ಮೋಟೆಬೆನ್ನೂರ ಪ್ರವಾಸಿ ತಾಣವಾಗಬಹುದೆ????.....
ಸ್ವಾತಂತ್ರ ಸೇನಾನಿ ಮೈಲಾರ ಮಹಾದೇವಪ್ಪ ಹಾಗೂ ಸಾಹಿತಿಗಳಾಗಿದ್ದ "ಮಹದೇವ ಬಣಕಾರರ" ಜನ್ಮಭೂಮಿ ಇದಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಭುಜಂಗೇಶ್ವರ ದೇವಾಲಯ, ಮಲ್ಲಿಕಾಜು೯ನ ದೇವಾಲಯ ಹಾಗೂ ಸಮೀಪದಲ್ಲಿ ರಾಷ್ಟ್ರಕೂಟರ ಕಾಲದ ಇಟ್ಟಗಿಗಳನ್ನು ಸಹ ನೋಡಬಹುದು. ಇಲ್ಲಿ ಜೈನ ಬಸದಿಯನ್ನು ಕ್ರಿ.ಶ 1067 ರಲ್ಲಿ ಆಯ್ಯಿಮಯ್ಯ ನಾಯಕನು ಕಟ್ಟಿಸಿದ್ದನು. ಆದರೆ ಈಗ ಬಸದಿ ಹಾಳಾಗಿದ್ದು ನಾವು ಮುಕ್ಕಾದ ತಿಥಾ೯ಂಕರ ವಿಗ್ರಹಗಳನ್ನು ಮಾತ್ರ ಊರಲ್ಲಿ ನೋಡಬಹುದಾಗಿದೆ.
ಊರಲ್ಲಿ ಹನುಮಂತ, ದುಗ೯ವ್ವ, ದ್ಯಾಮವ್ವ, ಹೊನ್ನತ್ತೆವ್ವ, ಮೈಲಾರಲಿಂಗಪ್ಪ, ಕತ್ತಲ ಮಲ್ಲಪ್ಪ ದೇವಾಲಯಗಳು ಹಾಗೂ ಏರಡು ಮಠಗಳಿವೆ. ಇಲ್ಲಿಯ ಕ್ಯಾಥೋಲಿಕ್ ಚಚ೯ನ್ನು ಹಾಗೂ ಹಿಂದೆ ಇವರು ಸಲ್ಲಿಸಿರುವ ಸಾಮಾಜಿಕ ಕಾಯ೯ಗಳನ್ನು ನಾವು ಸ್ಮರಿಸಬೇಕು. ಊರ ಹೊರಗಿನ ದಿಬ್ಬವನ್ನು(ನೀರು ಟ್ಯಾಂಕ ಮುಂಭಾಗ ಹಾಗೂ ಕನ್ನಡ ಶಾಲೆಯ ಹತ್ತಿರ) ಈ ಹಿಂದೆ "ಮಾರಿದಿಬ್ಬ" ಎಂದು ಕರೆಯುತ್ತಿದ್ದರು. ಬಹುಶಃ ಇದು ಮೌರ್ಯರ ಕಾಲಕ್ಕೆ ಸಂಬಂಧಿಸಿರಬಹುದಾಗಿದೆ. ಇಲ್ಲಿ 3000 ವಷ೯ಗಳಷ್ಟು ಹಳೆಯದಾದ "ಬೃಹತ್ ಶಿಲಾಗೋರಿ" ಅನಾಥವಾಗಿ ಬದ್ದಿದೆ.ಇದನ್ನು ಸ್ಥಳೀಯರು 'ಕಲ್ಲು ಚಾವಡಿ' ಎಂದು ಕರೆಯುತ್ತಾರೆ. ಇತಿಹಾಸ ಪೂವ೯ ಕಾಲದಲ್ಲಿಯ ಜನರು ಏರಡು ಮುದ್ದೆ ಕಲ್ಲುಗಳನ್ನು ನಿಲ್ಲಿಸಿ,ಅವುಗಳ ಮೇಲೆ ಮೂರು ಕಲ್ಲುಗಳನ್ನು ಅಡ್ಡಲಾಗಿ ಹಾಕಿದ್ದರು. ಇದನ್ನು ಬ್ರಿಟಿಷ್ ರ ತಂಡ ಬೃಹತ್ ಶಿಲಾಗೋರಿ ಎಂದು ಗುರುತಿಸಿತ್ತು. ಅಂದು ಬ್ರಿಟಿಷ್‌ರು ಶಿಲಾಗೋರಿಯ ಸುತ್ತಲು ಕಲ್ಲಿನ ಕಟ್ಟೆಯನ್ನು ಕಟ್ಟಿಸಿ ಸಂರಕ್ಷಿಸಿದ್ದರು. ಕಾರಣ ಆ ಸಂಸ್ಕ್ರತಿಯ ಜನರು ದಕ್ಷಿಣ ಭಾರತಕ್ಕೆ ಕಬ್ಬಿಣವನ್ನು ಪರಿಚಯಸಿದವರು ಎಂಬ ಗೌರವಕ್ಕಾಗಿ. ಈ ಎರಡು ಕಲ್ಲುಗಳನ್ನು ಚಟ್ರಪ್ಪ-ಕೋಟ್ರಪ್ಪ ಎಂದು ಕರೆಯುತ್ತಿದ್ದರು. ಆದರೆ ಇತ್ತೀಚಿಗೆ ಅದರ ಒಂದು ಕಲ್ಲು ಕೆಳಗೆ ಬಿದ್ದಿದೆ ಹಾಗೂ ಕಟ್ಟೆ ಹಾಳಾಗುವ ಸ್ಥಿತಿಯಲ್ಲಿದೆ.
ಇಂತಹ ಶಿಲಾಗೋರಿಗಳನ್ನು, ಭಗ್ನಗೊಂಡ ವಿಗ್ರಹಗಳನ್ನು ಹಾಗೂ ಹಲವು ದೇವಾಲಯಗಳನ್ನು ಸಂರಕ್ಷಿಸುವದರೊಂದಿಗೆ ಸ್ಥಳೀಯರ ಅಭಿಪ್ರಾಯದಂತೆ ಕೋಟೆಗುಡ್ಡದ ಮೇಲೆ(ಹೆದ್ದಾರಿಯ ಪಕ್ಕ) 51 ಅಡಿಯ ಹನುಮಂತ ದೇವರ ಪುತ್ತಳಿ ನಿಮಿ೯ಸಿದಲ್ಲಿ, ಅದೊಂದು ಪ್ರವಾಸಿ ತಾಣವಾಗಬಹುದು.
ಪ್ರಮೋದ ಎಸ್ ನಲವಾಗಲ (9686168202)
Comments
Post a Comment