Posts

Showing posts from March, 2026

ಇತಿಹಾಸದ ಹಾದಿಯಲ್ಲಿ ಕೂನಬೇವು: ತಾಮ್ರ ಶಿಲಾಯುಗದಿಂದ ಇಂದಿನವರೆಗೆ*

ರಾಣೇಬೆನ್ನೂರಿನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಕೂನಬೇವು 3000 ಜನ ಸಂಖ್ಯೆಯನ್ನು ಹೊಂದಿದ್ದು ಕೃಷಿ ಆಧಾರಿತ ಕುಟುಂಬಳೆ ಹೆಚ್ಚು. ಸರ್ವಧರ್ಮಗಳ ಶಾಂತಿಯ ತೋಟವಾದ ಈ ಗ್ರಾಮವು ಇತಿಹಾಸಪೂರ್ವ ಕಾಲದ ನೆಲೆಯಾಗಿ ಗಮನಾರ್ಹವಾಗಿದೆ. ಗ್ರಾಮನಾಮದ ಮೂಲವನ್ನು ಗಮನಿಸಿದರೆ, ಇಲ್ಲಿ ಬೆಳೆಯುತ್ತಿದ್ದ ಬೇವಿನ ಗಿಡಗಳು ವಕ್ರವಾಗಿ (ಕೂನಾಗಿ) ಬೆಳೆಯುತ್ತಿದ್ದವು ಎಂಬ ಸ್ಥಳೀಯ ಪರಂಪರೆ ಕಾಣಿಸುತ್ತದೆ. ಈ ಪ್ರದೇಶದಲ್ಲಿ ಗಾಳಿ ನಿರಂತರವಾಗಿ ಒಂದೇ ದಿಕ್ಕಿನಿಂದ ಬಲವಾಗಿ ಬೀಸುವುದು ಹಾಗೂ ನೀರಿನ ಪೂರೈಕೆ ಒಂದೇ ಭಾಗದಲ್ಲಿ ಹೆಚ್ಚು ದೊರಕುವುದು ಇಂತಹ ಪರಿಸರೀಯ ಕಾರಣಗಳಿಂದ ಬೇವಿನ ಗಿಡಗಳು ವಕ್ರವಾಗಿ ಬೆಳೆಯುತ್ತಿದ್ದಿರಬಹುದು. ಈ ವಿಶೇಷ ಲಕ್ಷಣದ ಆಧಾರದಿಂದಲೇ ಈ ಊರಿಗೆ “ಕೂನಬೇವು” ಎಂಬ ಹೆಸರು ಬಂದಿರಬಹುದು ಎಂಬ ಊಹೆ ಮಾಡಬಹುದು. ಈ ಭಾಗದಲ್ಲಿರುವ ಕದಿರಮಂಡಲಗಿ, ಅಸುಂಡಿ ಹಾಗೂ ಕೂನಬೇವು ಗ್ರಾಮಗಳು ಪುರಾತತ್ವದ ದೃಷ್ಟಿಯಿಂದ ಮಹತ್ವ ಹೊಂದಿದ್ದು, 1959ರ ಉತ್ಖನನದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ತಾಮ್ರ ಶಿಲಾಯುಗದ ನೆಲೆಯೆಂದು ಘೋಷಿಸಲಾಯಿತು. ಈ ಕಾಲದಲ್ಲಿ ಮಾನವ ಸಮಾಜವು ಪ್ರಕೃತಿಯ ಅವಲಂಬಿತ ಜೀವನದಿಂದ ಕ್ರಮೇಣ ಸಂಸ್ಕೃತ ಜೀವನದತ್ತ ಹೆಜ್ಜೆ ಇಡುತ್ತಿರುವ ಪರಿವರ್ತನೆಯ ಹಂತದಲ್ಲಿತ್ತು. ಕಲ್ಲಿನ ಆಯುಧಗಳ ಬಳಕೆಯಿಂದ ಮುಂದೆ ಸಾಗುತ್ತಾ, ಜನರು ತಾಮ್ರವನ್ನು ಉಪಯೋಗಿಸಿ ಆಯುಧಗಳು ಮತ್ತು ಉಪಕರಣಗಳನ್ನು ತಯಾರಿಸುವ ಜ್ಞಾನವನ್ನು ಪಡೆಯಲು ಆರಂಭಿಸಿದ...