ಹಾವೇರಿ ಜಿಲ್ಲೆಯ ಸಾದಕರ ದರ್ಶನ......!

ಸಾಧಕರ ದರ್ಶನ
ಸಾಧಕರು ಎಂದರೆ ಅಂದಿನ ಪರಿಸರಕ್ಕೆ ತಕ್ಕಂತೆ ತಮ್ಮ ಪ್ರತಿಭೆ ಹಾಗೂ ಸಾಹಸಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೆಂದು ಅರ್ಥೈಸಬಹುದು. ಅಂದರೆ ಸಾಹಿತ್ಯ, ಸಂಗೀತ, ಸ್ವಾತಂತ್ರ್ಯ ಹೋರಾಟಗಳಲ್ಲಿ ಸಾಧನೆ ಮಾಡಿದವರ ದರ್ಶನ ಮಾಡಿಸುವುದೇ ಸಾಧಕರ ದರ್ಶನವಾಗಿದೆ.  

1. ಶಾಂತಕವಿ
ಇವರ ನಿಜನಾಮ “ಸಕ್ಕರಿ ಬಾಳಾಚಾರ್ಯ”. ಸಕ್ಕರಿ ಮನೆತನದ ಮೂಲಸ್ಥಳವಾದ ಹಾವೇರಿ ಜಿಲ್ಲೆಯ ಹಿರೆಕೇರೂರು ಸಾತೇನಹಳ್ಳಿಯಲ್ಲಿ ಗೋಪಾಲಾಚಾರ್ಯರ ಮಗನಾಗಿ 1856ರ ಜನೇವರಿ 15ರಂದು ಜನಿಸಿದರು. ಇವರ ಮನೆತನದ ಕುಲದೈವ ಶಾಂತೇಶ. ಶಾಂತೇಶನ ಹೆಸರನ್ನು ಇಟ್ಟುಕೊಂಡು ಇವರು “ಶಾಂತಕವಿ”ಗಳಾದರು (“ಮುಕುಂದ ದಾನಾಮೃತ” ವೆಂಬ ಕೀರ್ತನೆಯಿಂದ ತಿಳಿಯುತ್ತದೆ). ಬಾಲ್ಯದಿಂದಲೂ ಇವರಿಗೆ ಹೆಚ್ಚಾಗಿ ಸಂಸ್ಕøತಕ್ಕಿಂತ, ಹಾಡು ಮತ್ತು ಕುಣಿತದ ಕಡೆಗೆ ಹೆಚ್ಚು ಆಸಕ್ತಿಯಿತ್ತು. ಕ್ರಿ.ಶ 1870 ರಲ್ಲಿ ಉತ್ತರಕರ್ನಾಟಕದ ಅನೇಕ ಭಾಗಗಳಲ್ಲಿ ಮರಾಠಿಗರ ಮತ್ತು ಮರಾಠಿ ಭಾಷೆಯನ್ನು ಕಲಿಯಲು ಸಂಪೂರ್ಣವಾಗಿ ಆಕರ್ಷಿತರಾಗಿದ್ದರು. ಇಂತಹ ಸಂದರ್ಭದಲ್ಲಿ ಅಂದರೆ ಕ್ರಿ.ಶ 1874 ರಲ್ಲಿ ಗದುಗಿನ ಉತ್ಸಾಹಿ ತರುಣರ ನೆರವಿನೊಂದಿಗೆ “ಕರ್ನಾಟಕ ನಾಟಕ ಕಂಪನಿ” ಯನ್ನು ಪ್ರಾರಂಭಿಸಿ ನಾಟಕ ಮಾಡಲು “ಉಷಾಕಿರಣ” ಎಂಬ ನಾಟಕವನ್ನು ರಚಿಸಿದ್ದರಿಂದ “ಕರ್ನಾಟಕ ನಾಟಕದ ಪ್ರಥಮ ಗುರು” ಎಂಬ ಬಿರುದನ್ನು ಅರ್ಥಪೂರ್ಣವಾಗಿಸಿದರು. ಈ ರೀತಿ “ಕರ್ನಾಟಕ ನಾಟಕ ಪಿತಾಮಹ” ಎಂಬ ಗೌರವಕ್ಕೆ ಸಂಪೂರ್ಣವಾಗಿ ಅರ್ಹತೆ ಪಡೆದರು. 

ತಮ್ಮ 14 ನೇಯ ವಯಸ್ಸಿನಲ್ಲಿಯೇ ರಾಣೆಬೆನ್ನೂರು ಕನ್ನಡ ಶಾಲೆಯ ಅಧ್ಯಾಪಕರಾಗಿ ಸೇರಿಕೊಂಡರು, ಮುಂದೆ ಗದಗಿಗೆ ವರ್ಗಾವಣೆಯಾದಾಗ ಇವರು ತಮ್ಮ ಶಾಲಾ ಅವಧಿಯ ನಂತರ ಮೂರು ಮೈಲು ಎಮ್ಮೆಯ ಮೇಲೆ ಕುಳಿತು ಹೋಗಿ ನಟರನ್ನು ತರಬೇತು ಮಾಡುತ್ತಿದ್ದರು. ಅವರೇ ಹೇಳುವ ಹಾಗೆ ನನ್ನ “ವಿಲಕ್ಷಣ ಸ್ವಭಾವದ” ಕಾರಣದಿಂದ ಎರಡೇ ದಶಕದಲ್ಲಿ 63 ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದೆನು. ಇದು ಕವಿತ್ವ ಹಾಗೂ ನಾಟಕ ನಿರ್ಮಾಣದಲ್ಲಿ ಅವರಿಗಿದ್ದ ಪ್ರತಿಭೆ, ಪಾಂಡಿತ್ಯ ಹಾಗೂ ಫ್ರೌಢತೆಯನ್ನು ಎತ್ತಿ ತೋರಿಸುತ್ತದೆ. ಇವರು ಬರೆದ ಪ್ರಮುಖ ನಾಟಕಗಳೆಂದರೆ “ಸಿರಿಯಾಳ ಸತ್ವ ಪರೀಕ್ಷೆ”, “ಸುಂದೋಪಸುಂದ ವಧೆ”, “ವತ್ಸಲಾಹರಣ”, “ಕೀಚಕವಧೆ”, “ಸಧನ್ವವಧೆ”, “ಸೀತಾರಣ್ಯ ಪ್ರವೇಶ”, “ಪಾರ್ವತಿ ಪ್ರಣಯ”, “ಮೇಘಧೂತ”, “ಶಕುಂತಲೋತ್ಪತ್ತಿ”, “ ಚಂದ್ರಾವಳಿ ಚರಿತ್ರೆ”, “ ಉಷಾಹರಣ”, ಇತ್ಯಾದಿ ಇವರ ನಾಟಕದಲ್ಲಿ ಗಂಭೀರತೆ, ಆಧ್ಯಾತ್ಮ, ತತ್ವಪದಗಳು ಹಾಗೂ ಹಾಸ್ಯವನ್ನು ಒಳಗೊಂಡಿರುತ್ತಿದ್ದವು.

ಕ್ರಿ.ಶ 1886 ರಲ್ಲಿ ಅಗಡಿಗೆ ವರ್ಗಾವಣೆಯಾಗಿ ಬಂದ ಶಾಂತಕವಿಗಳು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಅಗಡಿಯಲ್ಲಿ ಶಾಂತಕವಿಗಳ ವ್ಯಕ್ತಿತ್ವ ಮತ್ತಷ್ಟು ಚೆನ್ನಾಗಿ ವಿಕಾಸವಾಗುವಂತಹ ವಾತಾವರಣ ಅವರಿಗೆ ದೊರಕಿತು. ಅಗಡಿಯ ಶೇಷಾಚಲ ಸಾದುಗಳ, ಅಗಡಿಯ ದೇಸಾಯಿ, ಶಿಶುನಾಳ ಶರೀಫ ಸಾಹೇಬ ಮತ್ತು ಮೂಡಲ ಪಾಯದ ಹೆಸರಾಂತ ಶರಣಪ್ಪ ಇವರ ಸಂಪರ್ಕ, ಸಾನಿಧ್ಯಗಳು ಶಾಂತಕವಿಗಳಲ್ಲಿ ಪರಿಪಕ್ವತೆಯನ್ನು ತಂದು ಕೊಡಲು ನೆರವಾದವು. ಇಂತಹ ವಾತಾವರಣವೇ ಅವರಿಗೆ ಅನುವಾದದ ಕಡೆಗೆ ಗಮನ ಹರಿಸುವಂತೆ ಮಾಡಿದವು ಅದರ ಫಲವೇ “ಮೇಘದೂತ”, “ವಿರಹ ತರಂಗ” ಮೊದಲಾದ ಕೃತಿಗಳು, ಸಂಸ್ಕøತದ ಈ ಉತ್ತಮ ಕೃತಿಗಳ ಕಾವ್ಯಗುಣವನ್ನು ಮೊಟ್ಟಮೊದಲಿಗೆ ಮೆಚ್ಚಿದ ಕನ್ನಡ ಕವಿಯಂದರೆ ಶಾಂತಕವಿಗಳೆಂಬುದು ಗಮನಾರ್ಹವಾದ ವಿಷಯ. ಇವರು ತಮ್ಮ ವೃತ್ತಿ ಜೀವನದಲ್ಲಿಯ ಕೊನೆಗಾಲದಲ್ಲಿ ಕೇವಲ 22 ರೂಪಾಯಿ ಮಾತ್ರ ಸಂಬಳವನ್ನು ಪಡೆಯುತ್ತಿದ್ದರು, ಇದು ಅವರ ಬೆಳೆದ ಸಂಸಾರವನ್ನು ನಿಭಾಯಿಸಲು ಸಾಧ್ಯವಾಗದೆ ಅವರ ಚೇತನವನ್ನು ಕುಗ್ಗಿಸಿತು. ಅನೇಕ ಸಮಾರಂಭಗಳಲ್ಲಿ ಅವರಿಗೆ ವಿವಿಧ ಸಂತ್ಕಾರಗಳು ಮತ್ತು ಹೊಗಳಿಕೆಗಳು ನಡೆದವು. ಆದರೆ ಅವರ ಆರ್ಥಿಕ ಗಳಿಕೆಗೆ ಸಹಾಯವಾಗಲಿಲ್ಲ ಮತ್ತು ಅವರೆಂದಿಗೂ ಅದರ ಕಡೆಗೆ ಗಮನಹರಿಸಲಿಲ್ಲ.
ಶಾಂತಕವಿಗಳು ಬಹಳ ಜನಪ್ರೀಯತೆಯನ್ನು ಸಂಪಾದಿಸಿದ್ದರಿಂದ ಮತ್ತು ಅವರು ಸಲ್ಲಿಸಿದ ಸೇವೆಗಾಗಿ ಅಗಡಿಯನ್ನು ಬಿಡುವಾಗ ಅದ್ದೂರಿಯಾದ ಬೀಳ್ಕೂಡುಗೆ ಸಮಾರಂಭ ನಡೆದು ನಾಟಕ ಅಭಿಮಾನಿ ಕನ್ನಡಿಗರಿಂದ ಒಂದು ಮನೆ ಹಾಗೂ ಜಮೀನುಗಳು ಅವರಿಗೆ ದತ್ತಿಯಾಗಿ ದೊರೆಯಿತೆಂದು ತಿಳಿದುಬರುತ್ತದೆ.

2. “ಕರ್ನಾಟಕದ ಕಬೀರ” ಸಂತ ಶಿಶುನಾಳ ಶರೀಫ ಸಾಹೇಬರು
(ಶಿಶುನಾಳ ಷರೀಫ ಶಿವಯೋಗಿಗಳು ಬಳಸಿದ ತಂಬೂರಿ)
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಜನರು ತಮ್ಮ ಆರಾಧ್ಯ ದೈವನಾದಂತಹ ಶಿಶುವಿನಾಳದೀಶನಿಗೆ ಕೃತಾರ್ತರಾಗಿದ್ದಾರೆ. ಹುಲಿ ಮತ್ತು ಆಡುಗಳು ಒಂದೇಕಡೆ ನೀರು ಕುಡಿಯುವಂತಹ ಹಾಗೂ ಜೊತೆಗೆ ಕೂಡಿ ವಾಸಿಸುವಂತಹ ಶಾಂತ, ಸಹಿಷ್ಣತೆ ಮತ್ತು ಸರ್ವಧರ್ಮಗಳು ಕೂಡಿ ಸಹಬಾಳ್ವೆಯನ್ನು ನಡೆಸುವಂತಹ ಸ್ಥಳದಲ್ಲಿ ಅಮವಾಸ್ಯೆಯ ದಿನದಂದು ಹುಲಗೂರಿನ ಹಜೇರೇಶಖಾದರಿ ಎಂಬ ಫಕೀರರ ಕೃಪಾರ್ಶಿವಾದದಿಂದ ಶರೀಫ ಸಾಹೇಬರು ಜನಿಸಿದರು.
ತಂದೆ ತಾಯಿಗಳಿಬ್ಬರು ಹಿಂಧೂದರ್ಮದ ಸಹಿಷ್ಣುಗಳಾಗಿದ್ದರು. ಹೀಗಾಗಿ ಬಾಲ್ಯದಿಂದಲೆ ಇವರಿಗೆ ತಂದೆ ತಾಯಿಗಳಿಬ್ಬರು ಪುರಾಣಪುಣ್ಯಕಥೆ, ರಾಮಾಯಣ, ಮಹಾಭಾರತ, ಕುರಾನ್ ಅನೇಕ ಶಿವಶರಣರ ಜೀವನ ಸಂದೇಶಗಳನ್ನು ಮತ್ತು ದಿನಕ್ಕೆ ಐದು ಬಾರಿ ನಮಾಜ್ ಮಾಡುವುದನ್ನು ಹೇಳಿಕೊಡುತ್ತಿದ್ದರು. 

ಇದರಿಂದ ಪ್ರಭಾವಿತಗೊಂಡ ಶರೀಫ ಸಾಹೇಬರ ಮನಸ್ಸು ಆತ್ಮಜ್ಞಾನದ ಕಡೆಗೆವಾಲಿತು. ಇವರು ಈ ಜ್ಞಾನಕ್ಕೆ ಹಂಬಲಿಸಿ ಪಕ್ಕದ ಊರಾದಂತಹ ಕಳಸದ ಗೋವಿಂದಭಟ್ಟರ ಶಿಷ್ಯರಾಗಿ ಸೇರಿಕೊಂಡರು. 

ಈ  ಗುರುಗಳಿಗೂ ಮಕ್ಕಳಿಲ್ಲದ ಕಾರಣ, ತಾವು ಬ್ರಾಹ್ಮಣ ಜಾತಿಯವರಾಗಿದ್ದರೂ ಕೂಡ ಶರೀಫರನ್ನು ಪರಮಾಪ್ತ ಶಿಷ್ಯ ಹಾಗೂ ಮಗನಂತೆ ನೋಡಿಕೊಂಡರು. ಈ ಗುರುಶಿಷ್ಯರ ಸಂಬಂಧ ರಾಮ-ರಹೀಮ ಅಣ್ಣತಮ್ಮಂದಿರೆಂಬ ಧರ್ಮದ ಸಾರವನ್ನು ಜಗತ್ತಿಗೆ ಎತ್ತಿತೋರಿಸಿದಂತಿತ್ತು. ಕಲ್ಲು ಅನೇಕ ಪೆಟ್ಟುಗಳನ್ನು ತಿಂದಾಗ ದೇವಸ್ಥಾನದಲ್ಲಿ ಪೂಜಿಸುವ ಮೂರ್ತಿಯಾಗುತ್ತದೆ, ಪೆಟ್ಟು ತಿನ್ನದೆ ಇರುವ ಕಲ್ಲು ದೇವಸ್ಥಾನದ ಮೆಟ್ಟಿಲಾಗುತ್ತದೆ. ಎನ್ನುವ ಮಾತಿನಂತೆ ಇವರ ಜೀವನದಲ್ಲಿಯ ಘಟನೆಗಳಿಂದ ಮತ್ತು ಗುರುಗಳ ತತ್ವಪದಗಳಿಂದ ಜಗತ್ತಿಗೆ ಪೂಜಿಸುವ ಮೂರ್ತಿಯಾಗಿ ರೂಪುಗೊಂಡರು. ಶ್ರೀ ಸಿದ್ದಾರೂಢರ ಮಠದಲ್ಲಿ, ಗುಡಗೇರಿಯಲ್ಲಿ, ಕಳಸದಲ್ಲಿ, ನವಲಗುಂದದಲ್ಲಿ ಮತ್ತು ಶಿಶುವಿನಾಳದಲ್ಲಿ ಅನೇಕ ಪವಾಡಗಳನ್ನು ತೋರಿಸಿದ್ದಾರೆ. 

ಶಾಂತಕವಿಗಳು, ನವಲಗುಂದದ ನಾಗಲಿಂಗ ಸ್ವಾಮಿಗಳು, ಶ್ರೀ ಸಾವಳಗಿ ಸ್ವಾಮಿಗಳು, ಶ್ರೀ ಗರಗದ ಮಡಿವಾಳ ಸ್ವಾಮಿಗಳು, ಶ್ರೀ ಕಬೀರದಾಸರು, ಶ್ರೀ ಶಿವಪುತ್ರ ಸ್ವಾಮಿಗಳು, ಶ್ರೀಉಣಕಲ್ಲು ಸಿದ್ಧಪ್ಪÀಜ್ಜನವರು, ಅಗಡಿ ಮತ್ತು ಹಂದಿಗನೂರು ದೇಸಾಯಿಯವರು ಇವರ ಸಮಕಾಲೀನರು. ಇವರು ಮುಂದೆ ಕುಂದಗೋಳದ ಫಾತಿಮಾಬೇಗಂ ಎಂಬ ಮೃದುಸ್ವಭಾವದ ಕನ್ಯೆಯನ್ನು ತಾಯಿಯ ಒತ್ತಾಯದ ಮೇರೆಗೆ ವಿವಾಹವಾದರು. ಕೆಲವು ವರ್ಷಗಳ ನಂತರ ಇವಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಜಗತ್ತಿನಿಂದ ದೂರನಡೆದಳು. ಈ ಎಲ್ಲದರ ನಡುವೆಯೂ ಆತ್ಮಜ್ಞಾನದ ಹಸಿವು ಅವರಿಗೆ ಕಡಿಮೆಯಾಗಲಿಲ್ಲ. ಇದರ ಫಲವೆ ಅನೇಕ ತತ್ವಪದಗಳು ಇಂದಿಗೂ ಕೂಡ ಜನಸಾಮಾನ್ಯರ ಬಾಯಿಯಲ್ಲಿ ಜೀವಂತವಾಗಿವೆ. ಶರೀಫ ಸಾಹೇಬರು ಹುಟ್ಟಿಬೆಳೆದ ಮನೆಯನ್ನು ಮತ್ತು ಅಲ್ಲಿಯೇ ಪಕ್ಕದಲ್ಲಿರುವ ಮಸೀದಿಯಲ್ಲಿ ಕುಳಿತು ಧ್ಯಾನಚಿತ್ತರಾಗುತ್ತಿದ್ದ ಸ್ಥಳವನ್ನು ಇಂದಿಗೂ ಕೂಡ ನೋಡಬಹುದು. 

ಇವರ ತತ್ವಪದದ ಹಾಡುಗಳಾದ  “ಕೋಡಗನ್ನ ಕೋಳಿನುಂಗಿತ್ತಾ ನೋಡವ್ವ ತಂಗಿ, ಹಾಕಿದ ಜನೀವಾರವ ಸದ್ಗುರುನಾಥ ಹಾಕಿದ ಜನೀವಾರವ, ಹಾವು ತುಳಿದೇನೆ ಮಾನಿನಿ ಹಾವು ತುಳಿದೇನೆ, ಮೋಹದ ಹೆಂಡತಿ ತೀರಿದ ಬಳಿಕ, ಬಿದ್ದಿಯಾಬೇ ಮುದಿಕಿ ಬಿದ್ದಿಯಾಬೇ, ಕೂ ಕೂ ಎನ್ನುತ್ತಿದೆ ಮನವ, ತರವಲ್ಲಾ ತಂಗಿ ನಿನ್ನ ತಂಬೂರಿ, ನನ್ನ ಹೆಂಡತಿ, ಪಾರಿವಾಳದ ಪಾಠ ಚಿನ್ನ ಮತ್ತು ಶಿವಲೋಕದಿಂದ ಒಬ್ಬ ಸಾದು” ಎಂಬ ಅನೇಕ ಪ್ರಸಿದ್ದ ಹಾಡುಗಳನ್ನು ರಚಿಸಿದ್ದಾರೆ.

71 ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಸರ್ವರಿಂದಲೂ ಪೂಜಿಸಲ್ಪಡುವ ಮತ್ತು ಹಿಂದೂ-ಮುಸಲ್ಮಾನರ ನಡುವೆ ಭಾವೈಕ್ಯದ ಕೊಂಡಿಯಾಗಿ ಬದುಕಿಗೆ ವಿದಾಯ ಹೇಳಿದರು. ಇವರ ಮತ್ತು ಇವರ ಕುಟುಂಬದವರ ಗದ್ದುಗೆಗಳನ್ನು ಇವರ ಸ್ವಂತ ಹೋಲದಲ್ಲಿಯೇ ಇಂದಿಗೂ ನೋಡಬಹುದು (ಹಂದಿಗನೂರು ದೇಸಾಯಿಯವರ ಉಪಸ್ಥಿತಿಯಲ್ಲಿ ಶಿಶುನಾಳ ಶರಿಫ ಶಿವಯೋಗಿಗಳ ಗದ್ದುಗೆ ನಿರ್ಮಾಣವಾಯಿತು).

3. ಸಂತ ಶ್ರೀ ಕನಕದಾಸರು
ಕ್ರಿ.ಶ 15 ಮತ್ತು 16 ನೇಯ ಶತಮಾನದ ಮದ್ಯದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ “ಬಾಡ” (ಹಳೆಬಾಡ) ಗ್ರಾಮದಲ್ಲಿ ತಿರುಪತಿ ತಿಮ್ಮಪ್ಪನ ಆರ್ಶಿವಾದದಿಂದ ಬೀರಪ್ಪ ನಾಯಕ ಮತ್ತು ಬಚ್ಚಮ್ಮದೇವಿ ಗರ್ಭದಲ್ಲಿ ಜನಿಸಿದ ಮಹಾಚೇತನವೆ “ತಿಮ್ಮಪ್ಪನಾಯಕ” (ಕನಕದಾಸ). ಇವರ ತಂದೆ ವಿಜಯನಗರ ಅರಸರ ಡಣ್ಣನಾಯಕನಾಗಿದ್ದನು, ಆದ್ಧುದರಿಂದ ಕನಕದಾಸರಿಗೆ ಯಾವ ವಿದ್ಯೆಯಲ್ಲಿಯೂ ಕಡಿಮೆಯಾಗಲಿಲ್ಲ. 

ಇಂತಹ ಅರಸುಪ್ಪತ್ತಿಗೆಯಲ್ಲಿ ಮೆರೆದಂತಹ ತಿಮ್ಮಪ್ಪನಾಯಕರು ದಾಸರಾಗಿದ್ದು ನಮ್ಮ ಅದೃಷ್ಟ ಎನ್ನಬಹುದು. ರಣರಂಗದಲ್ಲಿ ತಿಮ್ಮಪ್ಪನಾಯಕ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಮಲಗಿದ್ದಾಗ ಆದಿಕೇಶವ ಈ ಹಿಂದೆ ಕನಸ್ಸಿನಲ್ಲಿ ಬಂದಂತೆಯೇ ಬಂದು ಈಗಲಾದರು ನನ್ನ ದಾಸನಾಗು ಎಂದು ಹೇಳಿದಾಗ ಕನಕದಾಸರು ಒಪ್ಪಿ ದಾಸರಾದರು (ದೇಹದ ಮೇಲಿನ ಗಾಯಗಳು ಮರಣವನ್ನಪ್ಪುವ ತನಕ ಇದ್ದವು). ಅವರು ಇದಕ್ಕಾಗಿಯೇ ತಮ್ಮ ಆರಾದ್ಯ ರಂಗನಾಥನನ್ನು ಕಾಗಿನೆಲೆಗೆ ಒಯ್ದು ಆದಿಕೇಶವನೆಂದು ಸ್ಥಾಪಿಸಿ ವಿಜೃಂಭಿಸಿದರು.

ಇವರು ಕುದುರೆ ಸವಾರಿ ಮಾಡುವುದನ್ನು ಮತ್ತು ಖಡ್ಗಯುದ್ಧ ಕಲೆಯನ್ನು ತಂದೆಯಿಂದ, ತಂದೆಯ ನಿಧನದ ನಂತರ ಧೈರ್ಯಗೆಡದೇ ಸ್ವಸಾಮಥ್ರ್ಯದಿಂದ ಮಾಂಡಲಿಕತನವನ್ನು , ಆದಿಕೇಶವನ ಸತ್ಯದರ್ಶನದಿಂದ ದಾನವನ್ನು, ಬಂಕಾಪುರದ ಶ್ರೀನಿವಾಸಾಚಾರ್ಯ ವ್ಯಾಸರಾಯರಿಂದ ಮತ್ತು ಸದಾಶಿವಪೀಟದ ಶ್ರೀ ಗದಿಗೇಶ್ವರ ಮಹಾಸ್ವಾಮಿಗಳ ಸಂಗದಿಂದ ಜ್ಞಾನವನ್ನು, ಸಮಾಜದಲ್ಲಿಯ ಮೇಲ್ವರ್ಗದವರಿಂದ ಅರಿವನ್ನು, ತಿರುಪತಿಯ ತಿಮ್ಮಪ್ಪ, ಕದಿರಮಂಡಲಿಗಿಯ ಕಾಂತೇಶ ಮತ್ತು ಉಡುಪಿಯ ಕೃಷ್ಣನಲ್ಲಿಯ ಮೇಲಿನ ಭಕ್ತಿಯಿಂದ ಆತ್ಮ ಜ್ಞಾನವನ್ನು ಮತ್ತು ಸಮಾಜದಲ್ಲಿಯ ಘಟನೆಗಳಿಂದ ಸಾಹಿತ್ಯವನ್ನು ಪಡೆದು ತಮ್ಮದೇ ಆದ ಸಾಹಿತ್ಯದಿಂದ ಸಮಾಜೋದ್ಧಾರವನ್ನು ಮಾಡಿದ ದಾಸ ಶ್ರೇಷ್ಠರಲ್ಲಿ ಕನಕದಾಸರು ಶ್ರೇಷ್ಠರು.

ಕನಕದಾಸರು ನಿಂತು ನೀರಾಗದೆ ಹರಿಯುವ ನದಿಯಾಗಿ ದೇಶವನ್ನು ಸಂಚರಿಸಿದರು. ಇದಕ್ಕೆ ಆದಾರವೆಂಬಂತೆ ಜೈಪುರದಲ್ಲಿ “ಕನಕ ಬೃಂದಾವನವನ್ನು”, ಉಡುಪಿಯಲ್ಲಿ ಕನಕನ ಕಿಂಡಿಯನ್ನು, ಶ್ರೀರಂಗಪಟ್ಟಣ ಮಹಾದೇವಾಪುರದ ಕನಕದಾಸರ ಬಂಡೆಯನ್ನು, ಚಾಮರಾಜನಗರದ ಜಿಲ್ಲೆಯಲ್ಲಿ ಕನಕದಾಸರಗವಿಯನ್ನು, ಪಂಢರಪುರದ ದಾಸರ ಕಟ್ಟೆಯನ್ನು ಹಾಗೂ ನಮ್ಮ ಜಿಲ್ಲೆಯಲ್ಲಿಯ ಅನೇಕ ಉದಾಹರಣೆಗಳನ್ನು ಇಂದಿಗೂ ನೋಡಬಹುದು.

ಕನಕದಾಸರು ಭಕ್ತಿಗಾಗಿ “ಹರಿಭಕ್ತಿಸಾರ” ಕೃತಿಯನ್ನು ರಚಿಸಿ ಭಕ್ತಿ ಪಂsಥಕ್ಕೆ ಅದನ್ನು ಸಮರ್ಪಿಸಿದ್ದಾರೆ. ಇವರು ಅನುಭವಿಸಿದ ಜಾತಿಯ ತೊಂದರೆಯನ್ನು ಹಾಗೂ ಆ ಕಾಲದ ಜಾತಿ ಆಧಾರಿತ ಸಮಾಜವನ್ನು ಪ್ರತಿಬಿಂಬಿಸುವಂತಹ “ರಾಮಧಾನ್ಯಚರಿತೆ”, ಪ್ರೇಮಲೋಕಕ್ಕೆ ಆದರ್ಶಮಯ ಕಾವ್ಯವಾದಂತಹ “ನಳಚರಿತ್ರೆ”, ಭಾಗವತ ಮತ್ತು ಹರಿವಂಶ ಪುರಾಣಗಳನ್ನೊಳಗೊಂಡ “ಮೋಹನತರಂಗಿಣಿ” (ಶ್ರೀ ಲಕ್ಷ್ಮೀನಾರಾಯಣ ಗುಡಿಯಲ್ಲಿ ರಚಿತವಾಗಿ ರಚಿತವಾಗಿ ಇದರ ಪ್ರತಿ ಕದರಮಂಡಲಗಿಯ ಕಾಂತೇಶ ದೇವಸ್ಥಾನದಲ್ಲಿದೆ). ನೃಸಿಂಹಸ್ತವ, ಕಿರ್ತನೆಗಳನ್ನು, ಮುಂಡಿಗೆಗಳನ್ನು ಮತ್ತು “ಉಗಾಭೋಗ”ಗಳನ್ನು ರಚಿಸಿದರು.

ಇವರ ಸಾಹಿತ್ಯದಲ್ಲಿ ಸ್ತ್ರಿವಾದ, ಜಾತಿವಾದ, ನೀತಿಪಾಠ, ಪ್ರೀತಿಪಾಠ, ತತ್ವಪದಗಳು ಭಕ್ತಿಯ ಬಾವನೆಗಳು ಮತ್ತು ವ್ಶೆಜ್ಞಾನಿಕ ವಿಚಾರಗಳು  ಅಡಕವಾಗಿವೆ. ಇವರು ತಮ್ಮ ಕೊನೆಗಾಲದಲ್ಲಿ ಸಂಚಾರಿ ಜೀವನವನ್ನು ನಿಲ್ಲಿಸಿ ಕದರಮಂಡಲಗಿಯ ಕಾಂತೇಶ ದೇವಸ್ಥಾನದಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಇವರ ಮೈಮೇಲೆ ಆದಂತಹ ಯುದ್ದದ ಗಾಯಗಳಿಂದಾಗಿ ನಿಧನಹೊಂದಿದರು. ಇವರ ಗದ್ದುಗೆಯನ್ನು ನಾವು ಕಾಗಿನೆಲೆಯಲ್ಲಿ ನೊಡಬಹುದು. ಇವರ ವಂಶಸ್ಥರೆಂದು ಹೇಳುವ “ದಾಸರ” ಮನೆತನವನ್ನು ಬ್ಯಾಡಗಿ ತಾಲೂಕಿನ “ಕುಮ್ಮೂರ” ಗ್ರಾಮದಲ್ಲಿದ್ದಾರೆ ಮತ್ತು ಇವರು ಕನಕದಾಸರು ಉಪಯೋಗಿಸಿರುವಂತಹ ವಸ್ತುಗಳನ್ನು ಹಾಗೆಯೇ ಸಂರಕ್ಷಿಸಿದ್ದನ್ನು ತೋರಿಸುತ್ತಾರೆ.

4. ಸರ್ವಜ್ಞ 
ಕನ್ನಡ ನಾಡಿನ ಕ್ರಾಂತಿಕಾರಿ ವಿಚಾರಧಾರೆಯ, ಸ್ವತಂತ್ರ ಮನೋವೃತ್ತಿಯ ನಿರ್ಬೀತನಾದ ಜನಕವಿ. ಸರ್ವಜ್ಞನ ಜನ್ಮ ಸ್ಥಳ ಹಾವೇರಿ ಜಿಲ್ಲೆಯಲ್ಲಿ ಜನಿಸಿದನು. ಈತನ ತಂದೆ “ಬಸವರಸ” ಎಂಬ ಆರಾಧ್ಯ ಪಂಡಿತನು ಕಾಶಿ ವಿಶ್ವನಾಥನ ದರ್ಶನ ಮಾಡಿ ಮರುಳುತ್ತಿರುವಾಗ ಅಬ್ಬಲೂರಿನಲ್ಲಿ ಕಾಲಕರ್ಮ ಸಂಯೋಗದಿಂದ ಕುಂಬಾರರ “ಮಾಳಿ” ಎಂಬುವ ಸ್ತ್ರೀಯಲ್ಲಿ ಮೋಹಗೊಂಡನು. ಅವಳಲ್ಲಿ ಗರ್ಭದಾನ ಮಾಡಿ ತನ್ನ ಊರಿಗೆ ಹೊರಟು ಹೋದನು.

ವಿಧ್ವಾಂಸರ ಅಭಿಪ್ರಾಯದ ಮೇರೆಗೆ ಸರ್ವಜ್ಞ ಕವಿಯ ಕಾಲ 16ನೆ ಶತಮಾನವು ಎಂದು ನಂಬಲಾಗಿದೆ. ಮಾಸೂರು-ಅಬ್ಬಲೂರು ಐತಿಹಾಸಿಕ ಸ್ಥಳಗಳಾಗಿದ್ದು ಪ್ರಾಚೀನಕಾಲದಲ್ಲಿ ಜೈನರಿಗೂ, ಶೈವರಿಗೂ ಪವಿತ್ರ ಕ್ಷೇತ್ರವಾಗಿತ್ತು. ಅಚರಾಜ-ಮಲ್ಲಿದೇವ ಎಂಬ ಕವಿಗಳು ಚಾಳುಕ್ಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿಯ ಶಾಸನವೊಂದರಿಂದ ಅಬ್ಬಲೂರ-ಮಾಸೂರ ಪ್ರದೇಶ ತಪೋನಿಧಿಗಳಿಗೆ. ಕವಿಗಳಿಗೆ, ವೀರರಿಗೆ ಆಶ್ರಯ ಸ್ಥಾನವಾಗಿತ್ತೆಂದು ತಿಳಿದು ಬರುತ್ತದೆ. 

ಸರ್ವಜ್ಞನು ಜನಿಸಿದ್ದು ದಶಮಾಸಗಳ ನಂತರ, ತನ್ನ ಜೀವಿತ ಅವಧಿಯಲ್ಲಿ ವೀರಶೈವ ದೀಕ್ಷೆ ಪಡೆದನು

ಯಾವದೋ ರಾಜನ ಆಸ್ಥಾನದಲ್ಲಿ ಕುಳಿತು ತನ್ನ ಆಶ್ರಯದಾತರನ್ನು ಕುರಿತು ಸುಳ್ಳು ಸುಳ್ಳೆ ಹೊಗಳುವ ಅಥವಾ ಮಠದಲ್ಲಿ ಕುಳಿತು ಪುರಾಣಗಳನ್ನು ರಚಿಸುವ ಜಾಯಮಾನದವನಾದ ಅಖಂಡ ಬ್ರಹ್ಮಚಾರಿಯಾಗಿ ಜಗತ್ತನ್ನೆ ವಿದ್ಯಾಕೇಂದ್ರವನ್ನಾಗಿ, ನಡೆಯುವ ಘಟನೆಗಳನ್ನೆ ಪಾಠವನ್ನಾಗಿ ಮಾಡಿಕೊಂಡು ಸರ್ವರೊಳು ಬೆರತು ಆದವನೇ ಸರ್ವಜ್ಞ. 

ಇವನು ಅರಿಯದ ವಿಷಯಗಳೆ ಇಲ್ಲ ಮತ್ತು ಇವನ ಪಾಂಡಿತ್ಯದ ಹರಿವು, ವಿಸ್ತಾರಕ್ಕೆ ಮಿತಿ ಇಲ್ಲ. ಆತ ಎಷ್ಟೂಂದು ವಚನಗಳನ್ನು ಬರೆದನೆಂಬುದು ಲೆಕ್ಕ ಸಿಕ್ಕಿಲ್ಲ ಆದರೆ ಇಲ್ಲಿಯವರಿಗೆ ಸುಮಾರು ಮೂರು ಸಾವಿರದಷ್ಟು ವಚನಗಳು ಸಿಕ್ಕಿವೆ. ಅವನ ಈ ಕೆಳಗಿನ ತ್ರಿಪದಿ ವಚನದ ಪ್ರಕಾರ ಈತನ ಹೆಸರು “ಪುಷ್ಪದತ್ತ” ಎಂದು ತಿಳಿಸುತ್ತದೆ.

"ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ 
ಮುಂದವ ಸಾಲೆ ಸರ್ವಜ್ಞನೆನಿಸಿ
ನಿಂದವನು ನಾನೆ ಸರ್ವಜ್ಞ"

ಸರ್ವಜ್ಞನನು ಸಸ್ಯವಿಜ್ಞಾನ, ಜೀವವಿಜ್ಞಾನ, ಆಹಾರ ಸೇವನೆ, ರೋಗ ಪರಿಹಾರ, ಜೋತಿಷ್ಯ, ವೈದ್ಯಶಾಶ್ತ್ರ, ಜಾತಿ ಪದ್ದತಿಗಳನ್ನು, ಗೀತೆ_ಉಪನಿಷತ್ತು, ರಾಮಾಯಣ, ಮಹಾಭಾರತ ಹೀಗೆ ನಾನಾಗ್ರಂಥಗಳ ಸಾರವನ್ನು ತನ್ನ ವಚನಗಳಲ್ಲಿ ಬಿಂಬಿಸಿದ್ದಾನೆ. 
ಈತನ ಕಾಲದಲ್ಲಿದ್ದ ವೇಶ್ಯಾವೃತ್ತಿಯು ಸಾಮಾಜಿಕ ಅನಿಷ್ಟಗಳಲ್ಲಿ ಪ್ರಮುಖವಾಗಿತ್ತು. ಆದ್ದದರಿಂದ ಇವರನ್ನು ಕುರಿತು ಜನರಿಗೆ ಹೀಗೆ ಉಪದೇಶಿಸಿದ್ದಾನೆ. 
“ಮದ್ದನಿಕ್ಕಿದೆ ನೀನು/ಹೊದ್ದಿದೆ ನಾನೆಂದು/
ಬುದ್ದಿಯಲಿ ಹಣವ ತೆಗೆವಳು-ಸೂಳೆಯ/
ಹೊದ್ದಲೇ ಬೇಡ ಸರ್ವಜ್ಞ/” 

5. ನಡೆದಾಡುವ ಗ್ರಂಥಾಲಯ: ಗಳಗನಾಥರು
ಕನ್ನಡ ಕಾದಂಬರಿಗಳನ್ನು  ತೆಲೆಯ ಮೇಲೆ ಹೊತ್ತುಕೊಂಡು ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ಕೊಟ್ಟು ತರುತ್ತಾ ಎಲ್ಲೆಡೆ ಕನ್ನಡದ ಕಂಪನ್ನು ಪಸರಿಸುತ್ತಾ ಸಹೃದಯದಲ್ಲಿ ಓದಿನ ಆಸಕ್ತಿ ಕೆರಳಿಸುತ್ತಾ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿ ಪುರಷರಾಗಿ ವಿಜೃಂಭಭಿಸಿದ ಮಹಾನ್ ಕಾದಂಬರಿಕಾರ ಗಳಗನಾಥರು.
ಗಳಗನಾಥರ ಮೂಲ ಹೆಸರು ವೆಂಕಟೇಶ ತಿರಕೊ ಕುಲಕರ್ಣಿ. ಗಳಗನಾಥ ಎನ್ನುವುದು ಹಾವೇರಿ ತಾಲೂಕಿನ ಒಂದು ಗ್ರಾಮ. ಗಳಗೇಶ್ವರ ಆ ಗ್ರಾಮದ ಅದಿ ದೇವತೆ ಆ ಊರಿನ ಕುಲಕರ್ಣಿ ಮನೆತನದ ತ್ರಿವಿಕ್ರಮ ಭಟ್ಟರ ಮೊದಲ ಮಗ ವೆಂಕಟೇಶ ಜನಿಸಿದ್ದು, 5 ಜನೆವರಿ 1869. ವೆಂಕಟೇಶ ಅಂಕಿತನಾಮವಾದರೆ ಕಾಲನುಕ್ರಮದಲ್ಲಿ ಅದು ಗಳಗನಾಥ ಎನ್ನುವ ಅನ್ವರ್ಥಕ ನಾಮವಾಗಿ ಪರಿವರ್ತನೆಗೊಂಡು ಸಾಹಿತ್ಯ ರಚನೆಗಳ ಮೂಲಕ ವ್ಯಾಪಕ ಮನ್ನಣೆ ಪಡೆದು ಗಳಗನಾಥ ಎಂದೆ ಶಾಶ್ವತವಾಯಿತು.

ತುಂಗಭದ್ರ- ವರದಾ ನದಿಗಳ ರಮ್ಯ ಹಿನ್ನಲೆಗಳನ್ನುಳ್ಳ ಗಳಗನಾಥ ಮತ್ತು ಹಾವನೂರು ಗ್ರಾವiಗಳ ಪರಿಸರದಲ್ಲಿ ಬೆಳೆದ ಗಳಗನಾಥರಿಗೆ ಅವರ ಮನೆತನದ ದಾರ್ಮಿಕ ಶ್ರದ್ಧೆ, ಪರಂಪರೆ, ಉತ್ತಮ ಸಂಸ್ಕಾರಗಳು ರಕ್ತಗತವಾಗಿ ದೊರೆತುದ್ದರ ಫಲವಾಗಿ, ಅವರು ದೈವಭಕ್ತಿಯುಳ್ಳ ಕಷ್ಟ ಸಹಿಷ್ಣು ಮತ್ತು ಸೃಜನಶೀಲ ವ್ಯಕ್ತಿಗಳಾಗಿ ರೂಪತಾಳಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮೀಣ ಶಾಲೆಗಳಲ್ಲಿ ಪಡೆದರು. ಅವÀರು ಹಾವೇರಿಯ ಕೇಂದ್ರದಿಂದ ಮುಲ್ಕೀ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕ್ರಿ.ಶ 1886 ರಲ್ಲಿ ಧಾರವಾಡದ ಪ್ರಾಥಮಿಕ ಶಿಕ್ಷಕರ ಟ್ರೈನಿಂಗ್ ಕಾಲೇಜು ಸೇರಿದಾಗ ಅವರ ಜೀವನಕ್ಕೆ ನವ ಚೈತನ್ಯ ಕನ್ನಡತನದ ಕಿಚ್ಚು, ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿತು.

ಕ್ರಿ.ಶ 1889 ರಲ್ಲಿ 3 ವರ್ಷಗಳ ತರಬೇತಿಯ ನಂತರ ಧಾರವಾಡ ಜಿಲ್ಲೆಯ ಸಿರಗುಪ್ಪಿಯ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿ ವಾಸ್ತವ ಜೀವನ ಆರಂಭಿಸಿದ ಗಳಗನಾಥರಿಗೆ ಕೈ ಹಿಡಿದ ಜೀವುಬಾಯಿಯ ಅಕಾಲ ಮರಣದಿಂದ ದುಃಖಪ್ತರಾದರು. ಇದರ ಬೆನ್ನ ಹಿನ್ನಲೆಯೇ ತಂದೆ ತಾಯಿಗಳು ವಿಧಿವಶರಾದರು ಮತ್ತು ಕೆಲ ಕಾಲದ ಬಳಿಕ ಆಪ್ತ ಮಿತ್ರರ ಸಲಹೆಗೆ ಒಪ್ಪಿ ಗಂಗಾಬಾಯಿಯನ್ನು ಎರಡನೇಯ ಹೆಂಡತಿಯಾಗಿ ವಿವಾಹವಾದರು. ಇಂತಹ ಸಂಕಷ್ಟ ಸಮಯದಲ್ಲೂ ಸಾಹಿತ್ಯದ ಅಭಿರುಚಿ ಕಡಿಮೆಯಾಗಿರಲಿಲ್ಲ. ಸುಮಾರು ಎರಡು ದಶಕಗಳ ಅವರ ಶಿಕ್ಷಕ ವೃತ್ತಿಯಲ್ಲಿ ಸಿರಗುಪ್ಪಿ, ಉಪ್ಪಿನಬೆಟ್ಟಗೇರಿ, ಬಂಕಾಪುರ, ಮುಂಡರಗಿ, ಗುತ್ತಲ ಮುಂತಾದ ಕಡೆ ಕಾರ್ಯ ಮಾಡಿ ಮತ್ತು ಕೆಲವು ಕಾಲ ಧಾರವಾಡದ ಟ್ರೈನಿಂಗ್ ಕಾಲೇಜಿನ ಪ್ರಾಕ್ಟೀಸಿಂಗ್ ಸ್ಕೂಲ್‍ನಲ್ಲಿ ಸೇವೆ ಸಲ್ಲಿಸಿ ಅನೇಕ ಶಿಷ್ಯ ಬಳಗವನ್ನು ಹೊಂದಿದ್ದರು. ಕಾರಣಾಂತರಗಳಿಂದ ನೌಕರಿಯಿಂದ ನಿವೃತ್ತರಾದರು. ಇವರ “ಪದ್ಮನಯನೆ” ಕಾದಂಬರಿಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಪುರಸ್ಕಾರ ದೊರೆಯಿತು. ಅಗಡಿಯ ಶೇಷಾಚಲ ಸ್ವಾಮಿಗಳ ಭೇಟಿ ಅವರ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿತು. ಅಗಡಿಯ ಆನಂದವನದಲ್ಲಿ ಸಂಸ್ಕøತ ಪಾಠಶಾಲೆಯ ಯೋಗಕ್ಷೇಮವನ್ನು ನೋಡುವುದರ ಸಲುವಾಗಿ ಗಳಗನಾಥರು ಅಗಡಿಯಿಂದ ಬಿ.ಎಫ್. ಕಾಳೆಯವರ ಸಹಕಾರದೊಂದಿಗೆ “ಸದ್ಬೋಧ ಚಂದ್ರಿಕೆ” ಪತ್ರಿಕೆಯನ್ನು ಆರಂಭಿಸಿದರು. ಇವರು ಬರೆದ ಪ್ರಮುಖ ಕಾದಂಬರಿಗಳು–ಕಮಲಕುಮಾರಿ, ಪ್ರಬುದ್ಧ ಪದ್ಮನಯನೆ, ದುರ್ಗದ ಬಿಚ್ಚುಗತ್ತಿ, ಗಿರಿಜಾಕಲ್ಯಾಣ, ಚಿದಂಬರ ಚರಿತ್ರೆ, ಮಹಾಭಾರತ, ಶೈವ ಸುಧಾರ್ಣವ, ಹೀಗೆ 22 ಅನುವಾದಿತ ಕಾದಂಬರಿ ಮತ್ತು ಸ್ವತಂತ್ರ ಕೃತಿಗಳ ಜೊತೆಗೆ ದಾಂಪತ್ಯ, ಕುಟುಂಬ, ಕನ್ಯಾಶಿಕ್ಷಣ, ರಾಜನಿಷ್ಟೆ, ಸದ್ಗುರು, ಪ್ರಭಾವ ಲೇಖನಗಳು ಸೇರಿ ಒಟ್ಟು 50 ಕೃತಿಗಳನ್ನು ರಚಿಸಿದರು.

ಕ್ರಿ.ಶ 1915 ರಲ್ಲಿ ಶ್ರೀ ಗುರು ಶೇಷಾಚಲ ಸ್ವಾಮಿ ವಿಧಿವಶರಾದ ನಂತರ ಅಗಡಿ ಆಶ್ರಮವನ್ನು ಬಿಟ್ಟರು. ಚಂದ್ರಿಕೆ ಪತ್ರಿಕೆಯಿಂದ ದೂರಾಗಿ ತಮ್ಮ ಎರಡೂ ಹೆಣ್ಣು ಮಕ್ಕಳೊಂದಿಗೆ ಜೀವನದ ಕಷ್ಟಗಳನ್ನು ಹೊತ್ತುಕೊಂಡು ಸಾಹಿತ್ಯದ ಆಸಕ್ತಿಯಿಂದ ಹಾವೇರಿಗೆ ಬಂದರು. ಇವರ  ಜೀವನದಲ್ಲಿಯ ಕಷ್ಟದ ಹೊರೆಯನ್ನು ಬಿ.ಎಂ.ಶ್ರೀ, ಡಿ.ವಿ.ಗುಂಡಪ್ಪ, ಡಿ.ಕೆ.ಭಾರದ್ವಾಜ ಕಡಿಮೆ ಮಾಡಿದರು. ಬಸವ ಜಯಂತಿಯ ಸಂದರ್ಭದಲ್ಲಿ ಹಾವೇರಿಗೆ ಬಂದ ಬಿ.ಎಂ.ಶ್ರೀ ಮುಂತಾದವರ ಮುಂದೆ ತಾವು ಬರೆದ ಮಹಾಭಾರತದ ಹಸ್ತ ಪ್ರತಿಯನ್ನು ಇಟ್ಟು ಧನ್ಯತಾಭಾವ ಪಡೆದರು. ಇವರ ಕಡೆಯ ಜೀವನ ಸಂಕಷ್ಟದಿಂದ ಕೂಡಿದ್ದು, ಇವರು ಅನೇಕ ಕೃತಿಗಳಲ್ಲಿ ನನ್ನ ಸಾಲ ತೀರಿಸಲು ಪುಸ್ತಕಗಳನ್ನು ವಾಚಕರು ಕೊಂಡು ನೆರವಾಗಬೇಕೆಂದು ಬರೆಯುತ್ತಿದ್ದರು. ಕ್ರಿ.ಶ 1930 ರಲ್ಲಿ ಹಾವೇರಿಯ  ಗುರುಬಸಪ್ಪ ಮಾಗವಿಯವರ ಸಹಾಯದಿಂದ ವೆಂಕಟೇಶ ಮುದ್ರಣಾಲಯನ್ನು ಸ್ಥಾಪಿಸಿದರು ಮತ್ತು ಹಾವೇರಿಯಲ್ಲಿ ಒಂದು ಪಾಠಶಾಲೆಯನ್ನು ಸ್ಥಾಪಿಸಿದರು. ತಮ್ಮ ಬೆಂಗಳೂರು ವಾಸ್ತವ್ಯದ ಕಾಲವಧಿಯಲ್ಲಿ ರಾಣಿ ಮೃಣಾಲಿನಿ, ಮಹಾರಾಣ ರಾಜಸಿಂಹ, ಗೀತೆಯ ಶ್ರವಣಾಧಿಕಾರ ಕೃತಿಗಳನ್ನು ರಚಿಸಿದರು. ಕಾದಂಬರಿಯ ಪಿತಾಮಹ ಎಂದು ಪ್ರಸಿದ್ಧಿಯನ್ನು ಹೊಂದಿದ ಇವರು 22-4-1942 ರಲ್ಲಿ ತಮ್ಮ 74 ವರ್ಷದ ವಯಸ್ಸಿನಲ್ಲಿ ಕ್ಯಾನ್ಸರ ರೋಗದಿಂದ ಇಹ ಲೋಕದಯಾತ್ರೆ ಮುಗಿಸಿದರು. 

6. ಶಿ.ಶಿ ಬಸವನಾಳ
ಬಸವನಾಳರು ಕ್ರಿ.ಶ 1893ರ ನವಂಬರ್ ರಂದು ಹಾವೇರಿಯಲ್ಲಿ ಜನಿಸಿದರು ತಂದೆ ಶಿವಯೋಗಪ್ಪ ರೈಲ್ವೆ ಇಲಾಖೆಯಲ್ಲಿ ಸ್ಟೇಷನ ಮಾಸ್ಟರ್ ಆಗಿದ್ದರು, ಇವರ ಮಕ್ಕಳಲ್ಲಿ ಮೊದಲಿಗರಾದ ಬಸವನಾಳರು ಶಾಲೆಯಲ್ಲಿಯೂ ಮೊದಲಿಗರಾಗಿದ್ದರು. ಇವರ ತಂದೆ ಕನ್ನಡ, ಸಂಸ್ಕøತ, ಮತ್ತು ಇಂಗ್ಲೀಷ ಭಾಷೆಗಳನ್ನು ಚನ್ನಾಗಿ ಅರಿತಿದ್ದು ಮಗನಿಗೆ ತಮ್ಮ ಜ್ಞಾನವೆಲ್ಲವನ್ನು ಧಾರೆಯೆರೆದರು. ಇವರು ಬಳ್ಳಾರಿಗೆ ವರ್ಗವಾದಾಗ ಬಸವನಾಳರಿಗೆ ತೆಲುಗಿನ ಪರಿಚಯ ಚೆನ್ನಾಗಾಯಿತು. ಮುಂದೆ ತಂದೆಗೆ ವಿಜಾಪೂರಕ್ಕೆ ವರ್ಗವಾದ್ದರಿಂದ ಬಸವನಾಳರು ಧಾರವಾಡದ ಸರಕಾರಿ ಪ್ರೌಢಶಾಲೆಯಲ್ಲಿ ಓದನ್ನು ಮುಂದುವರೆಸಿದರು. ಅವರ ಮುಂದಿನ ಕಾರ್ಯಕ್ಷೇತ್ರ ಪುಣೆಯ ಸುಪ್ರಸಿದ್ದ ಡೆಖ್ಖನ್ ಕಾಲೇಜು, ಬಸವನಾಳರ ಈ ಶಿಕ್ಷಣ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವಲ್ಲಿ ಆದರ್ಶಪ್ರಿಯವಾಯಿತು. 

ಕ್ರಿ.ಶ 1914 ರಲ್ಲಿ ಬಸವನಾಳರು ಬಿ.ಎ ಪರೀಕ್ಷೆಯಲ್ಲಿ ಉನ್ನತ ವರ್ಗದಲ್ಲಿ ಉತ್ತೀರ್ಣರಾದರು. ಈ ಸಂತಸವನ್ನು ಆನಂದಿಸಲು ಅವರ ತಂದೆಯು ಇರಲಿಲ್ಲ ಮತ್ತು ತಾಯಿಯೂ ಮರಣ ಹೊಂದಿದ್ದಳು. ಇಂತಹ ಕಷ್ಟಕಾಲದಲ್ಲಿ ಪರಿಸ್ಥಿತಿಯನ್ನು ಎದುರಿಸಿ ಧÀೃತಿಗೆಡದೆ ಬಸವನಾಳರು ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಎಂ.ಎ ಪದವಿಯನ್ನು ಗಳಿಸಿ ಸ್ನಾತ್ತಕೋತ್ತರ ಪದವಿಯನ್ನು ಪಡೆದ ಮೊದಲ ವೀರಶೈವ ತರುಣನೆನಿಸಿದರು. ಬಸವನಾಳರಿಗೆ ಸ್ನೇಹಪರತೆ ಎಷ್ಟೆಂದರೆ ಅಥಣಿಯ ಮಹಾಜನ ಮಹಾದೇವಪ್ಪ ಹಾಗೂ ಮತ್ತಿತರರು ಸ್ಥಾಪಿಸಿದ್ದ “ವಿಕ್ಟೋರಿಯಾ ಜುಬಲಿ” ಪಾರಿತೋಷಕವನ್ನು ಅತೀ ಹೆಚ್ಚಿನ ಸಾಧನೆಯನ್ನು ತೋರಿದ ಈ ತರುಣನಿಗೆ ನೀಡಿದಾಗ, ಇದನ್ನು ಕಡಿಮೆ ದರ್ಜೆಯಲ್ಲಿ ತೇರ್ಗಡೆಯಾಗಿದ್ದ. ಎಂ.ಆರ್ ಸಾಖರೆಯವರೊಂದಿಗೆ ಹಂಚಿಕೊಂಡರು. ಪುಣೆಯ ಡೆಖ್ಖನ್ ಕಾಲೇಜಿನಂತಹ ಆದರ್ಶ ಶಿಕ್ಷಣ ಸಂಸ್ಥೆಯನ್ನು ಆರಂಭಿಸಬೇಕೆಂಬ ಕನಸ್ಸಿನಿಂದಾಗಿ ಅವರು ಯಾವುದೇ ಸುಭದ್ರ ಸರ್ಕಾರಿ ಉದ್ಯೋಗವನ್ನು ಅರಿಸಲಿಲ್ಲ. ಬದಲಾಗಿ ಸಮಾನ ಮನೋಧರ್ಮದ ಗೆಳೆಯರಾದಂತಹ ಎಂ.ಆರ್ ಸಾಖರೆ, ಹಚ್ಚಯ್ಯ ಕಟ್ಟಿಮನಿ, ಬಸವಂತಪ್ಪ ಮಮದಾಪುರ, ಬಸಪ್ಪ ಹಂಚಿನಾಳ, ಪಂಚಿತಪ್ಪ ಚಿಕ್ಕೊಡಿ ಹಾಗೂ ಬಿ.ಎಲ್ ಪಾಟೀಲರ ಸಹಕಾರದೊಂದಿಗೆ, ಕ್ರಿ.ಶ 1916 ರಲ್ಲಿ ಕೆ.ಎಲ್.ಇ ಸೊಸೈಟಿ ಆರಂಭಿಸಿದರು. ಈ ಸಂಸ್ಥೆಯಲ್ಲಿ ಬೃಹ್ಮ ಜಗತ್ತನ್ನು ಹುಟ್ಟಿಸಲು 11 ಪ್ರಜಾಪಿತರನ್ನು ಹಾಗೂ 7 ಋಷಿಗಳನ್ನು ಹುಟ್ಟುಹಾಕಿದಂತೆ ಈ 7 ಜನರನ್ನು ಸಂಸ್ಥೆಯ ಹುಟ್ಟಿಗೆ ಕಾರಣರಾದ ಸಪ್ತøಷಿಗಳು ಎಂದು ಕರೆಯುತ್ತಾರೆ.

ಈ ಶಿಕ್ಷಣ ಸಂಸ್ಥೆಯ ಮೊದಲ ಶಾಲೆಯಾಗಿ ಆರಂಭವಾದದ್ದು ಬೆಳಗಾವಿಯ ಗಿಲಗಂಚಿಯಲ್ಲಿ. ಅರ್ಟಳ ಹೈಸ್ಕೂಲಿನಲ್ಲಿ ಬಸವನಾಳರು ಅನೇಕ ವರ್ಷಗಳ ಕಾಲ ಇಂಗ್ಲೀಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮುಂದೆ ಕ್ರಿ.ಶ 1922ರಲ್ಲಿ ಧಾರವಾಡದಲ್ಲಿ ರಾಜಾಲಕಮನಗೌಡ ಸರದೇಸಾಯಿ ಪ್ರೌಢಶಾಲೆಯನ್ನು, ಉಚ್ಛಶಿಕ್ಷಣವನ್ನು ಕೊಡುವ ಉದ್ದೇಶಕ್ಕಾಗಿ ಕ್ರಿ.ಶ 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜು ಕಾಲೇಜನ್ನು ಆರಂಭಿಸಿದರು. ಈ ಸಂಸ್ಥೆಯಲ್ಲಿ ಉನ್ನತ ಹುದ್ದೆಯನ್ನು ಪಡೆಯದೇ ಆಗಷ್ಟೆ ಇಂಗ್ಲೇಂಡಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಬಂದಿದ್ದ ತಮ್ಮ ಶಿಷ್ಯ ಡಾ. ಎಸ್.ಸಿ.ನಂದಿಮಠರನ್ನು ಪ್ರಾಚಾರ್ಯರನ್ನಾಗಿ ಮಾಡಿ ತಾವು ಒಬ್ಬ ಅಧ್ಯಾಪಕರಾಗಿ ಉಳಿದರು. ಇದು ಬಸವನಾಳರ ನಿಸ್ವಾರ್ಥತೆಯನ್ನು ಎತ್ತಿ ತೋರಿಸುತ್ತದೆ. ಕೆ.ಎಲ್.ಇ ಸಂಸ್ಥೆಗೆ ಅವಶ್ಯಕವಾಗಿದ್ದ ಮುದ್ರಣಾ ಕಾರ್ಯಗಳಿಗೆ ಗದುಗಿನ ತೊಂಟದಾರ್ಯ ಸ್ವಾಮಿಗಳ ಬಳಿಯಲ್ಲಿದ್ದ ಮುದ್ರಣ ಯಂತ್ರವನ್ನು ಪಡೆದು ತೊಂಟದಾರ್ಯ ಪ್ರೆಸ್ ಎಂಬ ಮುದ್ರಾಣಾಲಯವನ್ನು ಸ್ಥಾಪಿಸಿದರು. ಇದರಲ್ಲಿ ಹಂಪಯ್ಯ ಹಲಗಲಿಯವರ ಜೊತೆಗೂಡಿ ಹಿಂದೂಸ್ಥಾನದ ಇತಿಹಾಸ ಹಾಗೂ ಇಂಗ್ಲೇಂಡಿನ ಅರ್ವಾಚೀನ ಇತಿಹಾಸ ಪಠ್ಯಗಳನ್ನು ರಚಿಸಿದರು. ಶಿಕ್ಷಣ ಕ್ಷೇತ್ರದಲ್ಲಿಯ ಗಣನೀಯ ಸೇವೆಯಿಂದಾಗಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಚುನಾಯಿತರಾದರು. ಕ್ರಿ.ಶ 1941 ರಲ್ಲಿ ಬಸವನಾಳರ ಸಂಪಾದಕತ್ವದಲ್ಲಿ ಪ್ರಕಟವಾದ “ವೀರಶೈವ ತತ್ವ ಪ್ರಕಾಶ” ಎಂಬ ಕೃತಿಯು ಆ ಧರ್ಮದ ಉಗಮ ಮತ್ತು ವಿಕಾಸಗಳನ್ನು ಕುರಿತಾದ ವಿದ್ವಾಂಸರ ಲೇಖನಗಳ ಸಂಗ್ರಹ ಗ್ರಂಥ. ಕ್ರಿ.ಶ 1946 ರಲ್ಲಿ ಕೆ.ಆರ್.ಶ್ರೀನಿವಾಸ ಅಯ್ಯಂಗಾರರ ಜೊತೆಗೂಡಿ ಮಿಸ್ಸಿಂಗ್ ಆಫ್ ಶಿವ (ಒissiಟಿg Shivಚಿ) ಎಂಬ ಬಸವಣ್ಣನವರ ವಚನಗಳನ್ನು ಇಂಗ್ಲೀಷನಲ್ಲಿ ಅನುವಾದಿಸಿದರು. 

7. ವಿ.ಕೃ.ಗೋಕಾಕ
(ಕಾಗಿನೆಲೆಯಲ್ಲಿ ಕನಕದಾಸರ ಜಯಂತಿಯಂದು)

ಡಾ.ವಿನಾಯಕ ಕೃಷ್ಣ ಗೋಕಾಕ್ 9 ಅಗಷ್ಟ 1909 ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಇವರ ತಂದೆ ಅಲ್ಲಿಯೇ ವಕೀಲ ವೃತ್ತಿಯನ್ನು ನಡೆಸುತ್ತಿದ್ದರು. ಇವರ ಅಜ್ಜಂದಿರು ಅಲ್ಲಿಯೇ ಇಂಗ್ಲೀಷ ಶಾಲೆಯ ಶಿಕ್ಷಕರಾಗಿದ್ದರಿಂದ ವಿ.ಕೃ.ಗೋಕಾಕರಿಗೆ ಇಂಗ್ಲೀಷ ವಾಚನಾಭಿರುಚಿ ಹೆಚ್ಚಾಯಿತು. ಲಾಂಗ್ ಫೇಲೋ ವಡ್ರ್ಸವರ್ತ್, ಟೆನಿಸನ್ ಶೆಲ್ಲಿಯವರು ವಿನಾಯಕರ ಸ್ಪೂರ್ತಿಯ ಕಲಾವಿದರು. ಸವಣೂರು ನವಾಬರ ಚಿಕ್ಕ ಸಂಸ್ಥಾನವಾಗಿದ್ದರಿಂದ ಮತ್ತು ಇಲ್ಲಿಯೇ ಫ್ರೌಢ ಶಿಕ್ಷಣದವರೆಗೂ ಹೈಸ್ಕೂಲ್ (1886 ರಲ್ಲಿ ಮಜೀದ್ ಪ್ರೌಢ ಶಾಲೆ ಪ್ರಾರಂಭವಾಯಿತು) ವ್ಯವಸ್ಥೆ ಇದ್ದುದರಿಂದ ಗೋಕಾಕರು ತಮ್ಮ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದರು. ಈ ವೇಳೆಯಲ್ಲಿ “ಲೀಲಾ” ಎಂಬ ಕಥಾ ಕಾವ್ಯವೊಂದನ್ನು ಇಂಗ್ಲೀಷನಲ್ಲಿ ರಚಿಸಿದರು. ಕ್ರಿ.ಶ1925 ರಲ್ಲಿ ಕಾಲೇಜು ಕಟ್ಟಿ ಹತ್ತಿದ ಮೇಲೆ ವಿನಾಯಕರಿಗೆ ದ.ರಾ.ಬೇಂದ್ರೆಯವರ ಪರಿಚಯ ಹೆಚ್ಚಾಯಿತು. 

ಆವಾಗ ದ.ರಾ.ಬೇಂದ್ರೆಯವರು ಗೋಕಾಕರಿಗೆ ತಮ್ಮ ಪ್ರತಿಭೆಯನ್ನು ಆಂಗ್ಲಕಾವ್ಯ ಸಾಹಿತ್ಯಕ್ಕೆ ಹರಿಬಿಡುವುದಕ್ಕಿಂತ ಕನ್ನಡಕ್ಕೆ ಮತ್ತು ಕನ್ನಡದ ಸಾಹಿತ್ಯಕ್ಕೆ ಆತ್ಮವನ್ನು ತಣಿಸುವುದು ಉತ್ತಮ ಎಂದರು. ಇದು ಅವರು ಕನ್ನಡದ ಕವಿಯಾಗಿ ಪರಿವರ್ತನೆಗೊಳ್ಳಲು ಒಂದು ಅವಕಾಶವಾಯಿತು. ಕರ್ನಾಟಕ ಕಾಲೇಜು ಪ್ರಾಚಾರ್ಯರಾಗಿ ಮುಂದೆ ಕ್ರಿ.ಶ 1958 ರಲ್ಲಿ ಅಮೆರಿಕಾದ ವಿಶ್ವವಿದ್ಯಾಲಯಗಳ ಅಧ್ಯಾಯನಕ್ಕಾಗಿ ವಿದೇಶಿ ಪ್ರವಾಸಕ್ಕೆ ತೆರಳಿದರು. ಕ್ರಿ.ಶ 1959 ರಲ್ಲಿ ಸೆಂಟ್ರಲ್ ಇನ್‍ಸ್ಟೂಟ್ ಆಫ್ ಇಂಗ್ಲೀಷ ಸ್ಟಡೀಸ್ ಎಂಬ ಹೈದರಾಬಾದಿನ ಸಂಸ್ಥೆಗೆ ನಿರ್ದೇಶಕರಾದರು. ಮೊಟ್ಟಮೊದಲು ಕ್ರಿ.ಶ 1957 ರಲ್ಲಿ P.ಇ.ಓ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಜಪಾನಿಗೆ ಭೇಟಿ ಕ್ರಿ.ಶ 1959 ರಲ್ಲಿ ಅಂತರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ಬೆಲ್ಜಿಯಂಗೆ ಭೇಟಿ, 1960 ರಲ್ಲಿ ಪೂರ್ವ ಆಫ್ರಿಕಾಗೆ ಭೇಟಿ ಹೀಗೆ ವಿದೇಶಿ ಪ್ರವಾಸಗಳು ವಿನಾಯಕರ ಬರವಣಿಗೆ ಮತ್ತು ವಿಚಾರಧಾರೆಯನ್ನು ಹೆಚ್ಚಿಸಿದವು. ಕ್ರಿ.ಶ 1950 ರಲ್ಲಿ ಮುಂಬೈಯಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯಗೋಷ್ಠಿಯ ಅಧ್ಯಕ್ಷರಾಗಿ ಕ್ರಿ.ಶ 1958 ರಲ್ಲಿ ಬಳ್ಳಾರಿ  ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ ಕನ್ನಡದ ಕಂಪನ್ನು ಹೆಚ್ಚಿಸಿದರು. ಕ್ರಿ.ಶ 1960 ರಲ್ಲಿ ಇವರ ಸಾಹಿತ್ಯ ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಮತ್ತು ಅವರ ‘ದ್ಯಾವಾ ಪೃಥ್ವಿಗೆ’ ಕೇಂದ್ರ ಅಕಾಡಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರ ಮುಖ್ಯಕಾವ್ಯಗಳು, ತ್ರಿವಿಕ್ರಮರ ಆಕಾಶಗಂಗೆ, ಇಂದಿಲ್ಲ ನಾಳೆ, ಸುನೀತ, ಬಾಳದೇಗುಲದಲ್ಲಿ, ಭಾರತ ಸಿಂಧೂರಶ್ಮಿ, ಇದರಲ್ಲಿ ಇವರ ಮಹಾಕಾವ್ಯವಾದಂತಹ ಭಾರತ ಸಿಂಧೂರಶ್ಮಿಗೆ “ಜ್ಞಾನಪೀಠ ಪ್ರಶಸ್ತಿ” ದೊರೆಯಿತು. ಇವರು  ಕೆಲವು ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದವರಾಗಿದ್ದಾರೆ. 

8. ಶ್ರೀ ಮಹಾದೇವ ಬಣಕಾರ
ಕ್ರಿ.ಶ 1932 ರಲ್ಲಿ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದಲ್ಲಿಯ ಬೇಸಾಯ ಮನೆತನದ ತಂದೆ ಗದಿಗೆಪ್ಪ ಬಣಕಾರ ತಾಯಿ ಸಿದ್ದಮ್ಮನವರ ಮಗನಾಗಿ ಜನಿಸಿದರು. ಇವರು ತಮ್ಮ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ, ಕವನ ಬರೆಯುವದರಲ್ಲಿ ಹೆಚ್ಚಿನ ಪ್ರತಿಭೆಯನ್ನು ಮತ್ತು ಪತ್ರಿಕೋದ್ಯಮದಲ್ಲಿ ಅನುಭವವನ್ನು ಹೊಂದಿದ್ದರು. ಕನ್ನಡನಾಡಿನ ಗಡಿ ಮತ್ತು ನುಡಿಗಳ ಮಾತು ಬಂದಾಗಲೆಲ್ಲ ನೆನಪಿಗೆ ಬರುವ ಹೆಸರು ಇವರದಾಗಿತ್ತು. 

ಕ್ರಿ.ಶ 1959 ರಲ್ಲಿ ಬ್ಯಾಡಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿ ಮೊದಲಬಾರಿಗೆ ಆಯ್ಕೆಯಾದರು. ಮುಂದೆ ದಿ. ರಾಮಕೃಷ್ಣ ಹೆಗಡೆಯವವರು ಇವರ ಪ್ರತಿಭೆಯನ್ನು ಗುರುತಿಸಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದರು. ಇವರು 1108 ವಚನಗಳು, ಮಹಾದೇವ ಬಣಕಾರ ವಚನಗಳು, ಕದಳಿಯ ಕರ್ಪೂರ, ಅಕ್ಕಮಹಾದೇವಿ ಜೀವನ ಚರಿತ್ರೆ, ಶಿವಕುಮಾರ ಚರಿತ್ರೆ, ಆಂಗ್ಲರಾಡಳಿತದಲ್ಲಿ ಕನ್ನಡ ಮತ್ತು ವಿಶ್ವ ಬಂಧು ಮರುಳಸಿದ್ದ ಕಾವ್ಯ ಎಂಬ ಪ್ರಮುಖ ಗ್ರಂಥಗಳನ್ನು ರಚಿಸಿದರು. 

ಇವರು ಹಾಸ್ಯಪ್ರವೃತ್ತಿಯವರಾಗಿದ್ದು, ಇದಕ್ಕೆ ನಿರ್ದೇಶನವಾಗಿ ಅವರ ಗ್ರಂಥಗಳನ್ನು ಅವಲೋಕಿಸಿದಾಗ ಗೊತ್ತಾಗುತ್ತದೆ. ಒಂದು ದಿನ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ತಮಗೆ 'ಹಾರ್ಟ ಅಟ್ಯಾಕ್' ಆಗಿದೆ ಎಂದು ತಿಳಿಸಿದಾಗ, ಅವರು ತಮ್ಮ ಧರ್ಮಪತ್ನಿ ಪಾರ್ವತಮ್ಮನವರಿಗೆ ಈಗಲಾದರೂ ನನಗೆ ಹೃದಯವಿರುವದೆಂದು ಖಚಿತವಾಯಿತೆಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. 

ಪ್ರತಿಯೊಬ್ಬ ಕವಿಗೆ ತನ್ನ ಕಾವ್ಯಕ್ಕೆ ಪರಿಸರ ಪ್ರೇರಣೆಯಾದರೆ ಮಹಾದೇವ ಬಣಕಾರ ಇವರಿಗೆ ಆಸ್ಪತ್ರೆಯ ವಾತಾವರಣವೇ ಪ್ರೇರಣೆ ಏಕೆಂದರೆ ಪ್ರತಿ ಬಾರಿಯೂ ದಾಖಲಾಗಿ ಹೊರಬರುವಾಗ ಹೊಸ ಗ್ರಂಥದೊಂದಿಗೆ ಬರುತ್ತಿದ್ದರು. ಹೀಗಾಗಿ ಅವರ ಸಾಹಿತ್ಯಾಭಿಮಾನಿಗಳು ಆಸ್ಪತ್ರೆಗೆ ದಾಖಲಾಗುವುದನ್ನೆ ಬಯಸುತ್ತಿದ್ದರು. ಇವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ 1986 ರಲ್ಲಿ ಕರ್ನಾಟಕ ಸರಕಾರ ಅವರಿಗೆ ರಾಜ್ಯಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು.

ಕೃತಿಗಳು: ಕವಿ. ಕಾವ್ಯೋದಯ, ಬಣ್ಣದ ಕಾರಂಜಿ, ಅಪರಂಜಿ, ಹೊಸಹುಟ್ಟು ಬಣಕಾರರ ಕಾವ್ಯಕೃತಿಗಳು. ಗರತಿಯ ಗೋಳು, ಕಲ್ಯಾಣ ಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲು ದಾಟಿದ ಹೆಣ್ಣು, ದುಡ್ಡೇ ದೇವರು ಮೊದಲಾದವು ನಾಟಕಗಳು. ಲೋಕದ ಕಣ್ಣು, ಮಾದನ ಮಗ ಮತ್ತು ಇತರ ಕಥೆಗಳು -ಇವು ಕಥಾ ಸಂಕಲನಗಳು. ಬಣಕಾರರು ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ – ಮಹಾರಾಷ್ಟ್ರ ಮಹಾಜನ್‌ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ (ಇಂಗ್ಲಿಷನಲ್ಲೂ ಕೂಡಾ) ಕರ್ನಾಟಕ ಉಜ್ವಲ ಪರಂಪರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

9. ಪಾಟೀಲ ಪುಟ್ಟಪ್ಪ
ಶ್ರೀ ಪುಟ್ಟಪ್ಪ ಸಿದ್ದಲಿಂಗಪ್ಪಗೌಡ ಪಾಟೀಲರು 14 ಜನೇವರಿ 1921 ರಂದು ಹಾವೇರಿ ತಾಲೂಕಿನ ಕುರಬಗೊಂಡದಲ್ಲಿ ಜನಿಸಿದರು. ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪನವರು “ಪಾಪು”ಎಂದು ಕರೆದರು. ಬ್ಯಾಡಗಿ ಹಾವೇರಿಯಲ್ಲಿ ಓದಿದ ಪಾಟೀಲ ಪುಟ್ಟಪ್ಪನವರು. ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆಂದೂ ಧಾರವಾಡದ ಮುರಘಾಮಠದಲ್ಲಿ ಉಳಿದು ರಾಜಾಲಖಮನಗೌಡ ಹೈಸ್ಕೂಲನಲ್ಲಿ ಓದು ಮುಂದುವರೆಸಿ, ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ ವ್ಯಾಸಾಂಗ ಮಾಡಿದರು. ಅನಂತರ ಮುಂಬೈಯನಲ್ಲಿ, ಪುನಃ ಹುಬ್ಬಳಿಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಡಾ. ಪಾಟೀಲ ಪುಟ್ಟಪ್ಪನವರು. ಕ್ರಿ.ಶ 1949 ರಲ್ಲಿ ಅಮೇರಿಕೆಯ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಎಂ.ಎಫ್.ಪಿ ಪದವಿ ಪಡೆದರು. ಇಲ್ಲಿಯೇ ಇರುವಾಗ ಡಾ.ಜೋಸೆಫ ಬ್ಯಾಂಟ್‍ರವರು ಇವರ ಪರಿಣಿತಿಯನ್ನು ಕಂಡು “ವಿಶಾಲ ಕರ್ನಾಟಕ ಪತ್ರಿಕೆಯ” ಸಂಪಾದಕತ್ವದ ಹಿನ್ನಲೆಯಲ್ಲಿಯೇ ಪ್ರಭಂದ ಬರೆದು ಮಂಡಿಸಲು ಹೇಳಿದರು. ಇವರು ನವಯುಗ ಮಾಸಪತ್ರಿಕೆಯ ಸಂಪದಕರಾಗಿಯು ಮುಂದೆ “ಸಂಯುಕ್ತ ಕರ್ನಾಟಕ” ದ ಡಿ.ಮೊಹರೆ ಹನುಮಂತರಾಯರ ಪ್ರೋತ್ಸಾಹದಿಂದ “ಪ್ರಪಂಚ ಪತ್ರಿಕೆ”ಯನ್ನು ಹುಟ್ಟು ಹಾಕಿದರು.

 ಇವರಿಗೂ ಮತ್ತು ಪತ್ರಿಕಾ ವಿಭಾಗದಲ್ಲಿರುವ ಪ್ರೀತಿಯ ನಂಟಿಗೆ ಇನ್ನೊಂದು ಸಾಕ್ಷಿಯಂದರೆ ಕ್ರಿ.ಶ 1945 ರಲ್ಲಿ ಮುಂಬೈಗೆ ವಕೀಲ ವೃತ್ತಿ ಮಾಡಲೆಂದು ಹೋಗಿದ್ದರೂ, ಅಲ್ಲಿ ಕೋರ್ಟಗಿಂತ ಹೆಚ್ಚು ಹೋಗಿದ್ದು ಪತ್ರಿಕಾ ಕಛೇರಿಗೆ.

ಹಾವೇರಿಯಲ್ಲಿ ಹೈಸ್ಕೂಲು(ಬ್ಯಾಡಗಿಯ ಎಸ್.ಜೆ.ಜೆ ಎಮ್) ಓದುವಾಗಲೇ ಕೈಬರಹದ ಪತ್ರಿಕೆ ಹೊರಡಿಸುತ್ತಿದ್ದ ಪುಟ್ಟಪ್ಪನವರು ತಾವೇ ಬರೆದು ಪತ್ರಿಕೆ ತುಂಬಿಸಿ ಬೇರೆ ಬೇರೆಯವರ ಹೆಸರು ಹಾಕುತ್ತಿದ್ದರು. ಅದೇ ಹಂತದಲ್ಲಿ ಅಂದರೆ 1938 -39 ರ ಸಾಲಿನಲ್ಲಿ ಉಡುಪಿಯಿಂದ ಪ್ರಕಟಿಸಲಾಗುತ್ತಿದ್ದ “ಅಂತರಂಗ” ಪತ್ರಿಕೆಗೆ ಸಾಲಾಗಿ ಲೇಖನ ಬರೆಯುತ್ತಿದ್ದರು.

ಇವರ ಹೋರಾಟ ಮನೋಭಾವನದ ಬಗ್ಗೆ ಹೇಳಬೇಕೆಂದರೆ ಕ್ರಿ.ಶ 1942ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳುವಳಿಯ ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ಮುಖಂಡರಾಗಿದ್ದರು. 

1942 ಅಗಷ್ಟ 9ರಂದು ಬ್ರಿಟಿಷ ಅದ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿಗೆ ಹಾಕಿ ಧಾರವಾಡದ ಗಮನ ಸೆಳೆದು ಕಾಲೇಜಿನಿಂದ ಹೋರಹಾಕಲ್ಪಟ್ಟರು. ಆಗಿನ ಮುಂಬೈ ಕರ್ನಾಟಕದ ಪ್ರಮುಖ ರಾಜಕಾರಣಿ ಕೆ.ಎಫ್.ಪಾಟೀ¯ರಿಗೆ ಈ ಭಾಗದಲ್ಲಿ ಮಹತ್ವದ ಪತ್ರಿಕೆಯೊಂದನ್ನು ಮಾಡಬೇಕೆಂಬ ಧ್ಯೇಯವಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಜೈಲಿನಲ್ಲಿದ್ದ ಶ್ರೀ.ಕೆ.ಎಫ್.ಪಾಟೀಲರಿಗೆ ಮತ್ತು ಅವರ ಸಂಗಡಿಗರಿಗೆ ಸತತ ಪತ್ರ ಬರೆಯುವ ಮುಖಾಂತರ ಆಕರ್ಷಿತರಾದರು ಮುಂದೆ ಇದರಿಂದ ಪ್ರಭಾವಿತರಾದ ಶ್ರೀ.ಕೆ.ಎಫ್.ಪಾಟೀಲರು ತಮ್ಮ ಒಡನಾಡಿ ಆರ್.ಬಿ.ಮಾಮಲೇ ದೇಸಾಯರ ಮೂಲಕ ಹುಬ್ಬಳ್ಳಿಗೆ ಕರೆಸಿ ಹೊಸದಾಗಿ ಪ್ರಾರಂಭಗೊಂಡ ವಿಶಾಲ ಕರ್ನಾಟಕ ಪತ್ರಿಕೆಯ ಸಂಪಾದಕತ್ವ ನೀಡಿದರು.

ಪುಟ್ಟಪ್ಪನವರು ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪ, ಪ್ರಧಾನಿ ಪಂಡಿತ್ ಜವಾಹರಲಾಲ  ನೆಹರು, ಮೊರಾರ್ಜಿ ದೇಸಾಯಿ, ಕೆಂಗಲ್ ಹನುಮಂತಯ್ಯನವರು, ರಾಮಕೃಷ್ಣ ಹೆಗಡೆಯವರು, ಡಾ.ವಿ.ಕೆ.ಗೋಕಾಕ, ಡಾ.ಹಿರೇಮಲ್ಲೂರ ಈಶ್ವರನ್, ಗೌರೀಶ್ ಕಾಯ್ಕಿಣಿ, ಶ್ರೀ.ಡಿ.ವಿ.ಗುಂಡಪ್ಪ, ಖಾದ್ರಿಶಾಮಣ್ಣ, ಬೆಟಗೇರಿ ಕೃಷ್ಣಶರ್ಮರವರೊಂದಿಗೆ ಮತ್ತು ಡಾ.ಗಂಗೂಬಾಯಿ ಹಾನಗಲ್ ಇವರೊಂದಿಗೆ ಒಡನಾಟವನ್ನು ಹೊಂದಿದವರಾಗಿದ್ದರು.

ಕರ್ನಾಟಕದಲ್ಲಿ ಇವರ ಉಪನ್ಯಾಸಗಳನ್ನು ಕೇಳದ ನಗರಗಳಿಲ್ಲವೆಂದು ಹೇಳಬಹುದು. ಪ್ರಜಾವಾಣಿಯಲ್ಲಿ ಪ್ರತಿವಾರ ಪ್ರಕಟಗೊಂಡು ನಂತರ ಪುಸ್ತಕರೂಪ ಪಡೆದ “ನಮ್ಮದು ಈ ಭರತಭೂಮಿ” ಯಲ್ಲಿ ಅವರು ಕಂಡ ಭಾರತ ದೇಶದ ಪ್ರಮುಖ ಪಟ್ಟಣಗಳ ಪರಿಚಯವಿದೆ. “ನಮ್ಮ ದೇಶ ನಮ್ಮ ಜನ” ಸಂಕಲನ ಮತ್ತು ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದು ಕೊಟ್ಟರು. ಇವರು ತಮ್ಮಲ್ಲಿ ಮತ್ತು ಕನ್ನಡದ ಅಭಿಮಾನಿಗಳಲ್ಲಿ ಕನ್ನಡತನದ ಪ್ರೀತಿಯನ್ನು ಹೆಚ್ಚಿಸಿದರು. ಕ್ರಿ.ಶ 1962ರಿಂದ 1974ರ ವರೆಗೆ 12 ವರ್ಷ ರಾಜ್ಯ ಸಭೆಯ ಸದಸ್ಯರಾಗಿದ್ದರು. ಈ ವೇಳೆಯಲ್ಲಿ ಅವರು ಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದರೇ ಪ್ರಧಾನಿ ಪಂಡಿತ್ ಜವಾಹರ್‍ಲಾಲ ನೆಹರು ಅವರು ಏಕಾಗ್ರತೆಯಿಂದ ಆಲಿಸುತ್ತಿದ್ದರು. ಚಲಿಸುವ ಜ್ಞಾನಕೋಶವೆಂದೇ ಹೆಸರಾದ ಡಾ.ಪಾಟೀಲ್ ಪುಟ್ಟಪ್ಪನವರಿಗೆ, ಸಾಹಿತ್ಯ ಹೋರಾಟಕ್ಕೆ, ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಯ ನೇತೃತ್ವವಹಿಸಿದ್ದಕ್ಕಾಗಿ ಅನೇಕ ಪ್ರಶಸ್ತಿಗಳು ಬಂದವು. ಕರ್ನಾಟಕ ವಿದ್ಯಾವಧರ್Àಕ ಸಂಘದ ಅಧ್ಯಕ್ಷರಾಗಿ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ರಾಜ್ಯಸಭಾಸದಸ್ಯರಾಗಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಮರ್ಥ ರೀತಿಯಿಂದ ಕಾರ್ಯನಿರ್ವಹಿಸಿದ ಪಾಟೀಲ್ ಪುಟ್ಟಪ್ಪರಿಗೆ, ಚಿ.ಎಫ್.ಆರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, “ಸಾಹಿತ್ಯ ರತ್ನ” ಅತ್ತಿಮಬ್ಬೆ ಲಿಪಿಪ್ರಾಜ್ಞೆ ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ.

10. ಸು.ರಂ ಎಕ್ಕುಂಡಿ
ಶ್ರೀ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು 1923 ಜನೇವರಿ 20ರಂದು ರಾಣಿಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಂಗಾಚಾರ್ಯರು ಮೂಲ ಕಲಬುರ್ಗಿಯ ಮಣ್ಣೂರು, ದೊಡ್ಡ ಸಂಸಾರದ ಸಂಕಷ್ಟಗಳ ಮಧ್ಯ ನಲುಗಲು ಇಷ್ಟಪಡದೆ ಹೊಸ ಬದಕು ಹುಡುಕುತ್ತಾ ರಾಣಿಬೆನ್ನೂರಿಗೆ ಬಂದು ನೆಲೆನಿಂತವರು. ಸು.ರಂ ಎಕ್ಕುಂಡಿ ಐದು ವರ್ಷ ತುಂಬವ ವೇಳೆಗೆ ತಂದೆ ನಿಧನ ಹೊಂದಿದರು. ನಂತರದೆಲ್ಲಾ ನೋವಿನ ಬದುಕು ಮತ್ತು ಕೆಂಡದ ಮೇಲಿನ ನಡುಗೆಯೆ ಇವರ ಕಾವ್ಯದ ಹುಟ್ಟಿಗೆ ಸ್ಪೂರ್ತಿ.
ಹೈಸ್ಕೂಲಿನಲ್ಲಿ ಸಾಹಿತ್ಯದ ಗೀಳಿಗೆ ತಕ್ಕ ವಾತಾವರಣ ದೊರಕಿತು “ಉನ್ನತಿ” ಕೈಬರಹ ಪತ್ರಿಕೆ ಸಂಪಾದಿಸಿದ್ದೆ ಅಲ್ಲದೆ ಸಾಹಿತ್ಯ ಹರಟೆಗು ಜೊತೆಗಾರರು ಸಿಕ್ಕರು.

ಜಗದೀಶ ಚಂದ್ರ ಬೋಸರ ಸಾವು ಎಕ್ಕುಂಡಿಯವರಲ್ಲಿ ಕವಿತೆಯಾಗಿ ಅರಳಿತು. ಇವರಿಗೆ ಪಾಠ ಮಾಡುತ್ತಿದ್ದ ಬಿ.ಎಂ.ಶ್ರೀಯವರು ಟೆನಿಸನ್ ಮತ್ತು ವಡ್ರ್ಸವರ್ತರನ್ನು ಪರಿಚಯಿಸಿದರು. ಹುಬ್ಬಳ್ಳಿಗೆ ಬಂದಂತಹ ಕವಿಗಳಾದಂತಹ ವಿ.ಕೃ.ಗೋಕಾಕ, ಬೇಂದ್ರೆ, ಬೆಟಗೇರಿ ಕ್ಷಷ್ಣಶರ್ಮ, ಶ್ರೀರಂಗರು ಮತ್ತು ಶಂ.ಬಾ.ಜೋಷಿಯವರ ಆಕರ್ಷಣೆಯಿಂದ ಸಾಹಿತ್ಯದ ಅಭಿರುಚಿ ಹೆಚ್ಚಾಯಿತು. 

ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವಾಗ ಚಾಸರ್, ಶೇಕ್ಸಪಿಯರ್, ಕಾರ್ನಾಡ್, ವಿ.ಚಿತ್ತಲ್ ಮತ್ತು ಹೊನ್ನೆಹಲ್ಲಿಯವರ ಸ್ನೇಹ ಬೆಳೆಯಿತು. ಈ ವೇಳೆಯಲ್ಲಿಯೆ “ಸಂತಾನ” ಮತ್ತು “ಮಾತು ಮಾತು ಮಥಿಸಿ” ಕವನ ಸಂಗ್ರಹಕ್ಕೆ ದಾರಿ ಮಾಡಿತು. ಯಕ್ಕುಂಡಿಯವರು ತಮ್ಮ ಪದವಿಯ ನಂತರ ಉತ್ತರ ಕನ್ನಡ ಜಿಲ್ಲೆಯ ಬಂಕಿಕೂಡ್ಲಕ್ಕೆ ಕಡಲನ್ನು ನೋಡಲು ಹೋದಾಗ ಅಲ್ಲಿಯೆ ಕ್ರಿ.ಶ 1944ರಲ್ಲಿ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

 ಇಲ್ಲಿಯ ವಾತಾವರಣ ಅವರಲ್ಲಿಡಗಿದ ಸಾಹಿತ್ಯವನ್ನು ಹೊರಹಾಕುವಲ್ಲಿ ಸಹಾಯವಾಯಿತು. ಇವರು ಬಾಳಸಂಗಾತಿಯಾಗಿ ಇಂದಿರಾ ಯಕ್ಕುಂಡಿಯವರನ್ನು ಹಾವೇರಿಯಿಂದ ವರಿಸಿದರು.
“ಬೆಳ್ಳಕ್ಕಿಗಳು” ಕವನಸಂಕಲನ, ಕೊರಗು, ಬುತ್ತಿ, ಶರಣು, ಮಹಾಕವಿ, ಗುಡಿಸಲು, ಶಬರಿ, ಸುಧಾಮ, ಗಜೇಂದ್ರ, ಕುಬ್ಜೆಗಳನ್ನು ರಚಿಸಿದರು. “ಸುಭದ್ರಾ” ಮತ್ಸ್ಯಂಗದಿ ಮತ್ತು “ಹಾವಾಡಿಗನ ಹುಡುಗ” ಕಥನ ಕಾವ್ಯಗಳು ಹೆಚ್ಚು ಪ್ರಬಾವ ಬಿರುವಂತಹದ್ದು. ಇವರು ತಮ್ಮ ವಿದ್ಯಾ ಆಸಕ್ತಿಯನ್ನು ಎಂದಿಗೂ ಬಾಡಲು ಬಿಡದೆ ಮುಂದೆ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದರು. ಇವರ ಸಾಹಿತ್ಯದ ಕೊಡುಗೆಗೆ “ಸಾಹಿತ್ಯ ಅಕಾಡಮಿಯ ಪ್ರಶಸ್ತಿ” ಮತ್ತು ರಾಷ್ಟ್ರಿಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದರು. 1995ರಲ್ಲಿ ತಮ್ಮ ಸಾಹಿತ್ಯ ಕ್ಷೇತ್ರದಿಂದ ಬಹುದೂರ ಸರೆದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

11. ಸಂಗೀತಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳು ಆ ಒಂದು ನೆನಪು
ಸಂಗೀತಯೋಗಿ, ಅಂಧ, ಅನಾಥ, ಅಂಗವೀಕಲರ ಕೃಪಾಪೋಷಕರಾದಂತಹ ಪಂಡಿತ ಪಂಚಾಕ್ಷರಿ ಗವಾಯಿಗಳು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ “ಕಾಡಶೆÀಟ್ಟಿ” ಎಂಬ ಹಳ್ಳಿಯಲ್ಲಿ ಕ್ರಿ.ಶ 1892 ರ ಫೆಬ್ರುವರಿ 2 ರಂದು. ತಂದೆ ವೀರಮಾಹೇಶ್ವರ ವಂಶದ ಶ್ರೀ ಗುರುಪಾದಯ್ಯ ಚರಂತಿಮಠ, ತಾಯಿ ಶ್ರೀಮತಿ ನೀಲಮ್ಮ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮೊದಲ ಮಗ ಗುರುಬಸವ, ಎರಡನೇಯವ ಗದಿಗಯ್ಯ. ಇಬ್ಬರೂ ಜನ್ಮಾಂದರೆ, ಪಂಚಾಕ್ಷರಿ ಗವಾಯಿಗಳ ತೊಟ್ಟಿಲ ಹೆಸರು ಗದಿಗಯ್ಯ.
ಭಗವಂತ ಗುರುಬಸವ-ಗದಿಗಯ್ಯರ ಕಣ್ಣು ಕಸಿದುಕೊಂಡು ಅದರ ಬದಲಿಗೆ ಸುಮದುರ ಕಂಠ ಕೊಟ್ಟು ಕಳುಹಿಸಿದ್ದ, 

ಬೆಳೆದು ದೊಡ್ಡವರಾಗುತ್ತ ನಡೆದ ಬಾಲಕದ್ವಯರ ಗಾನ ಸುದ್ದಿ ಸುತ್ತ ಹಳ್ಳಿಗೆ ಹಬ್ಬಿತು. ಊರಲ್ಲಿ ಯಾವುದೇ ಕಾರ್ಯಕ್ರಮವಿರಲಿ ಮಕ್ಕಳಿಬ್ಬರ ಸಂಗೀತ ಇದ್ದುದ್ದೆ. ಇವರಿಗೆ ಹಾಗೂ ಇವರ ತಂದೆ ತಾಯಿಗಳಿಗೆ ಹೆಚ್ಚಿನ ಸಂಗೀತ ಕಲಿಯುವ ಮತ್ತು ಕಲಿಸುವ ಆಸೆ, ಇದಕ್ಕಾಗಿಯೇ ಕಾಡಶೆಟ್ಟಿ ಹಳ್ಳಿಯ ಗ್ರಾಮದೇವತೆ “ಶ್ರೀ ಹಕ್ಕಲ ಬಸವೇಶ್ವರ” ಜಾತ್ರೆಗೆ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ದಯಾಮಾಡಿಸಿದ್ದರು. ಆಗ ಈ ಬಾಲದ್ವಯರ ಮದುರ ಕಂಠದ ಹಾಡು ಕೇಳಿ ಕುಮಾರಸ್ವಾಮಿಗಳು ಸಂತುಷ್ಟರಾದರಲ್ಲದೆ. ಮಕ್ಕಳಿಬ್ಬರನ್ನು ತನ್ನ ಉಡಿಯಲ್ಲಿ ಹಾಕಿ, ಅವರಿಗೆ ಸಂಗೀತ ಕಲಿಸುವ ವ್ಯವಸ್ಥೆಯನ್ನು ಮಾಡುವೆ ಎಂದು ಹೇಳಿದರು.

ಕುಮಾರಸ್ವಾಮಿಗಳು ಬಾಲಕರನ್ನು ತಮ್ಮೊಂದಿಗೆ ಹಾನುಗಲ್ ಮಠಕ್ಕೆ ಕರೆದುಕೊಂಡು ಬಂದರು. ಹಾನಗಲ್ಲನಲ್ಲಿ ತಂಜಾವೂರಿನಿಂದ ಬಂದಂತಹ ಕರ್ನಾಟಕ ಸಂಗೀತಗಾರರೊಬ್ಬರಿಂದ ಸಂಗೀತವನ್ನು ಕಲಿಸಿದರು ಇವರಿಗೆ ಇಲ್ಲಿಯ ಹವಮಾನಕ್ಕೆ ಹೊಂದಿಕೊಳ್ಳಲು ಆಗಲಿಲ್ಲ ಮುಂದೆ ಕುಮಾರ ಸ್ವಾಮಿಗಳು ಹರಪನಹಳ್ಳಿಯ ಭೀಮರಾಯಪ್ಪರಿಂದ, ಶಿರಾಳಕೊಪ್ಪದ ಗದಿಗಯ್ಯಾ ಅವರಿಂದ ಸುಮಾರು ಎಂಟು ವರ್ಷ ಸಂಗೀತಾಭ್ಯಾಸವನ್ನು ಮಾಡಿಸಿದರು. ಆದರೆ ಬಾಲಕರಿಗೆ ಅದು ತೃಪ್ತಿ ಎನಿಸಲಿಲ್ಲ, ಹೀಗಾಗಿ ಹೆಚ್ಚಿನ ತರಬೇತಿಗಾಗಿ ಮೈಸೂರಿಗೆ ಕಳುಹಿಸಲು ನಿರ್ಧರಿಸಿದರು. ಆ ವೇಳೆಯಲ್ಲಿ ಸಹೋದರ ಗುರುಬಸವ ಕಾಲರಾ ಬೇನೆಗೆ ತುತ್ತಾದ, ಆ ಸಮಯದಲ್ಲಿ ಕುಮಾರಸ್ವಾಮಿಗಳು ಗದಿಗಯ್ಯನಿಗೆ ಧೈರ್ಯತುಂಬಿ ಮೈಸೂರಿಗೆ ಕಳುಹಿಸಲು ನಿರ್ಧರಿಸಿದರು. ಅಲ್ಲಿ ಪಿಟೀಲು ವಿದ್ವಾನ್ ಪಂಡಿತ ವೆಂಕಟರಮಣಯ್ಯನವರಲ್ಲಿ ಅಭ್ಯಾಸ ಮಾಡಿದರು. ಮೈಸೂರಿನ ಆಸ್ಥಾನ ವಿದ್ವಾನ್ ಪಂಡಿತ ವೀಣೆಶೇಷಣ್ಣನವರು ಗದಿಗಯ್ಯನವರ ಸಂಗೀತ ಕೇಳಿ ತುಂಬಾ ಮೆಚ್ಚಿಕೊಂಡರು.

ಕ್ರಿ.ಶ 1908ರ 4ನೇ ಅಖಿಲ ಭಾರತ ವೀರಶೈವ ಮಹಾಸಭೆ ಸಮಾವೇಶದಲ್ಲಿ ಹಾಡಲು ಆಗಮಿಸಿದ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಗದಿಗಯ್ಯನವರನ್ನು ಕುಮಾರಸ್ವಾಮಿಗಳು ಹಾಗೂ ಗೌರಿಶಂಕರ ಸ್ವಾಮಿಗಳು “ಪಂಚಾಕ್ಷರ ಗವಾಯಿ” ಎಂಬ ಹೆಸರನಿಟ್ಟು ಬಾಗಲಕೋಟೆ ಟೀಕಿನಮಠದ ಆವರಣದಲ್ಲಿ ಗೌರವಿಸಿದರು. ಮುಂದೆ ಪಂಡಿತ ಪಂಚಾಕ್ಷರಿ ಗವಾಯಿಗಳವರಿಗೆ ಉಸ್ತಾದ್ ಅಬ್ದುಲ್ ಕರಿಮ್ ಖಾನರಿಂದ ತಮ್ಮ ಶಿವಯೋಗಿ ಮಂದಿರದಲ್ಲಿ ಹಿಂದೂಸ್ತಾನಿ ಸಂಗೀತ ಕಲಿಸುವ ಏರ್ಪಾಡು ಮಾಡಿದರು. ಸತತವಾಗಿ 20 ವರ್ಷಗಳ ಕಾಲ ಕುಮಾರಸ್ವಾಮಿಯವರು ಆಶ್ರಯ ನೀಡಿ ಸಂಗೀತ ಕಲಿಸುವ ಏರ್ಪಾಡು ಮಾಡಿದರು. 

ಇವರ ಆಶಿರ್ವಾದದಂತೆಯೆ ಆಜನ್ಮ ಬ್ರಹ್ಮಚಾರಿಗಳಾಗಿದ್ದು, ಅಂಧ ಅಂಗವಿಕಲ ಮತ್ತು ಅನಾಥ ಮಕ್ಕಳಿಗೆ ಆಸರೆ ನೀಡಿ ಸಂಗೀತ ಕಲಿಸುವಂತೆ ಬೆಳೆದು ನಿಂತರು.

ಕ್ರಿ.ಶ 1914 ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಕೊಪ್ಪದಲ್ಲಿ ಬಸವ ಜಯಂತಿ ದಿನದಂದು “ಹಾನುಗಲ್ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಸಂಗೀತ ಸಾಹಿತ್ಯ” ಮಹಾವಿದ್ಯಾಲಯ ಸ್ಥಾಪಿಸಿದರು. ಈ ಸಂಗೀತ ವಿದ್ಯಾಪೀಠಕ್ಕೆ ನಾಡಿನ ಮೂಲೆ ಮೂಲೆಯಿಂದ ಅಂಧ, ಅಂಗವಿಕಲ ಮತ್ತು ಅನಾಥ ಮಕ್ಕಳು ಬರಲಾರಂಭಿಸಿದರು. ಅವರನ್ನೆಲ್ಲಾ ಕಟ್ಟಿಕೊಂಡು ಗವಾಯಿಗಳು ಊರಿಂದೂರಿಗೆ ಸಂಚಾರ ಮಾಡುತ್ತಾ “ಸಂಚಾರ ಸಂಗೀತ ಶಾಲೆ” ನಡೆಸಿದರು. ನೂರಾರು ವಿದ್ಯಾರ್ಥಿಗಳು ಈ ಸಂಗೀತ ಶಾಲೆಗೆ ಸೇರಿದರು. ಅವರಿಗೆ ಉಚಿತ ವಸತಿ ಪ್ರಸಾದ ನೀಡಿ ಸಂಗೀತ ಕಲಿಸುವ ಏರ್ಪಾಡು ಮಾಡಿದರು. ಗವಾಯಿಗಳ ಈ ನಿಸ್ವಾರ್ಥ ಸಂಗೀತ ಸೇವೆ ಮನಗಂಡ  ವರಕವಿ ಡಾ. ದ.ರಾ.ಬೇಂದ್ರೆ, ವಚನ ಪಿತಾಮಹಾ ಡಾ. ಫ.ಗು.ಹಳಕಟ್ಟಿ ಹಾಗೂ ಶ್ರೀ ಗರೂಡ ಸದಾಶಿವರಾಯರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನೂರಾರು ಮಕ್ಕಳ ಲಾಲನೆ-ಪಾಲನೆ ಭಾರ ಹೆಚ್ಚಾಗುತ್ತಾ ನಡೆದಾಗ ಇದನ್ನು ಕಡಿತಗೊಳಿಸಲು ಗವಾಯಿಗಳು “ಶ್ರೀ ಕುಮಾರೆಶ್ವರ ಕೃಪಾಪೋಷಿತ ಸಂಗೀತ ನಾಟಕ ಮಂಡಳಿ ಸ್ಥಾಪಿಸಿ ತನ್ಮೂಲಕ ನಾಟಕ ಆಡಿಸಿದರು. ಪಂಡಿತ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು”ಸೊನ್ನಲಾಪುರ ಸಿದ್ದರಾಮೇಶ್ವರ” “ ಹೇಮರಡ್ಡಿ ಮಲ್ಲಮ್ಮ” ಮುಂತಾದ ಭಕ್ತಿಪರ ನಾಟಕ ರಚನೆ ಮಾಡಿ ಜಯಭೇರಿ ಬಾರಿಸಿದರು. ಆದ್ದುದರಿಂದ ಆರ್ಥಿಕ ತೊಂದರೆ ದೂರವಾಯಿತು.

ಕ್ರಿ.ಶ 1940 ರಲ್ಲಿ ಧಾರವಾಡ–ಗದಗ ಭಾಗಗಳಲ್ಲಿ ಭೀಕರ ಬರಗಾಲ ಬಿದ್ದಿತ್ತು. ಈ ಸ್ಥಿತಿಯಲ್ಲಿ ವಿದ್ಯಾರ್ಥಿ ಮಕ್ಕಳನ್ನು ತಮ್ಮ ತಮ್ಮ ಊರಿಗೆ ಕಳಿಸಬೇಕೆಂದು ಕೆಲಹಿರಿಯರು ಸಲಹೆ ನೀಡಿದರು. ಆದರೆ ಗವಾಯಿಗಳು ಅದಕ್ಕೆ ಒಪ್ಪಲಿಲ್ಲ ತಂಬೂರಿ ತಂತಿ ಮಾರಿಯಾದರು ಮಕ್ಕಳನ್ನು ಸಲಹುತ್ತೇನೆಂಧು ಹೇಳಿದರು. ಗವಾಯಿಗಳ ಈ ತಾಪತ್ರಯ ಕಂಡ ಗದುಗಿನ ಭಕ್ತಶಿರೋಮಣಿ ಶ್ರೀ ಬಸರೀಗಿಡದ ವೀರಪ್ಪನವರು ಗವಾಯಿಗಳಿಗೆ ಪ್ರಸಾದ, ವಸತಿಗೆ ವ್ಯವಸ್ಥೆ ಮಾಡಿ ಅವರ ಸಂಗೀತಾರಾಧನೆಗೆ, ಲಿಂಗಪೂಜೆಗೆ ಯಾವ ತೊಂದರೆಯಾಗದಂತೆ ಅವರು ಖಾಯಂ ಆಗಿ ಗದುಗಿನಲ್ಲಿಯೇ ನೆಲೆನಿಲ್ಲಲು ಜಮೀನನ್ನು ದಾನವಾಗಿ ನೀಡಿ ಗವಾಯಿಗಳಿಗೆ ಆಶ್ರಮ ಕಟ್ಟಿಸಿಕೊಟ್ಟರು. ಈ ಸ್ಥಳವೇ ಇಂದು “ಶ್ರೀ ವಿರೇಶ್ವರ ಪುಣ್ಯಾಶ್ರಮ” ಎಂಬ ಹೆಸರಲ್ಲಿ “ಸಂಗೀತದ ಮುಕ್ತ ವಿಶ್ವವಿದ್ಯಾಲಯವಾಗಿ” ತೆಲೆ ಎತ್ತಿ ನಿಂತಿದೆ.

ಪಂಡಿತ ಪಂಚಾಕ್ಷರಿ ಗವಾಯಿಗಳ ಶಿಷ್ಯರಲ್ಲಿ ಅನೇಕರು ಇಂದು ಸಂಗೀತಲೋಕದಲ್ಲಿ ಅಪಾರ ಹೆಸರು ಪಡೆದಿದ್ದಾರೆ. ಅಂತವರಲ್ಲಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿ, ಪಂಡಿತ ಬಸವರಾಜ ರಾಜಗುರು, ಪಂಡಿತ ಸಿದ್ದರಾಮ ಜಂಬಲದಿನ್ನಿ, ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಪಂಡಿತ ಅರ್ಜುನಸಾ ನಾಕೋಡ, ಪಂ.ಮೃತ್ಯುಂಜಯ ಬುವಾ, ಪುರಾಣಿಕ ಮಠ, ಶಂಕರ ದೀಕ್ಷಿತ ಜಂತಲಿ  ಮುಂತಾದವರು. ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ -ಸಮಾಜ ಸೇವೆ ಗಮನಿಸಿ ಅಸಂಖ್ಯಾತ ಪ್ರಶಸ್ತಿ ಪುರಸ್ಕಾರ ಬಂದವು. ಅಂಥವುಗಳಲ್ಲಿ 1929 ರಲ್ಲಿ ವಿಜಾಪುರದ ಸಿದ್ದೇಶ್ವರ ಸಂಸ್ಥೆ ನೀಡಿದ “ಗಾನ ಕಲಾನಿಧಿ” 1935 ರಲ್ಲಿ ರಂಬಾಪುರಿ ಜಗದ್ಗುರುಗಳು ನೀಡಿದ “ಸಂಗೀತ ಸಾಗರ” 1939 ರಲ್ಲಿ ಹೊಂಬಳದ ಜ್ಞಾನವರ್ಧಕ ವಾಚನಾಲಯ ಮಂಡಳಿ ನೀಡಿದ “ಸಂಗೀತ ಸುಧಾನಿಧಿ” ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಕ್ರಿ.ಶ 1944 ಜೂನ್ 11 ರಲ್ಲಿ ಲಿಂಗೈಕ್ಯರಾದ ನಂತರ ಗದುಗಿನಲ್ಲಿಯೇ ಶ್ರೀ ವೀರೆಶ್ವರ ಪುಣ್ಯಾಶ್ರಮದಲ್ಲಿ ಸಮಾಧಿಮಾಡಲಾಯಿತು. ಇವರುಗಳು ಹಾವೇರಿ ಜಿಲ್ಲೆಯಲ್ಲಿ ಹುಟ್ಟಿ ಈ ಪುಣ್ಯ ಭೂಮಿಯನ್ನು ಪಾವನ ಮಾಡಿದ್ದಾರೆ ಎಂಬುದೆ ಹೆಮ್ಮೆಯ ವಿಷಯ.

 12. ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು
3 ಮಾರ್ಚ 1914 ರಂದು ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿ ಇವರ ಜನನ. ಅದು ತಾಯಿ ಸಿದ್ದಮ್ಮನ ತವರೂರು. ತಂದೆ ರೇವಣಸಿದ್ದಯ್ಯರದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಪೇಟೆ. ಇಲ್ಲಿ ಕೂಸಿಗೆ ಪುಟ್ಟಯ್ಯನೆಂದು ನಾಮಕರಣ ಮಾಡಿದರು. ಆರು ತಿಂಗಳು ಕೂಸಿರುವಾಗ ಕಣ್ಣಬೇನೆಯಿಂದ ಬಳಲುತ್ತಿದ್ದ ಪುಟ್ಟಯ್ಯರಿಗೆ ತೊನಸೆಯನ್ನು ಕಣ್ಣಿಗೆ ತಾಗಿಸಿದರೆ ವಾಸಿಯಾಗುವದೆಂದು ನಾಟಿವೈದ್ಯನು ಸಲಹೆ ಕೊಟ್ಟನು ದುರಾದೃಷ್ಟ ತೊನಸೆ ಕೈಯಿಂದ ಜಾರಿ ಕಣ್ಣೊಳಗೆ ಬಿದ್ದು ಕಣ್ಣನ್ನೆ ತಿಂದುಬಿಟ್ಟವು ಪುಟ್ಟಯ್ಯ ಕುರುಡನಾದರೂ ಅನಾಥರ ಮತ್ತು ಅಂಧರ ಬಾಳಿಗೆ ಮುಂದೆ ದಾರಿದೀಪವಾದನು. 

ಪುಟ್ಟಯ್ಯ ಎರಡು ವರ್ಷದವನಿರುವಾಗ ತಂದೆಯನ್ನು ಕಳೆದುಕೊಂಡ. ಸೊದರಮಾವ ಚಂದ್ರಶೇಖರಯ್ಯರು ತಾಯಿ ಮತ್ತು ಮಗನನ್ನು ದೇವಗಿರಿಗೆ ಕರೆದೊಯ್ದು ಪಾಲಿಸಿ ಪೋಷಿಸಿದರು. ಚಂದ್ರಶೆಖರಯ್ಯ ಪಂಚಾಕ್ಷರಿಗವಾಯಿಗಳಲ್ಲಿ ಸಂಗೀತ ಕಲಿತಿದ್ದರಿಂದ ಮತ್ತು ಪುಟ್ಟಯ್ಯನನ್ನು ಎಂಟು ವರ್ಷದವನಾಗಿದ್ದಾಗಲೇ ಪುಟ್ಟಯ್ಯ ವಚನ, ಚಿಜು ಮತ್ತು ತತ್ವಪದ ಹಾಡಬಲ್ಲವನಾಗಿದ್ದು ಹಾಡಿನ ಜೊತೆಗೆ ಹಾರ್ಮೋನಿಯಂ ಕೂಡ ನುಡಿಸುತ್ತಿದ್ದನು. ಇವರ ಸೋದರಮಾವ ಪುಟ್ಟಯ್ಯನ ಸಂಗೀತದ ಆಸಕ್ತಿಯನ್ನು ಕಂಡು 1922ರಲ್ಲಿ ಪಂಚಾಕ್ಷರಿಗವಾಯಿಗಳಲ್ಲಿ ಕರೆದೊಯ್ದು ಎಲ್ಲಾ ವಿವರಿಸಿದರು. ಪಂಚಾಕ್ಷರ ಗವಾಯಿಗಳು ಆಗ ತಮ್ಮ ಸಂಚಾರಿ ಸಂಗೀತ ಶಾಲೆಯೊಂದಿಗೆ ನವಲಗುಂದದಲ್ಲಿದ್ದರು. ಒಂದುಕ್ಷಣ ದ್ಯಾನಿಸಿ ತಕ್ಷಣವೆ ನನ್ನ ಹೆಸರನ್ನು ಅಮರಗೊಳಿಸುವ ಶಿಷ್ಯನನ್ನು ಗುರುಕುಮಾರೇಶ ಕಳಿಸಿರುವನು ಎಂದು ಪುಟ್ಟಯ್ಯನನ್ನು ಅಪ್ಪಿದರು.

ಪುಟ್ಟರಾಜ ಗವಾಯಿಗಳು ಶಿಷ್ಯತ್ವವನ್ನು ಸ್ವೀಕರಿಸಿದ ನಂತರ ಅವರ ಪ್ರಸಾದಕ್ಕಾಗಿ ವಾರದ ಮನೆಯನ್ನು ಗೊತ್ತು ಮಾಡಿದರು. ಒಂದೊಂದು ಮನೆಯಲ್ಲಿ ಆಹಾರ ಸರಿಯಿರುತ್ತಿರಲಿಲ್ಲ, ಮತ್ತೊಂದರಲ್ಲಿ ಹೊಟ್ಟಿ ತುಂಬುತ್ತಿರಲಿಲ್ಲ. ಬಟ್ಟೆ ಹರಿದರೂ ಅದರ ಅರಿವು ಅವನಿಗಿರದೇ ಅವನ ಗಮನವೆಲ್ಲಾ ವಿಧ್ಯಾರ್ಜನೆಯತ್ತ ಕೇಂದ್ರಿಕೃತಗೊಂಡಿತ್ತು. ಪುಟ್ಟಯ್ಯ ಹಾರ್ಮೋನಿಯಂ, ತಬಲ, ಸಾರಂಗಿ ಮತ್ತು ಪಿಟೀಲನ್ನು ಹೆಚ್ಚು ಚೆನ್ನಾಗಿ ನುಡಿಸುತ್ತಿದ್ದರೆಂದರೆ ಅದನ್ನು ಆಲಿಸಿದವರ ಕಣ್ಣಿನಲ್ಲಿ ಆನಂದಭಾಷ್ಪಗಳು ತುಂಬಿತುಳುಕುತ್ತಿದ್ದವು. ಇವರು ಸಂಸ್ಕøತ, ಕನ್ನಡವ್ಯಾಕರಣ ಹಾಗೂ ಛಂದಸ್ಸು ಕರಗತಮಾಡಿಕೊಂಡು, ಅಂದರ ಬ್ರೇಲ್ ಲಿಪಿಯನ್ನು ಕಲಿತುಕೊಂಡು ನಂತರ ಹಿಂದಿ ಭಾಷೆ ಕಲಿತು ಗುರು ಪಂಚಾಕ್ಷರಿ ಗವಾಯಿಗಳಿಂದ ಕಟ್ಟುನಿಟ್ಟಾಗಿ ಬ್ರಹ್ಮಚಾರ್ಯ, ಶಿವಪೂಜಾನಿಷ್ಠೆ ಮತ್ತು ಸೇವಾ ದೀಕ್ಷೆ ಮೈಗೂಡಿಸಿಕೊಂಡು ಪುಟ್ಟಯ್ಯನವರು ಪುಟ್ಟರಾಜ ಗವಾಯಿಗಳಾದರು. ಪುಟ್ಟರಾಜ ಗವಾಯಿಗಳು ದೊಡ್ಡ ಸಂಗೀತಗಾರರಾಗಿ ಮಾತ್ರವಲ್ಲದೇ ದೊಡ್ಡ ವಿದ್ವಾಂಸರಾಗಿಯೂ ಬೆಳೆದರು. 

ಇವರು 18 ಪುರಾಣಗಳು 19 ನಾಟಕಗಳು ಮತ್ತು ಇತರ ಪ್ರಕಾರದ ಕೃತಿಗಳು ಹೀಗೆ ಅವರು ಬರೆದ ಕೃತಿಗಳ ಸಂಖ್ಯೆ ಒಟ್ಟು 66. ಅವರು ಹಿಂದಿಯಲ್ಲಿ ರಚಿಸಿದÀ “ಬಸವ ಪುರಾಣ” ಬಾಬು ರಾಜೇಂದ್ರ ಪ್ರಸಾದರನ್ನು ಆಕರ್ಷಿಸಿತಲ್ಲದೇ, ರಾಷ್ಟ್ರಪತಿಗಳು ಇವರನ್ನು ಬೆಟ್ಟಿ ಮಾಡಿಸಲು ಕೊಪ್ಪಳದ ಸಂಸದ ಅಗಡಿ ಸಂಗಣ್ಣನವರಿಗೆ ತಿಳಿಸಿದರು. ಪುಟ್ಟರಾಜ ಗವಾಯಿಗಳು ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು, ಸಂತೋಷಗೊಂಡ ರಾಷ್ಟ್ರಪತಿಗಳು ನಿಮಗೇನಾದರೂ ಸಹಾಯ ಬೇಕಿದÀ್ದರೆ ಹೇಳಿರಿ ಎಂದರು. ಆಗ  ಅವರ ಅಂದರ ಶಾಲೆ ಕಷ್ಟದಲ್ಲಿ ನಡೆಯುತ್ತಿದ್ದರು ಏನನ್ನು ಕೇಳದೆ ನಿಮ್ಮ ಮೆಚ್ಚುಗೆಯೇ ನಮಗೆ ಸಾಕು ಎಂದರು.
ಇವರ ಪ್ರಮುಖ ಕೃತಿಗಳೆಂದರೆ “ಅಕ್ಕಮಹಾದೇವಿ ಪುರಾಣ” ಹಾವೇರಿ ಶಿವಬಸವ ಪುರಾಣ “ಅಂಕಲಗಿ ಶಿವಬಸವ ಪುರಾಣ” “ಸಿದ್ದೇಶ್ವರ ಪುರಾಣ” “ವೀರಭದ್ರೇಶ್ವರ ಪುರಾಣ” “ಗುಡ್ಡಾಪುರ ಪುರಾಣ” “ದಾನಮ್ಮ ಪುರಾಣ” ಹೀಗೆ ಅನೇಕ ಕೃತಿಗಳನ್ನು ರಚಿಸಿದರು. ಇವರಿಗೆ ಬಂದ ಪದವಿ, ಪ್ರಶಸ್ತಿಗಳು ಅನೇಕ ಅವುಗಳಲ್ಲಿ ಪ್ರಮುಖವೆಂದರೆ “ಉಬಯಗಾಯನ ಚಾರ್ಯ” ತ್ರಿಭಾಷಾ ಕವಿ, ಗಾನಯೋಗಿ ವಿದ್ಯಾವಾಚಸ್ಪತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 1996-98 ರಲ್ಲಿ ಕರ್ನಾಟಕ ಸರಕಾರದ ಕನಕ-ಪುರಂದರ ಪ್ರಶಸ್ತಿ. 2003 ರಲ್ಲಿ ಕರ್ನಾಟಕ ಸರಕಾರದ ರಾಷ್ಟ್ರೀಯ ಬಸವ ಪುರಸ್ಕಾರ, 2010 ರಲ್ಲಿ ಪದ್ಮಭೂಷಣ ಪ್ರಶಸ್ತಿ. ಇವರು ಅಂದತ್ವಕ್ಕೆ ಸವಾಲೆಸಗಿ ಜಗತ್ತಿಗೆ ಬೆಳಕಾದವರು. 

ಪಂಡಿತ ಪುಟ್ಟರಾಜ ಗವಾಯಿಗಳು ಅನೇಕ ಶಿಷ್ಯ ಬಳಗವನ್ನು ಹೊಂದಿದ್ದರು. ಅವರಲ್ಲಿ ಪ್ರಮುಖರೆಂದರೆ ಎಂ.ವೆಂಕಟೇಶಕುಮಾರ, ಡಿ ಕುಮಾರದಾಸ, ಬಸವರಾಜ ಗೋನಾಳ, ಬಿ ಎಸ್ ಮಠ ಮುಂತಾದವರು. ಇಂತಹ ಶಿಷ್ಯಬಳಗವನ್ನು ಮತ್ತು ಅಪಾರ ಭಕ್ತರನ್ನು ಬಿಟ್ಟು 17 ಸೆಪ್ಟಂಬರ್ 2010 ರಲ್ಲಿ ತಮ್ಮ 96 ನೆ ವಯಸ್ಸಿನಲ್ಲಿ ಲಿಂಗೈಕ್ಯರಾದರು. 

13. ಹುತಾತ್ಮರಾದ ಮೈಲಾರ ಮಹಾದೇವಪ್ಪ
ಮೈಲಾರ ಮಹಾದೇವಪ್ಪನವರು 1911 ರಲ್ಲಿ ಜೂನ್ 8 ರಂದು ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ಅನುಕೂಲವಂತ ರೈತ ಕುಟುಂಬದವರು. ಇವರ ತಂದೆ ಮಾರ್ತಾಂಡಪ್ಪ ತಾಯಿ ಬಸಮ್ಮ ಇವರ ಮನೆದೇವರು ದೇವರಗುಡ್ಡದ ಮೈಲಾರ ಹೀಗಾಗಿ ಮಗನಿಗೆ ಆ ಶೂರತನದ ದೇವರ ಹೆಸರನ್ನಿಟ್ಟರು. ಆತ ಮೋಟೆಬೆನ್ನೂರು ಶಾಲೆಯಲ್ಲಿ ಶಿಕ್ಷಣ ಪಡೆದು, ಗಳಗನಾಥರ ಕಾದಂಬರಿ, ಸದ್ಬೋದ ಚಂದ್ರಿಕೆ ಪತ್ರಿಕೆ ಹಾಗೂ ಇತರ ಭಕ್ತಿಪರ ಸಾಹಿತ್ಯ ಓದಿ “ಹಿತಭೋಧ” ಎಂಬ ಗೆಳೆಯರ ಗುಂಪು ಕಟ್ಟಿದ. ಗರಡಿ ಮನೆಗೆ ಹೋಗಿ ಕುಸ್ತಿಮಾಡಿ ಮಲ್ಲಕಂಬದ ಸಾಧನೆ ಮಾಡಿ ಗಟ್ಟಿಮುಟ್ಟಾದ ದೇಹವನ್ನು ಪಡೆದುಕೊಂಡಿದ್ದ.

ಮುಂದೆ ಹಂಸಭಾವಿ ಊರಲ್ಲಿ ದೇಶಭಕ್ತ ಟಿ.ಆರ್. ನೆಸ್ವಿಯವರು ನಡೆಸುತ್ತಿದ್ದ ಶಾಲೆ ಸೇರಿದ. ಅಲ್ಲಿ ನೆಸ್ವಿಯವರು ಅಲ್ಲದೇ ಕೆ.ಎಫ್ ಪಾಟೀಲರು ಅಧ್ಯಾಪಕರಾಗಿದ್ದು, ದಾವಣಗೇರಿಯ ಖಾದಿ ಸಿದ್ದಲಿಂಗಪ್ಪ, ಹರ್ಡೇಕರ ಮಂಜಪ್ಪ ಆಗಾಗ ಬಂದು ದೇಶಭಕ್ತಿ, ಖಾದಿ,ಸ್ವದೇಶಿ ವಿಚಾರ ಭೋಧಿಸುತ್ತಿದ್ದರು. ತ್ರೈಯಂಬಕ ಎಂಬ ಶಿಕ್ಷಕರು ಮಹಾದೇವಪ್ಪನ ಮೇಲೆ ವಿಶೇಷ ಪ್ರಭಾವ ಬೀರಿದರು. ಮುಂದೆ ಸಾಬರಮತಿ ಗಾಂಧಿ ಆಶ್ರಮಕ್ಕೆ ಹೋಗಿ ಅಲ್ಲಿ ಖಾದಿ ಹಾಗೂ ಆಶ್ರಮ ಜೀವನದ ಪರಿಣಿತಿ ಪಡೆದು, ಗಾಂಧಿಜಿಯವರು 1930 ರಲ್ಲಿ ಹೂಡಿದ ಉಪ್ಪಿನ ಸತ್ಯಾಗ್ರಹದ ದಂಡಿಗೆ ನಡೆದ ದೀರ್ಘ ಕಾಲುನಡಿಗೆಯ ಯಾತ್ರೆಯಲ್ಲಿ ಪಾಲ್ಗೊಂಡ ಸುಮಾರು 78 ಸತ್ಯಾಗ್ರಹಿಗಳಲ್ಲಿ ಮಹಾದೇವಪ್ಪ ಕರ್ನಾಟಕದ ಏಕಮಾತ್ರ ಪ್ರತಿನಿಧಿ.

ಆಗ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಹಾದೇವಪ್ಪ ಮತ್ತು ಇತರರ ಜೊತೆ ಬಂದಿತರಾಗಿ 1 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ಮೇಲೆ ತಮ್ಮ ಊರಲ್ಲಿ ಬಿಟ್ಟಿದ್ದ ಪತ್ನಿ ಸಿದ್ದಮ್ಮನ ಜೊತೆ ಮತ್ತೆ  ಸಾಬರಮತಿಗೆ ಹೋಗಿ ಆಶ್ರಮ ಕೆಲಸಗಳಲ್ಲಿ ಇಬ್ಬರು ಶ್ರದ್ಧೆಯಿಂದ ದುಡಿದರು. 1932 ರ ಚಳುವಳಿ ಕಾಲಕ್ಕೆ ಮಹಾದೇವಪ್ಪ ಮತ್ತೆ ಬಂಧಿತರಾಗಿ 2 ವರ್ಷ ಜೈಲು ಕಂಡರು. ಸಿದ್ದಮ್ಮ ಆಗ ಆಶ್ರಮದಲ್ಲಿಯೇ ಇದ್ದರು.

ಎರಡನೇ ಮಹಾಯುದ್ಧವಾದಾಗ ಗಾಂಧೀಜಿ ಪ್ರಕಟಿಸಿದ ವೈಯಕ್ತಿಕ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಒಂದು ವರ್ಷ ಜೈಲುವಾಸ ಅನುಭವಿಸಿ 1941 ರಲ್ಲಿ ಬಿಡುಗಡೆಯಾದರು. 1942 ರಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿಗೆ ಕರೆಕೊಟ್ಟರು. ಗಾಂಧೀಜಿ ಮತ್ತು ಇತರ ನಾಯಕರ ಬಂಧನವಾಯಿತು. ಸರ್ಕಾರ ಸ್ಥಗೀತವಾಗುವಂತೆ ರೈಲುಗಳು ಓಡದಂತೆ, ಸರ್ಕಾರಿ ಕಛೇರಿಗಳು ನಡೆಯದಂತೆ, ಕಂದಾಯ ಪಾವತಿಯಾಗದಂತೆ ಎಲ್ಲೇಡೆ ವಿದ್ವಂಸಕ ಕೃತ್ಯ, ಬುಡಮೇಲು ಚಟುವಟಿಕೆ ನಡೆಸಲು ನಾಯಕರು ಕರೆಕೊಟ್ಟಂತಹ ಮಹಾದೇವಪ್ಪ ಮತ್ತು ಅವರ 40-50 ಗೆಳೆಯರು ಭೂಗತರಾಗಿ ಮನೆ-ಮಾರು ಬಿಟ್ಟು ವಿದ್ವಂಸಕ ಚಳುವಳಿಯಲ್ಲಿ ತೊಡಗಿದರು. ಸೆಪ್ಟಂಬರ್ 15 ಕ್ಕೆ ರಾತ್ರಿ ಬ್ಯಾಡಗಿ ರೈಲ್ವೆ ಸ್ಟೇಷನನ್ನು ಸುಟ್ಟರು. ಅದೇ ದಿನ ಇತರ ದೇಶಭಕ್ತರು ಆ ಪರಿಸರದ ಒಟ್ಟು ನಾಲ್ಕು ಸ್ಟೇಷನ್ನು ಸುಟ್ಟರು.

ಬಿಜ್ಜೂರು, ಹೊನ್ನತ್ತಿ, ಹೆಬ್ಬಾಳ ಮುಂತಾದ ಹತ್ತಾರು ಗ್ರಾಮ ಚಾವಡಿ ಸುಟ್ಟರು. ಹೊನ್ನತ್ತಿಯಲ್ಲಿ ಸುತ್ತಲ ಗ್ರಾಮದಿಂದ ಕಂದಾಯ ಸಂಗ್ರಹಿಸುವ ಕೆಲಸ ನಡೆದಾಗ ಹಗಲು ವೇಳೆಯಲ್ಲಿಯೇ ಅಲ್ಲಿಗೆ ಹೋಗಿ ತಹಶೀಲ್ದಾರರನ್ನು ಮತ್ತು ಇತರ ಅಧಿಕಾರಿಗಳನ್ನು ಬಂಧಿಸಿ ಕೊಠಡಿಯಲ್ಲಿ ಕೂಡಿಹಾಕಿದರು. ಸಂಗ್ರಹವಾದ ಹಣವನ್ನು ಸೆಳೆದುಕೊಂಡು ಕಂದಾಯ ದಾಖಲೆಯನ್ನು ಸುಟ್ಟರು. ಮುರೋಳದಲ್ಲಿ ಇವರ ತಂಡದ ಜನ ಪಟೇಲನ ಬಳಿ ಹೋಗಿ ಕಂದಾಯದ ಹಣವನ್ನು ಕೇಳಿದರು ಆಗ ಅವನು ಹಣ ವಸೂಲಿಯಾಗಿಲ್ಲಾ ಎಂದೂ ಹೇಳಿದರು ಜಬರ್‍ದಸ್ತಿನಿಂದ 350 ರೂಗಳನ್ನು ವಸೂಲಿ ಮಾಡಿದರು. ಮರುದಿನ ಮಹಾದೇವಪ್ಪನವರೇ ಪಟೇಲನ ಬಳಿ ಹೋಗಿ ಹಣವನ್ನು ಮರುಳಿಸಿದರು.

ಹೊಸರಿತ್ತಿ ಊರಲ್ಲಿ ಸುತ್ತಲ ಗ್ರಾಮದಿಂದ ಸಂಗ್ರಹಿಸಿದ ಕಂದಾಯದ ಹಣ ಕಸಿಯಬೇಕೆಂದು ಎಪ್ರೀಲ್ 1 ರಂದು (1943) ಸುಮಾರು 20 ಜನರ ತಂಡ ಬೆಳಗೆÉ್ಗ 6 ಘಂಟೆಗೆ ಅಲ್ಲಿಗೆ ತಲುಪಿತು. ಅಲ್ಲಿನ ವೀರಭದ್ರ ಗುಡಿಯಲ್ಲಿ ಒಂದು ಕಬ್ಬಿಣದ ಸಂದುಕಿನಲ್ಲಿ ಹಣ ಇಟ್ಟು ಅದನ್ನು ಕಬ್ಬಿಣದ ಸರಪಳಿಯಿಂದ ಕಂಬಕ್ಕೆ ಕಟ್ಟಿದ್ದರು. ಬಂದೂಕು ದಾರಿ ಪೋಲಿಸರು ಕಾವಲಿದ್ದು, ಅವರಲ್ಲಿ ಇಬ್ಬರು ಬೆಳಿಗ್ಗೆ ಬಹಿರ್ದೆಸೆಗೆಂದು ನದಿಯ ಬಳಿಗೆ ಹೋಗಿರಲು ಒಬ್ಬನೇ ಬಂದೂಕುದಾರಿ ಕಾವಲಿರಲು ಅವನನ್ನು ಹಿಡಿದಿಟ್ಟರು. ಮಹಾದೆವಪ್ಪ ಹಾಗೂ ಮಿತ್ರರು ಒಳಗೆ ನುಗ್ಗಿ ಕಬ್ಬಿಣದ ಸಂದುಕು ಕೀಳಲು ಯತ್ನಿಸಿದರು. ಗರ್ಭಗೃಹದಲ್ಲಿ ಅಡಗಿದ್ದ ಒಬ್ಬ ಕಾನ್‍ಸ್ಟೇಬಲ್ ಮಹಾದೇವಪ್ಪನವರಿಗೆ ಬಾಯೊನೆಟ್‍ನಿಂದ ತೀವ್ರವಾಗಿ ಇರಿದ. ಪೋಲಿಸರು ಇಟ್ಟು ಹೋದ ಬಂದುಕಿನಿಂದ ಮಹಾದೇವಪ್ಪನವರ ಸಹಚರರು ಪೋಲಿಸರÀನ್ನು ಕೊಲ್ಲಲು ಮುಂದಾದಾಗ ಮಹಾದೇವಪ್ಪ ಜೋರಾಗಿ ಕೂಗಿ ಆಣೆಹಾಕಿ ಅವರನ್ನು ತಡೆದರು. ಮಹಾದೇವಪ್ಪನವರಿಗೆ ರಕ್ತಸ್ರಾವವಾಗುತ್ತಿದ್ದಾಗ ಹೊರಹೋಗಿದ್ದ ಪೋಲಿಸರು ಬಂದು ಗುಂಡು ಹಾರಿಸಲು ಮಹಾದೇವಪ್ಪ ಮತ್ತು ಅವರ ಇಬ್ಬರು ಜತೆಗಾರರಾದ ತಿರುಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅಲ್ಲೆ ಹುತಾತ್ಮರಾದರು. ಹೀಗೆ ಸ್ವತಂತ್ರ್ಯ ಚಳುವಳಿಯಲ್ಲಿ ತಾನುಗೇತಾನು ಸಾಯಬಹುದೆಂದು ತಿಳಿದು ತಿಳಿದು ಸ್ವಯಂ ಸ್ಪೂರ್ತಿಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದಿಂದ ಗಾಂಧೀಯುಗದಲ್ಲಿ ಪ್ರಾಣ ಬಲಿಧಾನ ಮಾಡಿದ ವೀರಯೋದರಲ್ಲಿ ಇವರು ಅಗ್ರಗಣ್ಯರು.

14. ಎಸ್.ಆರ್.ಬೊಮ್ಮಾಯಿ
ಇವರು 1924 ಜೂನ್ 6 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕಾರಡಗಿಯಲ್ಲಿ ಜನಿಸಿದರು ಇವರು ಸ್ವಭಾವತ ಶಾಂತಗುಣದವರಾಗಿದ್ದು ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಜನಸೇವೆಯನ್ನು ಮಾಡುತ್ತಾ ಬಂದಂತಹ ರಾಜಕೀಯ ಮುತ್ಸಧ್ಧಿಗಳು. 1942 ರಲ್ಲಿ ನಡೆದಂತಹ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವತಂತ್ರ್ಯ ಹೋರಾಟಗಾರರೆನಿಸಿದ್ದಾರೆ.

ಇವರು ಕರ್ನಾಟಕ ಏಕೀಕರಣ ಸಮಯದಲ್ಲಿಯೂ ಕೂಡಾ ಹೋರಾಟ ಮನೋಭಾವನೆಯಿಂದ ಕನ್ನಡ ನಾಡನ್ನು ಕಟ್ಟಲು ಪ್ರಯತ್ನಿಸಿದವರಾಗಿದ್ದಾರೆ. ಇವರು ಹುಬ್ಬಳ್ಳಿ ಗ್ರಾಮೀಣ ಪ್ರದೇಶದಿಂದ ಶಾಸಕರಾಗಿ, 1972-78 ರಂದು ಎಂ.ಎಲ್.ಸಿ ಆಗಿ ಭಾರತೀಯ ಪ್ರಗತಿಪರ ಜನತಾದಳದ ಅಧ್ಯಕ್ಷರಾಗಿ, ಕೇಂದ್ರದ ಮಂತ್ರಿಯಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಹೆಚ್.ಡಿ.ದೇವೆಗೌಡರು ಪ್ರಧಾನ ಮಂತ್ರಿಯಾದಾಗ ಕ್ಯಾಬಿನೇಟ್ ದರ್ಜೆಯ ಮಂತ್ರಿಯಾಗಿ ಜನಪರ ಕಾರ್ಯವನ್ನು ನಿರ್ವಹಿಸಿದವರಾಗಿದ್ದಾರೆ. 
13 ಅಗಸ್ಟ 1988 ರಿಂದ 21 ಏಪ್ರೀಲ್ 1989ರ ವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಜಿಲ್ಲೆಯ ಮುಖ್ಯಮಂತ್ರಿಗಳು ಎನ್ನುವ ಅಭಿಮಾನದ ವ್ಯಕ್ತಿಗಳಾಗಿದ್ದಾರೆ. 

ಇವರ ನಿವಾಸವು ಜನರಿಂದ ಯಾವಾಗಲೂ ತುಂಬಿಕೊಂಡಿರುತ್ತಿತ್ತು ಕಾರಣ ಅವರು ಜನರ ಬಗ್ಗೆ ವಹಿಸಿದ ಕಾಳಜಿಯನ್ನಬಹುದು. ಹೀಗೆ ಇವರು ತಮ್ಮ ಜನಪರಕಾರ್ಯಗಳಿಂದ ಮತ್ತು ಅಭಿಮಾನಿಗಳಿಂದ 2007 ಅಕ್ಟೋಬರ 10 ರಂದು ದೂರ ನಡೆದರು.

16. ಸಿದ್ದಪ್ಪ ಚನ್ನಬಸಪ್ಪ ಸಿಂಧೂರ
ಹಾನುಗಲ್ ತಾಲೂಕಿನ ಸುರಳೇಶ್ವರ ಗ್ರಾಮದ ಸಾಹುಕಾರರೆಂದು ಪ್ರಸಿದ್ಧರಾದ ಚನ್ನಬಸಪ್ಪ ಸಿಂಧೂರ ಮತ್ತು ಸಂಗಮ್ಮ ಧರ್ಮಪತ್ನಿಯವರಿಗೆ ಜನಿಸಿದ ಪುತ್ರನೇ ಸಿಂಧೂರಸಿದ್ದಪ್ಪ. ಇವರು ಜನಿಸಿದ್ದು ತಮ್ಮ ಅಜ್ಜನ ಊರಾದಂತಹ (ಅಮ್ಮನ ಊರು) ಶೇಷಗಿರಿಯ ದೊಡ್ಡ ಮಲ್ಲಪ್ಪ ಅಪ್ಪಾಜಿಯವರ ಮನೆಯಲ್ಲಿ 1900 ಫೆಬ್ರವರಿ 28 ರಂದು. ಬಾಲ್ಯದಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಂಡು ಪ್ರಾಥಮಿಕ ಶಿಕ್ಷಣವನ್ನು ಶೇಷಗಿರಿಯಲ್ಲಿ, ಅಕ್ಕಿಆಲೂರಿನಲ್ಲಿ ಪಡೆದು. ಬೆಳಗಾವಿಯ ಗಿಲಗಂಚಿ ಅರಟಾಲ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ ಮೆಟ್ರಿಕ್ ಪರೀಕ್ಷೆಯ ನಂತರ ಸುರಳೇಶ್ವರಕ್ಕೆ ಮರಳಿಬಂದು ಸಾರ್ವಜನಿಕ ಜೀವನಕ್ಕೆ ದುಮಿಕಿದರು. ಇವರಿಗೆ ಸಹಾಯಕ ಕೆಲಸದವರಾಗಿ ಧರ್ಮಪತ್ನಿ ಗಂಗಮ್ಮ ಜೊತೆಗಿದ್ದರು. ಇವರು ಕೃಷಿಕುಟುಂಬದ ಹಿನ್ನೆಲೆ ಹೊಂದಿದ್ದರಿಂದ ಆಗಲೇ ಆಧುನಿಕ ಕೃಷಿವಿಧಾನಗಳನ್ನು ಬಳಸಿ ಇತರರಿಗೆ ಮಾದರಿಯಾಗಿದ್ದರು.1927-35 ರಲ್ಲಿ ಅಂದಿನ ಲೋಕಲ್ ಬೋರ್ಡ ಸದಸ್ಯರಾಗಿ ಗ್ರಾಮೀಣಪರ ಕಾರ್ಯಗಳನ್ನು ಮಾಡಿದರು. 1934 ರಲ್ಲಿ ಮಹಾತ್ಮ ಗಾಂಧೀಜಿಯವರನ್ನು ಅಕ್ಕಿಆಲೂರಿಗೆ ಬರಮಾಡಿಕೊಂಡು ಅವರಿಗೆ ಸಾರ್ವಜನಿಕ ಪರವಾಗಿ ಭಿನ್ನವತ್ತಳೆ ಅರ್ಪಿಸಿದರು, ಮುಂದೆ ಹರಿಜನರ ಉದ್ಧಾರಕ್ಕಾಗಿ ಶ್ರಮಿಸಿದರು ಮತ್ತು ವಿವಾಹ ಸಮಾರಂಭಗಳಲ್ಲಿ ಇತರರು ಪಾಲ್ಗೊಳ್ಳುವಂತೆ ಪ್ರೇರೆಪಿಸಿದರು. ಗುದ್ಲೇಪ್ಪ ಹಳ್ಳಿಕೇರಿ,ಸರ್ದಾರ ಈರನಗೌಡ ಪಾಟೀಲ, ಹೊಸಮನಿ ಸಿದ್ದಪ್ಪ, ಟಿ.ಆರ್.ನೇಸ್ವಿ, ಮೈಲಾರ ಮಹಾದೇವಪ್ಪ, ಸಂಗೂರು ಕರಿಯಪ್ಪ, ಆರ್.ಆರ್.ದಿವಾಕರ ಮುಂತಾದ ದಿಗ್ಗಜರ ಪ್ರಭಾವದಿಂದ ಭಾರತದ ಸ್ವತಂತ್ರ ಹೋರಾಟದಲ್ಲಿ ದುಮುಕಿದರು. ಇವರು ಸ್ವಾತಂತ್ರ ಹೋರಾಟಗಾರರಿಗೆ ತನು,ಮನ,ಧನದಿಂದ ಸಹಾಯ ಮಾಡಿದ್ದಲ್ಲದೇ ವಿದೇಶ ವಸ್ತುಗಳ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಪಾನನಿರೋಧ, ಕರನಿರಾಕರಣೆ, ಅಸ್ಪøಷ್ಯತಾ ನಿವಾರಣೆ ಮುಂತಾದ ಹತ್ತು ಹಲವು ಸಾಮಾಜಿಕ ರಾಜಕೀಯ ಹೋರಾಟಗಳಲ್ಲಿ ತೊಡಗಿಸಿಕೊಂಡು 1941 ರಲ್ಲಿ ಬಂಧಿಗಳಾಗಿ ಆರು ತಿಂಗಳ ಕಾಲ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಪುನಃ 1942 ರ ಚಲೆಜಾವ್ ಚಳುವಳಿಯಲ್ಲಿ ಬಂಧಿಸಲ್ಪಟ್ಟರು. 1952 ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಹಾನಗಲ್ ತಾಲೂಕಿನಿಂದ ಜಯಗಳಿಸಿ ಪ್ರಥಮ ಶಾಸಕರಾಗಿ ಮುಂಬೈ ವಿಧಾನ ಸಭೆಯನ್ನು ಪ್ರವೇಶಿಸಿದರು. ಇವರು ಯಮಗಳ್ಳಿ ನೀರಾವರಿ ಯೋಜನೆಯನ್ನು ಸಾಕಾರಗೊಳಿಸಿದರು. ಅನೇಕ ಹಳ್ಳಿಗಳಲ್ಲಿ ಸಾರ್ವಜನಿಕ ಶ್ರಮದಾನದಿಂದ ರಸ್ತೆ ನಿರ್ಮಾಣವನ್ನು ಮಾಡಿದರು. ಸಿದ್ದಪ್ಪನವರು ಕೆ.ಸಿ.ಸಿ. ಬ್ಯಾಂಕ ಡೈರಕ್ಟರಾಗಿ ಅದರ ಶಾಖೆ ಅಕ್ಕಿ ಆಲೂರಿನಲ್ಲಿ ಪ್ರಾರಂಭವಾಗುವಂತೆ ಶ್ರಮಿಸಿದರು. ಇವರ ಸತತ ಹೋರಾಟದ ಫಲವಾಗಿ 1950 ರಲ್ಲಿ ಹಾನುಗಲ್ ತಾಲೂಕಿಗೆ ವಿದ್ಯುತಶಕ್ತಿ ಸೌಲಭ್ಯ ತೊರಕಿತು. ಈ ಭಾಗದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಶ್ರಮವಹಿಸಿ ದುಡಿದರು. 1950 ರಲ್ಲಿ ಸಿಂಧೂರ ಸಿದ್ದಪ್ಪನವರು, ಗುರುರಾವ್ ದೇಸಾಯಿ ಹಾಗೂ ಕಲ್ಲಾಪುರ ಇವರ ಜೊತೆಗೂಡಿ ಹಾನಗಲ್ ತಾಲ್ಲೂಕು ಶಿಕ್ಷಣ ಸಂಘವನ್ನು ಪ್ರಾರಂಭ ಮಾಡಿ 1966 ರಲ್ಲಿ ಅಕ್ಕಿಆಲೂರಿನಲ್ಲಿ ಪ್ರತ್ಯೇಕವಾಗಿ ಹೆಣ್ಣುಮಕ್ಕಳ ಪ್ರೌಢ ಶಾಲೆಯನ್ನು ಪ್ರಾರಂಭಿಸಿದರು. 1950 ರಲ್ಲಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ನೀಡುವ ಉದ್ಧೇಶದಿಂದ ಇತರರ ಸಹಕಾರದೊಂದಿಗೆ ಶ್ರೀ ಚನ್ನವೀರೇಶ್ವರ ಪ್ರಸಾದ ನಿಲಯ ಎಂಬ ಪಬ್ಲಿಕ್ ಟ್ರಸ್ಟನ್ನು ಆರಂಭಿಸಿದರು.ಇವರು 82 ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಸ್ವತಂತ್ರ್ಯ ಹೋರಾಟದಲ್ಲಿ ದುಮುಕಿ ಪ್ರಥಮ ದರ್ಜೆಯ ಮುತ್ಸದ್ಧಿಯಾಗಿ ಹೋರಹೊಮ್ಮಿದರು.

17. ಚಂದ್ರಶೇಖರ ಪಾಟೀಲ (ಚಂಪಾ)ಪಾಟೀಲರವರು ಹಾವೇರಿ ತಾಲೂಕಿನ ಹತ್ತಿಮತ್ತೂರಿನಲ್ಲಿ 1939ರಲ್ಲಿ ಜನಿಸಿದರು. ಇವರು ಇಂಗ್ಲೀಷ ವಿಷಯದಲ್ಲಿ ಹೆಚ್ಚಿನ ಪಾಂಡಿತ್ಯವನ್ನು ಹೊಂದಿದ್ದರು. ತಮ್ಮ ವೃತ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿ ಪ್ರಾರಂಭಿಸಿದರು.

 ರಾಮಮನೋಹರ ಲೂಹಿಯಾ ಹಾಗೂ ಜಯಪ್ರಕಾಶ ನಾರಾಯಣರವರ ಚಳುವಳಿಯಿಂದ ಪ್ರೇರಣೆಗೊಂಡು ತಾವೂ ಕೂಡ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. 

ಇವರು “ಸಂಕ್ರಮಣ” ಪತ್ರಿಕೆಯ ಸಂಪಾದಕರಾಗಿದ್ದರು.
“ಬಾನುಲಿ” ಇವರ ಮೊದಲನೆಯ ಕವನಸಂಕಲನ, ಮಧ್ಯಬಿಂದು, ಓ ನನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು, ಅರ್ಧಸತ್ಯದ ಹುಡುಗಿ ಹಾಗೂ ಶಾಲ್ಮಲಾ ಇವುಗಳು ಕವನಸಂಕಲನಗಳು. ಟಿಂಗರಬುಡ್ಡಣ್ಣ, ಕುಂಟಕುಂಟ ಕುರುವತ್ತಿ, ಜಗದಂಬೆ ಇವುಗಳು ಬೀದಿ ನಾಟಕಗಳು. ಬರಡಿಬಾಬಾನ ಲಕ್ಷಪರಹರಣ ನಾಟಕ ವಿಶೇಷವಾದುದ್ದು, ನೆಲ್ಸನ್ ಮಂಡೇಲಾ, ಬಂಡಾಯ ಮತ್ತು ಸಾಹಿತ್ಯ, ಗಾಂಧಿ ಗಾಂಧಿ ಗಾಂಧಿ, ಪ್ರಗತಿಶೀಲ ದಲಿತ ಬಂಡಾಯ, ಕನ್ನಡ ಗುಡಿಗೊಂದೆ ಪ್ರಾದೇಶಿಕ ಪಕ್ಷ, 26ರ ದಿನ 25 ರ ರಾತ್ರಿ ಇವು ವಿಶೇಷ ಗ್ರಂಥಗಳಾಗಿವೆ. “ಅಪ್ಪನ ಕೊಡುಗೆಗಳು” ಇದಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

18. ಜಿ.ಎನ್.ದೇಸಾಯಿ
ಹಾನಗಲ್ ತಾಲ್ಲೂಕಿನ ಪಿತಾಮಹಾನೆಂದೆ ಹೆಸರುವಾಸಿಯಾದ ಜಿ.ಎನ್.ದೇಸಾಯಿಯವರು ಶ್ರೀಮಂತ ಮನೆತನದಲ್ಲಿ ಜನಿಸಿದರು. ತಂದೆ ನರಸಿಂಗರಾವ್ ತಾಯಿ ತುಂಗಾಬಾಯಿ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಸಿಂಧೂರ ಸಿದ್ದಪ್ಪನವರೊಂದಿಗೆ ಸೇರಿ ಹೋರಾಟಮಾಡಿದರು. 1962 ರಲ್ಲಿ ಶಾಸಕರಾದರು. ಇವರು ತಮ್ಮ ಜನಪರ ಕಾರ್ಯಗಳಿಂದ 2 ಬಾರಿ ಶಾಸಕರಾದರು. ಇವರು ಧಾರ್ಮಿಕ ಕ್ಷೇತ್ರಕ್ಕೆ ಹಾಗೂ ದೇವಾಲಯಗಳಿಗೆ ದಾನದತ್ತಿಗಳನ್ನು ಕೊಡುವುದರಲ್ಲಿ ಅಗ್ರಗಣ್ಯರು ಇದಕ್ಕೆ ಉದಾಹರಣೆ ಎನ್ನುವಂತೆ ತಮ್ಮ 10 ಎಕರೆ ಜಮೀನನ್ನು ಮಾರಿ ಅಕ್ಕಿಆಲೂರಿನ ವಿದ್ಯಾಸಂಸ್ಥೆಯ ಕಾಲೇಜು ಕಟ್ಟಡಕ್ಕೆ ಸಹಾಯ ಮಾಡಿದರು. ಧರ್ಮಾಜಲಾಶಯದ ನಿರ್ಮಾಣ ಇವರ ಮಹತ್ವದ ಕಾರ್ಯಗಳಲ್ಲೊಂದಾಗಿದೆ.

19. ನಿಜಶರಣ ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯನವರು ಮಧ್ಯ ಕರ್ನಾಟಕವೆನಿಸಿದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ (ಶಿವಪುರ-ಶಿವಾಲಯ ಇರುವದರಿಂದ) ಜನಿಸಿದರು. ಇವರ ತಂದೆ ವಿರುಪಾಕ್ಷಪ್ಪ ಮತ್ತು ತಾಯಿ ಪಂಪಾದೇವಿ. ಈ ಪತಿ-ಪತ್ನಿ ಜೊಡಿಗೆ ಮಕ್ಕಳಿಲ್ಲದ ಕಾರಣ ಇವರು ಉದ್ದಾಲಕ ಗುರುಗಳನ್ನು ಬೇಟಿಯಾದಾಗ ಅವರು ಸವಿವರವಾಗಿ ಶ್ರೀ ಗಂಗಾದೇವಿಯ ಮಹಿಮೆಯನ್ನು ಹೇಳಿ, ದೇವಿಯ ವೃತವನ್ನು ಮಾಡಲು ಹೇಳುತ್ತಾರೆ. ಅವರ ಅಪ್ಪಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಕಾರಹುಣ್ಣಿಮೆಯ ದಿವಸ ಚೌಡೇಶನ (ಚೌಡಯ್ಯದಾನಪುರದ ೧೩ ನೇ ಶತಮಾನದಲ್ಲಿಯ ಶಾಸನದಲ್ಲಿಯ’ ಮಣಂಬೆ ಅಥವಾ ವಣಂಬೆನಾಯಕ ಹಾಗೂ ರಾಣೇಬೆನ್ನೂರು ತಾಲೂಕಿನ ಕೆರೆಮಲ್ಲಾಪುರದ ಶಾಸನದಲ್ಲಿಯ ‘ಶರಣ ಚೌಡಯ್ಯ’ ಎಂಬುವ ಆಧಾರಗಳು ಅಂಬಿಗರ ಚೌಡಯ್ಯನಿಗೆ ಸಂಬಂಧಿಸಿದವು) ಜನನವಾಯಿತು. ತುಂಗಭದ್ರೆಯ ನದಿ ತೀರದಲ್ಲಿ ಬೆಳೆದು ಮುಂದೆ ಉದ್ದಾಲಕ ಗುರುಗಳ ಆಶ್ರಮದಲ್ಲಿ ಬೆಳೆದು ವೇದಾಂತ ಉಪನಿಷÀತ್ತುಗಳು ಹಾಗೂ ಯೋಗಾಸನಗಳಲ್ಲಿ ಅತೀ ಪ್ರವೀಣನೆನಿಸಿದನು.

ತಂದೆ ವಿರುಪಾಕ್ಷನು ಸಮರ್ಥ ವಿದ್ವಾಂಸನು, ನೀತಿವಂತನು, ಗುತ್ತಲ ಅರಸನ ಸಂಸ್ಥಾನದಲ್ಲಿ ಮಾಂಡಲಿಕ ಅರಸನಾಗಿದ್ದಲ್ಲದೇ, ಶ್ರೀಮಂತನು, ಊರಲ್ಲಿ ಹಿರಿಯನು ಮತ್ತು ಆದರ್ಶ ವ್ಯಕ್ತಿಯು ಆಗಿದ್ದನು. ಈ ದಂಪತಿಗಳಿಗೆ ಮಗನದೆ ಚಿಂತೆಯಾಗಿತ್ತು. ಕಾರಣವೇನೆಂದರೆ ಈತನಲ್ಲಿ ಮದುವೆ ಆಗುವ ಲಕ್ಷಣಗಳೇ ಕಾಣಿಸುತ್ತಿರಲಿಲ್ಲ. ಹೀಗಾಗಿ ಈ ಪ್ರಸ್ತಾಪವನ್ನು ಉದ್ದಾಲಕರ ಮುಂದೆ ಇಟ್ಟಾಗ ಹಿರಿಯರ ಮತ್ತು ಗುರುಗಳ ಮಾತನ್ನು ಮನ್ನಿಸಿ, ಸೋದರತ್ತೆಯ (ವಿರಪಾಕ್ಷಪ್ಪನ ತಂಗಿ ವೀರಮ್ಮ) ಮಗಳಾದ ಸುಲೋಚನೆಯನ್ನು ಶಿವಪುರದ ಉದ್ದಾಲಕ ಗುರುಗಳ ಆಶ್ರಮದಲ್ಲಿ ಮದುವೆಯಾದರು. ಸುಲೋಚನೆಯು ಸದಾ ನಗುಮುಖದ ಲಕ್ಷ್ಮೀಯಂತೆ ಗಂಡನಿಗೆ ಸಲಹೆ ಕೊಡುವಲ್ಲಿ ಮಂತ್ರಿಯಂತೆ, ಸದಾ ಕೆಲಸ ಮಾಡುವಲ್ಲಿ ದಾಸಿಯಂತೆ, ಗಂಡನನ್ನು ಪ್ರೀತಿಸುವಲ್ಲಿ ರಂಭೆಯಂತೆ, ಊಟ ಮಾಡಿಸುವಲ್ಲಿ ತಾಯಿಯಂತೆ, ಕ್ಷಮಿಸುವಲ್ಲಿ ಭೂಮಿಯಂತೆ ಸ್ವಭಾವದವಳಾದ ಆರುಗುಣದ ಈ ನಾರಿಯು ಅತ್ತೆ- ಮಾವನ ಜೊತೆ ಪ್ರೀತಿಯಿಂದ ಇದ್ದಳು. ಇಂತಹ ತುಂಬು ಸಂಸಾರದಲ್ಲಿ ಚೌಡೇಶನಿಗೆ ಹೆಚ್ಚಿನ ಜ್ಞಾನವನ್ನು ಪಡೆಯಬೇಕು ಮತ್ತು ಬಸವಕಲ್ಯಾಣಕ್ಕೆ ಹೋಗಿ ಶರಣರ ಸತ್ಸಂಗದಲ್ಲಿ ಕಾಲಕಳೆಯಬೇಕೆಂಬ ಆಶೆಯಿಂದ ಲೌಖಿಕ ಜೀವನದ ಕಡೆಗೆ ಆಸೆ ಕಡಿಮೆಯಾಗುತ್ತದೆ. 

ಇದನ್ನರಿತ ಉದ್ಧಾಲಕ ಗುರುಗಳು ಶಿವಪುರದ ಗ್ರಾಮದ ಜನಗಳನ್ನು ಒಳಗೊಂಡು, ತಂದೆ ತಾಯಿಯ ಆಶೀರ್ವಾದದೊಂದಿಗೆ ಚೌಡೇಶನನ್ನು ಮತ್ತು ಸುಲೋಚನೆಯನ್ನು ಬೀಳ್ಕೊಡುತ್ತಾರೆ. ಹೀಗೆ ಸತ್ಸಂಗ, ಭಜನೆ, ಮಹಿಮೆ ಮತ್ತು ತಾತ್ವಿಕ ಮಾತುಗಳನ್ನು ಹೇಳುತ್ತಾ ಹಾವೇರಿ, ಗದಗ ಹಾಗೂ ಗುಲ್ಬರ್ಗಾ ಮುಖಾಂತರ ಪಾದಯಾತ್ರಯೊಂದಿಗೆ ಬೀದರಿನ ಬಸವಕಲ್ಯಾಣವನ್ನು ತಲುಪುತ್ತಾರೆ. ೧೨ ನೇ ಶತಮಾನದಲ್ಲಿ ಶರಣರ ಸ್ವಾಗತಕ್ಕಾಗಿ ಸಿದ್ಧವಾದ ಓಣಿಯೇ ಬಾಂಧವರ ಓಣಿ ಕಲ್ಯಾಣದ ಕೀರ್ತಿ ಕೇಳಿ ಬಂಧವರಿಗೆ ಸ್ವಾಗತ ಇಲ್ಲಿ ಸಿಗುತ್ತಿತ್ತು. ಇಲ್ಲಿ ಕಿನ್ನರಿ ಬೊಮ್ಮಯ್ಯನು ಇವರ ಪರಿಚಯವನ್ನು ಮಾಡಿಕೊಂಡು ಆಗಮಿಸಿದ ಉದ್ದೇಶವನ್ನು ಅರಿತುಕೊಂಡು ಶಿವಾನುಭವ ಮಂಟಪಕ್ಕೆ ಕರೆದುಕೊಂಡು ಹೋದಾಗ ಎಲ್ಲರಿಗೂ ಕಾಣಲೆಂದು ಎತ್ತರಕ್ಕೆ ಮಾಡಿದ ಸ್ಥಾನದಲ್ಲಿ ಅಧ್ಯಕ್ಷರಾದ ಪ್ರಭುದೇವರನ್ನು ಮತ್ತು ಸುತ್ತಲಿನ ಶಿವಶರಣರನ್ನು ಕಂಡು ಪುಲಕಿತಗೊಂಡರು ಮುಂದೆ ಬಸವಣ್ಣರಿಂದ ನಿಜಶರಣ ಎಂಬ ಬಿರುದನ್ನು ಪಡೆದುಕೊಂಡು ಡೋಹಾರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಅಕ್ಕ ನಾಗಮ್ಮ, ಬಸವಣ್ಣರ ಮೆಚ್ಚುಗೆಗೆ ಪಾತ್ರನಾದ. ಸಾಮಾಜಿಕ ಧೋರಣೆಗಳನ್ನು ಸೂಕ್ಷö್ಮವಾಗಿ ತಿಳಿದುಕೊಂಡು ಮಠಾಧೀಶರನ್ನು, ಶ್ರೀಮಂತವರ್ಗದವರನ್ನು ಹಾಗೂ ಪುರೋಹಿತ, ಪೂಜಾರಿಗಳನ್ನು, ಧರ್ಮಲಂಡರನ್ನು, ಢಾಂಬಿಕ ವೈಧಿಕರನ್ನು ದಾರಿಗೆ ತರುವ ಸಲುವಾಗಿ ತನ್ನ ವಚನದಲ್ಲಿ ಕಠೋರ ಭಾಷೆಯನ್ನು ಬಳಸಿದರು. ಅಂಬಿಗರ ಚೌಡಯ್ಯನವರು ವಚನಸಾಹಿತ್ಯದ ರಕ್ಷಣೆಗಾಗಿ ಮತ್ತು ವಚನಸಾಹಿತ್ಯವನ್ನು ಕೂಸಿನಂತೆ ಬೆನ್ನಿಗೆ ಕಟ್ಟಿಕೊಂಡು ಖಡ್ಗವನ್ನು ಹಿಡಿದುಕೊಂಡು ಹೋರಾಡಿದರು. ಕಲ್ಯಾಣಕ್ರಾಂತಿಯಾದಾಗ ಎಲ್ಲಾ ಶಿವಶರಣರು ದಿಕ್ಕುದಿಕ್ಕಿಗೆ ಚದುರಿದರು, ಆಗ ಇವರು ಪುನಃ ಶಿವಪುರಕ್ಕೆ ಬಂದು ತಮ್ಮ ಮೂಲ ಕುಲಕಸಬನ್ನು ಮಾಡುತ್ತಾ ತಮ್ಮ ನಾವಿಗೆ ಹುಟ್ಟು ಹಾಕುವುದರೊಂದಿಗೆ ನಿಜಶರಣರನ್ನು ಹಾಗೂ ಅವರವರ ಮನವನ್ನು ತಿಳಿದು ಉಪದೇಶವನ್ನು ಮಾಡುತ್ತಿದ್ದರು. ಅಂಬಿಗರ ಚೌಡಯ್ಯನವರು ಸುಮಾರು ೧೦ ಸಾವಿರಕ್ಕಿಂತಲೂ ಹೆಚ್ಚಿನ ವಚನಗಳನ್ನು ರಚಿಸಿದವರಾಗಿದ್ದಾರೆ. ಆದರೆ ಈ ವಚನಗಳು ಮೇಲ್ವರ್ಗದವರಿಗೆ ಹಾವುಗಳಾಗಿ ಕಾಣುತ್ತಿದ್ದರಿಂದ ಇವುಗಳಲ್ಲಿ ಕೆಲವನ್ನು ಹಾಳುಮಾಡಿರಲು ಸಾಧ್ಯತೆಯಿದೆ. ಚೌಡಯ್ಯನವರು ಮಹಾತ್ಮರಂತೆ ಅನೇಕ ಪವಾಡಗಳನ್ನು ಮಾಡಿದ್ದಾರೆ. ಇವರಿಗೆ ಗುತ್ತಲದ ಅರಸರು ಅನ್ನದಾನ ವಿದ್ಯಾದಾನ ಮಾಡಲು ಶಿವಪುರಕ್ಕೆ ಹೊಂದಿಕೊಂಡ ಭೂಮಿಯನ್ನು ಕಾಣಿಕೆಯಾಗಿ ನೀಡಿದರು ಮುಂದೆ ಈ ಭೂಮಿಯನ್ನು ಅವರ ಶಿಷ್ಯ ಶಿವದೇವನಿಗೆ ಧರ್ಮ ಪ್ರಚಾರ ಮಾಡಲು ಕೊಡುವದರಿಂದ ಚೌಡಯ್ಯದಾನಪುರವೆಂದು ಹೆಸರು ಬಂತು. ತುಂಗಭದ್ರ್ರಾಗನದಿಯ ದಡದಲ್ಲಿ ಸದ್ಭಕ್ತರಿಂದ ನಿರ್ಮಾಣವಾದ ಗವಿಯಲ್ಲಿ ಜೀವಂತ ಸಮಾಧಿಯನ್ನು ಬಯಸಿ ಪದ್ಮಾಸನ ಹಾಕಿ ಕಿಕ್ಕಿರಿದು ಸೇರಿರುವ ಭಕ್ತ ಸಮೂಹದಲ್ಲಿ ತಮ್ಮ ಆತ್ಮವನ್ನು ದೇಹದಿಂದ ಬಿಚ್ಚಿಡುತ್ತಾರೆ. ಇವರ ಗದ್ದುಗೆಯನ್ನು ಚೌಡಯ್ಯದಾನಪುರದ ತುಂಗಭದ್ರ ನದಿಯ ದಡದಲ್ಲಿ ಇಂದಿಗೂ ನೋಡಬಹುದು

20. ಸುಧಾಮೂರ್ತಿ
ಇವರು 19 ಅಗಸ್ಟ 1950 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದರು. ಇವರ ತಂದೆಯವರು ಪ್ರಖ್ಯಾತ ವೈದ್ಯರಾದಂತಹ ಡಾ.ಆರ್.ಹೆಚ್ ಕುಲಕರ್ಣಿಯವರು. ಸುಧಾಮೂರ್ತಿಯವರು ತಮ್ಮ ಅಜ್ಜಂದಿರ (ತಾಯಿಯ ತಂದೆ) ಮನೆಯಲ್ಲಿ ಬೆಳೆದರು. ಇವರು ಇಂಜಿನೀಯರಿಂಗ್ ವಿದ್ಯಾಭ್ಯಾಸವನ್ನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಬಿ.ವಿ.ಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹುಬ್ಬಳ್ಳಿಯಿಂದ ಪಾಸಾಗಿ ಬಂಗಾರದ ಪದಕವನ್ನು ಪಡೆದುಕೊಂಡರು (ಕರ್ನಾಟಕ ಮುಖ್ಯಮಂತ್ರಿಗಳಿಂದ). ಮುಂದೆ 1974ರಲ್ಲಿ ಇಂಡಿಯನ್ ಇನ್‍ಸ್ಪೊಟ್ ಅಫ್ ಸೈನ್ಸನಿಂದ ಸ್ನಾತಕೋತ್ತರ ಪದವಿಯನ್ನು (ಎಂ.ಇ) ಪಡೆದುಕೊಂಡರು. ಇವರು ಟೆಲ್ಕೊ ಕಂಪನಿಯಲ್ಲಿ ಪ್ರಥಮ ಮಹಿಳೆಯಾಗಿ ಸೇವೆಯನ್ನು ಸಲ್ಲಿಸಿದರು. ಇವರು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಬ್ಯಾಸ ಮಾಡಿದ್ದರೂ ಕೂಡ ಸಾಹಿತ್ಯದ ಅಭಿರುಚಿ ಅವರನ್ನು ಬಿಟ್ಟು ಸರಿಯಲಿಲ್ಲ. “ಮಹಾಶ್ವೇತ” ಕಾದಂಬರಿಯಲ್ಲಿ ಜೀವನ ಹೋರಾಟ ಮತ್ತು ಅನ್ಯಾಯದ ವಿರುದ್ಧ ಹೋರಾಡಿ ಬದುಕುವ ಕುರಿತು ಬರೆದಿದ್ದಾರೆ, “ಋಣ” ಕಾದಂಬರಿಯಲ್ಲಿ ರಾಷ್ಟ್ರೀಯತೆಯನ್ನು ಮೆರೆದಿದ್ದಾರೆ. “ಡಾಲರ್‍ಸೊಸೆ”ಯಲ್ಲಿ ಭಾರತೀಯರು ಅಮೇರಿಕಾದ ಡಾಲರಗೆ ಮಾರು ಹೋಗುವುದನ್ನು ಅತ್ಯಾಕರ್ಷಕವಾಗಿ ಬಿಂಬಿಸಿದ್ದಾರೆ, ಮೆನ್ ಅಂಡ್ ಹಿಜ್ ಗಾಡ್, ಎ ವೆಡ್ಡಿಂಗ್ ಇನ್ ರಷ್ಯಾ ಎಂಬ ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ.

ಇವರ ಪತಿ ಎನ್.ಆರ್.ನಾರಾಯಣ ಮೂರ್ತಿಯವರಿಗೆ 10 ಸಾವಿರ ರೂಪಾಯಿಗಳನ್ನು ಕೊಟ್ಟು ಇನ್ಫೋಸಿಸ್ ಟೆಕ್ನಾಲಾಜಿಯನ್ನು ನಿರ್ಮಿಸಲು ಸಹಾಯಮಾಡಿ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಈಗ 30 ಸಾವಿರ ಕೋಟಿ ರೂಪಾಯಿಗಳ ವಹಿವಾಟವನ್ನು ಹೆÉೂಂದಿದ್ದು, ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಇವರು ಅನೇಕ ಗ್ರಂಥಾಲಯಗಳಿಗೆ ಉದಾರ ದಾನವನ್ನು ನೀಡಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ.

 ಸುಧಾಮೂರ್ತಿಯವರಲ್ಲಿ ಸಾಕಷ್ಟು ಹಣವಿದ್ದರೂ ಕೂಡ ನಮ್ಮ ದೇಶದ ಸಂಸ್ಕøತಿಯನ್ನು ಎಂದೂ ಮರೆಯಲಿಲ್ಲ ಮತ್ತು ಈ ದೇಶದ ಸೇವೆಗೆ ಪಣತೊಟ್ಟು ವಿದೇಶದಲ್ಲಿ ನೆಲೆಸಿಕೊಳ್ಳದೇ ನಮ್ಮ ಭಾರತದಲ್ಲಿಯೇ ಇದ್ದವರಾಗಿದ್ದಾರೆ. ಇವರ “ಡಾಲರ್‍ಬಹು” ಎನ್ನುವ ಕಾದಂಬರಿಯು ಧಾರಾವಾಹಿಯಾಗಿ ಮೂಡಿಬಂದಿತ್ತು. ಸಾಹಿತ್ಯದ ಈ ಅಪಾರ ಕೊಡುಗೆಗೆ ರಾಜಲಕ್ಷ್ಮೀ ಪ್ರಶಸ್ತಿ, ಭಾರತ ಸರ್ಕಾರದ ಶ್ರೇಷ್ಠ ಪ್ರಶಸ್ತಿಯಾದಂತಹ ಪದ್ಮಶ್ರೀ ಪ್ರಶಸ್ತಿ ಮತ್ತು 2011 ರಲ್ಲಿ ಸಂತೋಷ ಹೆಗಡೆಯವರು ಎಲ್.ಎಲ್.ಡಿ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದರು. 

21. ಈಶ್ವರನ್ ಹೀರೆಮಲ್ಲೂರ
ಇವರು 1 ನವೆಂಬರ್ 1922 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿಗೆ ಸೇರಿದ ಹೀರೆಮಲ್ಲೂರ ಗ್ರಾಮದಲ್ಲಿ ಚನ್ನಪ್ಪ ಮಾಸ್ತರ ಮತ್ತು ಬಸಮ್ಮ ದಂಪತಿಗಳ ಮಗನಾಗಿ ಜನಿಸಿದರು. 

ಇವರು ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೆ ಮುಗಿಸಿ, ಕುಂದಗೋಳದಲ್ಲಿನ ಹರಿಭಟ್ಟರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ, ಬೆಳಗಾವಿ ಲಿಂಗರಾಜು ಕಾಲೇಜಿನಿಂದ ಪದವಿಯನ್ನು ಪಡೆದುಕೊಂಡರು. ಇವರ ಹರಿಹರನ ಸಾಹಿತ್ಯಕ್ಕೆ ಪಿ.ಎಚ್.ಡಿ ದೊರೆಯಿತು.
ತಮ್ಮ ಶೈಕ್ಷಣಿಕ ಜೀವನದ ನಂತರ ಏಳು ವರ್ಷ ಕನ್ನಡ ಉಪನ್ಯಾಸಕರಾಗಿ ಬೆಳಗಾವಿಯಲ್ಲಿ ಮತ್ತು ಸೊಲ್ಲಾಪುರದಲ್ಲಿ ಕಾರ್ಯನಿರ್ವಹಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಸಾಹಿತ್ಯ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪಡೆದು ಸ್ವಲ್ಪ ವರ್ಷ ಕೆನಡಾದಲ್ಲಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆಯನ್ನು ಸಲ್ಲಿಸಿದರು.
 
ಇವರು ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ (ಸುಮಾರು 60) ಇವುಗಳಲ್ಲಿ ಪ್ರಮುಖವಾದವು “ವಲಸೆಹೋದ ಕನ್ನಡಿಗ, ಶಿವನಬುತ್ತಿ, ರಾಜರಾಣಿ ಡೆಕೊ, ಹಾಳಹಳ, ಸಂಸ್ಕøತಿ ಮತ್ತು ಸಮಾಜ ಎಂಬ ಗ್ರಂಥಗಳನ್ನು ರಚಿಸಿದವರಾಗಿದ್ದಾರೆ. ಬಸವಣ್ಣನವರ ವಚನಗಳನ್ನು ವಿದೇಶಿಯರಿಗೆ ಇಂಗ್ಲೀಷ ಅನುವಾದದ ಮುಖಾಂತರ ಫ.ಗು.ಹಳಕಟ್ಟಿಯವರ ನಂತರ ಪರಿಚಯಿಸಿದವರು ಇವರೇ ಎಂದು ಹೇಳಬಹುದು.

22. ಹೆಳವನಕಟ್ಟೆ ಗಿರಿಯಮ್ಮ.

ಹೆಳವನಕಟ್ಟೆ ಗಿರಿಯಮ್ಮ ದಾಸ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಯತಿಗಳ ಗೃಹಸ್ಥರ ಹೆಸರಿನಂತೆ ಮಾತೆಯರ ಹೆಸರು ಮಹತ್ವ ಪೂರ್ಣವಾಗಿದೆ. ಅನೇಕ ಮಹಿಳಾ ಮಣಿಗಳು ಹರಿಯನ್ನು ಕಂಡು ಮನ ತುಂಬಿ ಸ್ತುತಿಸಿದರು. ಜಗದ ಜನರನ್ನು ತಿದ್ದಿ-ತೀಡಿ ಜನಾರ್ಧನನತ್ತ ಕರದೊಯ್ದರು. ಅವರಲ್ಲಿ ಪ್ರಸಿದ್ಧರೆನಿಸಿದವರಲ್ಲಿ ಒಬ್ಬರಾದವರು ಹೆಳವನಕಟ್ಟೆಯ ಗಿರಿಯಮ್ಮನವರು. 

ರಾಣೇಬೆನ್ನೂರಿನ ಭಿಷ್ಟಪ್ಪನ ಮಗಳಾಗಿ ಸುಮಾರು ೧೭೫೦ರಲ್ಲಿ ಹುಟ್ಟಿದ ( ಈಗಿನ ಶ್ರೀ ಸಂಜೀವ ಶಿರಹಟ್ಟಿಯವರ ಮನೆ) ಗಿರಿಯಮ್ಮನಿಗೆ ದೈವಭಕ್ತಿ ಜನ್ಮಜಾತವಾಗಿತ್ತು. ಸ್ತ್ರೀಧರ್ಮ ಸ್ವಭಾವ ಸಹಜವಾಗಿತ್ತು. ಪರೋಪಕಾರ ಮನೆಮಾಡಿತ್ತು. ವೃದ್ಧಸೇವೆಗುಣ ಅಭಿವೃದ್ಧಿಯಾಗುತ್ತಿತ್ತು. ಗುಣಗಣಗಳ ಗಣಿಯಾದ ಈ ಗಿಣಿಯನ್ನು ಮೆಚ್ಚಿಕೊಳ್ಳದವರಾರು. ಮಲೇಬೆನ್ನೂರಿನ ತಿಪ್ಪರಸ ಗಿರಿಯಮ್ಮಳನ್ನು ವಿವಾಹವಾದ. ವಿವಾಹವಾದರೂ ಗಿರಿಯಮ್ಮ ಸಂಸಾರ ಸುಖ ಬಯಸಲಿಲ್ಲ. ಸಾಧನೆಗಾಗಿ ಸಂಸಾರ, ಕೇವಲ ಸಂತಾನ ಸಂತಸಕ್ಕಲ್ಲ ಎಂಬ ಶಾಸ್ತ್ರ ನಿಯಮಕ್ಕೆ ಆದರ್ಶವಾಗಿತ್ತು. ಇವಳ ಜೀವನ ಗೃಹಕರ್ಮವ ಬೇಸರಿಸಿದೆ ಮಾಡುತ್ತಾ ಇದೇ ಮಹಿತನ ಸೇವೆ ಎನ್ನುತ್ತಿದ್ದಳು.
ಕಟ್ಟೆಯಲ್ಲಿ ಕುಳಿತ ಹೆಳವನಿಗೆ ಒಲಿದ ದೇವ ಹೆಳವನಕಟ್ಟಿ ರಂಗನಾಥ. ಅವನ ಕರುಣೆ ಇವರಲ್ಲಿ ತುಂಬಿತು. ಬಾಲ್ಯದಿಂದ ತುಂಬಿದ ಕಾವ್ಯ ಶಕ್ತಿಗೆ, ಪ್ರತಿಭಾ ಬಲಕ್ಕೆ, ರಂಗನಾಥ ಅಂಕಿತವನ್ನಿತ ‘ಹೆಳವನಕಟ್ಟೆ ರಂಗ’ ಎಂಬ ಅಂಕಿತದೊಂದಿಗೆ ಇವಳಿಂದ ಅನಾಯಾಸವಾಗಿ ಹಾಡುಗಳು ಹೊರಬರುತ್ತಿದ್ದವು.

ಇವಳನ್ನು ನೋಡಿದರೆ ಚಿಂತೆ ಚಿತೆ ಏರುತ್ತಿತ್ತು, ಅಳುವ ಮಗು ನಗುತ್ತಿತ್ತು. ಮಮತೆಯ ಸ್ವರ ಏರಿದ ಜ್ವರವನ್ನು ಇಳಿಸುತ್ತಿತ್ತು, ಮಾತು ಮನಕ್ಕೆ ಹಿತ ನೀಡುತ್ತಿತ್ತು. ಮೊಗದಲ್ಲಿ ನಗು ತುಂಬುತ್ತಿತ್ತು. ಒಂದೊಮ್ಮೆ ಮಲೆಬೆನ್ನೂರಿಗೆ ಗೋಪಾಲದಾಸರ ಆಗಮನವಾಯಿತು. ಭಕ್ತರು ಸೇರಿದರು. ಕೀರ್ತನೆಯಲ್ಲಿ ಒಂದಾದರು ಪೂಜೆಗೆ ಜನ ಸೇರಿತು, ಗಿರಿಯಮ್ಮನು ದಾಸರುನಡೆಸುವ ಪೂಜೆಗೆ ಬಂದಳು. ಭಕ್ತಿಯಿಂದ ಕೈಮುಗಿದಳು. ಮೂರ್ತಿಯಲ್ಲಿ ದೇವ ಪ್ರತ್ಯಕ್ಷನಾದ ಗೋಪಾಲದಾಸರಿಗೂ ದರ್ಶನವಾಗಿ ಆಶ್ವರ್ಯ, ಆನಂದಗಳಾದವು. ಗಿರಿಯಮ್ಮನನ್ನು ಕರೆದರು ಅನೇಕ ಉಪದೇಶ ನೀಡಿದರು. ಪ್ರತೀಕ ಒಂದನ್ನು ನೀಡಿ ಆರಾಧಿಸಲು ಅನುಗ್ರಹಿಸಿದರು.

ಶ್ರೀ ಸುಮತೀಂದ್ರರು ಬಂದಾಗ ಇವಳ ಬಗ್ಗೆ ಕೆಲವು ಕುಹಕಿಗಳು ತಪ್ಪ ಕಲ್ಪನೆ ಹುಟ್ಟಿಸುವ ಪ್ರಯತ್ನ ಮಾಡಿದರು. ಸ್ವತಃ ಶ್ರೀಗಳೇ ಇವಳನ್ನು ಕರೆದು ತೀರ್ಥ ನೀಡಿ ಅವಳ ಪರಿಚಯವನ್ನು ಸರಿಯಾದ ರೀತಿಯಲ್ಲಿ ಜನರಿಗೆ ಮಾಡಿಸಿದರು. ಕಷ್ಟಗಳು, ಅಪವಾದಗಳು ಬಂದಷ್ಟು ಬೆಂಕಿಯಲ್ಲಿ ಹಾಕಿದ ಬಂಗಾರದಂತೆ ಇವಳ ಶುದ್ಧತೆ ಹೆಚ್ಚಿ ಕೀರ್ತಿಯು ಹೆಚ್ಚುತ್ತಿತ್ತು. ಮಳೆ ಬಾರದೆ ನೀರಿನ ಅಹಾಕಾರ ಅತಿಯಾದಾಗ ‘ಮಳೆಯ ದಯ ಮಾಡ ರಂಗ’ ಎಂಬ ಪದ್ಯವನ್ನು ಹಾಡಿದಾಗ ಇಳೆಗೆ ಮಳೆ ಇಳಿದು ಕೊಳೆ ಹೋಗಿ ಕಳೆ ನಳನಳಿಸಿತು.

ಶಾನು ಭೋಗತನ ಮಾಡುತ್ತಿದ್ದ ಮೈದುನ ವೆಂಕಟರಾಯನಿಗೆ ಕುತಂತ್ರಿಗಳ ತಂತ್ರದಿಂದ ಬಂಧನವಾದಾಗ ಸಂಸಾರ ಬಂಧನ ಮೋಚಕನಾದ ಮುಕುಂದನನ್ನು ಪ್ರಾರ್ಥಿಸಿದಳು. ಮೇಲಧಿಕಾರಿಗೆ ದೇವನೇ ಸೂಚನೆಯಿತ್ತ. ಸತ್ಯ ತಿಳಿದ ಅಧಿಕಾರಿ ಗಿರಿಯಮ್ಮನ ಮಹಿಮೆಗೆ ಪ್ರಭಾವಿತನಾಗಿ ಬಂಧನದಿಂದ ಬಿಡಿಸಿ ಇವಳ ದಾಸನಾದ. ಪುಂಗನೂರಿನ ರಾಜಕುಮಾರನಿಗೆ ಕಣ್ಣು ಕಾಣದಾದಾಗ ದೇವನಿಗೆ ಹಚ್ಚಿದ ದೀಪದ ಕಾಡಿಗೆ ಹಚ್ಚಿ ದೃಷ್ಠಿ ಬರುವಂತೆ ಮಾಡಿದಳು.
ರಂಗನಾಥನ ಆಭರಣ ಕಳೆದು ಅರ್ಚಕರಿಗೆ ಅಪವಾದ ಬಂದಾಗ “ಹೊನ್ನು ತಾ ಗುಬ್ಬಿ ಹೊನ್ನು ತಾ' ಎಂಬ ಹಾಡನ್ನು ಭಕ್ತಿಯಿಂದ ಸ್ತುತಿಸುವಾಗ ಹರಿಯೇ ಗುಬ್ಬಿಯಾಗಿ ಬಂದು ನೀಡಿ ಗಿರಿಯಮ್ಮನ ಭಕ್ತಿಯನ್ನು, ಅರ್ಚಕನ ಪ್ರಾಮಾಣಿಕತೆಯನ್ನು, ತನ್ನ ಕಾರುಣ್ಯವನ್ನು ಜಗತ್ತಿಗೆ ತೋರಿದ ಕೃಷ್ಣನೇ ಮಗುವಾಗಿ ಇವಳ ತೊಡೆಯಲ್ಲಿ ಆಡಿ ತಾಯ್ತತನದ ಸುಖವನ್ನು ನೀಡಿದ ಇಂಥ ನೂರಾರು ಮಹಿಮೆಗಳನ್ನು ತೋರಿದ ಈ ತಾಯಿ ಅನೇಕ ಕೀರ್ತನೆಗಳನ್ನು ,ಉಗಾಭೋಗಗಳನ್ನು, ಗಜೇಂದ್ರಮೋಕ್ಷ, ಚಂದ್ರಹಾಸ ಚರಿತೆ, ಸೀತಾಕಲ್ಯಾಣ, ಲವ-ಕುಶ ಕಾಳಗ, ಕೊರವಂಜಿ ಹಾಡು ಮುಂತಾದ ಕೃತಿಗಳನ್ನು ಸಾಧಕ ಜಗತ್ತಿಗೆ ನೀಡಿದ್ದಾಳೆ.

ತನ್ನ ಕಡೆಯ ದಿನಗಳನ್ನು ಹೊನ್ನಾಳಿ ಸಮೀಪಾದ ಕಮ್ಮಾರಗಟ್ಟೆಯಲ್ಲಿ ಕಳೆದಳು. ಅಲ್ಲೊಂದು ಪ್ರಾಣ ದೇವರನ್ನು ಸ್ಥಾಪಿಸಿದಳು. ಶ್ರಾವಣ ಶುದ್ಧ ಪಂಚಮಿಯಂದು ತುಂಗೆಯಲ್ಲಿ ಭೌತಿಕ ದೇಹವನ್ನು ತ್ಯಜಿಸಿ ಇಂದಿಗೂ ಜನ ಮಾನಸದಲ್ಲಿ ನೆಲೆ ನಿಂತವಳು ಗಿರಿಯಮ್ಮ..

23. ಕವಿ ಶಾಂತ ನಿರಂಜನ.
ಇವರು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ನಿವಾಸಿ. ಗುರುಪರಂಪರೆಗೆ ಸೇರಿದ ಇವರ ಗುರುಗಳು ಚಿಕ್ಕೇಶ ಅಥವಾ ಮೂರುಜಾವಿದೇವ. ಇವರು ಅತ್ಯಂತ ಮಹಿಮಾನ್ವಿತ ಹಾಗೂ ಪ್ರಭಾವಶಾಲಿಗಳಾಗಿದ್ದರು. ಈತನ ಕಾಲ ಸುಮಾರು ಕ್ರಿ.ಶ 1650 ಎಂದು ಭಾವಿಸಲಾಗಿದೆ. ಜೈನ ಧರ್ಮ ಪ್ರಭಾವಿಶಾಲಿಯಾದಂತಹ ಆ ದಿನಮಾನಗಳಲ್ಲಿ ವೀರಶೈವಧರ್ಮವನ್ನು ಸಂರಕ್ಷಿಸಲೆಂದೇ ಅಬಲೂರಿಗೆ ಬಂದು ತನ್ನ ಶಿರಶ್ಚೇಧÀನವನ್ನು ಮಾಡಿ ಮತ್ತೆ ಜೋಡಿಸಿಕೊಂಡು ಮಹಾಪುರುಷರಾದಂತಹ ಏಕಾಂತ ರಾಮಯ್ಯನ ಬಗ್ಗೆ ಸಮಗ್ರವಾಗಿ ಒಂದು ಕೃತಿ ರಚಿತವಾಗಿರುವುದು ಹರಿಹರನನ್ನು ಬಿಟ್ಟರೆ ಶಾಂತನಿರಂಜನರಿಂದಲೆ. ಶಾಂತನಿರಂಜನ ಕವಿಯು ವೀರಶೈವ ಕವಿ, ರಚಸಿದಂತಹ ಕೃತಿಯೇ ಅಬಲೂರು ಚರಿತೆ. ಅಬಲೂರು ಚರಿತೆ ಒಂದು ಸಾಂಗತ್ಯ ಕೃತಿ ಇದರಲ್ಲಿ ಆರು ಸಂಧಿಗಳು ಮತ್ತು 522 ಪದ್ಯಗಳು ಇವೆ ಶಾಂತ ನಿರಂಜನರು ಹರಿಹರನ ಏಕಾಂತರಾಮಿಗಳಂದೆ ರಗಳೆಯಾದರಿಸಿ ತಮ್ಮ ಕಾವ್ಯವನ್ನು ರಚಿಸಿದ್ದಾರೆ.

24. ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೇಪ್ಪ.
ಕ್ರಿ.ಶ 1906 ಜೂನ್ 6 ರಂದು ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ವೀರಪ್ಪ ಮತ್ತು ವೀರಮ್ಮ ದಂಪತಿಯ ಐವರು ಗಂಡುಮಕ್ಕಳಲ್ಲಿ ಕಿರಿಯವರಾಗಿ ಜನಿಸಿದರು. ಇವರಿಗೆ ಇಲ್ಲಿಯ ವೈಷ್ಣವಧರ್ಮ ಮತ್ತು ಶೈವಧರ್ಮಗಳು ಸಮನ್ವಯ ಭಾವನೆಯನ್ನು ಮೂಡಿಸಿತು. ತಂದೆ-ತಾಯಿಗಳು ಇಲ್ಲಿಯ ಶ್ರೀ ಗುದ್ಲಿಸ್ವಾಮಿಗಳ ಕೃಪಾರ್ಶೀವಾದದಿಂದ ಜನಿಸಿದ ಇವರಿಗೆ ಗುದ್ಲೆಪ್ಪ ಎಂದು ಹೆಸರಿಸಿದರು. ಇವರು ಗಣಿತ ವಿಷಯದಲ್ಲಿ ಅತ್ಯಂತ ಪಾಂಡಿತ್ಯವನ್ನು ಹೊಂದಿದ್ದರು. 1909 ರಿಂದ 1924ರ ವರೆಗೂ ಮುರಘಾ ಮಠದ ಪ್ರಸಾದ ನಿಲಯದಲ್ಲಿದ್ದು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗುವಾಗ ಮಹಾತ್ಮಗಾಂಧೀಜಿಯವರ ದರ್ಶನದಿಂದ ಇವರ ಜೀವನಚಕ್ರವೇ ಬದಲಾಯಿತು. 

ವರದಾತೀರದಲ್ಲಿ ಕೊರಡೂರು ಹತ್ತಿರದ ಹೊಸರಿತ್ತಿಯಲ್ಲಿ ಇವರು ಸ್ವತಂತ್ರ ಸೇನಾನಿಗಳನ್ನು ತಯಾರು ಮಾಡಲು ಗಾಂಧೀ ಆಶ್ರಮವನ್ನು ಸ್ಥಾಪಿಸಿ ಇಡೀ ರಾಷ್ಟ್ರಕ್ಕೆ ಹೆಸರುವಾಸಿಯಾದರು. ಇಂತಹ ಕರ್ನಾಟಕದ ಉಕ್ಕಿನಮನುಷ್ಯ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದು 1930ರಲ್ಲಿ ಎರಡು ಬಾರಿ ಬ್ರಿಟಿಷ ಸರ್ಕಾರ ಬಂಧಿಸಿತು. 1938ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸದಸ್ಯತ್ವ ನೀಡಿ ಉತ್ತೇಜಿಸಿತು. 1952ರಲ್ಲಿ ಮುಂಬೈ ಪ್ರಾಂತ್ಯಕ್ಕೆ ಶಾಸಕರಾಗಿ ಆಯ್ಕೆಯಾದರು. ಎರಡು ಭಾರಿ ವಿಧಾನ ಪರಿಷತ್ ಅಧÀÀ್ಯಕ್ಷರಾದರು, ಕರ್ನಾಟಕದ ಏಕೀಕರಣಕ್ಕಾಗಿ ದುಡಿದರು.

 ಹಾವೇರಿಯಲ್ಲಿಯ ಗುದ್ಲೆಪ್ಪಹಳ್ಳಿಕೇರಿ ಕಾಲೇಜು, ಹೊಸರಿತ್ತಿಯಲ್ಲಿರುವ ಗಾಂಧಿ ಆಶ್ರಮ ಮತ್ತು ಹೈಸ್ಕೂಲ್ ಇವರ ಹೋರಾಟದ ಫಲವೆಂದು ಹೇಳಬಹುದು. ಮಹಾತ್ಮ ಗಾಂಧೀಜಿಯವರು ದಂಡೆಯಾತ್ರೆಗಾಗಿ ಆಯ್ದ ಕೆಲವೇ ವಿಶೇಷ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಇವರು ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮೈಲಾರ ಮಹಾದೇವಪ್ಪ ಸನ್ನಿಕೊಪ್ಪ, ಸರದಾರ ವೀರನಗೌಡ ಪಾಟೀಲ, ಸಿದ್ದಪ್ಪ ಹೊಸಮನಿ, ಸಂಗೂರ ಕರಿಯಪ್ಪ ಇವರೊಂದಿಗೆ ಕೆಲಸಮಾಡಿದ ಮಹಾಚೇತನವಾಗಿದ್ದಾರೆ.

26. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ 
 ಸಂಗೀತ ದಿಗ್ಗಜರ ಸಾಲಿನಲ್ಲಿ ಮಿನುಗು ತಾರೆಯಾದಂತಹ ಪಂ| ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಸಂತ ಶರೀಫರ ಜನ್ಮ ಸ್ಥಳವಾದ ಶಿಶುನಾಳದಲ್ಲಿ 1927 ರಲ್ಲಿ ಜನಿಸಿದರು.

ಚೆನ್ನಬಸವಯ್ಯ ಮತ್ತು ಸಾಂತವ್ವ ದಂಪತಿಗಳ ಪುತ್ರರಾಗಿ ಜನಿಸಿದ ಅವರು. ತಮ್ಮ ತಂದೆ ಹಾಡುತ್ತಿದ್ದ ದೊಡ್ಡಾಟ ಹಾಗೂ ಗೀಗೀ ಪದ ಹಾಗೂ ತತ್ವ ಪದಗಳನ್ನು ಚಿಕ್ಕವರಿದ್ದಾಗಲೇ ಹಾಡಲು ಕಲಿತಿದ್ದರು. ಇಂತಹ ಸಂಗೀತ ಪರಿಸರದಲ್ಲಿ ಬೆಳೆಯುತ್ತಿದ್ದ ಪಂಚಾಕ್ಷರಿ ಅವರಿಗೆ ಸಂಗೀತದ ಗೀಳು ಸಹಜವಾಗಿ ಹುಟ್ಟಿಕೊಂಡಿತು. ಅದೇ ಸಮಯದಲ್ಲಿ ಶಿಶುನಾಳ ಶರೀಫರ ಮೊಮ್ಮಗ ಮೋದಿನ ಸಾಬರು ತಂಜಾವೂರಿನಿಂದ ಕರ್ನಾಟಕ ಸಂಗೀತ ಕಲಿತು ಬಂದು ಊರಿನ ಬಸವಣ್ಣ ದೇವರ ಗುಡಿಯಲ್ಲಿ ಹಾಡುತ್ತಾ ಕುಳಿತಿರುತ್ತಿದ್ದರು.

ಅಲ್ಲಿಗೆ ಹೋಗಿ ತದೇಕಚಿತ್ತದಿಂದ ಆಲಿಸುತ್ತಾ ಕುಳಿತ ಪಂಚಾಕ್ಷರಿ ಸ್ವಾಮಿಯ ಅಸಾಮಾನ್ಯ ಆಸಕ್ತಿ ಕಂಡು “ಪಲಯಮಾಂ ಶ್ರೀ ಗೌರ ಬಾಲೆಸುಗುಣ ಶೀಲಾಪರಿ ಪಾಲಯಮಾಂ” ಎಂಬ ಕೀರ್ತನೆಯನ್ನು ಕಲಿಸುವುದರೊಂದಿಗೆ ಮೋದಿನ ಸಾಬರು ಮತ್ತಿಗಟ್ಟಿ ಅವರಿಗೆ ಆದಿ ಗುರುವಾದರು.

ಬಾಲಕನ ಸಂಗೀತಾಸಕ್ತಿಗೆ ನೀರೆರೆದು ಪೆÇೀಷಿಸಿದ ಅವರ ಚಿಕ್ಕಪ್ಪ, ಗಾನಯೋಗಿ ಪಂ| ಪಂಚಾಕ್ಷರಿ ಗವಾಯಿಗಳ ಬಳಿ ಅವರನ್ನು ಸಂಗೀತ ಅಭ್ಯಾಸಕ್ಕೆ ತೊಡಗಿಸಿದರು. ಬಾಲಕನ ಸುಮಧುರ ಕಂಠಕ್ಕೆ ಮನಸೋತ ಗವಾಯಿಗಳು ಹರಿಕತಿಗಳನ್ನು ಧಾರೆ ಎರೆದರು. ಇದರಿಂದ ತಮ್ಮ ಸುಶ್ರಾವ್ಯ ಕಂಠದಿಂದ ಶ್ರೋತೃಗಳ ಮನಸೂರೆಗೊಳ್ಳುತ್ತಾ ಪ್ರಬುದ್ಧ ಗಾಯಕರಾಗಿ ಪ್ರಸಿದ್ದಿ ಪಡೆದರು.

1944 ರಲ್ಲಿ ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದ ನಂತರ ಗುರುಗಳಿಂದ ಸ್ಥಾಪಿಸಲ್ಪಟ್ಟ ಶ್ರೀ ಕುಮಾರೇಶ್ವರ ಕೃಪಾಪೆÇೀಷಿತ ಸಂಘದಲ್ಲಿ ರಂಗಭೂಮಿ ನಟ-ಗಾಯಕರಾಗಿ ಪ್ರಧಾನ ಭೂಮಿಕೆ ನಿರ್ವಹಿಸಿದ್ದರು. ಆಗ ಒಂದು ಸಲ ನಾಟಕ ನೋಡಲು ಬಂದಿದ್ದ ಜೈಪುರ ಅತ್ರೌಲಿ ಘರಾಣೆಯ ಸುಪ್ರಸಿದ್ಧ ಗಾಯಕ ಪಂ| ಮಲ್ಲಿಕಾರ್ಜುನ ಮನ್ಸೂರ, ಪರಮೇಶ್ವರನ ಪಾತ್ರಧಾರಿ ಪಂಚಾಕ್ಷರಿ ಸ್ವಾಮಿಯವರ ಕಂಠಿಸಿರಿಯನ್ನು ಪ್ರಶಂಸಿಸಿದರು. ರಂಗಭೂಮಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಮತ್ತಿಗಟ್ಟಿ ಅವರು ಪಂ| ಮನ್ಸೂರರ ಅಪ್ಪಣೆಯಂತೆ ಅವರ ಬಳಿ ಉನ್ನತ ಸಂಗೀತ ಶಿಕ್ಷಣ ಪಡೆಯಲು ಧಾರವಾಡಕ್ಕೆ ಬರುವಂತಾಯಿತು.
1960 ರಲ್ಲಿ ಧಾರವಾಡದ ಸಪ್ತಾಪುರದ ದಿ| ನಾರಾಯಣರವ ಗುರ್ಟು ಅವರ ಬಂಗಲೆಯಲ್ಲಿ ಮನ್ಸೂರರು ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರ ಕೈಗೆ ಕಂಕಣ ಕಟ್ಟಿ ತಮ್ಮ ಶಿಷ್ಯನಾಗಿ ಸ್ವೀಕರಿಸಿದರು. ಮರು ದಿನದಿಂದ ಶಿವಮತ ಭೈರವ ರಾಗದ ಪ್ರಥಮ ಅಲ್ಲಾ ಬಂದಿಷ್‍ದೊಂದಿಗೆ ಗಾಯನದ ತಾಲೀಮು ಪ್ರಾರಂಭವಾಗಿ ನಂತರ 25 ವರ್ಷಗಳ ಪರ್ಯಂತ ಸಂಗೀತ ಅಧ್ಯಯನ ಮಾಡಿದರು. 

ನಂತರ ಕೊಲ್ಹಾಪುರದ ಪಂ| ನಿವೃತ್ತಿಬುವಾ ಸರನಾಯಕ ಹಾಗೂ ಅಜೀಜುದ್ದೀನ ಖಾನ್ (ಬಾಬಾ) ಬಳಿ ಸಂಗೀತಾಭ್ಯಾಸ ಮುಂದುವರಿಸಿದರು. ಇದಾದ ಬಳಿಕ ಜೈಪುರ ಘರಾಣೆಯ ಅತ್ಯಮುಲ್ಯ ಸಂಗೀತ ನಿಧಿಯಾಗಿ ದೇಶ-ವಿದೇಶಗಳಲ್ಲಿ ಚಿರಪರಿಚಿತರಾದರು.
ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸಂಗೀತ ಉಪನ್ಯಾಸಕರಾಗಿ ಸುಮಾರು 12 ವರ್ಷ ಸೇವೆ ಸಲ್ಲಿಸಿ 1988 ರಲ್ಲಿ ನಿವೃತ್ತರಾದರು. 1953 ರಿಂದ ಆಕಾಶವಾಣಿ ‘ಎ’ ಶ್ರೇಣಿ ಕಲಾವಿದರಾಗಿ ದೇಶ-ವಿದೇಶಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮ ನೀಡಿ ಪ್ರಸಿದ್ಧರಾಗಿದ್ದರು. 1988 ರ ಸಂಗೀತ ಗಾನ ಪ್ರವೀಣ ಪುರಸ್ಕಾರದಿಂದ 2013 ರ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ಇಂದು ಹಿಂದೂಸ್ತಾನಿ ಸಂಗೀತದಲ್ಲಿ ಹೆಸರು ಮಾಡಿರುವ ಷಡಕ್ಷರಿ ಬುವಾ, ಸರಯು ಸೊನ್ನಿ, ಉಷಾ ಕುಲಕರ್ಣಿ, ಗೀತಾ ಜಾವಡೇಕರ, ಮೀಡಾ ಗುಂಡಿ, ಡಾ| ಮುಕ್ತಾ ಮುಜಮದಾರ, ಡಾ ವೀರಣ್ಣ ಹೂಗಾರ, ಡಾ| ಮೃತ್ಯುಂಜಯ ಅಗಡಿ, ಡಾ|ನಾಗರಾಜ ಹವಾಲ್ದಾರ, ಸವಿತಾ ನುಗಡೋಣಿ, ಜಯದೇವಿ ಜಂಗಮಶೆಟ್ಟಿ ಹಾಗೂ ಉಮೇಶ ಮುನವಳ್ಳಿ ಸೇರಿದಂತೆ ನೂರಾರು ಜನರಿದ್ದಾರೆ. ಅಂತಹ ದೊಡ್ಡ ಸಂಗೀತ ಶಿಷ್ಯ ಪರಂಪರೆಯನ್ನು ಧಾರೆ ಎರೆದಿರುವ ಕೀರ್ತಿ ಪಂ| ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ಸಲ್ಲುತ್ತದೆ.

27. ಡಾ.ಜಿ.ಎಸ್ ಆಮೂರ
ಗುರುರಾಜ ಶ್ಯಾಮಾಚಾರ ಆಮೂರರವರು 1925 ರ ಮೇ 8 ರಂದು ತಮ್ಮ ತಾಯಿ, ಗಂಗೂಬಾಯಿಯವರ ತವರುಮನೆಯಾದ, ಹಾನಗಲ್ ತಾಲ್ಲೂಕಿನ 
ಬೊಮ್ಮನಹಳ್ಳಿಯಲ್ಲಿ ಜನಿಸಿದರು. 

ಇವರ ತಂದೆ ತಂದೆ, ಶ್ಯಾಮಾಚಾರ್ಯ,ಶಿರಹಟ್ಟಿ ತಾಲೂಕಿನ ಸೂರಣಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಜುರುಕುಬುದ್ಧಿಯ ಬಾಲಕ, ಅಮೂರ ಪರಿಶ್ರಮಿ, ಸತತವಾಗಿ ಕಲಿಯಲು ಆಸಕ್ತ.

ಆಮೂರರನ್ನು ವಿದ್ಯಾರ್ಜನೆಗೆ ಹುರಿದುಂಬಿಸುವಲ್ಲಿ, ಅವರ ಮನೆಯ ಪರಿಸರವೂ ಪೂರಕವಾಗಿತ್ತು. ಅಮೂರರಿಗೆ ಇಬ್ಬರು ಸಹೋದರಿಯರು, ಮತ್ತು ಇಬ್ಬರು ಸಹೋದರರ ಪರಿವಾರದಲ್ಲಿ ಗುರುರಾಜರೇ ಹಿರಿಯರು. ಇವರು ಸೂರಣಗಿ, ಕರ್ಜಗಿ ಹಾಗೂ ಹಾವೇರಿಯಲ್ಲಿ (ಮುನ್ಸಿಪಲ್ ಹೈಸ್ಕೂಲ್) ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ, 1943 ರಲ್ಲಿ ಮುಂಬಯಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು.

 1947 ರಲ್ಲಿ, ಬಿ.ಎ. ಆನರ್ಸ್ ಇಂಗ್ಲೀಷ್ ವಿಷಯದಲ್ಲಿ ಮಾಡಿ ಮುಗಿಸಿದರು. 1949 ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ, ಎಮ್. ಎ. ಪದವಿಗಳಿಸಿ, ಗದಗnlxliy, ಜೆ.ಟಿ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. 

ತಮ್ಮ ಅಧ್ಯಾಪನದ ಕಾರ್ಯವೂ ಜೊತೆಯಲ್ಲೇ ಸಾಗಿತ್ತು. ಲೇಖನ ಕಾರ್ಯವೂ ತಡೆಯಿಲ್ಲದೆ ನಡೆದಿತ್ತು. " ದ ಕಾನ್ಸೆಪ್ಟ ಆಫ್ ಕಾಮಿಡಿ," ಎಂಬ ವಿಷಯವನ್ನು ಕುರಿತು, "ಮಹಾಪ್ರಬಂಧ" ರಚಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ 1961ರಲ್ಲಿ ಡಾಕ್ಟಾರೇಟ್ ಕೊಟ್ಟು ಗೌರವಿಸಿತು. 1972ರಲ್ಲಿ ಅವರು 'ಫುಲ್ ಬ್ರೈಟ್ ಸ್ಕಾಲರಶಿಪ್' ಗಳಿಸಿ ಅಮೆರಿಕದ ಮೇಲ್ ಹಾಗೂ ಕ್ಯಾಲಿಫೋರ್ನಿಯ ವಿಶ್ವವಿಧ್ಯಾಲಯಗಳಲ್ಲಿ ಟಿ.ಎಸ್ ಎಲಿಯಟ್ ಮೇಲೆ, ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡುಬಂದರು. 

1973 ರಲ್ಲಿ ಬ್ರಿಟಿಶ್ ಕೌನ್ಸಿಲ್ ನ ಆಮಂತ್ರಣದಿಂದಾಗಿ, ಇಂಗ್ಲೆಂಡಿಗೆ ಭೇಟಿಕೊಟ್ಟರು. ಗುರುರಾಜರು, ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಒಂದು ಹೆಣ್ಣುಮಗು, ಉಳಿದ ಮೂರು ಗಂಡು ಮಕ್ಕಳು.

ಗದಗ್ ನ ಕಾಲೇಜ್ ನಲ್ಲಿ ಕೆಲವರ್ಷ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ಮಾಡಿದ ಅವರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ರೀಡರ್ ಆಗಿ ನೇಮಕಗೊಂಡರು. ಇಲ್ಲೂ ತಮ್ಮ ಅಧ್ಯಾಪನದ ಜೊತೆಗೆ, ಓದು ಬರಹ ಅವರಿಗೆ ಮುದಕೊಟ್ಟಿತ್ತು. 

1985 ರಲ್ಲಿ, ಅಮೂರ, ಔರಂಗಬಾದ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ವಿಭಾಗ ಪ್ರಮುಖರೆಂದು ನೇಮಕಗೊಂಡರು. ೧೯೮೮ ರಲ್ಲಿ ನಿವೃತ್ತರಾಗುವವರೆಗೂ ಔರಂಗಾಬಾದ್ ನಲ್ಲಿ ಕಳೆದ ದಿನಗಳು ಅವಿಸ್ಮರಣೀಯವೆಂದು ನೆನೆಸಿಕೊಳ್ಳುತ್ತಿದ್ದರು.

ಡಾ. ಆಮೂರ ಅವರು ವಯೋಸಹಜ ಖಾಯಿಲೆಯಿಂದ ೨೮ ಸೆಪ್ಟೆಂಬರ್ ೨೦೨೦ ರಂದು ನಿಧನರಾದರು.
 28. ಕೆ. ಎಫ್ ಪಾಟೀಲ
ದಿ. ಕೆ. ಎಫ್ ಪಾಟೀಲರ ಕುರಿತಾದ ಪ್ರಮುಖ ವಿಷಯಗಳು:
• ೧೯೨೯ - ೧೯೩೦ ಕರ್ನಾಟಕ ಕಾಲೇಜದಲ್ಲಿ ತತ್ವಜ್ಞಾನ ಶಾಸ್ತ್ರ ತೆಗೆದುಕೊಂಡು ಜೂನಿಯರ ಬಿ, ಎ. ಅಭ್ಯಾಸ, ಜಾಗತಿಕ ಮಹಾವಿಭೂತಿಗಳಲ್ಲಿ ಮ, ಗಾಂಧಿಯವರ ಸ್ಥಾನ ಎಂಬ ವಿಷಯ ಕುರಿತಾದ ನಿಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದದ್ದು.
• ೧೯೩೦ ಫೆಬ್ರುವರಿ ೧೦ರ ನಂತರ ಸಪ್ಟೆಂಬರ ವರೆಗೆ ಮನೆಯವರ ಕೈಗೆ ಸಿಗದಂತೆ ಸ್ವಾತಂತ್ರ ಸಂಗ್ರಾಮದಲ್ಲಿ ಸೇರಿ, ರಾಷ್ಟ್ರ ಕಾರ್ಯ, ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲೆಗೆ ಹೋದದ್ದು, ಸೆಪ್ಟೆಂಬರದಿಂದ ಕೊಲ್ಲಾಪುರ ರಾಜಾರಾಂ ಕಾಲೇಜಿನಲ್ಲಿ ಸೀನಿಯರ್ ಬಿ.ಎ. ಓದು, ರಂಕಳಾ ಬೋರ್ಡಿಂಗ್ ಎನಿಸ, ಕರ್ನಾಟಕ ಕಾಲೇಜದಲ್ಲಿ ಪ್ರವೇಶ ನಿರಾಕರಣೆ, ಮಹಾತ್ಮಾ ಗಾಂಧಿಯವರ ತತ್ವ-ಬೋಧೋಭ್ಯಾಸ ವೆರಿಯರ್ ಎಲ್ವಿನ್ ಕೆ ಲೇಖನಗಳ ಅನುವಾದ. ಶರಣ ಸಂದೇಶದಲ್ಲಿ ಹರ್ಡೆಕರ ಮಂಜಪ್ಪನವರಿಂದ ಪುಸ್ತಕ ಪ್ರಕಟಣೆ.
• ೧೯೩೧ – ೧೯೩೨ ರಲ್ಲಿ ಸೀನಿಯರ್ ಬಿ.ಎ. ಪಾಸಾದದ್ದು, ಜೂನದಿಂದ ಹಂಸಭಾವಿಯ ಇಂಗ್ಲೀಷ್ ಶಾಲೆಯ ಹೆಡ್ ಮಾಸ್ತರ ಕೆಲಸ. ತಿಂಗಳಿಗೆ ೫೦ ರೂ. ಸಂಬಳ, ರಾಷ್ಟ್ರಕಾರ್ಯ ಜೀವನದಲ್ಲಿ ಅತ್ಯಂತ ಮಹತ್ವದ ಕಾಲ. ರಾಷ್ಟ್ರೀಯ ಶಾಲೆಯಾಗಿ ಮಾರ್ಪಾಡಾಗಲು ದುಡಿದುದು, ಹಂಸಭಾವಿಯ ವಿದ್ಯಾರ್ಥಿಗಳಿಂದ ಕಾಯಕ ಸಂಘದ ರಚನೆ, ರಾಷ್ಟ್ರ ಸೇವಾ ಮಹಾ ಕಾರ್ಯದಲ್ಲಿ ಪೂರ್ತಿ ಧುಮುಕಿದುದು.
• ೧೯೩೨ ರಲ್ಲಿ ಇಂಗ್ಲೀಷ್ ಶಾಲೆಯ ೪೦ ವಿದ್ಯಾರ್ಥಿಗಳನ್ನು ಸ್ವಾತಂತ್ರ ಹೋರಾಟದ ಚಟುವಟಿಕೆಗಳಿಗಾಗಿ ಬಂಧಿಸಿದ್ದು, ಹಿರೇ ಕರೂರು, ರಾಣೇಬೆನ್ನೂರ ಪೋಲೀಸ್ ಲಾಕಪ್ನ ಕಟು ಅನುಭವ, ಹಿಂಡಲಗಿ ಜೈಲು ವಾಸ, ರಾಷ್ಟ್ರ ಧುರೀಣರ ಸಂಪರ್ಕ, ಸಪ್ಟೆಂಬರ್ ದಲ್ಲಿ ಸೆರೆಮನೆಯಿಂದ ಬಿಡುಗಡೆ. ಹಿಂದಿನಿಂದಲೆ ಕೈದಿನ ವಾರಂಟ್. ಪೋಲಿಸರಿಂದ ತಪ್ಪಿಸಿಕಂಂಡು ಭೂಗತನಾಗಿ ಸ್ವಾತಂತ್ರ ಸಂಗ್ರಾಮದ ಕಾರ್ಯಕ್ರಮ ನಡೆಸಿದ್ದು. ವಿಚಿತ್ರ ಅನುಭವ, ಕೊಲ್ಲಾಪುರದ ಸಾಂಗಾದಲ್ಲಿ ವೀಳೆದೆಲೆ ತೋಟದಲ್ಲಿ ಕೆಲಕಾಲ ತಂಗಿದ್ದು, ಶೂರ ಸುಭಾಸರ ಚರಿತ್ರೆ, ಕೈಬರಹದ ಪ್ರತಿಸಿದ್ಧಗೊಳಿಸಿದ್ದು, ಅನೇಕ ಗುಪ್ತ ಕಾರ್ಯಗಳ ಸಂಘಟನೆ ಮಾಡಿದರು.
• ೧೯೩೪ - ೧೯೩೬ ಹರಿಜನ ಸೇವಾ ದೀಕ್ಷೆ, ಥಕ್ಕರ ಬಾಪಾ ಅವರ ಅಧ್ಯಕ್ಷತೆಯಲ್ಲಿ ಅ. ಭಾ. ಹರಿಜನ ಸೇವಾ ಸಂಘದ ವೀರನಗೌಡರೊಡನೆ ಕರ್ನಾಟಕ ಪ್ರಾಂತಿಕ ಶಾಖೆಯ ಕಾರ್ಯದರ್ಶಿಯಾಗಿ ಹರಿಜನ ಬಾಲಕ ಮತ್ತು ಬಾಲಕಿಯರಿಗಾಗಿ ಆಶ್ರಮಗಳನ್ನು ಪ್ರಾರಂಭಿಸಿದ್ದು, ಮತ್ತು ಹುಬ್ಬಳ್ಳಿ ಹರಿಜನ ಬಾಲಿಕಾಶ್ರಮದ ಮೇಲ್ವಿಚಾರಕನಾಗಿ ದಿ||ಸರದಾರ ವೀರನಗೌಡರೊಡನೆ ಕೆಲಸ ಮಾಡಿದ್ದು. ಅನೇಕ ಲೇಖನ ಬರೆದರು. 
• ೧೯೩೫ರಲ್ಲಿ ಮೊದಲ ಮದುವೆ, ಮೋಟೇಬೆನ್ನೂರಿನಲ್ಲಿ, ರಾಷ್ಟ್ರೀಯ ವಿವಾಹ ಪದ್ಧತಿಯ ಪ್ರಾರಂಭ.
• ೧೯೬೮ ಅಸ್ಪೃಶ್ಯತೆಯ ಕಳಂಕ (ಮ. ಗಾಂಧೀಯವರ ಲೇಖನಗಳ ಅನುದಾನ) ಗ್ರಂಥ ರಚನೆ,
• ೧೯೪೮ ರಲ್ಲಿ ‘ಭೂಸುಧಾರಣ ಸಮಸ್ಯೆಗೆ’ ಬೆಂಬಲವಾಗಿ ನಿಂತರು. ೧೯೪೬ ರಲ್ಲಿ ಮುಂಬಯಿ ವಿಧಾನಸಭೆಗೆ ಆಯ್ಕೆಯಾದರು. ಇವರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಎರಡನೇಯ ವ್ಯಕ್ತಿಯೆಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ೧೯೫೨ ರಲ್ಲಿ ಪುನ: ರಾಣೇಬೆನ್ನೂರಿನಿಂದ ಆಯ್ಕೆಯಾಗಿ ಉಪಸಚಿವರಾಗಿ ಕಾರ್ಯ ನಿರ್ವಹಿಸಿದರು.
• ಮಹಿಳೆಯರಿಗಾಗಿ ಗ್ರಾಮ ಸೇವಾ ಮಂಟಪವನ್ನು ಹನುಮನಮಟ್ಟಿಯಲ್ಲಿ ೧೯೫೬ ರಂದು ಸ್ಥಾಪಿಸಿದರು.
• ರಾಣೇಬೆನ್ನೂರಿನಲ್ಲಿ, ಹನುಮನಮಟ್ಟಿಯಲ್ಲಿ, ನೂಕಾಪುರದಲ್ಲಿ ಹಾಗೂ ಬ್ಯಾಡಗಿಯಲ್ಲಿ ಅಶ್ಪೃಶರ ಮನೆ ನಿರ್ಮಾಣಕ್ಕಾಗಿ ಹೌಸಿಂಗ ಕೋ-ಆಪರಟಿವ್ಹ ಸೊಸಾಯಿಟಿಯನ್ನು ೧೯೫೬ ರಂದು ತೆರೆದರು.
• ೧೯೮೦ ರಲ್ಲಿ ರಾಣೇಬೆನ್ನೂರಿನಲ್ಲಿ ಹೆಣ್ಣು ಮಕ್ಕಳ ಅಧ್ಯಾಯನಕ್ಕಾಗಿ ಹೈಸ್ಕೂಲ ಹಾಗೂ ಕಾಲೇಜುಗಳನ್ನು ಪ್ರಾರಂಭಿಸಿದರು. ಹೀಗೆ ಅನೇಕ ಜನೋಪಯೊಗಿ ಕಾಯಕಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಆಳವಾಗಿ ಮನೆ ಮಾಡಿರುವ ದಿ. ಕೆ. ಎಫ್ ಪಾಟೀಲರು ಸ್ಮರಣೀಯ

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!