ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಇಂಡಿಯಾಕ್ಕೆ ಬಂದಿದ್ದ " ಎಡ್ಮಂಡ್ ಸಿಬ್ಸನ್" ವಿಪತ್ತಿಗೆ ಶಿಗ್ಗಾಂವಿಯಲ್ಲಿಯೇ ಮಣ್ಣಾದ…………!!!!!!!



ನೀರು, ಗಾಳಿ, ಬೆಳಕು ಆಹಾರವಿಲ್ಲದ ಈ ಜಗತ್ತು ಬರಿ ಶೂನ್ಯ. ಅನೇಕ ಕಾರಣಗಳಿಂದಾಗಿ ಭೂಮಿ ತನ್ನ ಮೂಲ ರೂಪವನ್ನು ಬದಲಿಸಿಕೊಂಡಿದೆ. ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಿದೆ. ಇದರ ಅಂತಿಮ ಪರಿಣಾಮ ಬಿಳುವುದು ಸಮುದ್ರದ ಮೇಲೆ. ತಾಪಮಾನ ಏರಿಕೆಯಿಂದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ಮಂಜುಗಡ್ಡೆಗಳು ಕರಗುತ್ತಿವೆ ಹಾಗೇಯೇ ನಿದಾನವಾಗಿ ಸಮುದ್ರದ ಮಟ್ಟ ಏರುತ್ತಾ ಸಾಗುತ್ತಿದೆ. ಭೂಮಿಯ ವಾತಾವರಣ ಯಾವಾಗಲೂ ಸಮುದ್ರದ ನೀರಿನ ಮಟ್ಟದ ಮೇಲೆ ಅವಲಂಬಿಸಿದೆ ಎನ್ನುವುದು ವಿಜ್ಞಾನಿಗಳ ಸಮರ್ಥನೆ. ಸಮುದ್ರದ ಮಟ್ಟ ಹೆಚ್ಚಾದಾಗ ವಾತಾವರಣದಲ್ಲಿ ಅನೇಕ ಬದಲಾವಣೆಗಳಾಗಿ ಪ್ರಕೃತಿ ವಿಕೋಪ ಸಂಭವಿಸಿ ಕಾಲರಾ, ಮಲೇರಿಯಾ ಹಾಗೂ ಅನೇಕ ರೋಗಾಣುಗಳ ಸಂಖ್ಯೆ ಹಚ್ಚಾಗುವುದು ಸಾಮಾನ್ಯ.
ಭಾರತ ದೇಶ ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಸಂಪತ್ತಿನಿಂದಾಗಿ ಅನೇಕ ದೇಶದ ಜನರನ್ನು ತನ್ನ ಕಡೆಗೆ ಆಕರ್ಷಿಸಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ದೇಶದ ಸಂಪತ್ತನ್ನು ಬೆರೆಯ ದೇಶಕ್ಕೆ ಮಾರಬೇಕು ಹಾಗೂ ಅದರಿಂದ ಹಣವನ್ನು ಗಳಿಸಬೇಕು ಎಂಬ ದುರಾಸೆಯಿಂದ ಡಚ್ಚರು, ಪೋರ್ಚಗಿಸರು (1505-1961) ಹಾಗೂ ಬ್ರಿಟೀಷರು ಭಾರತಕ್ಕೆ ಬಂದರು.
ಈ ವ್ಯಾಪಾರಿಗಳು ಭಾರತದಲ್ಲಿಯ ಸಂಪತ್ತಿನಿಂದಾಗಿ ತಮ್ಮೊಳಗೆಯೇ ಅನೇಕ ಬಾರಿ ಯುದ್ದವನ್ನು ಮಾಡಿಕೊಂಡರು. ಆದರೆ ಇವರುಗಳಲ್ಲಿ ಭದ್ರವಾದ ಬುನಾದಿಯನ್ನು ಭಾರತದಲ್ಲಿ ಹಾಕಿಕೊಂಡವರು ಬ್ರಿಟೀಷರೂ ಮಾತ್ರ. ಕಾರಣ ಇವರಿಗೆ ಮೊಗಲ್ ದೊರೆಯ ಸಹಾಯ ಹಸ್ತವಿತ್ತು. ಅನೇಕ ದೊರೆಗಳು ಇವರ ವ್ಯಾಪಾರದ ಲಾಭಕ್ಕೆ ಬಾಯಿತೆರೆದು ಅವರ ರಕ್ಷಣೆಗೆ ನಿಂತರು. ಕ್ರಿ.ಶ 1900 ರಲ್ಲಿ ಎಲಜಬಿತ್ ರಾಣಿಯ ಒಪ್ಪಿಗೆಯಿಂದ ವ್ಯಾಪಾರಕ್ಕೊಸ್ಕರ "ಈಸ್ಟ ಇಂಡಿಯಾ" ಕಂಪನಿ ಹೆಚ್ಚು ಪ್ರಚೂರಗೊಂಡಿತು.
ಸುಮಾರು 90 ವ್ಯಾಪಾರಿಗಳನ್ನೂಳ್ಳ ಈ ಕಂಪನಿಯು ಹಿಂದಿನಿಂದಲು ಭಾರತದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸುತ್ತಾ ಸಣ್ಣ ಸೈನ್ಯವನ್ನು ಕಟ್ಟಿಕೊಂಡು, ಮೋಸದ ಯುದ್ದ ಮಾಡುತ್ತಾ ಸಣ್ಣ ರಾಜ್ಯಗಳನ್ನು ಕಬಳಿಸುತ್ತಾ ರಾಜಕೀಯದ ವ್ಯಾಪಾರ ಮಾಡಲು ಪ್ರಾರಂಭಿಸಿತು.
ಭಾರತ ದೇಶದ ಸಂಪತ್ತನ್ನು ಮೂಲೆ-ಮೂಲೆಯಿಂದ ಕಬಳಿಸಲು ಪ್ರಾರಂಭಿಸಿತು. ತನ್ನ ದೇಶದ ಉತ್ಪನ್ನಗಳನ್ನು ನಮ್ಮ ದೇಶದ ಜನರು ಉಪಯೋಗಿಸುವ ಹಾಗೆ ಪ್ರಚೋದಿಸತೊಡಗಿತು, ಭಾರತಿಯರಿಗೆ ತಮ್ಮ ಮಾತೃ ಭಾಷೆಯೊಡನೆ ಇಂಗ್ಲೀಷ ಭಾಷೆಯನ್ನೂ ಸಹ ಕಲಿಯಲೇ ಬೇಕಾದ ಅನಿವಾರ‍್ಯತೆ ಬಂದದೊಗಿತು. ಇಂಗ್ಲೀಷ್  ಕಲಿತ ಭಾರತೀಯರಿಗೆ ತಮ್ಮ ಸರಕಾರದಲ್ಲಿ ಉನ್ನತ ಹುದ್ದೆಯನ್ನು ಕೊಡಲಾರಂಭಿಸಿದರು. ಅನೇಕ ಹಿಂದೂಗಳು ಆಸೆಗೆ ಒಳಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು (ನಾನು ಸುರಪುರದಲ್ಲಿ ಗಮನಿಸಿದ ರಾಬರ್ಟ ದೇಸಾಯಿ). ಇವರುಗಳ ಪ್ರಭಾವ ಕ್ಚ್ಚಾ ಹೆಚ್ಚಾಗಿದ್ದು ಪ್ಲಾಸಿ ಕದನದ ನಂತರ (ಕ್ರಿ.ಶ.1858).
ಬ್ರಿಟೀಷರು ಭಾರತದಲ್ಲಿ ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರಸೆಡೆನ್ಸಿ ಹಾಗೂ ಕಲ್ಕತ್ತಾ ಪ್ರಸಿಡೆನ್ಸಿಗಳನ್ನು ಹುಟ್ಟುಹಾಕಿ ತಮ್ಮ ಆಡಳಿತ ಸುಲಭಿಕರಣಗೊಳಿಸಿದರು. ಬ್ರಿಟೀಷರು ಭಾರತದ ಸಂಪತ್ತನ್ನು ಲೂಟಿ ಮಾಡಿದರೂ ಎನ್ನುವುದು ಸರ್ವೆಸಾಮಾನ್ಯ. ಆದರೆ ಕೆಲವು ಅಧಿಕಾರಿಗಳು  ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದು ಶ್ಲಾಘಿನೀಯ.
ನಾವು ಬ್ರಿಟೀಷರ ಕೆಲವು ಒಳ್ಳೆಯ ಕಾರ್ಯಗಳನ್ನು ದೇಶದ ಮೂಲೆ-ಮೂಲೆಯಲ್ಲಿ ನೋಡುತ್ತೇವೆ. ಹಾಗೇಯೇ  ಅವರು ಮಾಡಿದ ಒಳ್ಳೆಯ ಕಾರ್ಯವನ್ನು ಹಾಗೂ ಬಲಿದಾನವನ್ನು ವಿಶೇಷವಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನೋಡಬಹುದಾಗಿದೆ. ಹಿಂದೆ
ಹಾವೇರಿ ಜಿಲ್ಲೆಯು ಇಂಗ್ಲೀಷ ಸರಕಾರದ ಬಾಂಬೆ ಪ್ರೆಸಿಡೆನ್ಸಿಗೆ ಸೇರುತ್ತಿತ್ತು, ಇದರ ಆಳ್ವಿಕೆಯನ್ನು ಪಾಲಿಟಿಕಲ್ ಎಜೆಂಟರಾದ "ಮನ್ರೊ ಹಾಗೂ ಥ್ಯಾಕರೆ" (ಅಳಿಯ ಮಾವಂದಿರು)ನಡೆಸಿರುವುದು ವಿಶೇಷ. "ಮನ್ರೊ" ಶಿಗ್ಗಾಂವಿಗೆ ಭೇಟಿಯನ್ನಿಟ್ಟಾಗೊಮ್ಮೆ ಸವಣೂರ ನವಾಬರ ಆತಿಥ್ಯವನ್ನು ಸ್ವೀಕರಿಸಿ ಅಲ್ಲಿಯ ಮಸಕತ್ ಮಾವಿನ ಹಣ್ಣುಗಳನ್ನು ಒಯ್ಯುವುದು ರೂಡಿಯಲ್ಲಿಟ್ಟುಕೊಂಡಿದ್ದನು. ಹಾವೇರಿಯನ್ನು ದಾಟಿ ಶಿಗ್ಗಾಂವಿಗೆ ಹೋಗಬೇಕಾದರೆ ಜನರು ವರದಾ ನದಿಯನ್ನು ದಾಟಬೇಕಿತ್ತು ಹಾಗೂ ವ್ಯಾಪಾರವು ಸಹ ಬಹಳ ಕಷ್ಟದಾಯಕವಾಗಿತ್ತು ಇದನ್ನು ಅರಿತ ಇಂಗ್ಲೀಷ ಸರಕಾರವು ಇಂಜಿನಿಯರ ಜೆ.ಹೆಚ್.ಇ ಹಾರ್ಟ ಹಾಗೂ ಎಸ್ ವಾಲ್ಕರ್ ಸಹಾಯದಿಂದ ಮೆಸ್ತ್ರಿ ಹೂವಪ್ಪ (ಬಿನ್ ಯಾದವ)ನ ಕಾರ್ಯದೊಂದಿಗೆ ಕ್ರಿ.ಶ.1899 ರಲ್ಲಿ ಸೇತುವೆಯನ್ನು ವರದಾ ನದಿಗೆ ಕಟ್ಟಲಾಯಿತು (ವರದಾಹಳ್ಳಿ - ಹಾವೇರಿ ಮಧ್ಯದಲ್ಲಿ )
ಕ್ರಿ.ಶ 1876-1878ರ ಎರಡು ವರ್ಷಗಳ ಕ್ಷಾಮವು ಭಾರತ ದೇಶವನ್ನೆ ಕಿತ್ತು ತಿಂದಿತು. ಎರಡು ವರ್ಷದ ಹಿಂದೆ (1874) ಬಿದ್ದಂತಹ ಅಪಾರ ಮಳೆಯಿಂದಾಗಿ ಆಹಾರ ಧಾನ್ಯಗಳು ನೀರು ಪಾಲಾದವು. ಬರಗಾಲದಿಂದಾಗಿ ಭಾರತದ ಜನಸಂಖ್ಯೆ 5.5 ಮಿಲಿಯನ್ (ಕ್ರಿ.ಶ 1871 ರ ಜನಗಣತಿಯ ಪ್ರಕಾರ) ಕಡಿಮೆಯಾಯಿತೆಂದರೆ ಅದರ ತೀವ್ರತೆಯನ್ನು ನಾವು ಊಹಿಸಲು ಅಸಾಧ್ಯ. ಇಂತಹ ಬರಗಾಲದ ಪರಿಸ್ಥಿತಿ ಕರ್ನಾಟಕದ ಬಿಜಾಪುರ, ಬಳ್ಳಾರಿ, ಕೋಲಾರ ಹಾಗೂ ಹಾವೇರಿ ಜಿಲ್ಲೆಯಲ್ಲಿ ಅರ್ಭಟಿಸಿತ್ತು. ಆಹಾರವಿಲ್ಲದೆ ಜನರು ಬಡಕಲು ದೇಹದವರಾಗಿದ್ದರು, ದೇಹದೊಳಗಿನ ಎಲಬುಗಳು ಹೊರಗಡೆ ಬಂದಿದ್ದನ್ನು ನೋಡಿದ ಜನರು ಮಮ್ಮಲು ಮರಗುತ್ತಿದ್ದರು.
ವೃದ್ದರನ್ನು, ರೋಗಿಗಳನ್ನು ಹಾಗೂ ಜಾನುವಾರುಗಳನ್ನು ಮನೆಯಲ್ಲಿಯೇ ಬಿಟ್ಟು ಬದುಕಿದರೇ ಸಾಕು ಎಂದು ಗುಳೇ ಹೊರಟರು. (ಬಿಜಾಪುರ ಹಾಗೂ ಬಾಗಲಕೋಟೆಯನ್ನು ಬಿಟ್ಟು ಗುಳೇ ಬಂದವರಿಂದ ಹುಟ್ಟಿದ ರಾಣೇಬೆನ್ನೂರ ಗುಳೇದರ ಓಣಿ). ಅನೇಕ ಜನ ಮೈಸೂರು ಹಾಗೂ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿಯೇ ಬಿಟ್ಟು ಹೋದ ವೃದ್ದರು,ರೋಗಿಗಳು ಹಾಗೂ ಜಾನುವಾರುಗಳು ಆಹಾರ ನೀರಿಲ್ಲದೆ ಹೆಣವಾಗಿ, ನಾಯಿಗಳು ಅದನ್ನು ತಿಂದು ಎಲಬುಗಳನ್ನು ಹಾಗೂ ಅವರ ತಲೆ ಬುರುಡೆಗಳನ್ನು ಮಾತ್ರ ಉಳಿಸಿದ್ದವು ಎಂದರೆ ಎಂಥಹ ಕಠೋರ ಮನಸ್ಸು ಸಹ ಕರಗುವುದು ಸಹಜವೇ ಅದುವೇ ಮಾನವೀಯತೆ.
ಬ್ರಿಟಿಷ್ ಸರಕಾರ ಇಂತಹ ವಿಪತ್ತನ್ನು ಎದುರಿಸಲು ಹಾವೇರಿ ಜಿಲ್ಲೆಯ ಶಿಗ್ಗಾಂವಿಗೆ ಇಂಗ್ಲೆಂಡಿನಿಂದ 28 ರ ಪ್ರಾಯದ ಇಂಜನಿಯರ್ "ಎಡ್ಮಂಡ್ ಸಿಬ್ಸನ್"ನನ್ನು ನೇಮಕ ಮಾಡಿತು. ಇಲ್ಲಿಯ ಬರಿದಾದ ಕಪ್ಲಿಬಾಯಿಗಳನ್ನು, ಒಣಗಿದ ತತ್ರಾಣಿಗಳನ್ನು ಖಾಲಿಯಾದ ವಾಡೆಗಳನ್ನು (ದವಸ ದಾನ್ಯಗಳನ್ನು ಸಂಗ್ರಹಿಸಲು ಬಳಸುವ ಬೃಹತ ಮಡಿಕೆ), ಆಹಾರವಿಲ್ಲದೆ ದಾರಿಯಲ್ಲಿ ಅರ್ಧ ಕಣ್ಣುಗಳನ್ನು ತೆರೆದು ಮಲಗಿದ್ದ ಬಡಕಲು ದೇಹದ ಬಡವರನ್ನು ನೋಡಿ ದುಃಖದ ಭಾಷ್ಪಗಳನ್ನು ಹರಿಸಿ ಈ ಗಂಭೀರ ಪರಿಸ್ಥಿತಿಗೆ ಜನರು ಸೆಟೆದು ನಿಲ್ಲಬೇಕು ಅಂದರೆ ಅವರಿಗೆ ಆಹಾರ ಹಾಗೂ ನೀರನ್ನು ಕೊಡುವ ಕೆಲಸ ನಮ್ಮ ಸರಕಾರ (ಇಂಗ್ಲೀಷ ಸರಕಾರ) ಮಾಡಬೇಕು ಅದರ ಫಲವೆಂಬಂತೆ ನಾವು ಅವರಿಂದ ಅಲ್ಪ ಕಾರ್ಯವನ್ನು ತೆಗೆದುಕೊಳ್ಳಬೇಕು(ರೇಲ್ವೆ ಹಳಿ ನಿರ್ಮಾಣ ಕಾರ್ಯ) ಎಂಬ ನಿರ್ಧಾರವನ್ನು ಪ್ರಕಟಿಸಿದನು. ಸೈನ್ಯಕ್ಕೆ ಮಾತ್ರ ಮಿಸಲಾಗಿದ್ದ "ಅಲೊಪತಿ ವೈದ್ಯರನ್ನು" ಜನರ ಸೇವೆಗಾಗಿ ಬಳಸಿಕೊಂಡು ಆಸ್ಪತ್ರೆ ನಿರ್ಮಾಣ ಮಾಡಿದನು. ತನ್ನ ಹೆಂಡತಿ ಮಕ್ಕಳನ್ನು ಇಂಗ್ಲೇಂಡಿನಲ್ಲಿಯೇ ಬಿಟ್ಟು ಬಂದ ಇವನು ಬಡರೋಗಿಗಳನ್ನು ಹಾಗೂ ಆಹಾರವಿಲ್ಲದ ಬಡವರನ್ನು ತನ್ನ ಮಕ್ಕಳಂತೆ ಉಪಚರಿಸಿದನು.
ಪ್ರತಿದಿನವು ಜನರು ಮಾಡಿದ ಕೆಲಸಕ್ಕೆ ಕೂಲಿಯಂಬಂತೆ 42 ಗ್ರಾಂ ಬೆಳೆ ಹಾಗೂ 570 ಗ್ರಾಂ ಧಾನ್ಯಗಳ ಪೊಟ್ಟಣವನ್ನು ಕೊಡಲಾರಂಭಿಸಿ ಪ್ರಾಣ ಬಿಡುತ್ತಿದ್ದ ಜೀವಿಗಳಿಗೆ ನವ ಉತ್ಸಾಹವನ್ನು ತುಂಬಿದನು. ವಿಪರ್ಯಾಸವೆಂಬಂತೆ ಈ ಕಾರ್ಯವು ಬಡವರನ್ನು ಹಾಗೂ ರೋಗಿಗಳನ್ನು ಕೈಹಿಡಿಯಬೇಕಾದ ಭಗವಂತನಿಗೆ ಇಷ್ಟವಿರಲಿಲ್ಲ, ತನಗೆ ಮತ್ತೊಬ್ಬ ಪೈಪೋಟಿ  ಕೊಡುವ ವ್ಯಕ್ತಿ ಬಂದಿದ್ದಾನೆ ಎಂದು ತಿಳಿದಿರಬಹುದು. ಕ್ರಿ.ಶ 1877 ರ ಎಪ್ರೀಲ್ 26 ರಂದು ಕಾಲರಾ ರೋಗಕ್ಕೆ ತುತ್ತಾಗಿ ಪ್ರೀತಿಯ ಮಕ್ಕಳನ್ನು ಹಾಗೂ ಹೆಂಡತಿಯನ್ನು ಕೊನೆಯ ಕ್ಷಣದಲ್ಲಿಯು ನೋಡಲಾಗದೆ ಏಕಾಂಗಿಯಾಗಿ ಭಾರತ ದೇಶದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಪ್ರಾಣ ಬಿಡುತ್ತಾನೆ.
ಇವನ ಸಹಾಯದಿಂದ ಬದುಕುಳಿದ ಜೀವಗಳ ಇವನ ಸಾವಿನಿಂದಾಗಿ ಜರ್ಜಿತರಾಗುತ್ತಾರೆ. ಇಂಗ್ಲೀಷ ಸರಕಾರದ ಒಪ್ಪಿಗೆಯ ಮೇರೆಗೆ ಶಿಗ್ಗಾಂವಿಯ ಬಿ.ಬಿ ದೇಸಾಯಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿರುವ ಇತ್ತೀಚಿಗೆ ನಿರ್ಮಾಣವಾದ ಮೌಲಾಯಿ ನಗರದ ಸ್ಮಶಾನದಲ್ಲಿ ಸರಕಾರದ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ಮಾಡಿ ಸಿಲುಬೆಯನ್ನು ನಿಲ್ಲಿಸುತ್ತಾರೆ. ಈಗಲೂ ಸಹ ಅದನ್ನು ನಾವು ನೋಡಬಹುದು.
ಆದರೆ ಆ ಏಕಾಂಗಿ ಜೀವಿಯ ಸಂಬಂಧಿಗಳೂ ಬಹುದೂರದ ಇಂಗ್ಲೆಂಡಿನಲ್ಲಿರುವುದರಿಂದ, ಅವನ ಸಹೊದ್ಯೋಗಿಗಳು ಈಗ ಇಲ್ಲದಿರುವುದರಿಂದ ಹಾಗೂ ಅವನು ಬದುಕಿಸಿದ ಆ ಬಡ ಜೀವಿಗಳು ಮರಣ ಹೊಂದಿದ್ದರಿಂದ ಆ ಸ್ಥಳವು ತನ್ನ ನಾಯಕನ ಕಥೆಯನ್ನು ತನ್ನಳೊಗೆ ಬಚ್ಚಿಟ್ಟುಕೊಂಡಿದೆ ಹಾಗೂ ಸ್ವಾರ್ಥ ಮಾನವರಿಂದಾಗಿ ಶಿಲುಬೆ ಅಗೋಚರವಾಗುತ್ತಿರುವುದು ವಿಷಾದನಿಯ.

               ~~ ಪ್ರಮೋದ ನಲವಾಗಲ ~~
                          9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!