ಹಾವೇರಿ ಜಿಲ್ಲಾ ಸಾಹಿತ್ಯ ದರ್ಶನ...!!!
ಹಾವೇರಿ ಜಿಲ್ಲಾ ಸಾಹಿತ್ಯ ದರ್ಶನ...!!!
ಉಪನಿಷತ್ತುಗಳು, ವೇದಗಳು, ವಾಲ್ಮೀಕಿಯ ರಾಮಾಯಣ, ವ್ಯಾಸರ ಮಹಾಭಾರತ ಜಗತ್ತಿನ ಶ್ರೇಷ್ಠ ಕಾವ್ಯಗಳ ಪಂಕ್ತಿಗೆ ಸೇರುವ ಕೃತಿಗಳು. ಮನುಸ್ಮøತಿ (ಮನುಧರ್ಮಶಾಶ್ತ್ರ-ಮಾನವರ ಮೂಲಪುರುಷ ಮನುವಿನ ಬಗ್ಗೆ ಕುರಿತು) ಉಳಿದೆಲ್ಲಾ ಹಿಂದೂ ಧರ್ಮ ಶಶ್ತ್ರಗಳಿಗೆ ಇದುವೆ ಭುನಾದಿ. ಇವುಗಳ ರಚನೆ ಜಗತ್ತಿಗೆ ಶ್ರೇಷ್ಠವೆನಿಸಿದೆ. ಕರ್ನಾಟಕದ ಹಾವೇರಿ ಜಿಲ್ಲೆಯು ಉತ್ತರಕರ್ನಾಟಕದ ಇತರ ಜಿಲ್ಲೆಗಳಿಗಿಂತ ಸಾಹಿತ್ಯ ಕ್ಷೇತ್ರದಲ್ಲಿ ಮುಂದಿದೆ ಇದಕ್ಕೆ ಪುರಾವೆÉ ಸಾಹಿತ್ಯಾಸಕ್ತರು ಈ ನಾಡಿನಲ್ಲಿ ರಚಿಸಿದ ಅನೇಕ ಗ್ರಂಥಗಳು, ಕಾವ್ಯಗಳು, ಕವನ ಸಂಕಲನಗಳು ಮತ್ತು ನಾಟಕಗಳು. ಇಂತಹ ಅನೇಕ ಗ್ರಂಥಗಳು ಶಾಸನಗಳ, ತಾಮ್ರ ಪಟದ, ತಾಳೆಗರೆಯ ಹಾಗೂ ಪುಸ್ತಕ ರೂಪಗಳಲ್ಲಿವೆ, ಪ್ರಾಚೀನ ಕಾಲದಲ್ಲಿ ಶಾಸನಗಳನ್ನು ಅಥವಾ ತಾಮ್ರಪಟಗಳನ್ನು ಬರೆಯಲು ಲಿಪಿಕಾರರಿರುತ್ತಿದ್ದರು. ಈಗೀನ ತರಹದ ರೀತಿಯಲ್ಲಿ ಮುದ್ರಣ ಉಪಕರಣಗಳು ಇಲ್ಲದಿರುವ ಕಾರಣ ಲಿಪಿಕಾರರೇ ಮೂಲ ಪ್ರತಿಯನ್ನು ನೋಡಿ ಶಾಸನಗಳಲ್ಲಾಗಲೀ, ತಾಮ್ರ ಪಟಗಳಲ್ಲಾಗಲೀ ಅಥವಾ ತಾಳೆಗರಿಯಲ್ಲಾಗಲೀ ಬರೆಯಬೇಕಾಗಿತ್ತು. ಇಂತಹ ಅನೇಕ ಗ್ರಂಥಗಳನ್ನು ಮಹಾರಾಜರು ಹಲವು ಪ್ರತಿಗಳನ್ನಾಗಿ ಲಿಪಿಕಾರರಿಂದ ಮಾಡಿಸಿ ಬೇರೆಯ ಆಸ್ಥಾನಿಕರಿಗೆ ಕೊಟ್ಟು ಆ ಗ್ರಂಥದಲ್ಲಿರುವ ಸಾಹಿತ್ಯದಿಂದ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು.
ಇಂತಹ ಅಮೂಲ್ಯವಾದ ಅನೇಕ ಗ್ರಂಥಗಳು ಹಲವರ ಮನೆಯ ಪೂಜೆಯ ಕಟ್ಟೆಯನ್ನೆರಿವೆ ಅಥವಾ ಅದರ ಮೌಲ್ಯವನ್ನು ತಿಳಿಯದೆ ಮೂಲೆಗೆ ಸೇರಿಸಿರಬಹುದು.
ಅತ್ಯಮೂಲ್ಯವಾದಂತಹ ಅನೇಕ ಪುರಾತನ ಗ್ರಂಥಗಳನ್ನು ಪ್ರಾಚ್ಯವಸ್ತು ಇಲಾಖೆ ಸಂರಕ್ಷಿಸಿದರೆ, ಇನ್ನು ಕೆಲವುಗಳನ್ನು ಜಿಲ್ಲೆಯಲ್ಲಿಯ ಮಠಗಳು ಸಂರಕ್ಷಿಸಿದರೆ, ಉಳಿದವುಗಳನ್ನು ಸಾಹಿತ್ಯಾಸಕ್ತರು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸಹಾಯ ಮಾಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ “ಕನಕದಾಸರು” ತಮ್ಮ ಕೊನೆಯ ದಿನಗಳಲ್ಲಿ ಕಾಂತೇಶ ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯೆ ಅವರು “ಮೋಹನ ತರಂಗಿಣಿಯನ್ನು” ರಚಿಸಿದರು. ಶ್ರೀ ಕಾಂತೇಶನ ಮೇಲಿನ ಅಪಾರ ಭಕ್ತಿಯಿಂದಾಗಿ ಇದರ ಒಂದು ತಾಳೆಗರೆಯ ಹಸ್ತಪ್ರತಿಯನ್ನು ದೇವಸ್ಥಾನದಲ್ಲಿರುಸಿದರು. ಇದು ಶಿಥಿಲಾವಸ್ಥೆ ತಲುಪಿದಾಗ ಸುಮಾರು 150 ವರ್ಷಗಳ ಹಿಂದೆಯೇ “ಮೈದೂರ ದಾಸಪ್ಪ ಸಾಹುಕಾರರೆಂಬವರು”ಮರು ಹಸ್ತಪ್ರತಿಯನ್ನು (ಕಾಗದದ ಪ್ರತಿ) ಮಾಡಿದ್ದಾರೆ. ಈ ದೇವಾಲಯದ ಕಮೀಟಿಯವರು ಕಾರ್ತಿಕ ಮಾಸದ ಪ್ರತಿ ದಿನ ರಾತ್ರಿ ಇದನ್ನು ಓದಿ ಹೇಳುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.
ಹಸ್ತಪ್ರತಿಯನ್ನು ಲಿಪಿಕಾರರು ಬರೆಯುವ ಪೂರ್ವದಲ್ಲಿ ಚಿತ್ರಕಾರರು ಮೊದಲ ಮತ್ತು ಕೊನೆಯ ರಕ್ಷಣಾ ಪುಟದ ತಾಳೆಗೆರೆಯ ಮೇಲೆ ಕಲ್ಪನೆಗೂ ಮೀರಿ ಚಿತ್ರವನ್ನು ಬಿಡಿಸುತ್ತಿದ್ದರು. ಅದನ್ನು ಬರೆಯಲು ಅವರು ಸುಮಾರು ದಿವಸಗಳನ್ನು ತೆಗೆದುಕೊಂಡಿರಬಹುದು (ನಾನು ನೋಡಿದ ಪ್ರತಿಯಲ್ಲಿ ಮೀನು ಆಕಳ ಕೆಚ್ಚಲಿನಿಂದ ಹಾಲನ್ನು ಕುಡಿಯುತ್ತಿದೆ). ತದನಂತರ ಅವುಗಳನ್ನು ಮನೆಯ ಒಲೆಯ ಹೊಗೆಯಿಂದ ಮತ್ತು ಬೇವಿನ ಅಥವಾ ವಿಷಪದಾರ್ತಗಳಿಂದ ಲೇಪಿಸಿ ಅವುಗಳನ್ನು ಕೀಟಗಳು ತಿನ್ನದ ಹಾಗೇ ಸಂರಕ್ಷಿಸುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಕ್ರಿ.ಶ 1860 ರಲ್ಲಿ ಸವಣೂರ ಪ್ರೆಸ್ ಪರ್ಷಿಯನ್ ಮುದ್ರಣ ಮತ್ತು ಜ್ಞಾನ ಬೋಧಕ ಪ್ರೆಸ್ ಕನ್ನಡ ಕಲ್ಲಚ್ಚಿನ ಮುದ್ರಣ ಶಾಲೆಗಳಿದ್ದು ಮುಂದೆ ಅನೇಕ ಕಾರಣಗಳಿಂದಾಗಿ ಅವು ಸ್ಥಳಾಂತರಗೊಂಡವು.
ನಮ್ಮ ಜಿಲ್ಲೆಯಿಂದ ಅನೇಕ ಗ್ರಂಥಗಳು, ಕವನ ಸಂಕಲನಗಳು, ನಾಟಕಗಳು ಮತ್ತು ಪುರಾಣಗಳು ಪುರಾತನ ಕಾಲದಲ್ಲಿ, ಅರುಣೋದಯ ಕಾಲದಲ್ಲಿ ಮತ್ತು ನವೋದಯ ಕಾಲದಲ್ಲಿ ಸಾಹಿತಿಗಳಿಂದ ರಚಿತವಾಗಿ ಜಿಲ್ಲೆಯ ಜನರ ಆತ್ಮೋದ್ದಾರವನ್ನು ಮತ್ತು ಸಮಾಜೋದ್ದಾರವನ್ನು ಮಾಡಿವೆ ಎನ್ನಲು ಹೆಮ್ಮೆ ಎನ್ನಿಸುತ್ತದೆ. ಅವುಗಳಲ್ಲಿ ಕೆಲವು ಹಳೆಯ ಗ್ರಂಥಗಳನ್ನು ಈ ಕೆಳಗೆ ನಮೂದಿಸಿದೆ.
1. ಕ್ರಿ.ಶ.902 - ಸೇನಾ ಭೋಗನ ಗ್ರಂಥ -ಲೇಖಕರು ಸೇನಾಭೋಗ (ಚಿಕ್ಕೇರೂರು)
2. 10 ನೇ ಶತಮಾನ - ಆದಿಪುರಾಣ ಶ್ರೀಗುಣಭದ್ರಚಾರ್ಯ (ಬಂಕಾಪುರ)
3. ಕ್ರಿ.ಶ.1174- ಅಚರಾಜನ ಗ್ರಂಥ -ಅಚರಾಜ
4. 12 ನೇ ಶತಮಾನ - ಕಬ್ಬಿಗರ ಕಾವ- ಆಂಡಯ್ಯ(ಹಾನುಗಲ್)
5. 12 ನೇ ಶತಮಾನ- ಏಕಾಂತರಾಮಯ್ಯನ ಕೃತಿ (ಶಾಸನಗಳಲ್ಲಿ)(ಅಬ್ಬಲೂರು)
6. ಕ್ರಿ.ಶ.1230 ತುಡುಗೆಯ ತಿಮ್ಮಯ್ಯನ ಕೃತಿ
7. 12ನೇ ಶತಮಾನ ವಚನಗಳು - ಅಂಬಿಗರ ಚೌಡಯ್ಯ
8. ಸು 1530 ಸರ್ವಜ್ಞನ ತ್ರಿಪದಿಗಳು - ಸರ್ವಜ್ಞ
9. 15 ಮತ್ತು 16 ನೇ ಶತಮಾನ - ರಾಮಧಾನ್ಯ ಚರಿತ್ರೆ, ನಳ ಚರಿತೆ, ಮೋಹನ ತರಂಗಿಣಿ, ಮುಂಡಿಗೆಗಳು, ಕೀರ್ತನೆಗಳು - ಕನಕದಾಸ (ಕಾಗಿನೆಲೆ)
10. ಕ್ರಿ.ಶ.1570- ಇಷ್ಟಲಿಂಗ ಶತಕ - ಶಿವಲಿಂಗ (ಮೇಡ್ಲೆರಿ ಗ್ರಾಮ)
11. ಕ್ರಿ.ಶ.1650 - ಅಬ್ಬಲೂರು ಚರಿತ್ರೆ- ಶಾಂತನಿರಂಜನ
12. ಕ್ರಿ.ಶ.1750 ಹೆಳವನಕಟ್ಟಿ ಗಿರಯಮ್ಮನ ಕಿರ್ತನೆಗಳು - ಗಿರಿಯಮ್ಮ (ರಾಣೆಬೆನ್ನೂರು)
13. 18ನೇ ಶತಮಾನ - ಹರಿಕಥಾಮೃತ ಸಾರಕ್ಕೆ ಟೀಕೆಯ ರಚನೆ - ಶ್ರೀಧರ ವಿಠ್ಠಲ್
14. ಕ್ರಿ.ಶ.1800 - ಪ್ರಭುದೇವ ಚರಿತ್ರೆ- ಶಾಂತಕವಿ (ಸಾತೇನಹಳ್ಳಿ)
15.ಸಾನಂದ ಗಣೇಶ್ವರನ ಸಾಂಗತ್ಯ - ವಿರಕ್ತದೇವ (ತಿಳುವಳ್ಳಿ)
16.1820 ಗುಡಿಪುರ ಮತ್ತು ಕಲ್ಮೇಶ್ವರ ಎಂಬ ಅಂಕಿತಗಳಲ್ಲಿ ಪದಗಳು - ಗುರುಗೋವಿಂದ ಭಟ್ಟರು
17. ಕ್ರಿ.ಶ.1823 ದಿಲೇರಜಂಗಿ ಪರ್ಶಿಯನ್ ಕಾವ್ಯ- ನವಾಬ ಅಬ್ದುಲ್ ದಿಲೇರಖಾನ (ಬರೆಸಿದನು)
18. ಕ್ರಿ.ಶ.1841 ಸಿರಾಜುಲ್ ಇಂತಿಜಾಮ್ (ಆಪಳಿತೆಯ ಉದ್ಯಾನ)- ಅಬ್ದುಲ್ ದಿಲೇರಖಾನ ನವಾಬ
19. ಭಿಕ್ಷುಕ ಮಹೇಶ ವಿಲಾಸ - ಕುಮಾರವಿಭು ಸ್ವಾಮಿಗಳು (ವಿರಕ್ತಮಠ ಹಾನುಗಲ್)
20. ಕ್ರಿ.ಶ.1840 ಶಿಶುನಾಳಧೀಶ ಎಂಬ ಅಂಕಿತದಲ್ಲಿ ತತ್ವಪದಗಳು - ಶಿಶುನಾಳ ಶರೀಫ ಸಾಹೇಬರು
21. ಕ್ರಿ.ಶ.1840 - ಬಸವ ಪವಾಡ ಲೀಲಾಮೃತ- ಶಿವಬಸಪ್ಪ ಶಾಸ್ತ್ರೀ (ನೆರೆಗಲ್ಲ)
22. ಕ್ರಿ.ಶ.1856 ಶಾಂತವಿಠ್ಠಲ ಅಂಕಿತದಲ್ಲಿ ಪದ್ಯಗಳು- ಶಾಂತಕವಿ
23.ಸಾತೇನಹಳ್ಳಿಯ ಶಾಂತೇಶನ ಪರಾಕುಗಳು- ಶಾಂತಕವಿ ಪೂರ್ವಜನಾದ ಶ್ರೀನಿವಾಸ ತೀರ್ಥರು
24.ಕ್ರಿ.ಶ.1860-1945 ಕಾರಡಗಿ ಮಹಾಲ ಹಾಗೂ ದೇಶಪಾಂಡೆಯವರ ಚರಿತ್ರೆ - ಗೋ.ವಾ.ದೇಶಪಾಂಡೆ
25.ಕ್ರಿ.ಶ.1865-1885 “ಕದರಮಂಡಲಗೀಶ” ಅಂಕಿತದಲ್ಲಿ ಹಾಡುಗಳು - ಶ್ರೀನಿವಾಸ ದಾಸರು
26. “ಬಸವ ಭಾಷೆ ಮತ್ತು ನೀತಿ ಸಂಗ್ರಹ” - ಹಾನಗಲ್ ಕುಮಾರ ಸ್ವಾಮಿಗಳು
27.ಕ್ರಿ.ಶ.1869-1942- ಕೃತಿಗಳು ಗಳಗನಾಥರ- ತಿರಕೊಕುಲಕರ್ಣಿ
28. ಕ್ರಿ.ಶ1868 ಕೆಲವು ಕವನಗಳು- ಕೃಷ್ಣಾಜಿ ಅನಂತ (ಹಾನುಗಲ್)
29. ಕ್ರಿ.ಶ.1869-1918 “ಗೌರೀಶ” ಎಂಬ ಅಂಕಿತದಲ್ಲಿ ಪಠ್ಯಪುಸ್ತಕಗಳು ಮತ್ತು ವೈದ್ಯ ಗ್ರಂಥಗಳು - ಶಿವರುದ್ರಪ್ಪ ಸೋ ಕುಲಕರ್ಣಿ (ಮಲ್ಲೂರ-ಹಾವೇರಿ)
30. ಕ್ರಿ.ಶ.1870-1922 ಕನ್ನಡಿಗರ ಜನ್ಮ ಸಾರ್ಥಕಥೆ- ವಲ್ಲಭ ಮಹಾಲಿಂಗ ತಟ್ಟಿ (ಹಾನಗಲ್ಲ)
31.ಕ್ರಿ.ಶ.1870 ಅಂಕಗಣಿತದ ಬಗ್ಗೆ ಪುಸ್ತಕ - ವೆಂಕಟೇಶ ಜಮಖಂಡಿ (ಹಾನಗಲ್ಲ)
32. ಕ್ರಿ.ಶ.1878-1955 ರಾಮದಾಸರ “ದಾಸಭೋಧ” ಕನ್ನಡ ಅನುವಾದ - ಯ.ಗು.ಕುಲಕರ್ಣಿ (ಗುತ್ತಲ)
33. ಕ್ರಿ.ಶ.1880 ವಿರಾಟಪರ್ವ ಮೂಡಲಪಾಯದ ಭಾಗವತರಾಟ - ಶರಣಪ್ಪ (ಅಗಡಿ)
34. ಕ್ರಿ.ಶ.1884-1962 -13 ಕೃತಿಗಳ ರಚನೆ- ಮಹಾದೇವ ಪ್ರಭಾಕರ ಶಾಸ್ತ್ರಿ (ಬಂಕಾಪುರ)
35. ಕರ್ನಾಟಕ ಇತಿಹಾಸದ ಬಗ್ಗೆ ಅನೇಕ ಸಂಶೋಧನಾತ್ಮಕ ಗ್ರಂಥಗಳು - ಶ್ರೀನಿವಾಸರಾಜ ಪುರೋಹಿತ (ಅಗಡಿ)
36.ಕ್ರಿ.ಶ.1893-1951 ಕನ್ನಡ, ಮರಾಠಿ ಮತ್ತು ಇಂಗ್ಲೀಷನಲ್ಲಿ ಕೃತಿಗಳ ರಚನೆ ಶ್ರೀ - ಎಸ್.ಎಸ್.ಬಸವನಾಳರು
37. ಕ್ರಿ.ಶ.1915 ವ್ಯಕ್ತಿ ಚಿತ್ರ, ಪ್ರಬಂಧಗಳು, ಕವನಗಳು- ಎಸ್.ರಮಾನಂದ (ಹಾನುಗಲ್)
38. ಕ್ರಿ.ಶ.1918 ಸಂಸ್ಕøತ ಮತ್ತು ಕನ್ನಡದಲ್ಲಿ ಗ್ರಂಥಗಳು - ಕೆ.ಟಿ.ಪಾಂಡುರಂಗಿ (ತುಮ್ಮಿನಕಟ್ಟಿ)
39.ಕ್ರಿ.ಶ.1922 ಹರಿಹರನ ಕೃತಿಗಳ ಸಂಖ್ಯಾನಿರ್ಣಾಯ ಮತ್ತು ಹಲವಾರು ಗ್ರಂಥಗಳು- ಹೀರೆಮಲ್ಲೂರಿನ ಈಶ್ವರನ್ (ಶಿಗ್ಗಾಂವಿ)
40. ಕ್ರಿ.ಶ.1923 ವಿಮರ್ಶೆ, ಕಥೆ, ಕಾದಂಬರಿಗಳು- ಎಸ್.ಆರ್.ಯಕ್ಕುಂಡಿ (ರಾಣಿಬೆನ್ನೂರ)
41.ಮಲ್ಲಾರಿ ಸಹಸ್ರನಾಮ ಮತ್ತು ನಾಮಾವಳಿ -
ದ. ಮ. ಕುಲಕರ್ಣಿ(ಗುತ್ತಲ)
42. ಕ್ರಿ.ಶ.1929 ಚಿದಂಬರ ಭಕ್ತಿ ಸಾಹಿತ್ಯದ ಕೃತಿಗಳು- ಶೇಷಾಚಲ ಕುಲಕರ್ಣಿ(ಅಗಡಿ)
43. ಕ್ರಿ.ಶ.1929 ಕಾಗೆಗೆ ಹೇಳಿದ ಕಥೆ(ರಾಜ್ಯಪ್ರಶಸ್ತಿ ಪುರಸ್ಕೃತ) - ಶ್ರೀನಿವಾಸ ಹಾವನೂರ
44. ಕ್ರಿ.ಶ.1929 ನಾಟಕಗಳು- ವಸಂತ ಕವಲಿ (ಹಾವೇರಿ)
45. ಕ್ರಿ.ಶ.1932 ಜೋತಿಷ್ಯಕ್ಕೆ ಸಂಭಂದಿಸಿದ ಗ್ರಂಥಗಳು - ಎನ್.ಕೆ.ಕೋಗಳೇಕರ (ಭರಡಿ ಗ್ರಾಮ)
46. ಕ್ರಿ.ಶ.1936 “ಎಲ್ಲಾರೂ ನಮ್ಮವರೇ” ಕಥಾ ಸಂಕಲನ - ಮುರಘರಾಜೇಂದ್ರ ಮಾಗಾವಿ (ಹಾವೇರಿ)
47. ಕ್ರಿ.ಶ.1939 ನಾಟಕಗಳ ರಚನೆ - ಚಂದ್ರಶೇಖರ ಪಾಟೀಲ (ಹತ್ತಿಮತ್ತೂರ)
48. ಕ್ರಿ.ಶ.1944 ಸುಮಾರು 15 ಕೃತಿಗಳು - ಗಂಗಾಧರ ಎಂ ನಂದಿ (ಹಾವೇರಿ)
49. ಕ್ರಿ.ಶ.1944 ಮಕ್ಕಳ ಸಾಹಿತ್ಯದ ಮೂರುಕವನ ಸಂಕಲನ - ಬಿ.ಬಿ.ನಾಗನೂರ (ಸರ್ಜಾಪುರ)
50. ಕ್ರಿ.ಶ.1951 “ಬದುಕಿನ ಚಿತ್ರಗಳು” ಕಥಾಸಂಕಲನ- ಜಿ.ಎನ್.ಕರಬಸವಗೌಡರ್ (ಹಾವೇರಿ)
51. ಕ್ರಿ.ಶ.1962 ಆಯುರ್ವೇದ ಮತ್ತು ಆರೋಗ್ಯ- ಎಂ.ಬಿ. ಕುಲಕರ್ಣಿ (ಬಂಕಾಪುರ)
52. ಕ್ರಿ.ಶ.1964 “ಕತ್ತಲಲ್ಲಿ ಖಾಲಿತಟ್ಟೆ ಹಿಡಿದವರು”- ಜಿ.ಎಂ.ಕುಲಕರ್ಣಿ (ಹಾವೇರಿ)
53. ಕ್ರಿ.ಶ.1986 - ವಚನಗಳು, ಆಂಗ್ಲರ ಆಡಳಿತದಲ್ಲಿ ಕನ್ನಡ - ಮಹಾದೇವ ಬಣಗಾರ(ಮೊಟೆಬೆನ್ನುರು)
54. ಪ್ರವಾಸಕಥನ ಮತ್ತು ಕಾದಂಬರಿಗಳು- ಸುಧಾಮೂರ್ತಿ
55. ಸಂಶೋಧನಾ ಗ್ರಂಥಗಳು - ಚನ್ನಕ್ಕ ಎಲಿಗಾರ (ಶಿಗ್ಗಾಂವಿ). ಇತ್ತೀಚಿನ ದಿನಗಳಲ್ಲಿ ಅನೇಕ ಸಾಹಿತಿಗಳು ಜಿಲ್ಲೆಯ ಸಾಹಿತ್ಯವನ್ನು ತಮ್ಮದೆ ರೀತಿಯಲ್ಲಿ ಶ್ರೀಮಂತಗೊಳಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
Comments
Post a Comment