ರಾಣೇಬೆನ್ನೂರಿನ ಸಂತೆಯ ಸ್ಥಳ ಬದಲಾಗುತ್ತಾ ಸಾಗಿತು............!

 

ನಮ್ಮೂರಿನ ಸಂತೆಯೆಂದರೆ ಎರಡು ಮೊದಲನೆಯದಾಗಿ ಪ್ರತಿನಿತ್ಯ ನಡೆಯುವ "ದೊಡ್ಡಪೇಟೆಯ ಸಂತೆ"ಹಾಗೂ ಎರಡನೆಯದಾಗಿ ರಜೆ ದಿನವಾದ ರವಿವಾರ ಜೀನಗಾರ ಹೊಂಡದ ಪಕ್ಕದಲ್ಲಿಯ ನಡೆಯು ಸಂತೆ. ಹಾಗಾದರೆ ಈ ಸಂತೆಗಳಿಗೆ ಎನಾದರು ಇತಿಹಾಸ ಇದೆಯೇ ಎಂದು ಸಂಶೋಧನಾ ದೃಷ್ಟಿಯಿಂದ ನೋಡಿದಾಗ ಅದ್ಭುತವಾದ ವಿಷಯ ನನಗೆ ದೊರೆಯಿತು.ಅದೆಂದರೆ ರಾಣೇಬೆನ್ನೂರಿನ ಸಂತೆ ಪ್ರಥಮವಾಗಿ ಪ್ರಾರಂಭವಾಗಿದ್ದು ಈಗಿನ "ದೊಡ್ಡಪೇಟೆಯಲ್ಲಿ" ಹಿಂದೆ ಇದೊಂದು ನಖರರ ( ವ್ಯಾಪಾರಿಗಳ) ಪಟ್ಟಣವಾಗಿತ್ತು. ಇದನ್ನು "ಪೇಟೆಯ ಕರಿಂಪುರ"(ಕರಿಂಪುರಪೇಟೆ) ಎಂದು ಹಿಂದೆ ಕರೆಯುತ್ತಿದ್ದರು.ಸಾಕ್ಷಿಗಳು ಎಂಬಂತೆ ಇಲ್ಲಿಯ ಬಸವೇಶ್ವರ ದೇವಾಲಯದ ಪಾತ್ರೆಗಳ ಮೇಲೆ ಈ ಹಿಂದೆ ಕರಿಂಪುರಪೇಟೆ ಎಂದು ರಾರಾಜಿಸುತ್ತಿತ್ತು. ಬಹುಶಃ ಈ ಪೇಟೆಯನ್ನು ಸವಣೂರ ನವಾಬನಾದ ಹಕಿಂಖಾನ ತನ್ನ ಅಜ್ಜನಾದ ಕರಿಂಖಾನನ ಹೆಸರಿನಿಂದ ನಿಮಾ೯ಣ ಮಾಡಿರಬಹುದಾಗಿದೆ.

ರಾಣೇಬೆನ್ನೂರಿನಲ್ಲಿ ಜನರ ಅನಕೂಲಕ್ಕಾಗಿ ಪ್ರತಿದಿನ ಸಂತೆಯೂ "ದೊಡ್ಡ ಪೇಟೆಯಲ್ಲಿ( ಪೇಟೆ ಕರಿಂಪುರ)" ಸೇರುತ್ತಿತ್ತು. ಈ ಹಿಂದೆಯೂ ಸಹಿತ ಅಂದರೆ ರಾಜರ ಹಾಗೂ ಬ್ರಿಟಿಷ್‌ರ ಕಾಲದಲ್ಲಿಯು ಇದೇ ಸ್ಥಳದಲ್ಲಿ ಪ್ರತಿ ದಿನ ಸಂತೆ ನಡೆಯುತ್ತಿತ್ತು. ಕ್ರಿ.ಶ 1881ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ 10208. ದೊಡ್ಡಪೇಟೆಯಲ್ಲಿ ನಡೆಯುವಂತಹ ಸಂತೆಯಲ್ಲಿ ವಿಶೇಷವಾಗಿ ಅರಳಿ ವ್ಯಾಪಾರವೂ ನಡೆಯುವದರೊಂದಿಗೆ ನೂಲಿನ ವಸ್ತ್ರಗಳು ಹಾಗೂ ರೇಷ್ಮೆಯ ವಸ್ತ್ರಗಳು ದೊರೆಯುತ್ತಿದ್ದವು,  ಕಾರಣ ಇಲ್ಲಿಯೇ ಸಮೀಪದಲ್ಲಿಯ ಹತ್ತಿ ಜಿನ್ ನಲ್ಲಿರುವ ಬಾವಿಯನ್ನು "ನವಾಬಸಾಬ ಬಾವಿಯೆಂದು" ಕರೆಯುವರು. ಆ ಬಾವಿಯ ನೀರನ್ನು ಈ ಭಾಗದ ಜನರು ಉಪಯೋಗಿಸುತ್ತಿದ್ದರು ಎನ್ನುವ ಪ್ರತೀತಿ ಜೀವಂತವಾಗಿದೆ. ಅಂದರೆ ಸವಣೂರಿನ ಕೊನೆಯ ನವಾಬನಾದ ಮಜೀದಖಾನನ ಕಾಲದ ಬಾವಿ ಇದಾಗಿರಬಹುದು. 

ಕ್ರಿ.ಶ 1765 ರ ಕೈಫೀಯತ್ ಪ್ರಕಾರ ಕೆಲವು ವ್ಯಾಪಾರಸ್ಥರು (ಶೆಟ್ಟರು) ವ್ಯಾಪರಕ್ಕೆಂದು ಬೇರೆಯ ಸ್ಥಳಗಳಿಂದ ಬಂದು "ಆನೆಮಠದ" ಶ್ರೀಗಳ ಆಶೀರ್ವಾದದೊಂದಿಗೆ ಪೇಟೆಯ ಸಮೀಪ ವಾಸಿಸಲು ಮನೆಯನ್ನು ಮಾಡಿಕೊಂಡರು. ಅದುವೇ ಈಗಿನ ಆನಿಶೆಟ್ಟರ ಒಣಿಯಾಗಿದೆ ಎನ್ನಬಹುದು. ಆಗ ರಾಣೇಬೆನ್ನೂರ ಸವಣೂರ ಆಸ್ಥಾನದಲ್ಲಿ "ಪರಾಗಣ" ವಾಗಿತ್ತು. ವ್ಯಾಪಾರಕ್ಕೆಂದು ಜಂಬಗಿ ಹಾಗೂ ಸೂರಣಗಿ ಪ್ರದೇಶಗಳಿಂದ ಬಂದು ಈ ಕರಿಂಪುರಪೇಟೆಯಲ್ಲಿ ನೆಲೆಯನ್ನು ಕಂಡುಕೊಂಡರು. ಇಲ್ಲಿಯ ಸುತ್ತಮುತ್ತಲು ತೋಟಗಳು ಹೆಚ್ಚು ಇದ್ದಿದ್ದರಿಂದ ವ್ಯಾಪರವು ಒಳಿತಾಗಿ ನಡೆಯುತ್ತಿತ್ತು. ಹೀಗಾಗಿ ಜನರನ್ನು ರಂಜಿಸಲು ಕರಡಿಯನ್ನು ಆಡಿಸುತ್ತಿದ್ದರು. ಇಲ್ಲಿಯ ರೆಷ್ಮೆಯ ಬಟ್ಟೆ ವಿದೇಶಗಳಲ್ಲಿ ಮಾರಾಟವಾಗುತ್ತಿತ್ತು. ಹೀಗಾಗಿ ಅಲ್ಲಿ ಕೈಮಗ್ಗಗಳು ಹುಟ್ಟಿಕೊಂಡವು. ಬಟ್ಟೆ ನೆಯುವರು ಇಲ್ಲಿ ವಾಸಿಸುತ್ತಿದ್ದರು ಎನ್ನಲು ರಾಮಲಿಂಗೇಶ್ವರ ದೇವಾಲಯದ ಶಾಸನಗಳೇ ಸಾಕ್ಷಿಗಳಾಗಿವೆ. ಜನರಿಗೆ ಅತ್ಯವಶ್ಯಕವಾದ ಮಡಿಕೆ ತಯಾರಿಕೆ ಇಲ್ಲಿಯೇ ಸಮೀಪದಲ್ಲಿ ಪ್ರಾರಂಭವಾಯಿತು. ಜೊರಾದ ಹತ್ತಿ ವ್ಯಾಪಾರ ಇಲ್ಲಿ ಸಾಗುತ್ತಿತ್ತು.  

ಈ ಸಂತೆಯ ಉಸ್ತುವಾರಿಯನ್ನು ಹಾಗೂ ವ್ಯಾಪರಸ್ಥರಿಂದ ತೆರೆಗೆಯನ್ನು ವಸೂಲಿ ಮಾಡಲು ಪಟ್ಟಣಶೆಟ್ಟಿಯನ್ನು ನಿಯೋಜನೆ  ಮಾಡಲಾಯಿತು. ಜನಸಂದಣಿ ಹೆಚ್ಚಾಯಿತು ನವಾಬರ ಕಾಲದದಲ್ಲಿಯ ಪೇಟೆಕರಿಂಪುರ ಎಂಬ ಸಣ್ಣ ಪೇಟೆ ಬೆಳೆಯುತ್ತಾ ದೊಡ್ಡಪೇಟೆಯಾಯಿತು. ಕ್ರಿ.ಶ 1904 ರಲ್ಲಿ ಇದನ್ನು ಮನಗಂಡ ರಾಣೇಬೆನ್ನೂರ ಮುನಿಸಿಪಾಲಟಿಯು ಜೀನಗಾರ ಹೊಂಡದ ಪಕ್ಕದಲ್ಲಿಯ ಸ್ಥಳವನ್ನು ಸಂತೆ ಬಯಲನ್ನಾಗಿ ಪರಿವರ್ತನೆ ಮಾಡಿತು. 26/02/1904 ರಂದು ಅಂದಿನ ಧಾರವಾಡ ಜಿಲ್ಲೆಯ ಕಲೆಕ್ಟರ್ ಆಗಿದ್ದ ಎಂ.ಸಿ ಗಿಬ್ ರವರ ಪತ್ನಿಯು " ರಾಣಿಬೆನ್ನೂರ ಮುನ್ಸಿಪಲ್ ಮಾಕೆ೯ಟ" ಎಂದು ಬರೆದ ಶಿಲಾಫಲಕವನ್ನು ಉದ್ಘಾಟಿಸಿದರು. ಅಂದಿನಿಂದ ಸಂತೆಯು ಸ್ಥಳವು ದೊಡ್ದಪೇಟೆಯಿಂದ ಇಲ್ಲಿಗೆ ಸ್ಥಳಾಂತರಗೊಂಡಿತು. 

ಆದರೆ ಅದು ಪೂಣ೯ಪ್ರಮಾಣದಲ್ಲಿ ಅಲ್ಲ ಎನ್ನಬಹುದು. ಬ್ರಿಟಿಷರು ತಮಗೆ ಅನಕೂಲವಾದ "ರವಿವಾರ"ದ ದಿನವನ್ನು ರಾಣೇಬೆನ್ನೂರಿನ ಸಂತೆಯ ದಿನವನ್ನಾಗಿ ಮಾಡಿದರು. ಕ್ರಿ.ಶ 1931 ರಂದು ಚುಣಾವಣೆಯ ಪ್ರಚಾರಕ್ಕೆ ಬಂದ ಪಂಡಿತ ಜವಾಹರಲಾಲ್ ನೆಹರೂರವರು  ಇದೇ ರಾಣಿಬೆನ್ನೂರ ಮುನ್ಸಿಪಲ್ ಮಾಕೆ೯ಟನಲ್ಲಿ ಭಾಷಣ ಮಾಡಿದ್ದಕ್ಕಾಗಿ ಅದರ ಹೆಸರು ನೆಹರೂ ಮಾಕೆ೯ಟ್ ಎಂದು ಬದಲಾಯಿತು. ಆದರೆ ಸುಮಾರ 300 ವಷ೯ಗಳಿಂದ ನಡೆಯುತ್ತಿದ್ದ ಸಂತೆಯು ಇನ್ನೂ ಜೀವಂತವಾಗಿರುವುದು ವಿಶೇಷ. ಅಲ್ಲಿಗೆ ಬಂದ ವ್ಯಾಪರಸ್ಥರು ಅಲ್ಲಿಯೇ ನೆಲೆಯುರಿ ತಮ್ಮದೆ ಆದ ಛಾಪನ್ನು ಅಲ್ಲಿ ಬಿಟ್ಟಿದ್ದಾರೆ.  

 ಹೀಗಾಗಿ ಇಲ್ಲಿಯ 'ಹಠಗಾರರು' ಬಹಳ ಶ್ರೀಮಂತರಾಗಿದ್ದರು. ನಗರದ ಸುತ್ತಮುತ್ತಲು ತೋಟಗಳಿಂದ ತಾಜಾ ಕಾಯಿಪಲ್ಲೆ ಈ ಸಂತೆಗೆ ಬರುತಿತ್ತು. ಆದರೆ ನಗರದ ಜನಸಂಖ್ಯೆ ಬೆಳದಂತೆ, ದೊಡ್ಡ ಪೇಟೆಯ ಸ್ಧಳವು ಇಕ್ಕಟ್ಟಾದುದರಿಂದ ಊರ ಮಧ್ಯದಲ್ಲಿ ಮಾಕೆ೯ಟ್ ರಚನೆಗಾಗಿ ಆಗಿನ ಮುನಿಸಿಪಾಲಿಟಿಯ ಸದಸ್ಯರಾದ 'ಮೂತಿ೯ನಾಯಕ' ರವರು ಯೋಜನೆ ತಯಾರಿಸಿದರು. ಆದಕ್ಕಾಗಿ 'ಜೀನಗಾರ' ಹೊಂಡದ  ( ಹೊಂಡದಲ್ಲಿ ನಗರಸಭೆಯವರು 'complex ನಿಮಿ೯ಸಿದ್ದಾರೆ) ಪಕ್ಕದ ಸ್ಥಳವನ್ನು 'ಸಂತೆ ಬಯಲನ್ನಾಗಿ ' ಪರಿವತಿ೯ಸಿದರು. ಅದರ ಅಡಿಗಲ್ಲು ಸಮಾರಂಭವನ್ನು 'RANEBENNUR MUNCIPAL MARKET' ಎಂಬ ಹೆಸರಿನೊಂದಿಗೆ 26/02/1904 ರಂದು ಮುನಿಸಿಪಾಲಟಿಯ ಸದಸ್ಯರ ಉಪಸ್ಥಿತಿಯಲ್ಲಿ ಧಾರವಾಡ ಕಲೇಕ್ಟರ್ M.C ಗಿಬ್ಬ್ ರ ಅನುಪಸ್ಥಿತಿಯಲ್ಲಿ ಅವರ ಶ್ರೀಮತಿಯವರು ನೆರವೆರಿಸಿದರು. ಕೆಲವು ವಷ೯ಗಳವರೆಗೆ ಮಾಕೆ೯ಟ್ ತನ್ನ ಹೆಸರನ್ನು ಹಾಗೆ ಜೀವಂತವಾಗಿರಿಸಿಕೊಂಡಿತ್ತು. ಆದರೆ ಪಂಡಿತ ಜವಾಹರಲಾಲ ನೆಹರುರವರು ರಾಣೇಬೆನ್ನೂರಿಗೆ 29/12/1929 ಕ್ಕೆ ಬಂದಾಗ ಇದೆ ಬಯಲು ಪ್ರದೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದಕ್ಕಾಗಿ 'RANEBENNUR MUNCIPAL MARKET' ಜನಸಾಮಾನ್ಯರ ಮಾತಿನಲ್ಲಿ "ನೆಹರು ಮಾಕೆ೯ಟ್" ಆಗಿ ಪರಿವತ೯ನೆಯಾಯಿತು.ಕ್ರಮೇಣವಾಗಿ ಮುನಿಸಿಪಾಲಟಿಯು ಪ್ಲಾಟ ಮಾಡಿ ಅಂಗಡಿಗಳನ್ನು ನಿಮಿ೯ಸಲು ಅನುಮತಿ ನೀಡಲಾಯಿತು. ಇದರ ಪರಿಣಾಮವೆಂಬಂತೆ ನೆಹರು ಮಾಕೆ೯ಟ್ ಬೃಹತ್ ಪ್ರಮಾಣದಲ್ಲಿ ಬೆಳೆಯಿತೆನ್ನಬಹುದು.                                              
 ಸಂಶೋಧಕರು: ಪ್ರಮೋದ ನಲವಾಗಲ.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು