ಕನಕದಾಸರ ಸಾಹಿತ್ಯದಲ್ಲಿ ವಿಜ್ಞಾನದ ಪರಿಚಯ....।।।
( ಕಾಗಿನೆಲೆಯ ಆದಿಕೇಶವ ದೇವಸ್ಥಾನ )
ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ. ಅರಸುಪ್ಪತ್ತಿಗೆಯಲ್ಲಿ ವಿಜೃಂಭಿಸಿದ ಇವರು ಸಂಸ್ಕೃತ ಭಾಷೆಯಿಂದ ಹಿಡಿದು ವೇದ, ಉಪನಿಷತ್, ಪುರಾಣಗಳು ಹಾಗೂ ಕುರಾನ್‍ನನ್ನು ಸಹ ಬಲ್ಲವರಾಗಿದ್ದರು.
ಇವರ ಸಾಹಿತ್ಯವನ್ನು ಅವಲೋಕಿಸಿದಾಗ ಇವರಿಗೆ ವಿಜ್ಞಾನದ ಹಲವು ವಿಚಾರಗಳು ಸಹ ಗೊತ್ತಿತ್ತೆಂದು ತಿಳಿಯುತ್ತದೆ. ಕನಕದಾಸರು ತಮ್ಮ ಅನೇಕ ಕೀರ್ತನೆಗಳಲ್ಲಿ ರೋಗಗಳನ್ನು ಹಾಗೂ ಅದರ ಲಕ್ಷಣಗಳನ್ನು ಉಲ್ಲೇಖಿಸಿದ್ದು ಅವರಿಗಿದ್ದ ವಿಜ್ಞಾನದ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಂತಹ ವೈಜ್ಞಾನಿಕ ವಿಚಾರಗಳನ್ನುಳ್ಳ ಕನಕದಾಸರ ಕೆಲವು ಹಾಡುಗಳನ್ನು ಮಾತ್ರ ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
ತುಪ್ಪಪಂಚಾಮೃತವಂದು ಅಡವಿಗಡ್ಡೆಗಳಿಂದು I
ಕರ್ಪೂರವೀಳ್ಯವಂದು ಕರಕು ಇಂದು II
ಪಂಚಾಮೃತವೆಂದರೆ ಆಕಳಹಾಲು, ಮೊಸರು, ತುಪ್ಪ, ಬಾಳೆಹಣ್ಣು, ಸಕ್ಕರೆ, ಜೇನುತುಪ್ಪ ಇವಗಳನ್ನು ಕೂಡಿಸಿ ಮಾಡಿದ ಪದಾರ್ಥ. ಅರಸುಪ್ಪತ್ತಿಗೆಯಲ್ಲಿದ್ದಾಗ ಇದು ಸಾಮಾನ್ಯ ಆಹಾರವಾಗಿತ್ತು ಅದು ಅವರ ಚರ್ಮಕ್ಕೆ ಕಾಂತಿಯನ್ನು ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ದಾಸರಾದ ಮೇಲೆ ಮುಂಜಾನೆಯ ಆಹಾರ ರಾಜನಂತೆ ತೆಗೆದುಕೊಳ್ಳುತ್ತಾ, ಮಧ್ಯಾಹ್ನದಲ್ಲಿ ರಾಣಿಯಂತೆ ಹಾಗೂ ರಾತ್ರಿಯಲ್ಲಿ ಭೀಕ್ಷುಕನಂತೆ ಸಿಕ್ಕರೆ ಊಟ ಇಲ್ಲವೆಂದರೆ ನಿದ್ರೆಗೆ ಜಾರುವುದು ಸಹಜವಾಗಿತ್ತೆಂದು ತಿಳಿಯಬಹುದು, ಇದೆ ಅವರ ಆರೋಗ್ಯದ ಗುಟ್ಟಾಗಿರಬಹುದು.
ಎಲುವುಗಳು ತೊಲೆ-ಜಂತೆ ನರಗಳವು ಬಿಗಿದಂತೆ I
ಬಲಿದ ಚರ್ಮವು ಮೆಲುಹೊದಿಕೆಯಂತೆ II
ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ I
ದೇಹದ ನಶ್ವರತೆಯನ್ನು ಈ ಹಾಡಿನಲ್ಲಿ ಕನಕದಾಸರು ಹೇಳುತ್ತಾ ದೇಹದ ವಿಶ್ಲೇಷಣೆಯನ್ನು ಚೆನ್ನಾಗಿ ಮಾಡಿದ್ದಾರೆ. ಅಂದರೆ ಅವರಿಗೆ ಮನುಷ್ಯನ ದೇಹದ ರಚನೆಯ (Human anatomy) ಬಗ್ಗೆ ಅಧ್ಯಾಯನವಾಗಿತ್ತೆಂದು ತೋರುತ್ತದೆ.
ಕಂಡಿಗಳು ಒಂಬತ್ತು ಕಳಬಂಟರೈವರು I
ಕಂಡಿಗಳು ಒಂಬತ್ತು ಅಂದರೆ ಕಣ್ಣು, ಕಿವಿ, ಬಾಯಿ, ಮೂಗು, ಗುದ ಹಾಗೂ ಯೋನಿ ಹೀಗೆ ನವದ್ವಾರದ ಬಗ್ಗೆ ಜ್ಞಾನವನ್ನು ಕೊಡುತ್ತಾ, ಕಳಬಂಟರೈವರು ಎಂದು ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮದ ಬಗ್ಗೆ ಅರಿವು ಮೂಡಿಸುವ ಪರಿಯಾಗಿದೆ.
ಗಂಧಶಾಲ್ಯನ್ನ ಸದ್ಘತ ತೋಯೆ ಪಳಿದವ್ಯ I
ಮಂದವಾದ ಅಳೆಯ ಸ್ವಾದು ಸೀಕರಣಿಗಳನು II
ಸುಗಂಧೀ ಅಕ್ಕಿ ( ಗಂಧಶಾಲ್ಯನ್ನ-Basamati rice) ಎಂಬ ಪದವನ್ನು ಕನಕದಾಸರು ಉಪಯೋಗಿಸಿದ್ದಾರೆ ಅಂದರೆ ಅಂತಹ ಸುಗಂಧಬರಿತ ಅಕ್ಕಿಯನ್ನು ನಮ್ಮ ದೇಶದ ಜನರು ಬೆಳೆಯುತ್ತಿದ್ದು ಹಾಗೂ ಅದನ್ನು ಉಪಯೋಗಿಸುತ್ತಿದ್ದರು ಎನ್ನುವುದು ತಿಳಿಯುತ್ತದೆ, ಹಾಗಾದರೆ ಸುಗಂಧಭರಿತ ಅಕ್ಕಿಯು ನಮ್ಮ ದೇಶದ್ದೆ ಹೊರತು ಅದು ಅಮೇರಿಕಾದ ಸ್ವತ್ತಲ್ಲವೆಂದು ಹೇಳಬಹುದು. ಅಳೆ (ಮಜ್ಜಿಗೆ) ಆರೋಗ್ಯಕ್ಕೆ ಒಳ್ಳೆಯದೆಂದು ಅವರಿಗೆ ತಿಳಿದಿತ್ತೆನ್ನಬಹುದು ಕಾರಣ ವೈದ್ಯರು ಈಗಲೂ ಸಹ ಹೊಟ್ಟೆ ಭಾದೆಗೆ ಬಳಸುವ ಔಷಧ ( ಲೆಕ್ಟಿಕ್ ಅಸಿಡ್) ಆಗಿದೆ ಅಂದರೆ ಮಜ್ಜಿಗೆಯಲ್ಲಿ ಇದರ ಪ್ರಮಾಣ ಹೆಚ್ಚಿರುವುದು ಇದನ್ನು ಪುಷ್ಠೀಕರಿಸುತ್ತದೆ.
ತಂದೆಯುದರದಿ ಮೂರುಮಾಸ ತಾಯೊಡಲಿನಲಿ I
ಸಂದೇಹವಿಲ್ಲ ನವಮಾಸ ಮಲ-ಮೂತ್ರದೊಳು II ಒಂದಾಗಿ ಕುದಿದು ಹುಟ್ಟಿ I
ಬಂದೆಯೆಂಬತ್ತುನಾಲಕುಲಕ್ಷ ಯೊನಿಯೊಳು II
ಈ ಹಾಡಿನಲ್ಲಿ ಕನಕದಾಸರು ಸಂಯೋಗದ (Fertilization) ಬಗ್ಗೆ ತಿಳಿಸಿದ್ದಾರೆ. ಅಂದರೆ ಯಾವುದೇ ಜೀವವು ಜನ್ಮಕ್ಕೆ ಬರುವ ಮೊದಲು, ತಂದೆಯ ದೇಹದಲ್ಲಿ ವಾಸವಾಗಿದ್ದು ಅವನ ಮೂಲಕ (Sperm) ತಾಯಿಯ ಗರ್ಭಕ್ಕೆ ಬರುತ್ತದೆ ಎಂಬುದು ವೈಜ್ಞಾನಿಕವಾಗಿಯು ಸತ್ಯವಾಗಿದೆ. ಏಂಬತ್ತನಾಲ್ಕು ಲಕ್ಷಯೊನಿಯೊಳು ( ಜಲಜಯೋನಿ-9ಲಕ್ಷ, ವೃಕ್ಷಾದಿಯೋನಿ-20ಲಕ್ಷ, ಕ್ರಿಮಿಯೋನಿ-11ಲಕ್ಷ, ಅಂಡಜ-ಸ್ವೇದಜಯೋನಿ-10ಲಕ್ಷ, ಪಶ್ವಾದಿಯೋನಿ-30ಲಕ್ಷ ಹಾಗೂ ಮಾನುಷಯೋನಿ-4ಲಕ್ಷ) ಎಂಬ ಹಾಡಿನ ಸಾಲು ಭೂಮಿಯ ಮೇಲಿರುವ ಜೀವಿಗಳ ಸಂಖ್ಯೆಯನ್ನು ಸೂಚಿಸುತ್ತದೆ ಆದರೆ ಇದನ್ನು ನಿಖರವಾಗಿ ಹೇಳಲು ವಿಜ್ಞಾನಿಗಳು ಸಹ ತಡಕಾಡುತ್ತಾರೆ.
ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ II
ಬ್ರಿಟೀಷರು ಭಾರತಕ್ಕೆ ಬಂದ ಮೇಲೆ ಸಕ್ಕರೆ ಉತ್ಪಾದನೆ ಹಾಗೂ ಬಳಕೆ ಪ್ರಾರಂಭವಾಯಿತು ಎಂಬ ಮಾಹಿತಿಯು ತಪ್ಪು ಎನ್ನಲು ಈ ಸಾಲುಗಳು ಸಹಕಾರಿಯಾಗಿದೆ. ಕಾರಣ ಸಕ್ಕರೆ ಎಂಬ ಪದವನ್ನು ಈ ಹಾಡಿನಲ್ಲಿ ಬಳಿಸಿದ್ದನ್ನು ನೋಡಿದರೆ, ಸಕ್ಕರೆಯ ಬಳೆಕೆ ಹಾಗೂ ಅದರ ಉತ್ಪಾದನೆ ಕನಕದಾಸರ ಕಾಲದಲ್ಲಿತ್ತೆನ್ನಬಹುದು.
ಬೆಟ್ಟದಾ ತುದಿಯಲ್ಲಿ ಬೆಳೆದ ವೃಕ್ಷಗಳಿಗೆ I
ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ II
ಕಲ್ಲೊಳಗೆ ಪುಟ್ಟಿ ಕೂಗುವ ಮಂಡಕಂಗಳಿಗೆ I
ಅಡಿಗಡಿಗೆ ಆಹಾರವಿತ್ತವರಾರು ?
ಎಂಬ ಪ್ರಶ್ನಾಸೂಚಕ ಹಾಡಿನ ಸಾಲು ಆಹಾರ ಸರಪಳಿಯ (Food chain) ಬಗ್ಗೆ ಮಾಹಿತಿಯನ್ನು ಕೊಡುತ್ತದೆ ಹಾಗೂ ಕನಕದಾಸರು ಇದರ ಬಗೆಗೆ ಅನೇಕ ಬಾರಿ ಯೋಚನೆ ಮಾಡಿರಬಹುದಾಗಿದೆ.
ಹಿಂದೆ ಕಾಯ್ದವರಾರು ಮುಂದೆ ಕೊಲ್ಲುವರಾರು I ಎಂದು ನಾನರಿಯೆನೀ ದಂದುಗವ ನೀ ಬಲ್ಲೆ II
ಈ ಹಾಡಿನ ಸಾಲು ನಮ್ಮ ಕಣ್ಣಿಗೂ ಕಾಣದ ಶಕ್ತಿಯ ಮೂಲ ರೂಪವನ್ನು(ದೇವರು) ಹೇಳುವ ಪ್ರಯತ್ನದಂತಿದೆ. ಅಂದರೆ ಶಕ್ತಿಯು ಭೂಮಿಯ ಮೇಲೆ ಶಾಶ್ವತ ಆದರೆ ಅದು ಒಂದು ರೂಪದಿಂದ ಇನ್ನೂಂದು ರೂಪಕ್ಕೆ ಬದಲಾಗುವ ಸಾಧ್ಯತೆ ಇದೆ, ಆದರೆ ಅದನ್ನು ಹುಟ್ಟಿಸಲು ಹಾಗೂ ಅಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂಬುದೆ ಇದರ ಅರ್ಥ.
ವಿಜ್ಞಾನದಲ್ಲಿ ಇದನ್ನೆ ಥರ್ಮೊಡೈನಾಮಿಕ್ಸ ಸಿದ್ದಾಂತ (Thermodyanamics law) ಎಂದು ಕರೆಯುತ್ತಾರೆ.
ಇಂತ ಅಣುರೇನು ತೃಣಕಾಷ್ಟದೊಲಗೆಲ್ಲ I
ಸಂತೋಷವಾಗಿಹುದು ನಿನ್ನ ಸ್ಮರಣೆ II
ಈ ಹಾಡಿನ ಸಾಲಿನಿಂದ ನಮಗೆ ಗೊತ್ತಾಗುವ ವಿಷಯವೆನೆಂದರೆ ಕನಕದಾಸರಿಗೆ ಪರಮಾಣುವಿನ (Atom) ರಚನೆ ಹಾಗೂ ಅದರೊಳಗಿರುವ ಅಗಾದ ಶಕ್ತಿಯ ಬಗ್ಗೆ ಜ್ಞಾನವಿತ್ತೆಂದು ತಿಳಿಯುತ್ತದೆ.
ಹೀಗೆ ಕನಕದಾಸರ ಸಾಹಿತ್ಯವನ್ನು ನಾವು ಕೆದಕ್ಕುತ್ತಾ ಹೋದರೆ ನಮಗೆ ವಿಜ್ಞಾನದ ಅಗಾದ ಸಂಪತ್ತು ಹಾಗೂ ಆತ್ಮ ತೃುಪ್ತಿ ಸಿಗುತ್ತದೆ.
# ಪ್ರಮೋದ ನಲವಾಗಲ #
Comments
Post a Comment