ರಾಮಾನುಜಾಚಾರ್ಯರ ಶರೀರವನ್ನು 881 ವಷ೯ಗಳಿಂದ ಸಂರಕ್ಷಿಸಿಸಲಾಗಿದೆ__________

ತಮಿಳನಾಡಿನ ಪೆರಂಬದೂರಿನಲ್ಲಿ ಕೇಶವ ಸೋಮಯಾಜಿ ಹಾಗೂ ಕಾಂತಿಮತಿ ದಂಪತಿಗಳ ಮಗನಾಗಿ ಕ್ರಿ.ಶ 1017 ರಂದು ಜನಿಸಿದರು.

ಕಂಚಿಯಲ್ಲಿ 'ಯಾದವ ಪ್ರಕಾಶರಲ್ಲಿ' ಶಿಷ್ಯತ್ವವನ್ನು ಗಳಿಸಿಕೊಂಡರಾದರು,ಅದು ಬಹಳ ದಿವಸದವರೆಗೆ ಉಳಿಯಲಿಲ್ಲ. ಯಾದವ ಪ್ರಕಾಶರ ಅದ್ವೈತ ಸಂಪ್ರದಾಯ ಅವರಿಗೆ ಹಿಡಿಸಲಿಲ್ಲ, ಹೀಗಾಗಿ ಅವರುಗಳಲ್ಲಿ ವೈಮನಸ್ಸುಂಟಾಯಿತು. 

ಜ್ಞಾನದ  ಹಸಿವು ಹೆಚ್ಚಾಗಿ ಮೋಹದ ಹೆಂಡತಿಯಾದ 'ರಕ್ಷಾಂಬಾಳನ್ನು' ತೊರೆದು ವೈರಾಗ್ಯ ಮೂರ್ತಿಗಳಾದರು. ಹೀಗಾಗಿ ಜನಸಾಮಾನ್ಯರ ಮಾತಿನಲ್ಲಿ ಅವರು 'ಯತಿರಾಜ'ರಾದರು. ಶೈವ ಅನುಯಾಯಿಯಾದ ಚೋಳ ಅರಸರ 'ಕುಲೋತುಂಗನ' ಅಸಹಿಷ್ಣುತೆಯನ್ನು ತಾಳಲಾರದೆ ಶ್ವೇತವಸ್ತ್ರ ಧರಿಸಿ, ಅಶ್ವಾರೂಡರಾಗಿ ಶಿಷ್ಯರೊಡನೆ ಆ ಕ್ಷೇತ್ರವನ್ನು ತೊರೆದರು. ಹೊಯ್ಸಳರ ದೊರೆ, ಜೈನ ಮತದ ಅನುಯಾಯಿ ಹಾಗೂ ಸಹಿಷ್ಣುತಾವಾದಿ 'ಬಿಟ್ಟಿದೇವ' ಅವರನ್ನು ಆಥಿತ್ಯ-ಸತ್ಕಾರಗಳೊಂದಿಗೆ ಕನಾ೯ಟಕದ 'ಮೇಲುಕೋಟೆಯಲ್ಲಿ ಬರಮಾಡಿಕೊಂಡನು. ಬಿಟ್ಟಿದೇವನ ಮಗಳ ಭೂತಚೇಷ್ಟೆಯನ್ನು ಬಿಡಿಸಿದನ್ನು ಕಂಡು ತನಗರಿಯದೆ ಗುರುಗಳಲ್ಲಿ ತನ್ಮಯನಾದನೆಂದರೆ ನಮಗೆ ರಾಮಾನುಜರಲ್ಲಿರುವ ಅಗಾದ ಶಕ್ತಿಯ ಅರಿವಾಗದೆ ಇರದು. ಹೀಗಾಗಿಯೆ 'ಬಿಟ್ಟಿದೇವಾ' ತನ್ನ ಜೈನ ಧಮ೯ವನ್ನು ತೊರೆದು ರಾಮಾನುಜರ ಶಿಷ್ಯನಾಗಿ 'ವಿಷ್ಣುವರ್ಧನ' ಎಂಬ ಹೆಸರನ್ನು ಪಡೆದು ಕೊಂಡನು. ವಿಶೇಷವೆಂದರೆ ಇತನಿಗೆ ಹಾವೇರಿ ಜಿಲ್ಲೆಯೊಂದಿಗೆ ಆತ್ಮೀಯತೆಯ ಸಂಬಂಧವಿದೆ ಎನ್ನಬಹುದು. ಕಾರಣ ವಿಷ್ಣುವರ್ಧನ ಕ್ರಿ.ಶ 1140 ರಲ್ಲಿ ಬಂಕಾಪುರವನ್ನು ಸ್ವಾಧೀನಪಡಿಸಿಕೊಂಡು ಅದನ್ನು ತನ್ನ ಸಾಮ್ರಾಜ್ಯದ ಉತ್ತರದ ರಾಜಧಾನಿಯನ್ನಾಗಿ ಮಾಡಿಕೊಂಡನು. ಮುಂದೆ ಅದೆ ಪುಣ್ಯಭೂಮಿಯಲ್ಲಿ ಮಡಿದನು. ಆದರೆ ವಿಷ್ಣುವರ್ಧನ ರಾಮಾನುಜರ ಪರಮಭಕ್ತನಾಗಿದ್ದನು. ಶ್ರೀರಂಗಂನ ರಂಗನಾಥಸ್ವಾಮಿ ರಾಮಾನುಜರೆಂಬ ಪರಮಭಕ್ತ ತನ್ನ ಸಾನಿಧ್ಯದಲ್ಲಿರದುದ್ದರಿಂದ ಬಡವನಾಗಿದ್ದ,ಆತನ ಕೂಗು ರಾಮಾನುಜರಿಗೆ ಕೆಳಿಸಿತೆನ್ನಬಹುದು. ಮೇಲುಕೋಟೆಯಲ್ಲಿದ್ದ ರಾಮಾನುಜರು ತಡಮಾಡದೆ ತನ್ನನ್ನು 24 ವಷ೯ಗಳವರೆಗೂ ಸಾಕಿ- ಸಲುಹಿದ ಮೇಲುಕೋಟೆಯ ಎಲ್ಲಾ ಭಕ್ತರಿಗೆ ಹರಿಸಿ, ಚಲುವನಾರಯಣನೇ ನಿಮ್ಮ ಕಷ್ಟಗಳನ್ನು ಪರಿಹರಿಸುವ ಕಲ್ಪವೃಕ್ಷವೆಂದು ತಿಳಿಸಿ ಶ್ರೀರಂಗಂಗೆ ಪ್ರಯಾಣ ಬೆಳೆಸಿದರು. ಕಾಲ ಕಳೆದಂತೆ ಶ್ರೀರಂಗಪೀಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಯಿತು. ಕ್ರಿ.ಶ 1137 ರಲ್ಲಿ ಸಮಸ್ತ ಭಕ್ತವೃಂದವನ್ನು ಶ್ರೀರಂಗಂನ ಒಂದು ಕಡೆಗೆ ಸೆರಲು ತಿಳಿಸಿದರು. ಕಾವೇರಿಯಲ್ಲಿ ಮಿಂದೆದ್ದ ತಮ್ಮದೆ ಶಿಲಾ ವಿಗ್ರಹದ ಮುಂದೆ ಕುಳಿತು ಭಕ್ತರಿಗೆ ಎಪ್ಪತ್ತನಾಲ್ಕು ಆದೇಶ ರತ್ನಗಳನ್ನು ಭೋದಿಸಿದರು. ನನ್ನ ಹಾಗೂ ಶಿಲಾವಿಗ್ರಹದ ನಡುವೆ ಭೇದವೇನೂ ಇಲ್ಲ. ಈ ಜೀಣ೯ಗೊಂಡ ದೇಹವನ್ನು ತ್ಯಜಿಸಿ ಈ ವಿಗ್ರಹದಲ್ಲಿ ನೆಲೆಗೊಳ್ಳುತ್ತೇನೆ ಎಂದು ತಿಳಿಸಿದಾಗ ಭಕ್ತರ ಕಣ್ಣುಗಳು ಒದ್ದೆಯಾಗಿದ್ದವು, ದು:ಖದ ಕಟ್ಟೆ ಒಡೆದು ಹೋಗಿತ್ತು. ಆದರು ಯತಿರಾಜರ ಮನಸ್ಸು ಕರಗಲಿಲ್ಲ, ದೇಹ ಮಾತ್ರಕ್ಕೆ ಜನರ ಮುಂದೆ ಉಪದೇಶ ಮುದ್ರಾ ಭಂಗಿಯಲ್ಲಿ ಕುಳಿತಿದ್ದರು. ಆದರೆ ರಂಗನಾಥ ಅವರ ಆತ್ಮವನ್ನು ಶಿಲಾವಿಗ್ರಹದಲ್ಲಿ ಪ್ರತಿಷ್ಠಾಪಿಸಿದ್ದನು. ನೆರದಿದ್ದ ಭಕ್ತ ಸಮೂಹದ ಆಕ್ರಂದನ ಮುಗಿಲು ಮುಟ್ಟಿತ್ತು. ಭಕ್ತ ಸಮೂಹ ದೇಹವನ್ನು ವೈಷ್ಣವ ಸಂಪ್ರದಾಯದ ಪ್ರಕಾರ ದಹನ ಮಾಡಲೊಪ್ಪಲಿಲ್ಲ, ಪರಿಣಾಮವೆಂಬಂತೆ ಆ ದೇಹವನ್ನು ಕಾವೇರಿ ಜಲದಿಂದ ಪರಿಶುದ್ದಗೊಳಿಸಿ ಕಪೂ೯ರ, ಚಂದನ ಹಾಗೂ ಕುಂಕುಮವನ್ನು ಲೇಪಿಸಿ ರಂಗನಾಥ ದೇವಸ್ಥಾನದಲ್ಲಿಯ ರಾಮಾನುಜರ ಶಿಲಾವಿಗ್ರಹದ ಹಿಂಭಾಗದಲ್ಲಿ ದಕ್ಷಿಣ - ಪಶ್ಚಿಮಾಭಿಮುಕವಾಗಿ ಇರಿಸಲಾಯಿತು. ವಷ೯ಗಳು ಕಳೆದಂತೆ ಶ್ರೀ ವೈಷ್ಣವ ಪಂಥದ ಭಕ್ತರ ಸಂಖ್ಯೆಯ ಹೆಚ್ಚಾಗಲಾರಂಭಿಸಿತು ಕಾರಣ ಇಲ್ಲಿ ಮೇಲು-ಕೀಳೆಂಬ ಭೇದವಿರಲಿಲ್ಲ ಬಂದ ಹರಿ ಭಕ್ತರಿಗೆ ಶಂಖ-ಚಕ್ರವೆಂಬ ಮುದ್ರೆಗಳನ್ನು ಹಾಕುತ್ತಾ, ಜೀವನದಲ್ಲಿ ಮುಕ್ತಿ ಮಾಗ೯ ಯಾವುದೆಂದು ತಿಳಿಸುವ ಕೆಲಸವನ್ನು ಶಿಷ್ಯರು ಮಾಡುತ್ತಾ ಸಾಗಿದರು. ಇಂತಹ ಪರಮ ಶಿಷ್ಯರೊಲ್ಲೊಬ್ಬನಾದ ತಿರುನಾಮ ತಾತಾಚಾಯ೯ರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಿರಮಂಡಲಗಿ ಗ್ರಾಮದಲ್ಲಿ ರಾಮಾನುಜರ ತತ್ವಗಳನ್ನು ಉಪದೇಶಿಸಲು ಸ್ವಾಮಿರಾಯರ (ಸಮೇರಾಯರ)ಮಠವನ್ನು ಸ್ಥಾಪಿಸಿದರು. 15ನೇ ಶತಮಾನದಲ್ಲಿ ಕನಕಪ್ಪ (ಕನಕದಾಸರು) ತಮ್ಮ ಮೋಹನತರಂಗಿಣಿಯಲ್ಲಿ 'ರಾಮಾನುಜರೇ ನಮೋ ನಮೊ'!! ಎಂದು ಪರಿಪೂರ್ಣ  ಭಕ್ತಿಯಿಂದ ಸ್ಮರಿಸುವುದರೊಂದಿಗೆ, ಅವರ ಶಿಷ್ಯನಾದ  "ತಿರುನಾಮ ತಾತಾಚಾರ್ಯರನ್ನು" ಸ್ಮರಿಸಿದ್ದಾರೆಂದರೆ ಬಹುಶ: ಕನಕದಾಸರು ತಿರುಚಿರಾಪಳ್ಳಿಯ ಸಮೀಪದ ಶ್ರೀರಂಗಂನಲ್ಲಿರುವ ರಾಮಾನುಜರ ಶರಿರವನ್ನು ಸ್ಪಶಿ೯ಸಿರಬೇಕು ಎನಿಸುತ್ತದೆ. ಹಾವೇರಿಯ ಸಮೀಪದ ಕುಳೇನೂರು ಗ್ರಾಮದಲ್ಲಿ ತಿರುನಾಮ ತಾತಾಚಾರ್ಯರ ಪ್ರೇರಣೆಯಿಂದ ಬಾರಿಕ ಸೇನಭೋವನ ಹೆಂಡತಿ ಕುಮಾರ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದಳು. ಸಂತ ಕನಕದಾಸರು ಸ್ಪರ್ಶಿಸಿ ನಮಸ್ಕರಿಸುತ್ತಿದ್ದ ರಾಮಾನುಜಾಚಾರ್ಯರು ಮೂರ್ತಿಯನ್ನು ನಾವು ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಶ್ರೀ ರಂಗನಾಥನ ದೇವಸ್ಥಾನದಲ್ಲಿ ಈಗಲೂ ನೋಡಬಹುದು. ಕನಕರಾಯನ ಕಟ್ಟೆ ಎಂದು ಕರೆಯುವ ಸ್ಥಳದಲ್ಲಿಯೇ ಕನಕದಾಸರು ವಿಶ್ರಮಿಸುತ್ತಿದ್ದರೆನ್ನುವುದು ವಿಶೇಷ. ರಾಣೇಬೆನ್ನೂರ ತಾಲೂಕಿನ ಗಂಗಾಪುರದ ಯಾದವ ಕುಲದವರು ಸುಮಾರು 1958 ರ ವರೆಗೆ ಇದೇ ರಾಮಾನುಜಾಚಾರ್ಯರ ಶಿಷ್ಯರಾದ ತಿರುನಾಮ ತಾತಾಚಾರ್ಯರನ್ನು ಗುರುಗಳೆಂದು ಕರೆಯುತ್ತಿದ್ದರಂತೆ. ಅವರ ಅಥವಾ ಅವರ ಶಿಷ್ಯರು ಇಲ್ಲಿಗೆ ಬಂದಾಗ ಕಾಣಿಕೆಯನ್ನು ಕೊಡುವ ಪರಿಪಾಠವನ್ನು ಅವರು ರೂಡಿಸಿಕೊಂಡಿದ್ದರಂತೆ. ಆದರೆ ಆನೆಗುಂದೆಯಲ್ಲಿ  ತಾತಾಚಾರ್ಯರ ಮಠವು ಬಿದ್ದು ನೆಲಸಮವಾಯಿತು. ಜಿರ್ಣೋದ್ದಾರವಿಲ್ಲದ ಆ ಸ್ಥಳದಲ್ಲಿ ರಾಘವೇಂದ್ರ ಸ್ವಾಮಿ ಮಠ ಹುಟ್ಟಿಕೊಂಡಾಗ ಗುರುಗಳ ಮಠವಿಲ್ಲದೇ ಅನಾಥರಾದ ಆ ಸಂಪ್ರದಾಯದವರು ಅವರನ್ನು ಮರೆತು ಹೋದರು ಎಂದು ಹೇಳುವ ಜೀವಿಗಳು ಇನ್ನೂ ಇಲ್ಲಿ ಜೀವಂತವಾಗಿವೆ. ಕಾಗೆನೆಲೆ ಹಾಗೂ ಶಿಗ್ಗಾವಿ ತಾಲೂಕಿನ ಅತ್ತಿಗೆರೆಗೆ ಆನೆಗುಂದಿಯ ಮಠದಿಂದ ಭಿಕ್ಷಾಟನೆ ಮಾಡಲು ಬರುತ್ತಿದ್ದರಂತೆ. ಸಂಗೂರಿನಲ್ಲಿ ಬುಕ್ಕರಾಯನ ಅಡಿದಾಳುವಿನ ಮೊಮ್ಮಗ ಕುಮಾರ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು ಇದೇ ತಾತಾಚಾರ್ಯರ ಪ್ರೇರಣೆಯಿಂದ. 

ಹಾವೇರಿಯ ನರಸಿಪುರ ಗ್ರಾಮದಲ್ಲಿ ನರಸಿಂಹ ದೇವಸ್ಥಾನವನ್ನು ಕಟ್ಟಿಸಿದ ಎಲ್ಲಪ್ಪ ನಾಯಕ, ಸವಣೂರು - ಹಾವೇರಿಯ ಮಧ್ಯದಲ್ಲಿಯ ವರದಾ ನದಿಗೆ ಸೇತುವೆ ಕಟ್ಟಿಸಿದ ಹೂವಪ್ಪ (ಹುಕ್ಕ)ಬಿನ್ ಯಾದವ, ಕದಿರಮಂಡಲಗಿ ಗ್ರಾಮವನ್ನು ಅಲ್ಲಿಯ ಹನುಮಂತ ದೇವರಿಗೆ ದಾನವಾಗಿ ನೀಡಿದ ಕೆಂಗಪ್ಪ ನಾಯಕ, ಇವರೆಲ್ಲರು ರಾಮಾನುಜಾಚಾರ್ಯರ ಓಷ್ಟಮ ( ಶ್ರೀ ವೈಷಣವ ) ಪಂಥದವರೇ ಆಗಿದ್ದರು.

ವಷ೯ಗಳು ಕಳೆದವು 881 ...! ರಾಮಾನುಜರ ಶರೀರ ಕಳೆಗುಂದಲಿಲ್ಲ!!! ಹರಿಯುವ ನದಿಗಳು ತಮ್ಮ ದಿಕ್ಕನ್ನು ಬದಲಿಸಿಕೊಂಡಿರಬಹುದು. ಆದರೆ ರಾಮಾನುಜಾಚಾರ್ಯರ ಭಕ್ತರ ಹರಿವಿನ ಸಂಖ್ಯೆ ಕಡಿಮೆಯಾಗಲಿಲ್ಲ. ಭಕ್ತರ ಭಕ್ತಿಗೆ ಮೆಚ್ಚಿ ಸವ೯ವನ್ನು ಪಾಲಿಸುವ ಕಲ್ಪವೃಕ್ಷವಾಗಿ ತನ್ನ ಶರೀರವನ್ನು ಹಾಳಗದೆ ಇನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ ಎಂದರೆ....ವಿಜ್ಞಾನಕ್ಕೂ ಸವಾಲನ್ನು ಹಾಕುವ ಅದ್ಭುತವಾದ ಶಕ್ತಿಯನ್ನು ಆ ಶರೀರ ಹೊಂದಿದೆ ಎನ್ನಬಹುದು. ಆ ಶಕ್ತಿಯನ್ನು ವಿಜ್ಞಾನದ ಮಾಪನದಿಂದ ಅಳೆಯಲು ಸಾದ್ಯವಿಲ್ಲ, ಅದನ್ನಳೆಯಲು ನಿಜವಾದ ಭಕ್ತಿಯೊಂದಿದ್ದರೆ ಸಾಕು........... 

ಎನ್ನಯ ಕುಲದ ಗುರುಗಳಾದ ರಾಮಾನುಜರೇ ನಿಮಗೆ ಶರಣು ಶರಣು   !!!!!!!

                 ~ ಪ್ರಮೋದ ನಲವಾಗಲ ~

                        9686168202

Comments

Post a Comment

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!