ಮರಾಠರ ವಂಶಸ್ಥನಾದ"ದೊಂಡಿಯಾ ವಾಘನ ಖಡ್ಗ"ಕದಿರಮಂಡಲಗಿಯಲ್ಲಿ................... !

ಮರಾಠರ ವಂಶಸ್ಥನಾದ"ದೊಂಡಿಯಾ ವಾಘನ ಖಡ್ಗ"ಕದಿರಮಂಡಲಗಿಯಲ್ಲಿ...................  

ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸೇನಾಧಿಪತಿಯಾಗಿ ಕಾರ್ಯನಿರ್ವಹಿಸಿದ್ದ ದೊಂಡಿಯಾ ವಾಘ. ಟಿಪ್ಪುವಿನ ಮರಣಾನಂತರ ಬ್ರಿಟಿಷರ ಸೈನ್ಯದಿಂದ ತಪ್ಪಿಸಿಕೊಂಡು ಬಂದು ತನ್ನದೇ ಆದಂತಹ ಸಣ್ಣ ದಂಡನ್ನು ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ನಿಂತನು. ಮೂಲತ: ಚನ್ನಗಿರಿಯ ಪವಾರ್ ವಂಶಸ್ಥನಾದ ಈತನು ವೀರನೂ- ಶೂರನೂ ಆಗಿದ್ದನು. ಬ್ರಿಟಿಷರ ಆಡಳಿತ ಕೇಂದ್ರಗಳನ್ನು ಲೂಟಿ ಮಾಡುವುದು ಅವರಿಗೆ ತೊಂದರೆಯನ್ನು ಕೊಡುವುದು ಈತನ ದಿನನಿತ್ಯ ಕಾರ್ಯವಾಗಿತ್ತು. ಸವಣೂರ ನವಾಬರು ಇವನ ಉಪಟಳದಿಂದ ಬೆಸತ್ತು ಹೋಗಿದ್ದರು. ಇತನಿಂದಾಗಿ ಬ್ರಿಟಿಷರಿಗೆ ಮರಾಠರೊಡನೆ ತಮ್ಮ ಸರಹದ್ದನ್ನು ಗುರುತಿಸಿಕೊಳ್ಳುವುದು ಕಷ್ಟದಾಯಕವಾಗಿತ್ತು. 

ಹೀಗಾಗಿ ಈತನನ್ನು ಸೆರೆ ಹಿಡಿದು ಮರಣದಂಡನೆ ವಿಧಿಸಬೇಕು ಎಂಬುದು ಅವರ ಗುರಿಯಾಗಿತ್ತು. ಬ್ರಿಟಿಷರ ಈ ಕುತಂತ್ರ ಬುದ್ಧಿಯನ್ನು ಟಿಪ್ಪುವಿನ ಸೈನ್ಯದಲ್ಲಿದ್ದಾಗಲೇ ಅರಿತುಕೊಂಡಿದ್ದ ಅಜಾನಬಾಹು ದೊಂಡಿಯಾ ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದನು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿರುವ ಸುಂದರವಾದ ಕೋಟೆಯನ್ನು ದೊಂಡಿಯಾ ಬ್ರಿಟಿಷರಿಂದ ವಶಪಡಿಸಿಕೊಂಡಿದ್ದನು. ಈ ಹಿಂದೆ ಐರಣಿಯು ತನ್ನದೆ ಆದ ಹಿರಿಮೆಯನ್ನು ಹೊಂದಿತ್ತು. ಅದೆನೆಂದರೆ ಕ್ರಿ.ಶ 1876 ರ ಪೂರ್ವದಲ್ಲಿ ಈ  ಭಾಗದಲ್ಲಿ ಒಳ್ಳೆಯದಾದಂತಹ ಕಂಬಳಿಗಳು ದೊರೆಯುತ್ತಿದ್ದು,ಉತ್ತಮ ತಳಿಯ ಕಲ್ಲಂಗಡಿಯನ್ನು ಬೆಳೆಯುತ್ತಿದ್ದರು ಹಾಗೂ ಇರಾನ್ನಿಂದ ಬಂದಂತಹ ವ್ಯಾಪಾರಸ್ಥರು ಬಟ್ಟೆಗಳನ್ನು ಮಾರುತ್ತಿದ್ದರು ಹೀಗಾಗಿ ಪ್ರತಿ ವಾರ ವಿಶೇಷವಾದ ಸಂತೆ ನಡೆಯುತ್ತಿತ್ತು. ಆಗಿನ ಸಂತೆಯ ಮಾರ್ಗಕ್ಕೆ ಸಂತೆಯ ದಾರಿಯೊಂದು ಈಗಲೂ ಕರೆಯುತ್ತಿರುವುದು ವಿಶೇಷ. 

ದೊಂಡಿಯಾ ವಾಘ ಐರಣಿ ಕೋಟೆಯಲ್ಲಿರುವ ಮಾಹಿತಿ ಪಡೆದ ಬ್ರಿಟಿಷ್ ಅಧಿಕಾರಿ ಸಿ ವೆಲ್ಲೆಸ್ಲಿ 21/ಜೂನ್/1801 ರಂದು ತನ್ನ ಬಲಾಡ್ಯವಾದ ಸೈನ್ಯವನ್ನು ತೆಗೆದುಕೊಂಡು ಬಂದು ಐರಣಿ ಕೋಟೆಯ ಮೇಲೆ ಮುತ್ತಿಗೆಯನ್ನು ಹಾಕಿದನು.  ಪೂವ೯ದಲ್ಲಿಯೇ ಮಾಹಿತಿ ಪಡೆದಿದ್ದ ದೊಂಡಿಯಾ ತುಂಗಭದ್ರಾ ನದಿಯ ದಂಡೆಯ ಮೇಲಿರುವ ಸುಂದರವಾದ ಕೋಟೆಯನ್ನು ಬಿಟ್ಟು  ಹೋಗಿದ್ದನು. ಮುಂದೆ ದೊಂಡಿಯಾ ತನ್ನ ಪುಟ್ಟ ಸೈನ್ಯವನ್ನು ತೆಗೆದುಕೊಂಡು ಶಿರಾಳಕೊಪ್ಪಕ್ಕೆ ಹೋಗುವ ಮಾರ್ಗದ ಮಧ್ಯದಲ್ಲಿ ಕದಿರಮಂಡಲಗಿಯ ಕಾಂತೇಶನ ದಶ೯ನವನ್ನು ಪಡೆಯುತ್ತಾನೆ. ಕಾಂತೇಶನ ದರ್ಶನದಿಂದ ರೋಮಾಂಚಿತನಾದ ದೊಂಡಿಯಾ ತನ್ನ ಬಲಗೈ ಕತ್ತಿಯನ್ನು ( ಖಡ್ಗವನ್ನು) ಆತನ ಪಾದದಡಿಗೆ ಇಡುತ್ತಾನೆ ಇದನ್ನು ನೋಡುತ್ತಿದ್ದ ಸೈನಿಕರೆಲ್ಲರೂ ಕಾಂತೇಶನ ಮಹಿಮೆಯನ್ನು ಕೊಂಡಾಡುತ್ತಾರೆ. ಬ್ರಿಟಿಷರ ಬರುವಿಕೆಯನ್ನು ಗಮನಿಸಿದ ದೊಂಡಿಯಾ ಅಲ್ಲಿಂದ ಕಾಲು ಕೀಳುತ್ತಾನೆ. ಹಲವು ವಷ೯ಗಳವರೆಗೆ ಬ್ರಿಟಿಷರ ವಿರುದ್ದ ಸೆಣೆಸಾಡಿದ ಇತ ಸ್ವಾತಂತ್ರ್ಯ ಸೇನಾನಿ ಎಂದೆನಿಸಿಕೊಂಡನು. 

ಮುಂದೆ ಆತನನ್ನು ಬ್ರಿಟಿಷರು ಬಂಧಿಸಿ ಶಿಕ್ಷೆಗೊಳಪಡಿಸುತ್ತಾರೆ. ವಿಪಯಾ೯ಸವೆಂದರೆ ಎರಡು ದಶಕಗಳು ಗತಿಸಿ ಹೋದರು, ಆತನ ಆ ಖಡ್ಗವು (ಕದಿರಮಂಡಲಗಿಯಲ್ಲಿ) ಹಾಗೂ ಆಳಿಹೋದ ಕೋಟೆಯು(ಐರಣಿಯಲ್ಲಿ) ಈಗಲೂ ಸಹ ಆತನ  ಪರಾಕ್ರಮವನ್ನು ಜಿವಂತವಾಗಿಸಿವೆ. ಬ್ರಿಟಿಷರ ವಿರುದ್ದ ಹೋರಾಡಿದ ಹಾಗೂ ತನ್ನ ಜೀವನವನ್ನೆ ಹೋರಾಟಕ್ಕೆ ಮುಡುಪಾಗಿಟ್ಟಿದ್ದ ದೊಂಡಿಯಾಗೆ ನಮ್ಮದೊಂದು ಸಲಾಮ್................... ಜೈ ದೊಂಡಿಯಾ ಜೀ.......   

       ### ಪ್ರಮೋದ ನಲವಾಗಲ #######

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!