ಹಾವೇರಿ ಜಿಲ್ಲಾ ಕೈಗಾರಿಕ ದರ್ಶನ.....!
ಹಾವೇರಿ ಜಿಲ್ಲಾ ಕೈಗಾರಿಕ ದರ್ಶನ.....!
ಶಿಲಾಯುಗದ ಕಾಲದಲ್ಲಿ ನಮ್ಮ ಜಿಲ್ಲೆಯವರು (ಹಳ್ಳೂರಲ್ಲಿ ಸಿಕ್ಕ ಕಬ್ಬಿಣದ ಆಯುದ) ಲೋಹದ ಬಳಿಕೆಯನ್ನು ಬಲ್ಲವರಾಗಿದ್ದರೆಂದರೆ ಅವರ ನೈಪುಣ್ಯತೆಯನ್ನು ನಾವು ಮೆಚ್ಚಲೇಬೇಕು. ಇಲ್ಲಿ ದೊರೆಯುತ್ತಿದ್ದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮಾನವನು ತನ್ನ ಬುದ್ದಿಶಕ್ತಿಯಿಂದ ತನಗೆ ಉಪಯೋಗವಾಗುವಂತಹ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದ ಇದರ ಪರಿಣಾಮವೇ ಗೃಹ ಕೈಗಾರಿಕೆ.
ತನ್ನ ಸತತ ಪ್ರಯತ್ನದಿಂದ ಮತ್ತು ಇತರರ ಹೊಗಳಿಕೆಗೆ ಪಾತ್ರವಾಗಲು ಇದರಲ್ಲಿಯೆ ಸ್ವಲ್ಪ ಬದಲಾವಣೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿ ಸಫಲನಾದನು, ಇದರ ಪರಿಣಾಮವೇ ಈಗೀನ ಬೃಹತ್ ಕೈಗಾರಿಕೆಗಳು.
ಇತಿಹಾಸದ ಕೆಲವು ಶಾಸನಗಳನ್ನು ಗಮನಿಸಿದಾಗ “ತೆಲ್ಲಿಗರೈವತ್ತೊಕ್ಕಲು” (ಗಾಣಿಗರು ಶ್ರೀಮಂತ ವರ್ಗದವರಾಗಿದ್ದರು ಎಂಬುದು ಉಲ್ಲೇಖ ಹತ್ತಿಮತ್ತೂರು ಮತ್ತು ರಟ್ಟಿಹಳ್ಳಿಯಲ್ಲಿ ಕಂಡು ಬರುತ್ತದೆ, ಸಾಲೆಸಾಸಿರ್ವರ (1000 ನೇಕಾರರ ವರ್ಗ), ಉಗೂರ್ವರ ಮೂನ್ನೂರು (ವೀಳ್ಯದೆಲೆಯ ಕೀಳುವ ವ್ಯವಸಾಯ ಮಾಡುವವರ ಉಲ್ಲೇಖ ಸವಣೂರಿನಲ್ಲಿ) ಶ್ರೇಣಿಯ ಉಲ್ಲೇಖವು ಕ್ರಮೇಣವಾಗಿ 8, 12 ಮತ್ತು 13 ನೇ ಶತಮಾನದಲ್ಲಿ ಕಂಡುಬರುತ್ತದೆ.
ವಿಜಯನಗರ ಮತ್ತು ಆದಿಲ್ ಷಾಹಿಗಳ ಕಾಲದಲ್ಲಿಯೇ ಗುತ್ತಲ, ಕರ್ಜಗಿ ಹಾಗೂ ರಾಣಿಬೆನ್ನೂರುಗಳಲ್ಲಿ ಕಾಗದದ ಉತ್ಪಾದನೆಯಾಗುತ್ತಿತ್ತು ಇದು ಬ್ರಿಟೀಷರ ಆಗಮನದಿಂದ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಇದರ ಪೂರ್ವದಲ್ಲಿ ಕಾಸಾರರು ಅಥವಾ ಕಂಚುಗಾರರು ಕಂಚಿನ ಪಾತ್ರೆಗಳು, ವಾದ್ಯಗಳು, ಗಂಟೆಗಳು, ಕಹಳೆಗಳು, ದೇವತೆಯ ವಿಗ್ರಹಗಳನ್ನು ಮಾಡುವುದರ ಜೊತೆಗೆ ತಾಮ್ರಗಳ ಶಾಸನಗಳನ್ನು ಬರೆಯುವ ಸಲುವಾಗಿ ತಾಮ್ರಪಟಗಳನ್ನು ತಯಾರಿಸುತ್ತಿದ್ದರು.
ಆದಿಲ್ ಷಾಹಿಗಳ ಕಾಲದಲ್ಲಿ ಬ್ಯಾಡಗಿ, ರಾಣೆಬೆನ್ನೂರಿನಲ್ಲಿ ಉದುಬತ್ತಿ ತಯಾರಿಕೆಯ ಗೃಹ ಉದ್ಯಮಗಳು ಬೆಳೆದವು. ರಾಣೆಬೆನ್ನೂರು ಮತ್ತು ಹಾವೇರಿಯಲ್ಲಿ ಸುಣ್ಣ ಸುಡುವ ಕೇಂದ್ರಗಳಿದ್ದವು. ರಾಣೆಬೆನ್ನೂರು ಹಾಗೂ ಹಾವೇರಿಯಲ್ಲಿಯ ಕುರಿ ಸಾಗಾಣಿಕೆಯಿಂದಾಗಿ ಉಣ್ಣೆ ಕಂಬಳಿ ತಯಾರಿಕೆಗೆ ಪ್ರಸಿದ್ಧಿಯನ್ನು ಪಡೆಯಿತು. ಇದಲ್ಲದೇ ಆಹಾರ ವಸ್ತುಗಳಾದ ಉಣ್ಣೆ ಕಂಬಳಿ ತಯಾರಿಕೆಗೆ ಪ್ರಸಿದ್ಧಿಯನ್ನು ಪಡೆಯಿತು.
ಇದಲ್ಲದೇ ಆಹಾರ ವಸ್ತುಗಳಾದ ಭತ್ತ, ಅಡಿಕೆಗಳ ಸಂಸ್ಕರಣ, ಕಲ್ಲುಪ್ಪಿನ ಉತ್ಪಾದನೆ, ಲೋಹಭತ್ತ, ಅಡಿಕೆಗಳ ಸಂಸ್ಕರಣ, ಕಲ್ಲುಪ್ಪಿನ ಉತ್ಪಾದನೆ, ಲೋಹದ ಸರಕುಗಳ ತಯಾರಿಕೆ, ಕುಂಬಾರಿಕೆ, ಮರಗೆಲಸ ಇವೆಲ್ಲ ಸಾಮಾನ್ಯ ಜನರ ಜೀವನದ ಒಂದು ಭಾಗವಾಗಿತ್ತು ಇವರೆಲ್ಲಾ ತಮ್ಮ ದ ಸರಕುಗಳ ತಯಾರಿಕೆ, ಕುಂಬಾರಿಕೆ, ಮರಗೆಲಸ ಇವೆಲ್ಲ ಸಾಮಾನ್ಯ ಜನರ ಜೀವನದ ಒಂದು ಭಾಗವಾಗಿತ್ತು ಇವರೆಲ್ಲಾ ತಮ್ಮ ಈ ಕಲೆಯಲ್ಲಿಯೇ ತೃಪ್ತಿ ಪಡಬೇಕಾಗಿತ್ತು.
ಬ್ರಿಟೀಷರ ಆಗಮನದ ನಂತರ ಕಬ್ಬಿಣದ ಕುಲುಮೆಗಳು ಪ್ರಾರಂಭಿಸಿದರು, 1884 ರಲ್ಲಿ ನಮ್ಮ ಜಿಲ್ಲೆಗೆ ಸೀಮೆಎಣ್ಣೆ ಬಂದುದರಿಂದ ಗಾಣಿಗ ವೃತ್ತಿಯು ಕಡಿಮೆಯಾಗಲು ಪ್ರಾರಂಭಿಸಿತು. ಬ್ಯಾಡಗಿಯಲ್ಲಿ ಕಡ್ಡಿ ಮೆಣಸಿನಕಾಯಿ ವ್ಯಾಪಾರಕ್ಕೆ ಮಾರುಕಟ್ಟೆ ಕಲ್ಪಿಸಲಾಯಿತು.
1866 ರಲ್ಲಿ ವ್ಯಾಪಾರಿಗಳು ಅಥವಾ ವರ್ತಕರು (ಪ್ರಥಮಶೆಟ್ಟಿ, ದ್ವಿಶೆಟ್ಟಿ, ಚೌಶೆಟ್ಟಿ) ಎತ್ತಿನ ಗಾಡಿಯ ಮುಖಾಂತರ ಅಥವಾ ವಾಹನದ ಮುಖಾಂತರ ಎತ್ತಿನ ಗಾಡಿಯ ಮುಖಾಂತರ ಅಥವಾ ವಾಹನದ ಮುಖಾಂತರ ಸುಗಮವಾಗಿ ವ್ಯಾಪಾರ ಮಾಡಲು ಉತ್ತರ ಕರ್ನಾಟಕದ ಭಾಗವನ್ನು ದಕ್ಷಿಣ ಕರ್ನಾಟಕ ಭಾಗದೊಂದಿಗೆ ಜೋಡಿಸಲು ಪುಣೆ-ಬೆಂಗಳೂರು ರಸ್ತೆಯ ವರದಾನದಿಗೆ ಸೇತುವೆಯನ್ನು ಕಟ್ಟಿಸಿದರು.
ರೈಲು ಮಾರ್ಗಗಳನ್ನು ಮಾಡಿ ವ್ಯಾಪಾರ ಸಂಪರ್ಕವನ್ನು ಇತರ ದೇಶಗಳೊಂದಿಗೆ ಜೋಡಿಸಿದರು. ಈ ಹಿಂದೆ ಇದ್ದಂತಹ ಸಮುದ್ರ ಮಾರ್ಗದ (ಕುಮಟಾ ಬಂದರು) ವ್ಯಾಪಾರ ಬಹಳ ದೀರ್ಘಕಾಲದ್ದಾಗಿದ್ದರಿಂದ ವ್ಯಾಪಾರಗಳು ಹೆಚ್ಚು ಇದರ ಕಡೆಗೆ ಗಮನ ಹರಿಸುವುದನ್ನು ನಿಲ್ಲಿಸಿದರು. ರಾಣಿಬೆನ್ನೂರಿನಲ್ಲಿ ಚರ್ಮ ಹದ ಮಾಡುವ ಶಾಲೆ ಪ್ರಾರಂಭವಾಯಿತು.
ಹಾವೇರಿ, ಸವಣೂರು ಮತ್ತು ರಾಣೆಬೆನ್ನೂರಿನಲ್ಲಿ ಬೀಡಿ ಸುತ್ತುವ ಗೃಹ ಕೈಗಾರಿಕೆಗಳು ಪ್ರಾರಂಭವಾಗಿ, ಸವಣೂರಿನ ಸಿಂಧೂರ ಬೀಡಿಗಳು ಹಾಗೂ ರಾಣಿಬೆನ್ನೂರಿನ ಫೈಜ್ ಬೀಡಿಗಳು ರಾಜ್ಯಾಧ್ಯಂತ ಪ್ರಸಿದ್ದಿಯಾದವು. ರಾಣಿಬೆನ್ನೂರ ತಾಲೂಕಿನ ಅಸೂಂಡಿಯಲ್ಲಿಯ ಕೆರೆಯ ನೀರಿನಿಂದ ಬೆಳೆದ ಕಬ್ಬಿನಿಂದ ಬೆಲ್ಲವನ್ನು ತಯಾರಿಸುತ್ತಿದ್ದರು ಅದರಲ್ಲಿಯ ಅಂಟುಬೆಲ್ಲ ವಿಶೇಷತೆಯನ್ನು ಪಡೆದಿತ್ತು. ಬಂಕಾಪುರ ಮತ್ತು ರಾಣಿಬೆನ್ನೂರ ಹತ್ತಿ ಮತ್ತು ಉಣ್ಣೆ ಬಟ್ಟೆ ತಯಾರಿಕಾ ಕೇಂದ್ರವಾಗಿತ್ತು. ಹಾವೇರಿಯಲ್ಲಿ ಯಾಲಕ್ಕಿ ಸಂಸ್ಕರಣೆ ಮಾಡಲಾರಂಭಿಸಿದರು. ಧನಗಳ ಮಾರುಕಟ್ಟೆ ಪ್ರಾರಂಭವಾಯಿತು.
ಹಾವೇರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕು (NH4) ಹಾಯ್ದು ಹೋಗಿದ್ದು ಮತ್ತು ಅನೇಕ ರಾಜ್ಯ ರಸ್ತೆಗಳು ಕೊಡುತ್ತವೆ ಅವುಗಳೆಂದರೆ SH26, SH57, SH76 ಹೀಗೆ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ ಉತ್ತಮವಾಗಿರುವದರಿಂದ ಇಲ್ಲಿ ಅನೇಕ ಕೈಗಾರಿಕೆಗಳು ಬಂಡವಾಳವನ್ನು ಹೂಡಲು ಆಸಕ್ತಿಯನ್ನು ತೋರುತ್ತಿವೆ. ಜಿಲ್ಲೆಯ ಪ್ರಮುಖ ಕೈಗಾರಿಕ ಘಟಕಗಳು ಕೆಳಗಿನಂತಿವೆ.
• ಬಿರ್ಲಾ ಗ್ರುಪ್ಸ್‍ನವರು ಇಲ್ಲಿಯ ಅನೂಕೂಲತೆಯನ್ನು ನೋಡಿಕೊಂಡು ಕ್ರಿ.ಶ 1969 ರಲ್ಲಿ ಅಕೆಸಿಯಾ, ಜಂಗಲ್‍ವುಡ್, ನೀಲಗಿರಿ ಗಿಡಗಳಿಂದ ರೆಯಾನ ಪಲ್ಪನ್ನು ಉತ್ಪಾದಿಸಲು ಹರಿಹರ ಪಾಲಿಫೈಬರ್ಸ ಕುಮಾರ ಪಟ್ಟದಲ್ಲಿ ತೆರೆದರು (ತಾ|| ರಾಣೆಬೆನ್ನೂರು).
• ಬಿರ್ಲಾ ಗ್ರುಪ್ಸ್ಸ್‍ನವರು 1970 ರಲ್ಲಿ (ಗ್ವಾಲಿಯರ್ ರೆಯಾನ್ ಸಿಲ್ಕ್ ವೀವಿಂಗ್ ಕಂ) ರಾಣಿಬೆನ್ನೂರಿನ ಕುಮಾರ ಪಟ್ಟಣದಲ್ಲಿ ತೆರೆದರು.
• ಬಾಗಲಕೋಟ, ಮುಳಖೇಡನಿಂದ ಸಿಮೆಂಟನ್ನು, ಕೆನಡಾ ಮತ್ತು ಅಮೇರಿಕಾ ಸಂಯುಕ್ತ ರಾಷ್ಟ್ರಗಳಿಂದ ಅಸ್ಬೆಸ್ಟೊಸ್ನ್ನು ತರಿಸಿಕೊಂಡು ಎಸಿ ರೂಪಿಂಗ್ ಶೀಟುಗಳನ್ನು ಉತ್ಪಾದಿಸುವ ಉದ್ದೇಶದಿಂದ 1974 ರಲ್ಲಿ ರಾಣೆಬೆನ್ನೂರಿನ ಕರೂರಿನಲ್ಲಿ ರಾವ್ಕೊ ಇಂಡಸ್ಟ್ರೀಸ್ ಲಿಮಿಟೆಡ್‍ನ್ನು ತೆರೆಯಲಾಯಿತು.
• ರಾಣೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೆಂಪು ಹಂಚು ತಯಾರಿಸುವ ಘಟಕ “ಸೌತ ಇಂಡಿಯಾ ಟೈಲ್ಸ್ ಹೆಸರಿನಿಂದ ಪ್ರಾರಂಭವಾಯಿತು.
• ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ “ಕರ್ನಾಟಕ ಸಕ್ಕರೆ ಕಾರ್ಖಾನೆ” ಎಂಬ ಹೆಸರಿನಿಂದ ಸಂಗೂರಿನಲ್ಲಿ (ತಾ|| ಹಾವೇರಿ) ಸಕ್ಕರೆ ಕಾರ್ಖಾನೆ ಪ್ರಾರಂಭವಾಯಿತು.
• ಹತ್ತಿಯ ಮಾರುಕಟ್ಟೆಗೆ ಪ್ರಸಿದ್ದಿಯನ್ನು ಪಡೆದಂತಹ ರಾಣೆಬೆನ್ನೂರಿನಲ್ಲಿಯ ಕಮದೊಡೆದಲ್ಲಿ ತುಂಗಭದ್ರಾ ಕೋ.ಅ.ಸ್ಪಿನ್ನಿಂಗ್ ಮಿಲ್ ಪ್ರಾರಂಭವಾಯಿತು.
• ಹನಮನಮಟ್ಟಿಯಲ್ಲಿ (ತಾ|| ರಾಣೆಬೆನ್ನೂರ) ರೈತರ. ಕೋ. ಆಪರಟಿವ್ ಜಿನ್ನಿಂಗ್ ಮಿಲ್ ಪ್ರಾರಂಭವಾಯಿತು.
'ಹಾವೇರಿ ತಾಲೂಕಿನ ಸಂಗೂರಿನಲ್ಲಿ ಸಕ್ಕರೆ ಫ್ಯಾಕ್ಟರಿ.
, ಶಿಗ್ಗಾಂವಿಯಲ್ಲಿ ಸ್ಟಾರ್ಚ ಫ್ಯಾಕ್ಟರಿ.
' ಬ್ಯಾಡಗಿಯಲ್ಲಿ ಗಾರ್ಮರಂಟ್.
' ಬ್ಯಾಡಗಿಯಲ್ಲಿ ಖಾರಾಪುಡಿ ತಯಾರಿಸುವ ಕೈಗಾರಿಕೆಗಳು.
• ಮೆಣಸಿನ ಕಾಯಿಯಿಂದ ಒಲೆಯರಿಸಿನ್ ತೆಗೆದು ಮುಂದೆ ಅದನ್ನು ತುಟಿಯ ಬಣ್ಣ ತಯಾರಿಸಲು, ಊಗರಿನ ಬಣ್ಣವನ್ನು ತಯಾರಿಸಲು, ನೋವು ನಿವಾರಕವನ್ನು ಶ್ವಾಶಕೋಶದ ತೊಂದರೆ ನಿವಾರಣೆಯ ಔಷದಿಯನ್ನು ತಯಾರಿಸಲು ಉಪಯೋಗಿಸುತ್ತಾರೆ ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸಿಂಥೇಟ್ ಕೆಮಿಕಲ್ಸ್, ಕವಲೆತ್ತಿನಲ್ಲಿ (ತಾ|| ರಾಣೆಬೆನ್ನೂರು) ಹಾಗೂ ಕಾಂಕೂರ್ ಕಲರ್ಸ್ ಲಿಮಿಟೆಡ್ ಬ್ಯಾಡಗಿಯಲ್ಲಿ ಪ್ರಾರಂಭವಾಯಿತು.
• ಕೋಳಿಮಾಂಸ ಸಂರಕ್ಷಣೆಯ ಘಟಕ ರಾಣೆಬೆನ್ನೂರ ತಾಲೂಕಿನ ಹನಮನಹಳ್ಳಿಯಲ್ಲಿ “ವೆಂಕಟೇಶ್ವರ ಹೆಚರ್ಸಿ ಹೆಸರಿನಿಂದ ಪ್ರಾರಂಬವಾಯಿತು. ಇತ್ತಿಚೀನ ದಿನಗಳಲ್ಲಿ ಶಿಗ್ಗಾವಿಯಲ್ಲಿ ಸ್ಟಾರ್ಚ ಉತ್ಪಾದಿಸುವ ಕಂಪನಿ ಹಾಗೂ ಬ್ಯಾಡಗಿಯಲ್ಲಿ ಬೃಹತ್ ಆದ ಗಾರ್ಮೆಂಟಗಳು ತೆಲೆ ಎತ್ತಿ ನಿಂತಿವೆ.
• ರಾಣೆಬೆನ್ನೂರು ಏಷ್ಯಾದಲ್ಲಿ ಎರಡನೆಯ ಅತಿದೊಡ್ಡ ಬೀಜ ಉತ್ಪಾದನೆ ಕೇಂದ್ರ ಹೀಗಾಗಿ ನಾವು ಇಲ್ಲಿ ಪ್ರಸಿದ್ದ ಬೀಜೊತ್ಪಾದನೆ ಕೇಂದ್ರಗಳಾದಂತಹ ಮಹಿಕೊ ಸಿಡ್ಸ್, ಸುರಜ್‍ಸಿಡ್ಸ್, ಚಿರಾಗ್ ಸಿಡ್ಸ್, ಒರಿಸನ್ ಹೈಬ್ರಿಡ್ ಸಿಡ್ಸ್‍ಗಳನ್ನು ನೋಡಬಹುದು.
ಇವುಗಳಲ್ಲದೆ ಹಲವು ಟ್ರೈಲರ್‍ಗಳನ್ನು ತಯಾರು ಮಾಡುವ ಹಾಗೂ ಸ್ಟಿಲ್ ವರ್ಕ ಮಾಡುವ ಉದ್ಯಮಗಳು ಹಲವು ಇಲ್ಲಿವೆ.
# ಪ್ರಮೋದ ನಲವಾಗಲ #
Comments
Post a Comment