ಕೋಳೂರು ಕೊಡಗೂಸು: ಹಾವೇರಿಯ ಕೋಳೂರು??
ಹಾವೇರಿ ತಾಲೂಕಿನ " ಕೋಳೂರು " ಹಾವೇರಿಯಿಂದ ಉತ್ತರಕ್ಕೆ ಸುಮಾರು 16ಕಿ.ಮೀ. ದೂರದಲ್ಲಿದೆ. ಈ ಊರು ವರದಾ ನದಿಯ ದಂಡೆಯ ಮೇಲಿದ್ದು ಕರ್ಜಗಿ ಹಾಗೂ ದೇವಗಿರಿಗಳ ಮಧ್ಯಭಾಗದಲ್ಲಿದೆ. ಕ್ರಿ.ಶ. 9-10 ನೇ ಶತಮಾನದಲ್ಲಿ ಬಾಸವೂರು-140 ಕ್ಕೆ ಸೇರಿದ್ದ ಈ ಊರಲ್ಲಿ ಎರಡು ಶಾಸನಗಳಿವೆ. ಕಲ್ಯಾಣದ ಚಾಳುಕ್ಯ ಅರಸ ಒಂದನೇಯ ಸೋಮೇಶ್ವರನ. ಕ್ರಿ.ಶ. 1045ರ ಶಾಸನ ಕಲಿಯಮರಸನು ಬಾಸವೂರು-140 ಆಳುವಾಗ ರಾಜ ಗುರುದೇವ ನೊಂದಿಗೆ ಜಂಟಿಯಾಗಿ ಕೋಳೂರ ಕಲಿದೇವೇಶ್ವರ (ಈಗಿನ ಕೊಡಗುಸು)ದೇಗುಲಕ್ಕೆ ನೀಡಿದ ಭೂದಾನದ ಬಗ್ಗೆ ಹೇಳಿದರೆ, ಆರ್ಮಡಿ ವಿಕ್ರಮಾದಿತ್ಯನ ಕಾಲದ ಶಾಸನ ಗ್ರಾಮೇಶ್ವರ (ಈಗಿನ ಡೊಳ್ಳೇಶ್ವರ) ದೇವರಿಗೆ ನೀಡಿದ ಸುಂಕಗಳ ದಾನದ ಬಗ್ಗೆ ತಿಳಿಸುತ್ತದೆ. ಕ್ರಿ.ಶ. 1085ರ ಮತ್ತೊಂದು ಶಾಸನ ಕಲಿಯಮರಸನು ಬಾಸವೂರನ್ನಾಳುವಾಗ (ಈಗಿನ ಚಿಕ್ಕ ಬಾಸೂರು) ಬಿಟ್ಟ ಭೂದಾನದ ಬಗ್ಗೆ ಹೇಳುತ್ತದೆ. ಊರುಳಿವಿಗಾಗಿ ಹೋರಾಡಿ ಮಡಿದ ಬೀರಬೋವನಿಗೆ ತ್ರಿಭುವನಸಿಂಗಿ ಮತ್ತು ಊರಗೌಡ ದಾನಕೊಟ್ಟ ವಿಷಯವನ್ನು ವೀರಗಲ್ಲು ಶಾಸನವೊಂದು ಹೇಳುತ್ತದೆ. ಯಾದವ ಸಿಂಘನ ಕಾಲಕ್ಕೆ ಸೇರಿದ ಶಾಸನ ದೇವಂಗೇರಿಯ (ದೇವಗಿರಿಯ) 1000 ಪರಿವಾರದಿಂದ " ಕೋಳೂರ ಕ್ಷೇತ್ರಪಾಳನಿಗೆ" (ಬಹುಶ: ಹುಲ್ಲಪ್ಪನ ಗುಡಿ) ಭೂದಾನ ಮಾಡಿದನ್ನು ದಾಖಲಿಸಿದೆ. ಈ ಶಾಸನ ಬಂಕಾಪುರದ ಇಂದ್...