Posts

Showing posts from June, 2019

ಕಾಗೆನೆಲೆಯ ಇತಿಹಾಸವನ್ನು ಹೇಳುತ್ತಿವೆ ಹರಿದ ಹಾಳೆಗಳು.................!!!!??

Image
"ಕಾಗೆನೆಲೆಯ" ಇತಿಹಾಸವನ್ನು ಹೇಳುತ್ತಿವೆ ಹರಿದ ಹಾಳೆಗಳು......................................................   ಕಾಗೆನೆಲೆ ಪನ್ನೆರಡು, ಬಾಸವೂರು-140 ರ ಕಂಪಣದ ಬನವಾಸಿ ದೇಶದ ' ಸಿರಿಗೆ ನೆಲವೆಂದು' ಶಾಸನಗಳಲ್ಲಿ ಉಲ್ಲೇಖವಾಗಿದೆ (ಕ್ರಿ.ಶ.1121 ರ ಶಾಸನವು.1933-34 ರಂದು ಪ್ರಕಟವಾಯಿತು). ಈ ಪುಣ್ಯ ಕ್ಷೇತ್ರ ಹಿಂದೆ ಜೈನರ ಕೇಂದ್ರವಾಗಿತ್ತು ಎಂದು ಹೇಳಲು ಇಲ್ಲಿಯ ತೀಥಾ೯ಂಕರ ವಿಗ್ರಹ ಹಾಗೂ ನಿಷೀದಿ ಕಲ್ಲುಗಳು ನಮಗೆ ಆಧಾರಗಳಾಗಿವೆ. 15 ನೇ ಶತಮಾನದಲ್ಲಿ ಈ ಸ್ಥಳವನ್ನು ಕಾಗಿನೆಲೆ ಎಂದು ಸಂಭೋದಿಸಲಾಗಿದೆ ಮುಂದೆ 18 ನೇ ಶತಮಾನದಲ್ಲಿಯು ಇದೇ ಹೆಸರು ಮುಂದುವರೆದಿದೆನ್ನಲು ನಮಗೆ ಗಜೇಂದ್ರಗಡದ ಕನಕಪ್ಪ ದಾಸರ ಮನೆಯಲ್ಲಿಯ ಹಸ್ತಪ್ರತಿ ಆಧಾರವಾಗಿದೆ (ಕನಕಪ್ಪ ದಾಸರ ಇವುರುಗಳು ಕನಕಗಿರಿಯ ಕನಕಾಚಲನ ಪರಮ ಭಕ್ತರಾಗಿದ್ದರಿಂದ ಅವರಿಗೆ ಕನಕಪ್ಪ ಎಂದು ಹೆಸರಿಡಾಗಿದೆ ಎಂಬುದು ವಿಶೇಷ ಹಾಗೇಯೇ ಇವರು ಕಾಗಿನೆಲೆಯ ಆದಿಕೇಶವನನ್ನು ಹಾಗೂ ಕನಕದಾಸರನ್ನು ತಮ್ಮ ಗ್ರಂಥದಲ್ಲಿ ಕೊಂಡಾಡಿದ್ದಾರೆ. ಹಸ್ತಪ್ರತಿ ಸುಮಾರು 250 ವಷ೯ಗಳಷ್ಟು ಹಳೆಯದಾಗಿದೆ).22 ರ ಜನೇವರಿ 1121 ರ ಶಾಸನದಲ್ಲಿ ಕಾಗೆನೆಲೆ ಎಂಬ ಹೆಸರು ಹೇಗೆ ಬಂದಿತ್ತೆಂಬುವುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.                            ...