ಡಾ ಬಾಬು ರಾಜೇಂದ್ರ ಪ್ರಸಾದವರ ಆಗಮದಿಂದಾಗಿ ಹಾವೇರಿಯಲ್ಲಿ ರಾಜೇಂದ್ರ ನಗರ ಹುಟ್ಟಿಕೊಂಡಿತು.....!!!

ಡಾ ಬಾಬು ರಾಜೇಂದ್ರ ಪ್ರಸಾದವರ ಆಗಮದಿಂದಾಗಿ ಹಾವೇರಿಯಲ್ಲಿ ರಾಜೇಂದ್ರ ನಗರ ಹುಟ್ಟಿಕೊಂಡಿತು.....!!!

ಹಾವೇರಿಯಲ್ಲಿ 5 ಮೇ 1935 ರಿಂದ 12 ಮೇ 1935 ರ ವರೆಗೆ ವಿಜ್ರಂಭಣೆಯಾಗಿ ಬಸವ ಜಯಂತಿಯನ್ನು ಆಚರಿಸಲು ಊರಿನ ಹಿರಿಯರು ನಿರ್ಣಯಿಸಿದರು.

ಆ ದಿನದ ಅಂಗವಾಗಿ ಊರಲ್ಲಿ ಆಟ, ನೋಟ ಹಾಗೂ ಕುಸ್ತಿಗಳನ್ನು ಆಯೋಜಿಸಲಾಗಿತ್ತು.  ಹಬ್ಬದ ವಾತಾವರಣದಿಂದಾಗಿ ಮನೆಗಳು ಬೀಗರಿಂದಾ ತುಂಬಿ ತುಳುಕುತ್ತಿದ್ದವು. 

ಈ ವಾತಾವರಣದಲ್ಲಿ ಅಂದರೆ 12/05/1935 ರಂದು ರಾಷ್ಟ್ರಸಭೆಯ ಅಧ್ಯಕ್ಷರಾದ ಡಾ. ಬಾಬು ರಾಜೇಂದ್ರ ಪ್ರಸಾದವರು ಆಚಾರ್ಯ ಕೃಪಲಾನಿಯವರೊಂದಿಗೆ ಮೇಲಗಾಡಿಯಲ್ಲಿ(ರೈಲು) ಪ್ರಯಾಣ ಬೆಳಸಿ ಮುಂಜಾನೆ 9.00 ಗಂಟೆಗೆ ಹಾವೇರಿಯ ರೈಲು ನಿಲ್ದಾಣಕ್ಕೆ ಬಂದಿಳಿದರು.

ಹಾವೇರಿಯಲ್ಲಿ ಸ್ವಾತಂತ್ರ ಹೋರಾಟಗಾರರಿಗೆ ಭವನದ ಅವಶ್ಯಕತೆ ಇದ್ದುದರಿಂದ "ಸುಂದರ ಭವನದ" ಅಡಿಗಲ್ಲು ಸಮಾರಂಭಕ್ಕೆ ಅವರನ್ನು ಹಾವೇರಿಯ ಹೋರಾಟಗಾರರು ಬಸವ ಜಯಂತಿಯ ದಿನದಂದೂ ಆಹ್ವಾನಿಸಿದ್ದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಚಾರ್ಯ ಕೃಪಲಾನಿಯರು ಜಯ ಪ್ರಕಾಶ ನಾರಾಯಣ ಹಾಗೂ ವಿನೋಭಾ ಬಾವೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಡಾ.ರಾಜೇಂದ್ರ ಪ್ರಸಾದ ಹಾಗೂ ಆಚಾರ್ಯ ಕೃಪಲಾನಿಯವರನ್ನು ಮೋಟಾರ ಗಾಡಿಯಲ್ಲಿ ಮೆರವಣಿಗೆಯ ಮುಖಾಂತರ ಹೈಸ್ಕೂಲ್ ಮೈದಾನಕ್ಕೆ ತರುವ ಇರಾದೆಯು ಸ್ಥಳೀಯ  ಮುಖಂಡರದ್ದಾಗಿತ್ತು. ಆದರೆ ಮಳೆ ಅವರ ಆಸೆಯನ್ನು ನಿರಾಸೆಯನ್ನಾಗಿಸಿತು. ಹೀಗಾಗಿ ಅವರು ಚಂಬಣ್ಣ ಮಾಗಾವಿಯವರ ಮೋಟಾರ ಗಾಡಿಯಲ್ಲಿ ನೇರವಾಗಿ ಸುಂದರ ಭವನದ ನಿರ್ಮಾಣ ಸ್ಥಳಕ್ಕೆ ಆಗಮಿಸಿದರು.

ಹೈಸ್ಕೂಲ್ ಮೈದಾನದ ಮುಂಭಾಗದಲ್ಲಿ ಗುರುತುಪಡಿಸಿದ ಸ್ಥಳದಲ್ಲಿ ಸುಂದರ ಭವನದ ಅಡಿಗಲ್ಲು ಸಮಾರಂಭವನ್ನು ದೇಶಭಕ್ತರೀರ್ವರು ನೆರವೇರಿಸಿದರು.

ಹೈಸ್ಕೂಲ್ ಮೈದಾನದಲ್ಲಿ ಹಾಕಿದ ಮಂಟಪದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಜನರನ್ನೂದ್ದೇಶಿಸಿ ಹಿಂದಿ ಭಾಷೆಯಲ್ಲಿ ಮಾತನಾಡಿದರು. ಅದನ್ನು ಪರಮಣ್ಣ ಹೊಸಮನಿಯವರು ಕನ್ನಡಕ್ಕೆ ಅನುವಾದಿಸಿ ಜನರಿಗೆ ತಿಳಿಸಿದರು.

ಭಾಷಣದ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರ ಅಹವಾಲುಗಳನ್ನು ದೇಶಭಕ್ತರೀರ್ವರೂ ಸ್ವೀಕರಿಸಿದರು.

ಅಪಾರ ಜನಸ್ತೂಮದ ಮಧ್ಯೆಯೇ ಮಧ್ಯಾಹ್ನ ಸುಮಾರು 1.00 ಗಂಟೆಗೆ ಮೋಟಾರ ಗಾಡಿಯಲ್ಲಿ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿದರು.

ಹಾವೇರಿಗೆ ಬಂದು ಹೋದ ಆ ನಗರ ಮುಂದೆ ಜನಸಾಮಾನ್ಯರ ಬಾಯಲ್ಲಿ ರಾಜೇಂದ್ರ ನಗರವೆಂದು ಪ್ರಸಿದ್ಧಿಯನ್ನು ಪಡೆಯಿತು. ಅವರ ಹಸ್ತ ಸ್ಪರ್ಶದಿಂದ ಇಟ್ಟಂತಹ ಅಡಿಗಲ್ಲು ಇನ್ನೂ ಜೀವಂತವಾಗಿರುವುದು ಸಂತೋಷದ ಸಂಗತಿ.

                          ಪ್ರಮೋದ ನಲವಾಗಲ
                             9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!