ಜಗತ್ತ ಪ್ರಸಿದ್ದಿಯ ಬ್ಯಾಡಗಿ ಮೆಣಸಿನಕಾಯಿ” ಹಿಂದಿರುವ ರೋಚಕ ಇತಿಹಾಸ....llll
ಜಗತ್ತ ಪ್ರಸಿದ್ದಿಯ ಬ್ಯಾಡಗಿ ಮೆಣಸಿನಕಾಯಿ” ಹಿಂದಿರುವ ರೋಚಕ ಇತಿಹಾಸ....llll
ನಮ್ಮ ದೇಶವನ್ನು ಅನೇಕ ಪರದೇಶಿಯರು ಆಳಿದ್ದಾರೆ ಆದರೆ ಬೇರೆಯ ದೇಶದಿಂದ ಇಲ್ಲಿಗೆ ಬಂದು ನಮ್ಮ ಸಂಪತ್ತನ್ನು ಲೂಟಿ ಮಾಡಿದವರೇ ಹೆಚ್ಚು, ಇದಕ್ಕೆ ಮೂಲ ಕಾರಣ “ಮಾರ್ಕೊಪೋಲೊ” ಅನ್ನುವ ವ್ಯಾಪಾರಿ ಮತ್ತು ಭೂಅನ್ವೇಷಕ.
ಈತನು ಭಾರತವನ್ನು ಯುರೋಪದಿಂದ ಚೈನಾದ ಭೂಮಾರ್ಗದ ಮುಖಾಂತರ ಪ್ರವೇಶಿಸಿದನು. ಆತನು ಇಲ್ಲಿಯ ಅಪಾರ ಸಂಪತ್ತು ಮತ್ತು ಐಶ್ವರ್ಯದ ಬಗ್ಗೆ ವಿವರಿಸಿದನು. ಅವನ ಈ ವರದಿಯೆ ಯುರೋಪಿಯನ್ನರಲ್ಲಿ ಅತ್ಯಂತ ಹೆಚ್ಚಿನ ಕುತೂಹಲವನ್ನು ಕೆರಳಿಸಿ ಹಾಗೂ ಅವರನ್ನು ಭಾರತದಡೆ ಆಕರ್ಷಿಸಿತು.
ಸಮುದ್ರದ ಮೇಲೆ ಸಂಚರಿಸುವ ಮೊದಲ ಸಾಹಸವನ್ನು ಮಾಡಿದವರು ಪೊರ್ಚಗೀಸರೇ ಮತ್ತು ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಇವರೆ ಮೊದಲು. ಇವರ ಆಕ್ರಮಣಕ್ಕೆ ಸಾಂಬಾರ ಪದಾರ್ಥಗಳಲ್ಲಿ ಅತಿ ಬೇಡಿಕೆಯಿರುವ ಮೆಣಸಿನ ಕಾಯಿಯೇ ಕಾರಣ.
ಇದರಲ್ಲಿ ಖಾರದ ಅಂಶವು ಬಿಳಿಸಿಪ್ಪೆಯಲ್ಲಿದ್ದು ಇದು ನಮ್ಮ ಜೀರ್ಣಾಂಗದ ಜೀವಕೋಶಕ್ಕೆ (cell receptor) ಹತ್ತಿಕೊಂಡು ಶಾಕವನ್ನು ಉತ್ಪತ್ತಿಮಾಡುತ್ತದೆ. ಇದರಿಂದಾಗಿ ನಮ್ಮ ಜೀವಕೋಶಗಳು ಉತ್ಸಾಹಬರಿತವಾಗುತ್ತವೆ ಹೀಗಾಗಿ ಮೆಮಲಿಯನ್ ಗುಂಪಿಗೆ ಸೆರುವ ಪ್ರಾಣಿಗಳು ಇದನ್ನು ತಿನ್ನಲು ಹಂಬಲಿಸುತ್ತವೆ.
ಪೊರ್ಚಗೀಸರು ಭಾರತಕ್ಕೆ ಮೆಣಸಿನಕಾಯಿಯನ್ನು ತರಲು ಮೂಲ ಕಾರಣವೆನೆಂದರೆ ರೋಮನ್ ಚಕ್ರಾಧಿಪತ್ಯದ ಪ್ರಾಚೀನ ರಾಜಧಾನಿಯಾದ ಕಾನಸ್ಟಾಂಟಿನೋಪಲ್ ನಗರವನ್ನು ಆಟೊಮನ್ ತುರುಷ್ಕರರು 1453ರಲ್ಲಿ ಆಕ್ರಮಿಸಿದರು. ಯುರೋಪಿನಲ್ಲಿ ಸಂಬಾರ ಪದಾರ್ಥಗಳು ಮತ್ತು ಆಹಾರ ದಾನ್ಯಗಳ ಬೇಡಿಕೆ ಗಣನಿಯ ಪ್ರಮಾಣದಲ್ಲಿ ಹೆಚ್ಚಾಯಿತು. ಇದನ್ನು ತಿಳಿದ ಯುರೋಪಿನ ವ್ಯಾಪಾರಿಗಳು ಪೂರ್ವದೇಶಗಳೊಡನೆ ನೇರ ಸಂಭಂಧವನ್ನು ಹೊಂದಲು ಹೊಸ ಮಾರ್ಗ ಕಂಡುಕೊಳ್ಳಬೇಕಾಯಿತು. ಕಿಸ್ಟಪೊಸ ಕೊಲಂಬಸ್ ಮೆಣಸಿನ ಕಾಯಿಯನ್ನು ಕೆಂಪಾಗಿ ಇದ್ದದಕ್ಕಾಗಿ “ಪೆಪ್ಪರ್” ಎಂದು ಕರೆದನು “ಸ್ಪೆನ್” ದಲ್ಲಿ ಪ್ರಥಮವಾಗಿ ತಮ್ಮ ಸಸ್ಯದ್ಯೊನವನದಲ್ಲಿ ಇದನ್ನು ಬೆಳೆಸಿದರು.
ಕೊಲಂಬಸ್‍ನ ವೈದ್ಯ “ಡಿಗೊಅಲ್ಪರಜ ಚಾಂಕ” 1493ರಲ್ಲಿ ಇದರ ಉಪಯುಕ್ತತೆಯನ್ನು ತಿಳಿಸಿದನು. ಕೊಲಂಬಸ್ ನಿಧನದ ನಂತರ ವರ್ತಕರ ಮುಖಾಂತರ ಮೆಣಸಿನಕಾಯಿ ಜಗತ್ತಿನ ತುಂಬಾ ಹರಡಿತು. ವಿಶೇಷವಾಗಿ ಭಾರತ ದೇಶಕ್ಕೆ ಇದು ಬರಲು ಮೂಲಕಾರಣ ವಾಸ್ಕೊ-ಡಿ-ಗಾಮಾ. ಇವನು 20 ಮೇ 1498 ರಂದು ಗುಡ್‍ಹೋಪ ಭೂಶಿರವನ್ನು ಹಿಡಿದುಕೊಂಡು ಕಲ್ಲಿಕೊಟವನ್ನು ತಲುಪಿದನು.
ಇಲ್ಲಿಯ ಅರಸನು ಇವರಿಗೆ ವ್ಯಾಪಾರ ಮಾಡಲು ಮುಕ್ತ ಅವಕಾಶಕೊಟ್ಟನು. ಭಾರತಕ್ಕೆ ಎರಡು ಬಾರಿ ಸಮುದ್ರಯಾನ ಮಾಡಿ ಯೊರೋಪ ಮತ್ತು ಭಾರತ ದೇಶಕ್ಕೆ ನೇರ ಸಂಪರ್ಕ ಕಲ್ಪಿಸಿದ್ದಲ್ಲದೆ, ಮಲಬಾರ (ದಕ್ಷಿಣ-ಪೂರ್ವ ಭಾಗದಲ್ಲಿರುವ ಪ್ರದೇಶ ಅಂದರೆ ಕೇರಳ ಗೊವಾ ಮತ್ತು ಸುತ್ತ ಮುತ್ತಲಿನ ಪ್ರದೇಶ) ರೇವಿನಲ್ಲಿ ಪೊರ್ಚಗಿಸರ ಸ್ಥಾನವನ್ನು ಭದ್ರಪಡಿಸಿದನು. ಇವನ ನಂತರ ಬಂದ “ಅಲ್ಮೈಡ್” ಕಲ್ಲಿಕೋಟದ ಅರಸನನ್ನು ಕೊಂದು ತಮ್ಮ ನೆಲೆಯನ್ನು ಬದ್ರಪಡಿಸಿಕೊಂಡರು.
ಹಾವೇರಿ ಮತ್ತು ಬ್ಯಾಡಗಿ, ಕುಮಟಾ ಬಂದರಿನ ಜೊತೆ ಸಂಪರ್ಕವನ್ನು ಹೊಂದಿದ್ದರಿಂದ. ಪೊರ್ಚಗೀಸ ವರ್ತಕರ ಮುಖಾಂತರ ಮೆಣಸಿನಕಾಯಿ ಸ್ಪೆನ್, ಫಿಲಿಪೈನ್ಸ ಮುಖಾಂತರ ಕುಮಟಾ, ಬಂಕಾಪುರ ಮಾರ್ಗವಾಗಿ ಬಂದು ಬ್ಯಾಡಗಿಯನ್ನು ಸೇರಿತು. ಆ ಸಮಯದಲ್ಲಿಯೇ ಇಲ್ಲಿ ಮೆಣಸಿನಕಾಯಿಯ ವ್ಯಾಪಾರ ಮಾರುಕಟ್ಟೆಯಲ್ಲಿತ್ತು.
ಇಲ್ಲಿಯ ಮೆಣಸಿನಕಾಯಿ ಜಗತ್ತ ಪ್ರಸಿದ್ದಿ ಹೊಂದಲು ಕಾರಣವೆನೆಂದರೆ ಇವುಗಳು ಕಡಿಮೆ ಖಾರವನ್ನು ಹೊಂದಿದ್ದು, ಹೆಚ್ಚು ಕೆಂಪು ಬಣ್ಣದ್ದಾಗಿರುತ್ತವೆ. ಇದು ಇಲ್ಲಿಯ ಪರಿಸರದಿಂದ ಹೀಗೆ ಬೆಳೆದಿರಬಹುದು. ಮೆಣಸಿನ ಕಾಯಿ ಸಸಿಯನ್ನು ಹಚ್ಚಿದ 40 ದಿವಸಗಳ ನಂತರ ಗೀಡವು ಹೂವು ಬೀಡಲು ಪ್ರಾರಂಭಿಸುತ್ತದೆ ಮುಂದೆ 80 ದಿವಸಗಳವರೆಗೆ ಹೂವನ್ನು ಬಿಡುತ್ತದೆ.
ಇದರ ಂSಖಿಂ (ಂmeಡಿiಛಿಚಿಟಿ sಠಿiಛಿe ಣಡಿಚಿಜe ಚಿssoಛಿiಚಿಣioಟಿ- ಇವರು ಇದರಲ್ಲಿರುವ ಖಾರದ ಪ್ರಮಾಣವನ್ನು Sಛಿoviಟಟe ಊeಚಿಣ Sಛಿಚಿಟe ನಿಂದ ಅಳಿಯುತ್ತಾರೆ) 156.9 ಇರುವದರಿಂದ ಬೇರೆ ದೇಶಗಳಲ್ಲಿ ಬೆಳೆದ ಮೆಣಸಿನ ಕಾಯಿಯ ಂSಖಿಂ ಯು ಇದರಕ್ಕಿಂತ ಕಡಿಮೆ ಇರುವುದರಿಂದ ಹೆಚ್ಚಾಗಿ ವಿದೇಶಗಳಲ್ಲಿಯು ಕೂಡ ಇದನ್ನೆ ಉಪಯೋಗಿಸುತ್ತಾರೆ. ಬ್ಯಾಡಗಿಯಲ್ಲಿಯ ಮೆಣಸಿನಕಾಯಿಯು “ಕಡ್ಡಿಕಾಯಿ” (ಞಚಿಜಜi ಞಚಿಥಿi) ಎಂದೇ ಪ್ರಸಿದ್ದಿಯನ್ನ ಪಡೆದುಕೊಂಡಿವೆ.
ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಯು 15-2-1948ರಲ್ಲಿ ಪ್ರಾರಂಭವಾಯಿತು.
ಇತ್ತೀಚಿನ ದಿನಗಳಲ್ಲಿ ಈ ಕಡ್ಡಿಕಾಯಿಯಿಂದ “ಓಲೆರೆಸಿನ್” (Olearacin) ಎಂಬ ರಸಾಯನಿಕವನ್ನು ತೆಗೆದು ಅದನ್ನು ಉಗರಿನ, ತುಟಿಗಳ ಬಣ್ಣ ತಯಾರಿಕೆಯಲ್ಲಿ ಹಾಗೂ ಊಸಿರಾಟದ ತೊಂದರೆಯಾದಾಗ ಉಪಯೋಗಿಸುತ್ತಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರವು ದೇಶದ ಎರಡನೆಯ ದೊಡ್ಡ ಮಾರುಕಟ್ಟೆಯೆಂದು ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿವರ್ಷ 21000kg ಮೆಣಸಿನಕಾಯಿ ಉತ್ಪತ್ತಿಯಾಗುತ್ತದೆ. ಬ್ಯಾಡಗಿ ಸುತ್ತಮುತ್ತಲಿನಲ್ಲಿ ಸುಮಾರು 25 ಕೈಗಾರಿಕೆಗಳಿದ್ದು ಇವುಗಳು ಖಾರದ ಪುಡಿಯನ್ನು ತಯಾರಿಸಿ ಎಂ.ಡಿ.ಹೆಚ್ ಹಾಗೂ ಎಂ.ಟಿ.ಆರ್ ನಂತಹ ಶ್ರೇಷ್ಟ ಸಂಬಾರು ಪದಾರ್ಥಗಳ ಕೈಗಾರಿಕೆಗಳಿಗೆ ಕಳುಹಿಸಿಕೊಡುತ್ತಿವೆ. ಹೀಗಾಗಿ ಬ್ಯಾಡಗಿ ಮೇಣಸಿನಕಾಯಿಯನ್ನು ನಮ್ಮ ಜಿಲ್ಲೆಯ ಹೇಮ್ಮೆಯ ಪ್ರತಿಕ ಎನ್ನುವದರಲ್ಲಿ ಅತಿ ಶೋಕ್ತಿಯನಿಸಲಾರದು.
Comments
Post a Comment