ಹಾವೇರಿಗೆ ಬ್ರಿಟಿಷ್ ಅಧಿಕಾರಿ "ಥ್ಯಾಕರೆ" ಮರಣ ಹೊಂದುವ ಪೂರ್ವದಲ್ಲಿ ಭೇಟಿ ನೀಡಿದ್ದನು.......!

ಹಾವೇರಿಗೆ ಬ್ರಿಟಿಷ್ ಅಧಿಕಾರಿ "ಥ್ಯಾಕರೆ" ಮರಣ ಹೊಂದುವ ಪೂರ್ವದಲ್ಲಿ ಭೇಟಿ ನೀಡಿದ್ದನು.......!      
 ಕ್ರಿ.ಶ 1819 ರಂದು ಬ್ರಿಟಿಷ್  ಅಧಿಕಾರಿಯಾಗಿದ್ದ ಡಬ್ಲೂ. ಚಾಪ್ಲೀನ್ ಕಮೀಶನರ್ ಆಗಿ ಪುಣೆಗೆ ವರ್ಗಗೊಂಡಾಗ ಧಾರವಾಡ ಜಿಲ್ಲೆಗೆ ಅವನ ಸ್ಥಾನ ತುಂಬಲು ಬಂದವನು ಜಾನ್ ಥ್ಯಾಕರೆ . ಕ್ರಿ.ಶ 1820 ಕ್ಕೆ ಅಧಿಕಾರ ವಹಿಸಿಕೊಂಡ ಇವನು ನಾಲ್ಕು ವಷ೯ಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿದ್ದನು. 

ಹಾವೇರಿಯ ಪ್ರವಾಸಿ ಮಂದಿರದಲ್ಲಿ ಒಂದು ದಿವಸ ವಾಸ್ತವ್ಯ ಮಾಡಿದ್ದನು. ಇವನು ಸ್ಥಳೀಯ ಕೆಲವರೊಂದಿಗೆ ಉತ್ತಮವಾದ ಸ್ನೇಹ ಹೊಂದಿದ್ದನು. ಇವನ ವಾಸ್ತವ್ಯದ ಸುದ್ದಿ ಕೇಳಿದ ಸವಣೂರ ನವಾಬನಾದ ಅಬ್ದುಲ್ ಖೈರಖಾನ  ತಮ್ಮ ತೋಟದಲ್ಲಿಯ ವಿಶೇಷವಾದ ಮಾವಿನ ಹಣ್ಣನ್ನು ತಂದು ಕೊಟ್ಟಿದ್ದನು. ಥ್ಯಾಕರೆಯು ಹಾವೇರಿಯಲ್ಲಿದ್ದ ನಾಲ್ಕು ಜಕಾತಿಗಳನ್ನು ಪರೀಕ್ಷಿಸುವುದರೊಂದಿಗೆ ರಾಣೇಬೆನ್ನೂರಿಗೆ ಹೋಗುವ ಮಾರ್ಗದಲ್ಲಿದ್ದ ಭತ್ತದ ಗದ್ದೆಗಳನ್ನು ನೋಡಿ ಆನಂದಿಸುವುದರೊಂದಿಗೆ ಊರಿನ ಮಧ್ಯದಲ್ಲಿದ್ದ ದೊಡ್ದ ಹೊಂಡ ( ಅಕ್ಕಮಹಾದೇವಿ ಹೊಂಡ) ಹಾಗೂ ಸಣ್ಣ ಹೊಂಡಗಳಿಗೆ ಹರಿದು ಬರುವ ತೋಟದ ನೀರಿನ ಕಾಲುವೆಗಳನ್ನು ದುರಸ್ತಿಗೊಳಿಸುವಂತೆ ಸೂಚಿಸುತ್ತಿದ್ದನು. ಯಾಲಕ್ಕಿಗಳನ್ನು ಹಾವೇರಿಯ ಬಾವಿಯೊಂದರಲ್ಲಿಯ ನೀರಿನಿಂದ  ತೊಳೆಯುತ್ತಿದ್ದ ಹಾಗೂ ಅವಗಳನ್ನು ತುಂಡರಿಸುವ ವಿಧಾನವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದನು. 

ಹಾವೇರಿಯ ಯಲುವಿಗಿಗೆ ಖೈರಖಾನ ಮಗನೊಂದಿಗೆ ಬೇಟೆಗೆಂದು ಹೋಗಿ ಹೆಣ್ಣು ಹುಲಿಯೊಂದನ್ನು ಕೊಂದು ಅದರ ಚರ್ಮ ಹಾಗೂ ಅದರ ಮರಿಯೊಂದನ್ನು ಧಾರವಾಡಕ್ಕೆ ತೆಗೆದುಕೊಂಡು ಹೋದನು. 

ಕಿತ್ತೂರಿನ ಮೇಲೆ ದಾಳಿ ಮಾಡುವ ಪೂರ್ವದಲ್ಲಿ ಹಾವೇರಿಗೆ ಬಂದು ಹೋಗಿದ್ದನು ಎಂಬುದು ವಿಶೇಷ. ಮುಂದೆ ಕಿತ್ತೂರ ಸಂಸ್ಠಾನ ವಿಷಯದಲ್ಲಿ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ. 13 ಸೆಪ್ಟೆಂಬರ 1824 ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.

 ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ! ಹುಚ್ಚು ಹಿಡಿದವನಂತೆ ಕಿತ್ತೂರಿನ ಮೇಲೆ ಯುದ್ದ ಮಾಡಿ ಸೈನಿಕನ ಗುಂಡಿಗೆ ಥ್ಯಾಕರೆ ತಾನು ಮಾಡಿದ ಪಾಪದ ಪ್ರಾಯಶ್ಚಿತಕ್ಕಾಗಿ ಮೃತನಾದನು. ಇವನ ಗೋರಿಯನ್ನು ಧಾರವಾಡದ ಸವದತ್ತಿ ಮಾಗ೯ದಲ್ಲಿ ಇಗಲೂ ಸಹ ನೋಡಬಹುದಾಗಿದೆ.                                                                                    

                                                                                           # ಪ್ರಮೋದ ನಲವಾಗಲ #                                          (9686168202 )

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!