ಸಮಾಜೋದ್ದಾರದ ಕಾರಣಿ ಪುರುಷ - ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು....!!

ಸಮಾಜೋದ್ದಾರದ ಕಾರಣಿ ಪುರುಷ - ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು....!!

ಬಳ್ಳಾರಿಯಲ್ಲಿ (ಕ್ರಿ.ಶ 1870, 1882 ಹಾಗೂ 1896) ಸಂಭವಿಸಿದ ಭೀಕರ ಬರಗಾಲದಿಂದಾಗಿ ಶ್ರೀ ಕುಮಾರ ಶಿವಯೋಗಿಗಳ ಪೂರ್ವಜರು ಕೊಟ್ಟೂರನ್ನು ಬಿಟ್ಟು ಹಾವೇರಿ ಜಿಲ್ಲೆಯ ರಾಣಿಬೇನ್ನೂರಿನ ಜೋಯಿಸರಹರಳಹಳ್ಳಿಗೆ ವಲಸೆ ಬಂದರು. ಆ ಕುಟುಂಬದ ಕಿತ್ತು ತಿನ್ನುವ ಬಡತನ ಹಾಗೂ ಸಂಸಾರದ ಜಂಜಾಟವನ್ನು ನೋಡಿ ಬೆನಕನಕೊಂಡದ ಮಳಿಯಪ್ಪ-ಶಾಂತಮ್ಮ ಶಿವಭಕ್ತಿ ದಂಪತಿಗಳು ಅವರಿಗೆ ಉಳಿದುಕೊಳ್ಳಲು ಮನೆಯ ಪಕ್ಕದ ಖಾಲಿ ಜಾಗವನ್ನು ಕೊಟ್ಟು ಸಹಾಯ ಮಾಡಿದರು. 

ಶ್ರೀ ಕುಮಾರ ಶಿವಯೋಗಿಗಳ ಪೂರ್ವಜರು (ಬಸವಾರ್ಯರು) ಉಪಜೀವನಕ್ಕಾಗಿ ಆರಂಭಿಸಿದ ವೃತ್ತಿಯೇ ‘ಅಕ್ಷರ ದೀಕ್ಷೆ’. ಜೋಯಿಸರಹರಳಹಳ್ಳಿ ಗ್ರಾಮ ಸಣ್ಣದಾಗಿದ್ದರು ತಿಳುವಳಿಕೆಯುಳ್ಳಂತಹ ಜನರನ್ನು ಒಳಗೊಂಡಿತ್ತು. ಬಸವಾರ್ಯರು ಇಲ್ಲಿಯ ಪ್ರತಿ ಮನೆ–ಮನೆಗೆ ಹೋಗಿ ತಮ್ಮ ಮಕ್ಕಳನ್ನು ಸಾಲಿಮಠಕ್ಕೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಹೀಗೆ ಪ್ರಾರಂಭವಾದ ಸಾಲಿಮಠದಿಂದಾಗಿ ಇವರ ಮನೆತನದ ಹೆಸರು ‘ಸಾಲಿಮಠ’ ಎಂದೇ ಪ್ರಸಿದ್ದಿಯನ್ನು ಪಡೆಯಿತು.

ಬಸಯ್ಯ ಮತ್ತು ನೀಲಮ್ಮ ಶಿವಭಕ್ತಿ ದಂಪತಿಗಳು ಏರಡನೆ ಮಗನಿಗಾಗಿ ಪಕ್ಕದ ಲಿಂಗದಹಳ್ಳಿಯ (ನೀಲಮ್ಮಳ ತವರೂರು) ಬಸವಣ್ಣನ ಕೃಪಾಶಿರ್ವಾದದಿಂದ “ ಪ್ರಭವನಾಮ ಸಂವತ್ಸರ, ಭಾದ್ರಪದ ಶುಕ್ಲಪಕ್ಷ ತ್ರುಯೋದಶಿಯ ಬಧವಾರ ದಿವಸ ( ಕ್ರಿ.ಶ 1867ರಲ್ಲಿ) ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಜೋಯಿಸರಹರಹಳ್ಳಿಯಲ್ಲಿ ಬಸವಾದಿ ಪ್ರಥಮರ ತತ್ವಗಳನ್ನು ಬೆಳಗಲು, ಶರಣರ ಧರ್ಮವನ್ನು ಪುನರ್ ಸ್ಥಾಪಿಸಲೆಂದೇ ಕುಮಾರ ಶಿವಯೋಗಿಗಳು ಜನಿಸಿದರು. ಮಗು ಹುಟ್ಟಿದ 5-6 ದಿನಗಳವರೆಗೆ ಮೊಲೆಹಾಲನ್ನು ಕುಡಿಯಲಿಲ್ಲವಂತೆ, ಮುಂದೆ ಜನರ ಆಪೇಕ್ಷೆಯ ಮೇರೆಗೆ ಹಾಲಯ್ಯನೆಂದು ಕರೆದಾಗ ಹಾಲನ್ನು ಕುಡಿಯಲಾರಂಭಿಸಿದ ಮಗುವಿಗೆ ಸದಾಶಿವ ಹಾಲಯ್ಯ ಎಂಬ ನಾಮಕರಣವನ್ನು ಮಾಡಿದರು. ತಂದೆ ವಿಭೂತಿದಾರಿಯಾಗಿ ಊರಿನ ಧಾರ್ಮಿಕ ಕಾರ್ಯಗಳನ್ನು ಮಾಡುತಿದ್ದರೆ, ತಾಯಿ ಜಾನಪದದ ಕಣಜ. ಸಾಲಿಮಠವನ್ನು ನಡೆಸುತಿದ್ದರೂ ಸಂಭಳವನ್ನು ಪಡೆಯುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಕಿತ್ತುತಿನ್ನುವ ಬಡತನ, 2-3 ಜನರು ಭೀಕ್ಷೆ ಬೇಡಿದರೂ ಬಡತನದ ದಾಹ ಇಂಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂದೆ ತಾಯಿಗಳು ತೀರಿಕೊಂಡಾಗ ಮುಂದೆ 105 ವರ್ಷದ ಅವರ ಅಜ್ಜನಾದ ಕೋಟಪ್ಪಯ್ಯರೊಂದಿಗೆ ಭೀಕ್ಷೆಬೇಡಿ ತಂದು ಸಾಲಿಮಠಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಸದಾಶಿವ ಹಾಲಯ್ಯ ಊರಿನಲ್ಲಿ ಭೀಕ್ಷೆ ಬೇಡುತ್ತಿರುವಾಗ ಹಿರಿಯ ವ್ಯಕ್ತಿ ಭೈದು ಭೀಕ್ಷೆ ಬೇಡುವುದನ್ನು ಬಿಟ್ಟು ಶಿಕ್ಷಣ ಪಡೆಯಬಾರದೆಕೇ? ಎಂದು ಪ್ರಶ್ನೆ ಮಾಡಿದನು. ಇದೊಂದೇ ಪ್ರಶ್ನೆ ಆ ಬಾಲಕನನ್ನು ಸಮಾಜೋದ್ದಾರದ ಕಾರಣಿಕರನ್ನಾಗಿ ಮಾಡಿತೆನ್ನಬಹುದು.

ಬಾಲಕ ಹಾಲಯ್ಯ ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಸಮೀಪದ ಕರ್ಜಗಿ ಗ್ರಾಮಕ್ಕೆ ಬಂದರು. ಹಾಸಲು-ಹೋದ್ದಲು ಇದ್ದ ಬಟ್ಟೆಯನ್ನು ಬಿಟ್ಟು ಏನೂ ಇರದ ಬಾಲಕನನ್ನು ಕಂಡ ಗ್ರಾಮದ ಹಿರೇಮಠ ರಾಚಯ್ಯ ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಪಚರಸಿ ಶಾಲೆಗೆ ಸೇರಿಸಿದರು. ಕರ್ಜಗಿ ಗ್ರಾಮದಲ್ಲಿ ಅವರಿಗೆ ಗುರುಗಳಾಗಿ ಸಿಕ್ಕವರು ಮಹಾದೇವಪಂತ ಜೋಗಳೆಕರ್‍ರವರು. ಮೂಲ್ಕಿ ಪರೀಕ್ಷೆಯನ್ನು ಸ್ನೇಹಿತ ಅಸುಂಡಿಯ ಶಿವನಗೌಡನೊಂದಿಗಿ ಧಾರವಾಡಕ್ಕೆ ನಡೆದುಕೊಂಡು ಹೋಗಿ ಬರೆದು ಬಂದರು ಆದರೆ ಪರೀಕ್ಷೆಯಲ್ಲಿಯ ಅನುತ್ತಿರ್ಣ ಸಮಾಜೋದ್ದಾರದ ಕಾಯಕಕ್ಕೆ ತೋಡಗಿಸುವ ಹಾಗೆ ಮಾಡಿತೆನ್ನಬಹುದು. ಮುಂದೆ ತಾಯಿಯ ತವರೂರಾದ ಲಿಂಗದಳ್ಳಿಗೆ ಹೋಗಿ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಕ ವೃತ್ತಿಯನ್ನು ಕೈಗೊಂಡರು. 

ಲಿಂಗದಳ್ಳಿಯ ಹಿರಿಯರಾದ ಸಮಾಳದ ಬಸವಪ್ಪಯ್ಯನವರ ಮಾರ್ಗದರ್ಶನದಲ್ಲಿ ವೇದಾಂತ, ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಮತ್ತು ನಿಜಗುಣಶರಣರ ಕೈವಲ್ಯ ಪದ್ಧತಿಯನ್ನು ಜೀವನದಲ್ಲಿ ಸ್ವೀಕರಿಸಿದರು. ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ ಇವರು ಶ್ರೀ ಸಿದ್ಧಾರೂಡ ಸ್ವಾಮಿಗಳನ್ನು ಬೇಟಿ ಮಾಡಿ ‘ಆರೋಢ’ ತತ್ವವನ್ನು ಕಲಿಯಲಾರಂಬಿಸಿದರು ಆದರೆ ಅದು ಲಿಂಗತತ್ವಕ್ಕೆ ವಿರುದ್ದವೆಂದು ತಿಳಿದು ಅರ್ಧಕ್ಕೆ ಸ್ಥಗಿತಗೊಳಿಸಿದರು.  ಬಳ್ಳಾರಿಯ ಎಮ್ಮಿಗನೂರು ಜಡಿಸಿದ್ದರ ಹತ್ತಿರ ಬಂದು ಅಪಾರಶಕ್ತಿಯನ್ನು ಪಡೆದು, ಎಳಂದೂರು ಬಸವಲಿಂಗ ಶಿವಯೋಗಿಗಳ ಹಾಗೂ ಕುಮಾರ ಶಿವಯೋಗಿಗಳ ಸಮಾಗಮ ಹುಬ್ಬಳ್ಳಿಯಲ್ಲಿ ಆಗಿದ್ದು ವಿಶೇಷ. ಮುಂದೆ ಇದೆ ಗುರು-ಶಿಷ್ಯತ್ವ ರೂಪವನ್ನು ಪಡೆದಿದ್ದು ಒಂದೂ ದಿರ್ಘ ಪರೀಕ್ಷೆಯ ನಂತರ. ಎಳಂದೂರು ಬಸವಲಿಂಗ ಶಿವಯೋಗಿಗಳ ಶಿಷ್ಯರನ್ನು ಕರೆದುಕೊಂಡು ನಾಡಿನಲ್ಲೆಲ್ಲಾ ಸಂಚರಿಸಿ ಧರ್ಮ ಪ್ರಚಾರ ಮಾಡಿದರು. ಎಳಂದೂರಿನ ಬಸವಲಿಂಗ ಶಿವಯೋಗಿಗಳ ದೇಹತ್ಯಾಗ ಮಾಡಿದ ಮೇಲೆ ನಿಜಗುಣರ ತಪೋಭೂಮಿಯಾದ ಶಂಬುಲಿಂಗ ಬೆಟ್ಟಕ್ಕೆ ಬಂದು ತಪಸ್ಸು ಮಾಡಿ, ಸಮಾಜ ಸೇವೆಗೆ ಕಂಕಣಬದ್ಧರಾಗಿ ಹೊರಟರು.

ಹಾಲಯ್ಯನವರು ಹಾಲಯ್ಯ ಮಾಸ್ತರಾಗಿ ಮುಂದೆ ಹಾನುಗಲ್ ದೇಶಿಕರಾಗಿ, ಹಾನುಗಲ್ ವಿರಕ್ತಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀ ಮ.ನಿ.ಪೃ ಸದಾಶಿವ ಸ್ವಾಮಿಗಳೆಂದು ನಾಮಾಂಕಿತಗೊಂಡು.ಸಮಾಜೋದ್ದಾರದ ಕಾಯಕದಿಂದಾಗಿ ಶಿವಕುಮಾರ ಶಿವಯೋಗಿಗಳಾದರು.
ಇವರು ಹೋದಲ್ಲೆಲ್ಲಾ ಶಿಷ್ಯಕೋಟಿ ಅನಂತವಾಯಿತು. 

ಅವರು ತುಳಿದ ನೆ¯ ಪುಣ್ಯ ಕ್ಷೇತ್ರವಾಯಿತು. ಹೀಗೆ ಸಂಚರಿಸುತ್ತಾ ಸೊರಬ ಕ್ಷೇತ್ರಕ್ಕೆ ಬಂದು ಸ್ವಲ್ಪಕಾಲ ನಲೆಸಿದರು. ಹಾನುಗಲ್ ವಿರಕ್ತಮಠಾಧಿಪತಿಗಳಾದ ಫಕ್ಕೀರಸ್ವಾಮಿಗಳು ತುಂಬಾ ವಯೋವೃದ್ದಿರಾಗಿದ್ದರಿಂದ ಭಕ್ತರು ಸೊರಬದಿಂದ ಸದಾಶಿವ ಸ್ವಾಮಿಗಳನ್ನು ಕರೆತಂದು ಪೀಠಾಧಿಪತಿಗಳನ್ನಾಗಿ ಮಾಡಿದರು. ಆಗ ಅವರಿಗೆ ಕುಮಾರಸ್ವಾಮಿಗಳೆಂದು ನಾಮಕರಣವಾಯಿತು. ಇವರ ಭವ್ಯಜೀವನ ಮತ್ತು ಸಾಧನೆ ಹಾನುಗಲ್ ಪುಣ್ಯ ಭೂಮಿಯಿಂದ ಪ್ರಾರಂಭವಾಯಿತು. ಹಾನುಗಲ್‍ನಲ್ಲಿ ಪಾಠಶಾಲೆಯನ್ನು ತೆರೆದು ನಂತರ ವೀರಶೈವ ಮಹಾಸಭೆಯನ್ನು ಸ್ಥಾಪಿಸಿ, ಸಮಾಜದಲ್ಲಿ ಧರ್ಮಜಾಗೃತಿಯನ್ನು ಪ್ರಾರಂಭಿಸುತ್ತಾ ಅಲ್ಲಲ್ಲಿ ಸಮ್ಮೇಳನ, ಉಚಿತ ಪ್ರಸಾದ ನಿಲಯ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜೋದ್ದಾರ ಕಾರ್ಯಗಳನ್ನು ಕೈಗೊಂಡರು. 

ವೀರಶೈವಧರ್ಮ, ಸಾಹಿತ್ಯ ಹಾಗೂ ಸಾಂಸ್ಕøತಿಕ ಅಭಿವೃದ್ಧಿಗಾಗಿ ಬಾದಾಮಿಯಿಂದ ಕೇವಲ 11 ಕಿ.ಮೀ ದೂರದಲ್ಲಿರುವ ಮಲಪ್ರಭಾ ನದಿಯ ತೀರದಲ್ಲಿ 1909 ಫೆಬ್ರವರಿ 7 ರಂದು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಇದು ಲಿಂಗಾಯತ ಮಠಗಳಿಗೆ, ಸ್ವಾಮಿಗಳಾಗುವ ಸಾಧಕರಿಗೆ, ಯೋಗ ಮತ್ತು ಧಾರ್ಮಿಕ ಶಿಕ್ಷಣ ಕೊಡುವ ತರಬೇತಿ ಕೇಂದ್ರವಾಗಿದೆ. ಇಲ್ಲಿ ಶಾಸ್ತ್ರೋಕ್ತ ವಿಭೂತಿ ನಿರ್ಮಾಣಕೇಂದ್ರ, ಗೋಶಾಲೆ, ಪುರಾತನ ಗ್ರಂಥಗಳ ಸಂಶೋಧನೆ ನಡೆಯುವಂತೆ ಇವರು ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಿದರು. ಕರ್ನಾಟಕದಲ್ಲಿ ಅನೇಕ ವಿದ್ಯಾಕೇಂದ್ರಗಳನ್ನು ತೆರೆಯುವಲ್ಲಿ ಅನೇಕರಿಗೆ ಉತ್ತೇಜಿಸಿದರು. ಅಂಧರಬಾಳಿಗೆ ಆಶಾಕಿರಣವೆಂಬುದಕ್ಕೆ ಉದಾಹರಣೆಯಂಬಂತೆ ಸಂಗೀತಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳು ಕುಮಾರ ಶಿವಯೋಗಿಗಳ ಶಿಷ್ಯರಾಗಿ ಬೆಳೆದು ನಿಂತರು. ತಮ್ಮ ಪೂರ್ಣ ಜೀವನವನ್ನು ಸಮಾಜದ ಏಳ್ಗೆಗಾಗಿ ಮಿಸಲಾಗಿಟ್ಟು ತಮ್ಮ 63 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಇತ್ತೀಚಿನ ದಿನಗಳಲ್ಲಿ ಶಿವಯೋಗಮಂದಿರದಲ್ಲಿರುವ ಹಸ್ತಪ್ರತಿ (ತಾಡೋಲೆ)ಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನಿಯ ಸಂಗತಿ. ಕಾರಣ ಬೆರೆಯವರು ಇವುಗಳನ್ನು ಓದಲು ಒಯ್ಯುತ್ತಿದ್ದು ಮರಳಿಸುವದನ್ನು ಮಾಡುತ್ತಿಲ್ಲ. ಇಂತಹ ಮಹಾಸಾಧಕರು ಮತ್ತು ಸಮಾಜೋದ್ದಾರಕರು ನಮ್ಮ ಜಿಲ್ಲೆಯವರೆಂಬುದೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ.

                 ಪ್ರಮೋದ ನಲವಾಗಲ
                     9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!