ಹಾವೇರಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರನ ನೆನಪಿಸುವ ಬೆಂಗಳೂರ ಸೆಂಟ್ರಲ್ ಜೈಲು ..........!!!

ಹಾವೇರಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರನ ನೆನಪಿಸುವ ಬೆಂಗಳೂರ ಸೆಂಟ್ರಲ್ ಜೈಲು ...............................                                    ಕ್ರಿ.ಶ 1865-66 ರಲ್ಲಿ ಸ್ವಾತಂತ್ರ ಹೋರಾಟಗಾರರ ಸಂಖ್ಯೆ ಹೆಚ್ಚಾಗತೊಡಗಿತು, ಆಗ ಅವರನ್ನು ಬಂಧಿಸಿಡಲು ಹುಟ್ಟಿಕೊಂಡ ಹೊಸದಾದ ಜೈಲು " ಬೆಂಗಳೂರ ಸೆಂಟ್ರಲ್ ಜೈಲ್". ಹಿಂದೆ ಬೆಂಗಳೂರಿನ ಸುಭಾಸ್ ನಗರದ ಸುಭಾಸ ಬಸ್ ಸ್ಟಾಂಡ್, ಅಲ್ಲಿಯ "ಮ್ಯಾಜಸ್ಟಿಕ್" ಚಿತ್ರಮಂದಿರದಿಂದಾಗಿ "ಮ್ಯಾಜಸ್ಟಿಕ್" ಎಂಬ ಹೆಸರಿನಿಂದ ಬದಲಾಯಿತು.  ಅಲ್ಲಿಯ ಕೆರೆ ಮಾಯವಾಯಿತು. ಈಗ ಸಂಪೂಣ೯ ಪ್ರಮಾಣದ "ಕೆಂಪೆಗೌಡ" ಬಸ್ ನಿಲ್ದಾಣ ಅಲ್ಲಿ ನಿಮಾ೯ಣವಾಗಿದೆ(ಮಾ: ಆರ್ನಲ್ಲಿ ಶಿವಶಂಕರ).

 ಬಹುಶಃ ಇಲ್ಲಿಯ ಅಣ್ಣಮ್ಮಾದೇವಿಗೆ ಬರುತ್ತಿದ್ದ ಭಕ್ತರನ್ನು ರಂಜಿಸಲು ನಾಟಕ ಟೆಂಟುಗಳು ಅಂದು ನಿಮ೯ಣಗೊಂಡು. ಕ್ರಮೇಣವಾಗಿ ಥೀಯಟರಾಗಿ ಬದಲಾವಣೆಯಾಗಿರಬಹುದು(ಇದರ ಸಮೀಪ ಗಾಂಧಿನಗರವಿರುವುದು). ಇದರ ಸ್ವಲ್ಪ ದೂರದಲ್ಲಿಯೇ ಈ ಜೈಲ ಅಂದು ಆರಂಭವಾಯಿತು. ಕನಾ೯ಟಕದ ಪ್ರಮುಖ ಸ್ವಾತಂತ್ರ ಹೋರಾಟಗಾರರನ್ನು ಇಲ್ಲಿ ಬಂಧಿಸಿಡಲಾಗುತ್ತಿತ್ತು. ಇಲ್ಲಿ ಬಂಧಿತರಾದವರ ದೇಹದ ಮೇಲಿರುವ ದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. 

ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಈಗಲೂ ನೋಡಬಹುದು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇರುತ್ತಿದ್ದರಿಂದ  ಇತರ ಕಳ್ಳಕಾಕರು, ಕೊಲೆಗಾರರೊಂದಿಗೇ ಸ್ವಾತಂತ್ರ  ಹೋರಾಟಗಾರರನ್ನು ಇಲ್ಲಿ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಹಿಂದೆ ಖೈದಿಗಳು ಸಮಾಧಿ ಎನ್ನುತ್ತಿದ್ದರು. ಕೈದಿಗಳ ಸಂಖ್ಯೆ ಜಾಸ್ತಿ ಇರಿತ್ತಿದ್ದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಬಂಧಿತರು ಇರಬೇಕಿತ್ತು. ಇಂತಹ ಜೈಲನಲ್ಲಿ ಬ್ರಿಟಿಷರನ್ನು ಹಾಗೂ ಅವರ ಅಧಿಕಾರಿಗಳನ್ನು ಕಾಡುತ್ತಿದ್ದ ಹಾಗೂ ಅವರ ದಫ್ತರಗಳನ್ನು ಸುಡುವುದು, ಖಜಾನೆಗಳನ್ನು ಲೂಟಿ ಮಾಡುವುದರೊಂದಿಗೆ ಜಮೀನ್ದಾರರನ್ನು ಸಿಂಹಸ್ವಪ್ನವಾಗಿ ಕಾಡಿದ ಹಾನುಗಲ್ ತಾಲೂಕಿನ ಕನ್ನೇಶ್ವರ ಗ್ರಾಮದ ಕನ್ನೇಶ್ವರ ರಾಮನನ್ನು ಬಂಧಿಸಿಡಲಾಗಿತ್ತು. ಖೈದಿಯಾಗಿದ್ದ ಕನ್ನೇಶ್ವರ ರಾಮ ಹಾನುಗಲ್ ಜೈಲಿನಿಂದ ಶಿವಮೊಗ್ಗಕ್ಕೆ ವಗಾ೯ವಣೆಗೊಂಡು ಮುಂದೆ  ಮೈಸೂರ ಸಂಸ್ಥಾನದ ಚೀಫ್ ಕೋಟು೯, ಕ್ರಿಮಿನಲ್ ಅಪೀಲ್ 56/19-20ನೇ ನಂಬರಿನ ಮೊಕದ್ದಮೆಯಲ್ಲಿ ಇವನಿಗೆ ಪಾಶಿ ಸಜಾ ಖಾಯಂ ಬರುತ್ತದೆ. ಮುಂದೆ ಹಲವು ವಷ೯ಗಳವರೆಗೆ ಇದೇ ಬೆಂಗಳೂರ ಸೆಂಟ್ರಲ್ ಜೈಲ್ ಹಲವು ವಷ೯ಗಳವರೆಗೆ ಅವನ ಅತಿಥಿಗ್ರಹವಾಗುತ್ತದೆ. ಅವನ ನೆನಪುಗಳನ್ನು ಮೇಲಕು ಹಾಕುವ ಬ್ಯಾರೆಕಡ ಜೈಲ್ ನ ಆವರಣದಲ್ಲಿ ಜೀವಂತ ಸಾಕ್ಷಿಯಾಗಿದೆ.  1975-77 ರ ತುತು೯ ಪರಿಸ್ಥಿತಿಯ ಸಂದಭ೯ದಲ್ಲಿ ಮಾಜಿ ಪ್ರಧಾನಿಗಳಾಗಿದ್ದ ದಿ.ವಾಜಪೇಯಿ, ದೇವೆಗೌಡರನ್ನು ಹಾಗೂ ರಾಮಕೃಷ್ಣ ಹೆಗಡೆ ಮತ್ತು ಎಲ್. ಕೆ ಆಡ್ವಾನಿ ಎಂಬ ಮಹಾದಿಗ್ಗಜರನ್ನು ಇದೇ ಜೈಲನಲ್ಲಿ ಇಡಲಾಗಿತ್ತು.ಮುಂದೆ 2000 ರಂದು ಇಲ್ಲಿಯ ಕೈದಿಗಳನ್ನು ಹೊಸ ಜೈಲಾದ ಪರಪ್ಪನ ಅಗ್ರಹಾರಕ್ಕೆ ಒಯ್ಯುತ್ತಿದ್ದರಿಂದ, ಇದು ಹಾಳುಗುವದನ್ನು ಕಂಡ ಕನಾ೯ಟಕ ಸರಕಾರ 21 ಎಕರೆ ಜಮೀನನಲ್ಲಿ ಸ್ವಾತಂತ್ರ ಹೋರಾಟಗಾರರ ನೆನಪು ಸದಾ ಇರಲಿ ಎನ್ನುವ ಉದ್ದೇಶದಿಂದ 28/feb/ 2009 ರಂದು "ಸ್ವಾತಂತ್ರ ಉದ್ಯಾನವನ"(freedom park) ನಿಮಾ೯ಣ ಮಾಡಿದರು. ಇಂತಹ ಉದ್ಯಾನವನಕ್ಕೂ ಹಾವೇರಿಯ ಹಾನುಗಲ್ ತಾಲೂಕಿನ  ಕನ್ನೇಶ್ವರಕ್ಕೂ ಸಂಭಂದವಿದೆ ಎನ್ನುವುದು ಹಾವೇರಿ ಜಿಲ್ಲೆಯವರಾದ ನಮಗೆ ಹೆಮ್ಮೆಯ ವಿಷಯ.                                                                                                                                 ~~~ ಪ್ರಮೋದ ನಲವಾಗಲ ~~~                                      9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!