೆದು ಕೊಂಡನು. ವಿಶೇಷವೆಂದರೆ ಇತನಿಗೆ ಹಾವೇರಿ ಜಿಲ್ಲೆಯೊಂದಿಗ...