ಹಾವೇರಿಯಲ್ಲಿ ಸುಭಾಶಚಂದ್ರ ಬೋಸ್‌ರ ನೆನಪುಗಳಿಗೆ 80 ರ ಪ್ರಾಯ
1938 ರ ಹರಿಪುರ ಕಾಂಗ್ರೆಸ್ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷತೆಯ ಚುಣಾವಣೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಭ್ಯಥಿ೯ಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ ಸುಭಾಸ್ ಚಂದ್ರ ಬೋಸ್ ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಅಭಿಮಾನಿಗಳಗೆ ಕೃತಜ್ಞತೆ ಸಲ್ಲಿಸಲು ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ಹಾವೇರಿಗೆ 01/07/ 1939 ರಂದು ಆಗಮಿಸಿದ್ದರು.
ಅಲ್ಲಿ ಭೋಸರ ಮಾತುಗಳು ಮಾತ್ರ ಶಬ್ದವನ್ನು ಹುಟ್ಟುಹಾಕುತ್ತಿದ್ದವು. ಆ ಶಬ್ದ..... ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುತ್ತಿದ್ದವು, ರಾಷ್ಟ್ರನಿಮಾ೯ಣದ ಕನಸ್ಸುಗಳನ್ನು ಕಟ್ಟುತ್ತಿದ್ದವು...... ತಕ್ಷಣವೆ ಎಚ್ಚೆತ್ತುಗೊಂಡು ಮುಂದೆ ಧಾರವಾಡಕ್ಕೆ ಹೋಗಬೇಕು ಎಂದು...... ತಮ್ಮ ಮಾತಿಗೆ ಪೂಣ೯ವಿರಾಮವಿಟ್ಟರು. ಥೀಯಟರ್ ಮುಂದೆ ಬಂದು ಹೋಗಲು ಅಣಿಯಾಗುತ್ತಿರುವಾಗ, ನಿಮ್ಮ ನೆನಪು ನಮಗೆ ಸದಾ ಹಸಿರಾಗಿರಲಿ,ನಾವು ಸದಾ ಸತ್ಯದೊಂದಿಗಿದ್ದೇವೆ ಹಾಗೂ ಮುಂದೆಯು.......ಎಂದು ಹೊಸಮನಿ ಸಿದ್ದಪ್ಪನವರು ನುಡಿದರು. ಚಂಬಣ್ಣ ಮಾಗಾವಿಯವರು ಫೊಟೊ ತೆಗೆಯಲು ಫೊಟೊಗ್ರಾಫರಗೆ ಸೂಚಿಸಿದರು.
ಕಾಯ೯ಕ್ರಮದ ಮುಕ್ತಾಯದ ನಂತರ, ಹೊಸಮನಿ ಸಿದ್ದಪ್ಪನವರು ಹಾಗೂ ಚಂಬಣ್ಣ ಮಾಗಾವಿಯವರು ( ಅವರದೆ Duke car) ಬೋಸರನ್ನು ತಮ್ಮ ಕಾರಿನಲ್ಲಿ ಕುಳ್ಳರಿಸಿಕೊಂಡು ಧಾರವಾಡಕ್ಕೆ ಬಿಟ್ಟು ಬರಲು ಗಾಡಿಯನ್ನು ಚಾಲು ಮಾಡಲು... ಸುಭಾಸ ಚಂದ್ರ ಬೋಸ್ ತಮ್ಮ ಭಾರವಾದ ಮನಸ್ಸಿನಿಂದ ಕೆ. ಎಫ್ ಪಾಟೀಲ, ಶಿವಪ್ಪ ಅಂಕಲಕೋಟಿ, ಚಾವಟಿ ವೆಂಕಣ್ಣ, ತಮ್ಮಣ್ಣ ಕರಕುದರಿ, ಕೃಷ್ಣಾಜೀ ಕುಂಠೆ, ನೀಲನಗೌಡ ಪಾಟೀಲ(ಅಕ್ಕೂರ), ಶಾಂತಾರಾಮ ಅವಘಾನ, ಕೃಷ್ಣಪ್ಪ ಅಕ೯ಸಾಲಿ, ಪಂಚಾಕ್ಷರಪ್ಪ ವಳಸಂಗದ ಹಾಗೂ ಅನೇಕ ಅಭಿಮಾನಿಗಳತ್ತ ಕೈಬೀಸುತ್ತಿದ್ದರು... ಕಾರು ಚಿಕ್ಕದಾಗುತ್ತಾ ಸಾಗಿತು. ಕಾಲ ಉರಳಿದಂತೆ ಶಿವಾನಂದ ಥಿಯೇಟರ್ ಮಾಯವಾಗಿ 'ಅನ್ನದಾನೇಶ್ವರಿ ಕಲಾ ಮಂದಿರ' ಎಂಬ ಹೆಸರನ್ನು ಪಡೆದುಕೊಂಡಿತು. ಅವರು ಬಂದು ನಿಂತುಕೊಂಡ ಸ್ಥಳ ಮುಂದೆ "ಸುಭಾಸ್ ಸಕ೯ಲ್" ಆಯಿತು, ಅವರನ್ನು ಭೆಟ್ಟಿ ಮಾಡಿದ ಅನೇಕರು ವಯಸ್ಸಿನಿಂದಾಗಿ ಮಡಿದರು. ಆದರೆ ಅವರು ಅವಸರದಲ್ಲಿ ತೆಗೆಸಿಕೊಂಡಿದ್ದ ಆ ಫೊಟೊ ಈ ಇತಿಹಾಸದ ಘಟನೆಯನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವುದು ಮಾತ್ರ ಸತ್ಯ.....ಸತ್ಯ......ಸತ್ಯಕ್ಕೆ ಸಾವಿಲ್ಲ. ಫೊಟೊ ಕೊಟ್ಟು ಸಹಕರಿಸದ ಮಿತ್ರ ನೇಸರ ಮಾಗವಿಯವರಿಗೆ ಅನಂತ ಧನ್ಯವಾದಗಳು.( ಪ್ರಮೋದ ನಲವಾಗಲ)
Comments
Post a Comment