ರಾಣೇಬೆನ್ನೂರಿನಲ್ಲಿ “ಸವಣೂರ ನವಾಬರ” ಕಾಲದ ಶಾಸನ ಪತ್ತೆ.......!!!

ರಾಣೇಬೆನ್ನೂರಿನಲ್ಲಿ “ಸವಣೂರ ನವಾಬರ” ಕಾಲದ ಶಾಸನ ಪತ್ತೆ.......!!!
 ರಾಣೇಬೆನ್ನೂರಿನ ಸಮೀಪದಲ್ಲಿರುವ ಹುಣಸಿಕಟ್ಟೆ ಗ್ರಾಮದ ಮಾರ್ಗದಲ್ಲಿ ಸವಣೂರ ನವಾಬರಾದಂತಹ “ನವಾಬ್ ಹಜರತ್ ದಿಲೇರ್‍ಜಂಗ್ ಬಹಾದ್ದೂರ್” ಕಾಲದ ಪರ್ಶಿಯನ್ ಭಾಷೆಯ ಶಾಸನವನ್ನು ಹಾವೇರಿಯ ಉಪನ್ಯಾಸಕರಾದ ಪ್ರಮೋದ್ ನಲವಾಗಲ ಹಾಗೂ ಪವನ ಬೊಮ್ಮಣ್ಣನವರ ಪತ್ತೆ ಮಾಡಿದ್ದಾರೆ.

ನವಾಬ್ ಹಜರತ್ ದಿಲೇರ್‍ಜಂಗ್ ಬಹಾದ್ದೂರ ರಾಣೇಬೆನ್ನೂರಿಗೆ ಆಗಮಿಸಿದಾಗ ಸೈಯದ್ ಮೀರಾನ್ ಖಾದ್ರಿ ತಂದೆ ಸೈಯದ್ ಹುಸೇನ್ ಖಾದ್ರಿ, ನವಾಬರನ್ನು ಸ್ವಾಗತಿಸಿದಕ್ಕಾಗಿ ಸಿದ್ದಾಪುರ ಗ್ರಾಮವನ್ನು (ರಾಣೇಬೆನ್ನೂರ ಸಮೀಪದ ಗ್ರಾಮ) 18 ರ ರಂಜಾನ್ ದಿವಸದ ಹಿಜರಿ ಶಕೆ 1128 (ಕ್ರಿ.ಶ.1707) ರಂದು ಇನಾಂ ನೀಡಿದ್ದಾರೆ ಎಂಬ ವಿಷಯವು ಶಾಸನದಲ್ಲಿದೆ ಎಂದು ಪರ್ಶಿಯನ್ ಭಾಷೆಯ ಅನುವಾದಕರು ಹಾಗೂ ಕಿಲ್ಲಾ ಮಸೀದಿಯ ಅರಬಿ ವಿದ್ವಾಂಸರಾದ ಮೌಲಾನ ಮೊಹ್ಮದ್ ಯಾಖೂಬ್ ಸಾಬ್ ಗಯಾವಿ ತಿಳಿಸಿದ್ದಾರೆ. 
  
ಸ್ಥಳಿಯ ಶಾಸಕರಾದ ಆರ್. ಶಂಕರ್,ತಹಶೀಲ್ದಾರರಾದ ಶ್ರೀ.ರಾಮಮೂರ್ತಿ, ಅಂಜುಮನ್ ಸಂಸ್ಥೆ ಅಧ್ಯಕ್ಷರಾದ ಶ್ರೀ.ಅಬ್ದುಲ್ ವಹಾಬ್ ಶಾಫೀ ಹಾಗೂ ಸದಸ್ಯರ ಉಪಸ್ಥಿತರಿದ್ದರು. ಶಾಸನವನ್ನು ತಹಶೀಲ್ದಾರ್ ಕಛೇರಿಯಲ್ಲಿ ಸಂರಕ್ಷಿಸಿ ಇಡಲಾಯಿತು.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!